ಮುಂಬಯಿ: ಶಿವಸೇನೆಯಿಂದ ಬಂಡಾ ಯ ವೆದ್ದು ತನ್ನ ಬೆಂಬಲಿತ ಶಾಸಕ ರೊಂದಿಗೆ ಪಕ್ಷದಿಂದ ಹೊರನಡೆದಿದ್ದ ಏಕ ನಾಥ ಶಿಂಧೆಯವರಿಗೆ ಸರಕಾರ ರಚಿಸು ವಂತೆ ಆಹ್ವಾನ ನೀಡಿದ್ದ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಯವರ ನಡೆಯನ್ನು ಪ್ರಶ್ನಿಸಿ, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ನ ರಜಾಕಾಲದ ನ್ಯಾಯ ಪೀಠವು ಉದ್ಧವ್ ಅವರ ಅರ್ಜಿಯನ್ನು ಸ್ವೀಕರಿಸಿದ್ದು ಅರ್ಜಿಯ ವಿಚಾರಣೆಯನ್ನು ಜು. 11ಕ್ಕೆ ನಿಗದಿಗೊಳಿಸಿದೆ. ಅರ್ಜಿಯಲ್ಲಿ ಠಾಕ್ರೆಯವರು, ಜು. 3 ಮತ್ತು …
Read More »ಆಂಧ್ರ ಪ್ರದೇಶ: 400 ಅಡಿ ಕೊಳವೆ ಬಾವಿಯಿಂದ ಬಾಲಕನನ್ನು ರಕ್ಷಿಸಿದ ಧೈರ್ಯಶಾಲಿ ಯುವಕ!
ವಿಜಯವಾಡ: ಆಂಧ್ರ ಪ್ರದೇಶದ ದ್ವಾರಕ ತಿರುಮಲದ ಗುಂಡುಗೊಲುಗುಂಟ ಗ್ರಾಮದಲ್ಲಿ 30 ಅಡಿ ಆಳದ ತೆರೆದ ಕೊಳಬೆ ಬಾವಿಗೆ ಬಿದಿದ್ದ 9 ವರ್ಷದ ಬಾಲಕನೊಬ್ಬನನ್ನು ಧೈರ್ಯಶಾಲಿ ಯುವಕನೊಬ್ಬ ಐದು ಗಂಟೆಗಳ ಸಾಹಸ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬಾಲಕ ಎಸ್. ಜಸ್ವಂತ್ ತನ್ನ ಮನೆ ಬಳಿ ಆಡುತ್ತಿದ್ದಾಗ ಬುಧವಾರ ರಾತ್ರಿ 7 ಗಂಟೆಯ ನಂತರ ನಾಪತ್ತೆಯಾಗಿದ್ದಾನೆ. ಆತನ ಪೋಷಕರು ಹುಡುಕಾಡಿದರೂ ಆತ ಸಿಕ್ಕಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಹಾಯಕಕ್ಕಾಗಿ ಕೂಗುತ್ತಿದ್ದ ಬಾಲಕನ ಧ್ವನಿಯನ್ನು …
Read More »2023ರ ವಿಧಾನಸಭಾ ಚುನಾವಣೆ ನನ್ನ ಕೊನೇ ಚುನಾವಣೆ: ಸಿದ್ದರಾಮಯ್ಯ
ಕೊಳ್ಳೇಗಾಲ: ಮುಂದಿನ ವರ್ಷದ ವಿಧಾನಸಭಾ ಚುನಾವಣೆ ನನಗೆ ಕೊನೆಯ ಚುನಾವಣೆಯಾಗಿದ್ದು, ಬಳಿಕ ರಾಜಕೀಯದಿಂದ ನಿವೃತ್ತಿ ಹೊಂದುವ ಮೂಲಕ ಇತರರಿಗೆ ಅವಕಾಶ ಕಲ್ಪಿಸಿಕೊಡುವುದಾಗಿ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದರು. ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಸಿದ್ದಪ್ಪಾಜಿ ಕಂಡಾಯ ಮತ್ತು ಕೊಂಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯುವ ನನ್ನ 75ನೇ ಜನ್ಮ ದಿನೋತ್ಸವಕ್ಕೆ ಆರೆಸ್ಸೆಸ್‌ನವರು ಸಿದ್ದರಾಮಯ್ಯ ಅವರ ಉತ್ಸವ ಎಂದು ನಾಮಕರಣ …
Read More »ಪಿಎಸ್‌ಐ ನೇಮಕಾತಿ ಅಕ್ರಮ: ಪ್ರಭಾವಿಗಳ ಹೆಸರು ಬಹಿರಂಗಪಡಿಸಲು ಕಾಂಗ್ರೆಸ್ ಆಗ್ರಹ
ಬೆಂಗಳೂರು: ‘ಪಿಎಸ್‌ಐ ನೇಮಕ ಅಕ್ರಮದಲ್ಲಿ ಬಿಜೆಪಿ ಪ್ರಮುಖರು,ಪ್ರಭಾವಿ ಸಚಿವರು, ನಾಯಕರು ಭಾಗಿಯಾಗಿದ್ದು, ಅವರ ಹೆಸರು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಹೋರಾಟ ತೀವ್ರಗೊಳಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಸಿದ ‘ಕೈ’ ನಾಯಕರು, ‘ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’, ‘ರಕ್ಷಿಸಿ, ರಕ್ಷಿಸಿ ನ್ಯಾಯಾಧೀಶರನ್ನು ರಕ್ಷಿಸಿ’ ಎಂದು ಘೋಷಣೆ ಕೂಗಿದರು. ‘ಮುಖ್ಯಮಂತ್ರಿ ಕಚೇರಿಯಿಂದ ಹಿಡಿದು ಗೃಹ ಸಚಿವಾಲಯ, …
Read More »ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ₹ 132 ಕೋಟಿ ಮೊತ್ತದ ಅನುಮೋದನೆ: C.M.ಬೊಮ್ಮಾಯಿ
ಬೆಂಗಳೂರು: ‘ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಿಸಲು ₹ 132 ಕೋಟಿ ಮೊತ್ತದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ‘ಸರ್ಕಾರ ಈಗಾಗಲೇ ಸಮವಸ್ತ್ರ ವಿತರಿಸಲು ಅನುಮೋದನೆ ನೀಡಿದೆ. ಸಮವಸ್ತ್ರ ತಯಾರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ನಂತರ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಭಿಕ್ಷೆ ಬೇಡಿರುವ ಹಣ ಎಲ್ಲಿ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ …
Read More »ಅಬಕಾರಿ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ಆರೋಪ
ವಿಜಯಪುರ: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮುಖ್ಯಮಂತ್ರಿ ತಕ್ಷಣ ಮಧ್ಯಪ್ರವೇಶಿಸಿ ಕಡಿವಾಣ ಹಾಕಬೇಕು ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಆಗ್ರಹಿಸಿದೆ. ವಿಜಯಪುರದಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗದ ಅಬಕಾರಿ ಸನ್ನದುದಾರರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಸ್.ಗುರುಸ್ವಾಮಿ, ರಾಜ್ಯದಲ್ಲಿ ಅಬಕಾರಿ ಅಧಿಕಾರಿಗಳು ಅಬಕಾರಿ ಕಾಯ್ದೆಯಲ್ಲಿರುವ ಲೋಪದೋಷಗಳ ಲಾಭ ಪಡೆದು ಮಾರಾಟಗಾರರನ್ನು ಹಿಂಸಿಸಿ ‘ಮಾಮೂಲಿ’ (ಲಂಚ) ಹಣವನ್ನು ಬಲತ್ಕಾರವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳು …
Read More »ದೇಶದಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆ ಎಲ್ಲರಿಗೂ ಮಾದರಿ ಆಗಲಿ: ಶಾಸಕ ಅನಿಲ ಬೆನಕೆ
ಬೆಳಗಾವಿ: ದೇಶದಲ್ಲೇ ಸರ್ಕಾರಿ ಆಸ್ಪತ್ರೆಗಳ ಪೈಕಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಇಂದು 12ನೇ ಸ್ಥಾನದಲ್ಲಿದ್ದು, ಬರುವ ಒಂದು ವರ್ಷದಲ್ಲಿ ಬಿಮ್ಸ್ ಆಸ್ಪತ್ರೆಯನ್ನು 5 ನೇ ಸ್ಥಾನಕ್ಕೆ ತರಲು ಎಲ್ಲ ತರಹದ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವು ಎಂದು ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ತಿಳಿಸಿದರು. ಶುಕ್ರವಾರ ನಗರದ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸಹಾಯ ವಾಣಿ, ಅನ್ ಲೈನ್ ಪಾವತಿ ಕೌಂಟರ್, ಹೆಲ್ತ ಡೆಸ್ಕ್, ಹಿರಿಯ …
Read More »ತುಮಕೂರಿನ ರೌಡಿಶೀಟರ್ ಮನೆಗಳ ಮೇಲೆ ದಾಳಿ: ಮಾರಕಾಸ್ತ್ರ ವಶಕ್ಕೆ
ತುಮಕೂರು: ನಗರದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗದಂತೆ ತಡೆಗಟ್ಟಲು ಶುಕ್ರವಾರ ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಅಪಾರ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ತುಮಕೂರಿನಲ್ಲಿ ಬಕ್ರೀದ್ ಹಬ್ಬ ಹಾಗೂ ಅಕ್ರಮ ಚಟುವಟಿಕೆ ಹೆಚ್ಚಿದ್ದು, ಈ ಹಿನ್ನಲೆಯಲ್ಲಿ ನಗರದಲ್ಲಿ ಮುಂಜಾನೆ ರೌಡಿಶೀಟರ್ ಮನೆಗಳಿಗೆ ದಾಳಿ ನಡೆಸಿ ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ನಂತರ ನಗರದ ಚಿಲುಮೆ ಸಮುದಾಯ ಭವನದಲ್ಲಿ ಪರೇಡ್ ಮಾಡಲಾಯಿತು. ನಗರ ವ್ಯಾಪ್ತಿಯಲ್ಲಿನ 84 ಜನ …
Read More »ಬಕ್ರೀದ್ ಹಬ್ಬ: ಕೋವಿಡ್ ಮಾರ್ಗಸೂಚಿ ಕಡ್ಡಾಯ
ಬೆಂಗಳೂರು: ಬಕ್ರೀದ್ ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗದಂತೆ ಖುರ್ಬಾನಿಯನ್ನು (ಪ್ರಾಣಿ ಬಲಿದಾನ) ನೆರವೇರಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಮುಸ್ಲಿಮರು ಭಾನುವಾರ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಿದ್ದಾರೆ ಎಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿದೆ. ಹಬ್ಬದ ದಿನದಂದು ಮುಸ್ಲಿಮರು ಈದ್ಗಾ ಮೈದಾನ, ಮಸೀದಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಧಾರ್ಮಿಕ ಆಚರಣೆಯ ಪ್ರಯುಕ್ತ ಹಬ್ಬದ ದಿನ ಸೇರಿದಂತೆ …
Read More »ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ: ಚಿಕ್ಕೋಡಿಯ ನಾಲ್ಕು ಸೇತುವೆಗಳು ಮುಳುಗಡೆ
ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರದಿದ್ದು ಇದರಿಂದ ಚಿಕ್ಕೋಡಿ ತಾಲೂಕಿನ ನಾಲ್ಕು ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಲ್ಲಿ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನ ಯಡೂರ-ಕಲ್ಲೋಳ, ಮಾಂಜರಿ-ಸೌಂದತ್ತಿ, ಮಲಿಕವಾಡ-ದತ್ತವಾಡ, ಯಕ್ಸಂಬಾ-ದಾನವಾಡದ ಕೆಳಮಟ್ಟದ ಸೇತುವೆಗಳು ಮುಳಗಡೆಯಾಗಿವೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ಒಂದೇ ದಿನದಲ್ಲಿ ಒಂದು ಅಡಿಯಷ್ಟು ನೀರು ಏರಿಕೆಯಾಗಿದ್ದು ನದಿತೀರದ ಜನರಿಗೆ ಮತ್ತೆ …
Read More »
Laxmi News 24×7