Breaking News

ರಾಜಕೀಯ

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮಾಗಡಿಯ ಖಾಸಗಿ ಶಾಲೆಯ ಕ್ಲರ್ಕ್‌ನನ್ನು ಬಂಧಿಸಿದ್ದಾರೆ.

ರಾಮನಗರ: ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮಾಗಡಿಯ ಖಾಸಗಿ ಶಾಲೆಯ ಕ್ಲರ್ಕ್‌ನನ್ನು ಬಂಧಿಸಿದ್ದಾರೆ. ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಕ್ಲರ್ಕ್‌ ರಂಗೇಗೌಡ ಬಂಧಿತ ಆರೋಪಿ. ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪತ್ರಿಕೆಯು ವಾಟ್ಸಪ್‌ ಮೂಲಕ ಸೋರಿಕೆ ಆಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಿತ್ತು. ಅದೇ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಹೆಡ್ ಮಾಸ್ಟರ್ ಹಾಗೂ ಶಿಕ್ಷಕರಿರುವ ಗ್ರೂಪ್‌ನಲ್ಲೇ ಶೇರ್ ಮಾಡಲಾಗಿತ್ತು. ಇದಲ್ಲದೇ ಕೆಂಪೇಗೌಡ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ …

Read More »

ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

ಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಮಾರಾಟವಾದ ಅಕ್ಕಿಯು ಅಕ್ರಮವಾಗಿ 15ಕ್ಕೂ ಹೆಚ್ಚು ರೈಸ್ ಮಿಲ್‍ಗಳನ್ನು ಸೇರುತ್ತಿವೆ. ಹಲವು ಬಾರಿ ದಾಳಿ ನಡೆದರೂ ದಂಧೆ ಮಾತ್ರ ನಿಂತಿಲ್ಲ. ಈ ಹಿಂದೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 2017ರಲ್ಲಿ ಟನ್‍ಗಟ್ಟಲೆ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದರು. ಕಳೆದ ವರ್ಷ ಪಿಆರ್‍ಎಸ್ ಆಗ್ರೋಟೆಕ್ ರೈಸ್ ಮಿಲ್ ಮೇಲೆ ದಾಳಿ …

Read More »

ಬೆಳಗಾವಿಯಲ್ಲಿ ಮಾವು ಮೇಳ ಮೇ 26ರಿಂದ

ಬೆಳಗಾವಿ: ತೋಟಗಾರಿಕೆ ಇಲಾಖೆಯಿಂದ ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ಯೋಗ್ಯ ದರದಲ್ಲಿ ತಲುಪಿಸುವ ಉದ್ದೇಶದಿಂದ ನಗರದ ಕ್ಲಬ್ ರಸ್ತೆಯಲ್ಲಿರುವ ಹ್ಯೂಮ್ ಪಾರ್ಕ್‌ನಲ್ಲಿ ಮೇ 26ರಿಂದ ಮೇ 29ರವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.   ‘ಜಿಲ್ಲೆಯ ಮಾವು ಬೆಳೆಗಾರರು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಉತ್ಪನ್ನವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಯೋಗ್ಯ ಬೆಲೆಗೆ ಮಾರಬಹುದು. ವಿಷೇಶವಾಗಿ ಈ ಬಾರಿ ಬೆಳಗಾವಿ, ಧಾರವಾಡ ಹಾಗೂ ರತ್ನಗಿರಿ ರೈತರಿಂದ …

Read More »

ಇಂಡೊ-ಅಮೆರಿಕನ್ ಪ್ರೆಸ್ ಕ್ಲಬ್‍ನಿಂದ ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿ

ಬೆಳಗಾವಿ: ನ್ಯೂಯಾರ್ಕ್‍ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮೇ 21ರಂದು ನಡೆದ ಸಮಾರಂಭದಲ್ಲಿ ಅಮೆರಿಕದ ಇಂಡೊ-ಅಮೆರಿಕನ್ ಪ್ರೆಸ್ ಕ್ಲಬ್‍ನಿಂದ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಗ್ರಾಮೀಣ ಜನರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಒದಗಿಸುತ್ತಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಭಾರತೀಯ ರಾಯಭಾರಿ ಕಚೇರಿಯ ಕನ್ಸೂಲ್ ಜನರಲ್‍ ರಣಧೀರ ಜೈಸ್ವಾಲ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಭಾರತೀಯ …

Read More »

ಮೇ 25ಕ್ಕೆ ಭಾರತ್ ಬಂದ್​​: ಬಂದ್​​ಗೆ ಕರೆ !

ಅದೇ ವೇಳೆ ಚುನಾವಣಾ ಸಮಯದಲ್ಲಿ ಇವಿಎಂ ಬಳಕೆ ಮತ್ತು ಖಾಸಗಿ ವಲಯಗಳಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿಗೆ ಮೀಸಲಾತಿ ವಿಚಾರದ ವಿರುದ್ಧವೂ ಬಿಎಎಂಸಿಇಎಫ್ ಪ್ರತಿಭಟನೆ ನಡೆಸುತ್ತಿದೆ.ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟ (BAMCEF ) ಮೇ 25 ರಂದು ಭಾರತ್ ಬಂದ್‌ಗೆ ( Bharat Bandh ) ಕರೆ ನೀಡಿದೆ. ಇತರೆ ಹಿಂದುಳಿದ ವರ್ಗಗಳ (OBC) ಜಾತಿ ಆಧಾರಿತ ಜನಗಣತಿಯನ್ನು ಕೇಂದ್ರ ಸರ್ಕಾರ ನಡೆಸದಿರುವುದನ್ನು ವಿರೋಧಿಸಿ ಫೆಡರೇಶನ್ ಕ್ರಮಕ್ಕೆ ಒತ್ತಾಯಿಸಿದೆ. ಅದೇ ವೇಳೆ ಚುನಾವಣಾ …

Read More »

ಪಂಜಾಬ್‌ ಆರೋಗ್ಯ ಸಚಿವ: ಸಂಪುಟದಿಂದ ವಜಾ, ಅರೆಸ್ಟ್!

ಭ್ರಷ್ಟಾಚಾರದ ಆರೋಪದ ಮೇಲೆ ಆರೋಗ್ಯ ಸಚಿವ ವಿಜಯ್‌ ಸಿಂಘ್ಲಾ ಅವರನ್ನು ಪಂಜಾಬ್‌ ಮುಖ್ಯಮಂತ್ರಿ ಭಗವತ್‌ ಮನ್‌ ವಜಾಗೊಳಿಸಿದ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಆಮ್‌ ಆದ್ಮಿ ೨ ತಿಂಗಳು ಪೂರೈಸುವ ಮುನ್ನವೇ ಭ್ರಷ್ಟಾಚಾರ ಆರೋಪದಿಂದ ತತ್ತರಿಸಿದ್ದು, ೨ ತಿಂಗಳಲ್ಲೇ ಮೊದಲ ವಿಕೆಟ್‌ ಪತನಗೊಂಡಂತಾಗಿದೆ. ಗುತ್ತಿಗೆದಾರರಿಂದ ಶೇ.೧ರಷ್ಟು ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಆರೋಗ್ಯ ಸಚಿವ ವಿಜಯ್‌ ಸಿಂಘ್ಲಾ ಅವರನ್ನು …

Read More »

ಮನೆ, ಕಟ್ಟಡ ನಿರ್ಮಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ನಿರಂತರ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಹಣದುಬ್ಬರ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಬ್ಬಿಣ, ಪ್ಲಾಸ್ಟಿಕ್, ಉಕ್ಕು ವಸ್ತುಗಳ ಮೇಲೆ ಆಮದು ಸುಂಕವನ್ನು ಮನ್ನಾ ಮಾಡಿ, ರಫ್ತು ಸುಂಕ ಹೆಚ್ಚಿಸಿದೆ.   ಇದರ ಬೆನ್ನಲ್ಲೇ ಕೆಲವು ರಾಜ್ಯ ಸರ್ಕಾರಗಳು ವ್ಯಾಟ್ ಕಡಿಮೆ ಮಾಡಿದ್ದು, ಇಂಧನ ದರ ಇಳಿಕೆಯಾಗಿದೆ. ಇದರೊಂದಿಗೆ ಕಚ್ಚಾ ವಸ್ತುಗಳ ದರವೂ ಕೂಡ ಸಹಜವಾಗಿ ಇಳಿಕೆಯಾಗುತ್ತಿದೆ. ಮನೆ ನಿರ್ಮಿಸುವ ಕಟ್ಟಡ ಸಾಮಗ್ರಿಗಳಾದ …

Read More »

ಪರಿಷತ್‌ ಚುನಾವಣೆ: ಟಿ.ಎ.ಶರವಣ ಜೆಡಿಎಸ್ ಅಭ್ಯರ್ಥಿ

ಬೆಂಗಳೂರು: ಕರ್ನಾಟಕದ ವಿಧಾನ ಸಭೆಯಿಂದ ವಿಧಾನ ಪರಿಷತ್‌ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ಆಯ್ಕೆಯಾಗಿದ್ದಾರೆ.   ಅಭ್ಯರ್ಥಿಯಾಗಿ ಟಿ.ಎ.ಶರವಣ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಂಗಳವಾರ ಘೋಷಣೆ ಮಾಡಿದ್ದಾರೆ. ಇದರೊಂದಿಗೆ, ಶರವಣ ಅವರು ಎರಡನೇ ಬಾರಿಗೆ ಪರಿಷತ್ ಪ್ರವೇಶಿಸಲಿದ್ದಾರೆ. ವಿಧಾನ ಪರಿಷತ್‌ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಶರವಣ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ …

Read More »

ಕಾಂಗ್ರೆಸ್‌ನಿಂದ ಎಂ ನಾಗರಾಜು ಯಾದವ್ ಮತ್ತು ಅಬ್ದುಲ್ ಜಬ್ಬಾರ್ ನಾಮಪತ್ರ ಸಲ್ಲಿಕೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ ನಾಗರಾಜು ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಮಂಗಳವಾರ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್, ಶಾಸಕರಾದ ಎಂ.ಬಿ.ಪಾಟೀಲ, ಆರ್.ವಿ.ದೇಶಪಾಂಡೆ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಇದ್ದರು.

Read More »

ಬಿ.ವೈ. ವಿಜಯೇಂದ್ರಗೆ ಬಿಗ್​ ಶಾಕ್​ ಕೊಟ್ಟ ಬಿಜೆಪಿ ಹೈಕಮಾಂಡ್​

ಬೆಂಗಳೂರು: ವಿಧಾನ ಪರಿಷತ್​ ಟಿಕೆಟ್​ ಆಕಾಂಕ್ಷಿಯಾಗಿದ್ದ ಬಿ.ವೈ. ವಿಜಯೇಂದ್ರ ಅವರ ಆಸೆಗೆ ಬಿಜೆಪಿ ಹೈಕಮಾಂಡ್​ ತಣ್ಣಿರೆರಚಿದೆ. ವಿಧಾನ ಪರಿಷತ್​ ಚುನಾವಣೆಗೆ ರಾಜ್ಯ ಕೋರ್ ಕಮಿಟಿಯಿಂದ ವಿಜಯೇಂದ್ರ ಹೆಸರು ಶಿಫಾರಸು ಮಾಡಲಾಗಿತ್ತು. ಸಂಸದೀಯ ಮಂಡಳಿಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಸಮಾಲೋಚನೆ ಮಾಡಲಾಗಿತ್ತು. ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಿತ್ತು. ಈ ವೇಳೆ ವಿಜಯೇಂದ್ರಗೆ ಟಿಕೆಟ್ ಕೊಡುವುದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಮುಂದಿನ ವಿಧಾನಸಭೆ ಚುನಾವಣೆ ಹಾಗೂ ಬಿಎಸ್​ವೈ ಪ್ರಚಾರ ಗಮನದಲ್ಲಿ ಇಟ್ಟುಕೊಂಡು ವಿಜಯೇಂದ್ರಗೆ …

Read More »