ಬೆಂಗಳೂರು: ನಮಗೆ ಎಲ್ಲ ಜನರ ಜೀವ ಮುಖ್ಯ. ನಾವು ಎಲ್ಲರನ್ನೂ ಸರಿಸಮಾನವಾಗಿ ಕಾಣುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಿಂದ ಹಿಂತಿರುಗಿದ ನಂತರ ಮಂಗಳೂರಿನಲ್ಲಿ ಮತ್ತೊಂದು ಕೊಲೆಯಾಗಿರುವ ಬಗ್ಗೆ ವಿಷಯ ತಿಳಿದು ಮಾಹಿತಿ ಪಡೆಯಲಾಗಿದೆ. ಕಾನೂನು ಸುವ್ಯವಸ್ಥೆ ಎ.ಡಿ.ಜಿ.ಪಿ ಅವರನ್ನು ಅಲ್ಲಿಯೇ ಇದ್ದು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದೇನೆ ಎಂದರು. ಎಲ್ಲಾ ಮೂರು ಪ್ರಕರಣಗಳಲ್ಲಯೂ ಕಠಿಣ ಕ್ರಮ ವಹಿಸಲಾಗುವುದು. ಕಾನೂನಿನ ವ್ಯಾಪ್ತಿಯಲ್ಲಿ ಅಗತ್ಯವಿರುವ …
Read More »ಅಂತರ್ಜಾತಿ ವಿವಾಹವಾದ ಜೋಡಿ: ಯುವತಿ ಪೋಷಕರಿಂದ ಕೊಲೆ ಬೆದರಿಕೆ
ಹಾವೇರಿ: ರಾಣೆಬೆನ್ನೂರು ತಾಲೂಕಿನ ಚಿಕ್ಕಬಿದರಿ ಗ್ರಾಮದ ಯುವತಿ ಮತ್ತು ಹರಪನಹಳ್ಳಿಯ ಯುವಕ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರಿಗೆ ಈಗ ಭಾರಿ ಸಂಕಷ್ಟ ಎದುರಾಗಿದೆ. ಚೈತ್ರಾಗೆ 19 ವರ್ಷವಾಗಿದ್ದರೆ ರಮೇಶನಿಗೆ 20 ವರ್ಷ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಣಿ ಮಾಡಲು ಹೋಗಿದ್ದ ವೇಳೆ ರಮೇಶನ ವಯಸ್ಸನ್ನು ಕೇಳಿ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ. ಅಂತರ್ಜಾತಿ ವಿವಾಹ: ಚೈತ್ರಾ ಲಿಂಗಾಯತ ಸಮುದಾಯದವರಾಗಿದ್ದರೆ ರಮೇಶ ಕುರುಬ ಸಮುದಾಯಕ್ಕೆ ಸೇರಿದ್ದಾನೆ. ಇದರಿಂದ ಚೈತ್ರಾ ಮನೆಯಲ್ಲಿ ರಮೇಶ ಮತ್ತು …
Read More »ವಿಕ್ರಾಂತ್ ರೋಣ ಶೋ ವೇಳೆ ಝಳುಪಿಸಿದ ಲಾಂಗು, ಮಚ್ಚು
ಜುಲೈ, 28 : ಚಿಕ್ಕಮಗಳೂರಿನಲ್ಲಿ ಇಂದು ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಅಲ್ಲದೆ ಮಿಲನ್ ಥಿಯೇಟರ್‌ನಲ್ಲಿ ಲಾಂಗ್-ಮಚ್ಚುಗಳು ಜಳಪಿಸಿದ್ದು, ಭರತ್ ಎಂಬಾತನಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಇಂದು ನಟ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿದ್ದು, ಕೆಲವರು ಚಿಕ್ಕಮಗಳೂರು ನಗರದ ಮಿಲನ್ ಥಿಯೇಟರ್‌ನಲ್ಲಿ ಗೂಂಡಾಗಳಂತೆ ವರ್ತನೆಯನ್ನು ಮೆರೆದಿದ್ದಾರೆ. ಥಿಯೇಟರ್‌ನಲ್ಲಿ …
Read More »ಜಡ್ಜ್ಗಳ ವೇತನ 3 ಪಟ್ಟು ಏರಿಕೆ
ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ (ಎಸ್ಎನ್ಜೆಪಿ) ಶಿಫಾರಸುಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಅನುಮೋದನೆ ನೀಡಿದೆ. ಅದರ ಅನುಷ್ಠಾನದಿಂದ ದೇಶದ ಸುಮಾರು 25,000 ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರ ಮೂಲ ವೇತನ ಮೂರು ಪಟ್ಟು ಹೆಚ್ಚಲಿದೆ. ಎಸ್ಎನ್ಜೆಪಿ ಶಿಫಾರಿತ ವೇತನವನ್ನು 2016ರ ಜನವರಿ 1ರಿಂದಲೇ ಪೂರ್ವಾನ್ವಯಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಸೂಚಿಸಿದ್ದಾರೆ. 2016 ಜನವರಿ 1ರಂದು ಕೇಂದ್ರ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾಗಿತ್ತು. ಆ …
Read More »ಮಂಗಳೂರಿನ ಸುರತ್ಕಲ್ ನಲ್ಲಿ `ಫಾಜಿಲ್’ ಹತ್ಯೆ ಪ್ರಕರಣ : ಇಂದು ನಾಲ್ಕು ಕಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು : ಸುರತ್ಕಲ್ ನಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಸುರತ್ಕಲ್ ವ್ಯಾಪ್ತಿಯಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸುರತ್ಕಲ್ ನ ಮಂಗಳಪೇಟೆ ನಿವಾಸಿ ಫಾಜಿಲ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಂದು ನಾಲ್ಕು ಕಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸುರತ್ಕಲ್, ಪೆಣಂಬೂರು, ಬಜ್ಪೆ, ಮುಲ್ಕಿಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಫಾಜಿಲ್ …
Read More »ಅಸಮರ್ಥ ಗೃಹಸಚಿವ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲ:ಸಿದ್ದರಾಮಯ್ಯ
ಬೆಂಗಳೂರು : ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಸುರತ್ಕಲ್ ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ …
Read More »ಜೀವನದಲ್ಲಿ ನೀವು ನಿಮ್ಮ ಗುರಿ ಮುಟ್ಟಿದರೆ ಈ ತರಬೇತಿ ನೀಡುತ್ತಿರುವುದು ಸಾರ್ಥಕ: ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಜರುಗುತ್ತಿರುವ ಸೈನಿಕ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಮಹಿಳಾ ಆಕಾಂಕ್ಷಿಗಳಿಗೆ ಉಚಿತ ತರಬೇತಿಯ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸತೀಶ ಜಾರಕಿಹೊಳಿ ಅವರು ಮಾತನಾಡಿದರು. ಜೀವನದಲ್ಲಿ ನೀವು ನಿಮ್ಮ ಗುರಿ ಮುಟ್ಟಿದರೆ ಈ ತರಬೇತಿ ನೀಡುತ್ತಿರುವುದು ಸಾರ್ಥಕವಾಗುತ್ತದೆ. ಸಮಾಜದ ಒಳಿತಿಗಾಗಿ ದುಡಿಯಬೇಕು ಎಂದರು. ಶಿಬಿರದಲ್ಲಿ ಭಾಗವಹಿಸಿದ ಆಕಾಂಕ್ಷಿಗಳು ತರಬೇತಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚುಕೊಳ್ಳುತ್ತ ಭಾವುಕರಾದರು. ಸತೀಶ ಜಾರಕಿಹೊಳಿ ಅವರಿಗೆ ಈ ತರಬೇತಿ ನಡೆಸುತ್ತಿರುವ ಕುರಿತು ಹೃತ್ಪೂರ್ವಕ ಅಭಿನಂದನೆಗಳನ್ನು …
Read More »ಈಜಲು ಬಾವಿಗೆ ಇಳಿದ ಇಬ್ಬರು ಮಕ್ಕಳು ನೀರುಪಾಲು.. ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ಕಲಬುರಗಿ: ಬಾವಿಯೊಂದರಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಆಳಂದ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಶ್ರೀಶೈಲ್ ಲಕ್ಷ್ಮಣ (13) ಹಾಗೂ ಲಕ್ಷ್ಮಣ ಗುಂಡಪ್ಪ(12) ಈಜಲು ಹೋಗಿ ಸಾವನ್ನಪ್ಪಿದ ದುರ್ದೈವಿಗಳು. ಈ ಇಬ್ಬರು ಮಕ್ಕಳು ಹೇಬಳಿ ರೋಡ್ ನ್ಯೂ ಬಾಳೇನಕೇರಿ ನಿವಾಸಿಗಳು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಇಬ್ಬರು ಈಜಲು ಎಂದು ಬಾವಿಗೆ ತೆರಳಿದ್ದಾರೆ. ಈಜು ಸರಿಯಾಗಿ ಬಾರದಿದ್ದರೂ ಬಾವಿಗೆ ಇಳಿದು ದುಸ್ಸಾಹಸ ಮಾಡಿದ್ದರಿಂದ ಅವಘಡ ಸಂಭವಿಸಿದೆ ಎಂದು …
Read More »ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಕೇರಳದಲ್ಲಿ ಇಬ್ಬರ ಬಂಧನ
ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಕೇರಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಶಕ್ಕೆ ಪಡೆದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಋಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಬೆಳ್ಳಾರೆ ನಿವಾಸಿ ಮೊಹ್ಮದ್ ಶಫೀಕ್ (27) , ಸವಣೂರು ನಿವಾಸಿ ಝಾಕೀರ್ (29) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆಯ ನೇತ್ರತ್ವ ವಹಿಸಿರುವ ಐಡಿಜಿಪಿ ಅಲೋಕ್ ಕುಮಾರ್ ಜಿಲ್ಲೆಯ …
Read More »ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ; 25 ಲಕ್ಷ ರೂ. ಪರಿಹಾರ
ಸುಳ್ಯ: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಗುರುವಾರ ಸಂಜೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿದ ಸಿಎಂ, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದ್ದು, ಅತೀ ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು. ಸರಕಾರ ಮತ್ತು ಬಿಜೆಪಿ ನಿಮ್ಮೊಂದಿಗೆ ಇರಲಿದೆ ಎಂದು ಧೈರ್ಯ ತುಂಬಿದರು. 25 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ಅನ್ನು ಸಿಎಂ …
Read More »
Laxmi News 24×7