Breaking News

ರಾಜಕೀಯ

ಹೊರಟ್ಟಿ ಮೇಲೆ ಕೇಸ್, ನೋಟಿಸ್ :R.C. ಆದಿತ್ಯಾ ಬಿಸ್ವಾಸ್

ವಿಧಾನಪರಿಷತ್ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಉಲ್ಲಂಘನೆ ಕೇಸ್‍ನಡಿ ಐದು ಸೀಜ್‍ಗಳಾಗಿವೆ. ಇದು ಬಿಟ್ಟು ಎರಡು ಮೇಜರ್ ದೂರು ಬಂದಿವೆ, ಕೆಲವು ಸಣ್ಣಪುಟ್ಟ ದೂರುಗಳನ್ನು ನಾವು ಇತ್ಯರ್ಥ ಮಾಡಿದ್ದೇವೆ ಎಂದು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್ ಅವರು ಬಾಗಲಕೋಟೆಯಿಂದ ಓರ್ವ ವ್ಯಕ್ತಿ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಭಾಷ ಕೋಟೆ …

Read More »

ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿ ಶಾಲೆಗೆ ಹೋಗದೇ, ಭಯಭೀತ

ಕಾರವಾರ: ಪೊಲೀಸ್ ಇನ್ಸ್​​ಪೆಕ್ಟರ್ ಧಮ್ಕಿಗೆ ಹೆದರಿದ 13 ವರ್ಷದ ಬಾಲಕಿಯೋರ್ವಳು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತ ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಮುಂಡಗೋಡ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಸಿದ್ದಪ್ಪ ಸಿಮಾನಿ‌ ಬಾಲಕಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ. ಜೂನ್​​ 5ರಂದು ಹೊಲದ ವಿಷಯವಾಗಿ ಸುಭಾನ್‌ಸಾಬ್‌ ನಬಿಸಾಬ್ ಹುಲಗುರ ಹಾಗೂ ಮುಂಡಗೋಡ ಠಾಣೆ ಇನ್ಸ್​​ಪೆಕ್ಟರ್ ಸಿದ್ದಪ್ಪ ಸಿಮಾನಿ‌ ನಡುವೆ ಜೋರಾದ ಮಾತುಕತೆ ನಡೆದಿದೆ. ಇದನ್ನು ದೂರದಿಂದಲೇ ನೋಡುತ್ತಿದ್ದ ಬಾಲಕಿ …

Read More »

ಶಿಕ್ಷಕರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಸೋಮವಾರಮತದಾನ, ಜೂ.15 ರಂದು ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ಮತ ಎಣಿಕೆ

ವಿಧಾನ ಪರಿಷತ್ತಿನ 2 ಶಿಕ್ಷಕರ ಕ್ಷೇತ್ರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ವಾಯವ್ಯ ಪದವೀಧರ ಕ್ಷೇತ್ರ, ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀಧರರ ಕ್ಷೇತ್ರಗಳ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿದೆ. ನಾಲ್ಕು ಕ್ಷೇತ್ರದಲ್ಲಿ ಒಟ್ಟು 607 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 45 ಪುರುಷ ಹಾಗೂ 4 ಮಹಿಳೆ ಸೇರಿ 49 ಮಂದಿ …

Read More »

ಬೆಳಗಾವಿ ಸೇರಿ ರಾಜ್ಯದೆಲ್ಲೆಡೆ ಇಂದಿನಿಂದ ಭಾರಿ ಮಳೆಯ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮುಂಗಾರು ಮಳೆ ಬಿರುಸಾಗಲಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಯಾದಗಿರಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೆಳಗಾವಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ …

Read More »

ಫಡ್ನವಿಸ್ ಅವರು ಪಕ್ಷೇತರ ಶಾಸಕರನ್ನು ನಮ್ಮ ಪಾಳೆಯದಿಂದ ದೂರವಿಡುವ ಮೂಲಕ “ಪವಾಡ” ಮಾಡುವಲ್ಲಿ ಯಶಸ್ವಿ: ಶರದ್ ಪವಾರ್

ಪುಣೆ/ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಆರು ಸ್ಥಾನಗಳ ಪೈಕಿ ಪ್ರತಿಪಕ್ಷ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕೇಸರಿ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು ಪಕ್ಷೇತರ ಶಾಸಕರನ್ನು ನಮ್ಮ ಪಾಳೆಯದಿಂದ ದೂರವಿಡುವ ಮೂಲಕ “ಪವಾಡ” ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.   ಚುನಾವಣಾಯಲ್ಲಿ ಮಿತ್ರ ಪಕ್ಷ ಶಿವಸೇನೆಯ ಅಭ್ಯರ್ಥಿಯೊಬ್ಬರು ಸೋತಿರುವುದರಿಂದ ನಾನು ಆಘಾತಕ್ಕೆ ಒಳಗಾಗಿಲ್ಲ ಎಂದು …

Read More »

ಅಕ್ಕಿ ಸಾಗಾಟ ಕೇಸ್: ಮುಖ್ಯ ಶಿಕ್ಷಕ ಶರಣಪ್ಪ ಅಮಾನತು

ಅಕ್ಕಿ ಸಾಗಾಟ ಕೇಸ್ ಅಕ್ಷರ ದಾಸೋಹ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನಲೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೊಮ್ಮನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರನ್ನು ಅಮಾನತ್ತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಂ. ಹರನಾಳ ಆದೇಶಿಸಿದ್ದಾರೆ. ಇನ್ನು ಅಂದಾಜು 44,900 ರೂ.ಮೌಲ್ಯದ ಆಹಾರ ಸಾಮಗ್ರಿಗಳನ್ನು ಬೇರೆ ಕಡೆಗೆ ಸಾಗಿಸುತ್ತಿರುವುದು ಸಾಬೀತಾಗಿದೆ. ಅದಕ್ಕಾಗಿ ಮುಖ್ಯಶಿಕ್ಷಕ ಶರಣಪ್ಪ ದೊಡ್ಡಪ್ಪ ಬಿದನೂರನನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಂ. …

Read More »

ಅವನೇನ್ ಕತ್ತೆ ಕಾಯ್ತಾ ಇದ್ನಾ.? – HDK ವಿರುದ್ಧ ಗುಬ್ಬಿ ಶಾಸಕ ಶ್ರೀನಿವಾಸ್ ಏಕವಚನದಲ್ಲೇ ಕಿಡಿ

ತುಮಕೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( HD Kumaraswamy ) ವರ್ಸಸ್ ಗುಬ್ಬಿ ಶಾಸಕ ಶ್ರೀನಿವಾಸ್ ನಡುವೆ ವಾಕ್ ಸಮರ ತಾರಕಕ್ಕೇರಿದೆ. ರಾಜ್ಯಸಭೆ ಚುನಾವಣೆ ( Rajya Sabha Election ) ಸಂದರ್ಭದಲ್ಲಿ ಜೆಡಿಎಸ್ ಗೆ ಮತ ಹಾಕಿಲ್ಲ. ಪಕ್ಷದಿಂದ ಬಿಟ್ಟೋಗು ಎಂದ ಕುಮಾರಸ್ವಾಮಿ ವಿರುದ್ಧ, ನಾನು ತೋರಿಸಿಯೇ ಜೆಡಿಎಸ್ ಗೆ ಮತ ಹಾಕಿದ್ದೇನೆ. ಹೆಬ್ಬೆಟ್ಟು ಅಡ್ಡ ಹಿಡಿದಿದ್ದೆ ಅಂತ ಕುಮಾರಸ್ವಾಮಿ ಹೇಳ್ತಾ ಇದ್ದಾರೆ. ಅವನೇನ್ ಕತ್ತೆ …

Read More »

ಅರುಣ್ ಶಹಾಪುರ್, ಹನುಮಂತ ನಿರಾಣಿ ದೊಡ್ಡ ಲೀಡ್‍ನಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ: ಬಸವರಾಜ್ ಬೊಮ್ಮಾಯಿ

ನಿನ್ನೆ ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಪಡೆದಿದ್ದೇವೆ. ಅದೇ ರೀತಿ ವಿಧಾನ ಪರಿಷತ್‍ನ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಪ್ರಥಮ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನ ಪಡೆದಿದೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪ್ರತಿನಿಧಿತ್ವ ಹೆಚ್ಚಾಗಿದೆ. ಅದೇ ರೀತಿ ವಿಧಾನ ಪರಿಷತ್‍ನ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ. ವಾಯುವ್ಯ ಪದವೀಧರ ಶಿಕ್ಷಕರ …

Read More »

ರಾಷ್ಟ್ರಪತಿ ಚುನಾವಣೆಗೆ ತಯಾರಿ ಜೋರು! ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ?

ದೇಶದಲ್ಲಿ ರಾಷ್ಟ್ರಪತಿ ಚುನಾವಣೆ ಘೋಷಣೆ ಆಗ್ತಿದ್ದಂತೆ ಆಡಳಿತ ರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳು ಅಭ್ಯರ್ಥಿಯ ಹುಡುಕಾಟದಲ್ಲಿ ನಿರತವಾಗಿವೆ. ಅದರಲ್ಲೂ ಕಾಂಗ್ರೆಸ್‌ ಇನ್ನಿತರ ಪ್ರತಿಪಕ್ಷಗಳ ಜೊತೆಗೆ ಸೇರಿ ಬಿಜೆಪಿಗೆ ತಕ್ಕ ಪ್ರತಿಸ್ಪರ್ಧಿಯನ್ನ ಕಣಕ್ಕಿಳಿಸೋಕೆ ತಯಾರಿ ನಡೆಸ್ತಿದೆ. ಇನ್ನು ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನ ಕಣಕ್ಕಿಳಿಸಬಹುದು ಅನ್ನೋ ವರದಿಗಳು ಬಲವಾಗಿ ಕೇಳಿ ಬರ್ತಿವೆ. ಮತ್ತೊಂದು ಕಡೆ ಕಾಂಗ್ರೇಸ್ಸೇತರರನ್ನ ರಾಷ್ಟ್ರಪತಿಯನ್ನಾಗಿಸೋಕೆ ಚಿಂತನೆ ನಡೆಸಲಾಗ್ತಿದೆ ಅಂತ ಕೂಡ ಹೇಳಲಾಗ್ತಿದೆ. ಆದ್ರೆ …

Read More »

ಬಿಜೆಪಿಗೆ ವರವಾದ ಕಾಂಗ್ರೆಸ್-ಜೆಡಿಎಸ್ ಜಗಳ: ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜಯರಾಮ್ ರಮೇಶ್‌, ಲೆಹರ್ ಸಿಂಗ್‌ ಜಯ

ಬೆಂಗಳೂರು, ಜೂ.10: ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜಯರಾಮ್ ರಮೇಶ್ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶ ಮಾಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ನಾಲ್ಕನೇ ಅಭ್ಯರ್ಥಿ ಸಹ ಬಿಜೆಪಿ ಪಾಲಾಗಿದ್ದು, ಲೆಹರ್ ಸಿಂಗ್ ಸಿರೋಯಾ ಅದೃಷ್ಟ ಖುಲಾಯಿಸಿದೆ. ರಾಜ್ಯಸಭೆ ಕಣದಲ್ಲಿ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜಯರಾಂ ರಮೇಶ್, ಲೆಹರ್ ಸಿಂಗ್ ಸಿರೋಯಾ, ಕುಪೇಂದ್ರ ರೆಡ್ಡಿ …

Read More »