ತಿರುಪತಿ:ದೇಶಾದ್ಯಂತ ಸಂಭ್ರಮದ ನವರಾತ್ರಿ ಹಬ್ಬ ಕಳೆಕಟ್ಟುತ್ತಿರುವಂತೆಯೇ ಜಗತ್ತಿನ ಶ್ರೀಮಂತ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಮಂಗಳವಾರದಿಂದ 9 ದಿನಗಳ ಕಾಲ ಬ್ರಹ್ಮೋತ್ಸವ ನಡೆಯಲಿದೆ. ಸಂಪ್ರದಾಯ ಪ್ರಕಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರು ಹೊಸ ವಸ್ತ್ರಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಬ್ರಹ್ಮೋತ್ಸವ ಅದ್ಧೂರಿಯಾಗಿ ಆಚರಿಸಲು ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಅದ್ಧೂರಿಯಾಗಿ ಬ್ರಹ್ಮೋತ್ಸವ ಆಚರಿಸಲಾಗುತ್ತದೆ. ಹೀಗಾಗಿ, ದೇಶದ …
Read More »ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಧಾರವಾಡ: ಇಲ್ಲಿನ ತಡಸಿನಕೊಪ್ಪದಲ್ಲಿ ನಿರ್ಮಾಣಗೊಂಡಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಯನ್ನು ಹಾಗೂ ನೂತನ ಕ್ಯಾಂಪಸನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ಹಾಗೂ ಇನ್ಪೊಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ರಾಷ್ಟಪತಿ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಇದ್ದರು. ರಾಷ್ಟ್ರಪತಿ ಅವರಿಗೆ ಐಐಐಟಿ …
Read More »ಕೇವಲ 10 ಸೆಕೆಂಡ್ ನಲ್ಲಿ ನಿಮ್ಮನ್ನು ಮುಗಿಸ್ತೀವಿ; RSS ಪ್ರಮುಖರಿಗೆ SDPI ಮುಖಂಡನ ಧಮ್ಕಿ
ತಿರುವನಂತಪುರಂ: ಪಿಎಫ್‌ಐ ಹಾಗೂ ಎಸ್ ಡಿ ಪಿ ಐ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸಿ ಹಲವರನ್ನು ಬಂಧಿಸಿರುವ ಬೆನ್ನಲ್ಲೇ ಕೇರಳದಲ್ಲಿ ಎಸ್ ಡಿ ಪಿ ಐ ಹಾಗೂ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅಲ್ಲದೇ ಆರ್ ಎಸ್ ಎಸ್ ಮುಖಂಡರಿಗೆ ಬೆದರಿಕೆ ಹಾಕಿದ್ದಾರೆ. ಎನ್ ಐಎ ದಾಳಿ ಖಂಡಿಸಿ ಎರ್ನಾಕುಲಂನಲ್ಲಿ ಪ್ರತಿಭಟನೆ ನಡೆಸಿರುವ ಎಸ್ ಡಿ ಪಿ ಐ ಸಂಘಟನೆ, ಕೇಂದ್ರ ಸರ್ಕಾರ ಹಾಗೂ …
Read More »ಒಂಬತ್ತು ತಿಂಗಳ ಹಿಂದೆ ಬಿದ್ದು ಹೋಗಿದೆ. ಆದರೆ ಇಲ್ಲಿಯ ತನಕ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ಹಾಗಾಗಿಆತ್ಮಹತ್ಯೆ ಬೆದರಿಕೆ ಹಾಕಿದ ನೆರೆ ಸಂತ್ರಸ್ತ
ಬೆಳಗಾವಿ: ಅತಿವೃಷ್ಟಿಯಿಂದ ಮನೆ ಬಿದ್ದು 9 ತಿಂಗಳು ಕಳೆದರೂ, ಪರಿಹಾರ ನೀಡದ ಹಿನ್ನೆಲೆ ಮನೆ ನಿರ್ಮಿಸಿ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸದ್ಯ ನೆರೆ ಸಂತ್ರಸ್ತ ವ್ಯಕ್ತಿಯ ಈ ವಿಡಿಯೋ ವೈರಲ್ ಆಗುತ್ತಿದೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಈರಪ್ಪ ನಾಡಗೌಡ್ರ ಎಂಬುವರು ಮೊಬೈಲ್ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಅಲ್ಲದೇ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ …
Read More »ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಮೈಸೂರು: ದಸರಾ ಮಹೋತ್ಸವ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆ ಧರಿಸಿ, ದಸರಾ ಉದ್ಘಾಟಿಸುವ ಮೂಲಕ ಮೈಸೂರಿಗೆ ವಿಶೇಷ ಗೌರವ ನೀಡಿದ್ದಾರೆ. ರಾಷ್ಟ್ರಪತಿಯವರಿಗಾಗಿ ವಿಶೇಷವಾಗಿ ನೇಯ್ದ ಮೈಸೂರು ರೇಷ್ಮೆ ಸೀರೆ ಇದು. ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾಡಳಿತದ ಪರವಾಗಿ ರಾಷ್ಟ್ರಪತಿಯವರನ್ನು ಅಧಿಕೃತವಾಗಿ ಆಹ್ವಾನಿಸುವಾಗ ಗೌರವ ಸೂಚಕವಾಗಿ ಈ ಮೈಸೂರು ರೇಷ್ಮೆ ಸೀರೆ, ಫಲ ತಾಂಬೂಲ ನೀಡಿ ಗೌರವಿಸಿದ್ದರು. …
Read More »ಮಾರ್ಕಂಡೇಯ ಡ್ಯಾಮ್‍ಗೆ ಹೋಯ್ತು ಭೂಮಿ: ಈಗ ಊರು ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಪಣಗುತ್ತಿ ಸಂತ್ರಸ್ತರು..!
ಇವರೆಲ್ಲಾ ಮಾರ್ಕಂಡೇಯ ಡ್ಯಾಮ್ ಕಟ್ಟಲು ತಮ್ಮ ಇದ್ದ ಭೂಮಿಯನ್ನೇ ಬಿಟ್ಟು ಕೊಟ್ಟವರು. ಆದರೆ ಇಂದು ಸರಿಯಾದ ಸೂರು ಇಲ್ಲದೇ, ಊರು ಇಲ್ಲದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಸಂತ್ರಸ್ತರು ಪುನರ್ವಸತಿ ಕಲ್ಪಿಸಿ ತಮ್ಮ ಗ್ರಾಮವನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಹೋರಾಟದ ಹಾದಿ ಹಿಡಿದಿದ್ದಾರೆ. ಮಾರ್ಕಂಡೇಯ ನದಿಯ ಹಿನ್ನಿರಿನಲ್ಲಿ 2002ರಲ್ಲಿ ಮುಳುಗಡೆ ಆಗಿರುವ ಬೆಳಗಾವಿ ತಾಲೂಕಿನ ಪಣಗುತ್ತಿ ಗ್ರಾಮದ ಜನರು ಅಂದು ಭೂಮಿ ಕಳೆದುಕೊಂಡಿದ್ದರು. ಇದೀಗ ಇಲ್ಲಿನ ಸಂತ್ರಸ್ತರು ಹೆಚ್ಚಿನ ಪ್ರಮಾಣದಲ್ಲಿ …
Read More »ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ಉಡುಪಿ ಐಎಎಸ್ ಅಧಿಕಾರಿ!
ಉಡುಪಿ, ಸೆಪ್ಟೆಂಬರ್, 25: ಕಸ ಸಂಗ್ರಹಕಾರರು ಅಂದರೆ ಸಮಾಜದಲ್ಲಿ ಕೀಳರಿಮೆ ಜಾಸ್ತಿ. ಅದರಲ್ಲೂ ನಾವೇ ಸೃಷ್ಟಿಸಿದ ಕಸ, ತ್ಯಾಜ್ಯ ತುಂಬಿದ ವಾಹನ ರಸ್ತೆಯಲ್ಲಿ ಹೋಗುತ್ತಿದ್ದರೆ ಮೂಗು ಮುಚ್ಚಿ ಹೋಗುವವರೇ ಸಂಖ್ಯೆಯ ಅಧಿಕವಾಗಿದೆ. ಕಸ ಎತ್ತುವ ಸ್ವಚ್ಛತೆಯ ಸೈನಿಕರ ಬಗ್ಗೆ ಜನರಿಗಿದ್ದ ಕೀಳರಿಮೆಯನ್ನು ಹೋಗಲಾಡಿಸಲು ಉಡುಪಿಯ ಐಎಎಸ್ ಪ್ರಸನ್ನ ಎನ್ನುವವರು ಮುಂದಾಗಿದ್ದಾರೆ. ದಿನವಿಡೀ ತ್ಯಾಜ್ಯ ವಿಲೇವಾರಿ ಸಿಬ್ಬಂದಿ ಜೊತೆಗಿದ್ದು, ಅವರ ಜೊತೆ ಮನೆಮನೆಗೆ ಹೋಗಿ ಕಸ ಸಂಗ್ರಹಿಸಿ, ಕಸ ತುಂಬಿದ ವಾಹನವನ್ನೂ …
Read More »ಮೌಲ್ಯಮಾಪನ ಎಡವಟ್ಟು ಏರಿಕೆ: ದ್ವಿತೀಯ ಪಿಯು; ಮರುಮೌಲ್ಯಮಾಪನ ನಿರೀಕ್ಷೆಯೇ ಅಧಿಕ !
ಮಂಗಳೂರು: ದ್ವಿತೀಯ ಪಿಯು ಫಲಿತಾಂಶದಲ್ಲಿ ತೃಪ್ತಿ ಹೊಂದಿಲ್ಲದ ವಿದ್ಯಾರ್ಥಿ ಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕು ವುದು ಸಾಮಾನ್ಯ. ಆದರೆ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಬಾರಿ ಪ್ರಕಟಿತ ಅಂಕ ಗಳಿಗಿಂತ ಮರುಮೌಲ್ಯಮಾಪನದ ಬಳಿಕ ಅಂಕಗಳು ವ್ಯತ್ಯಾಸವಾದ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮರು ಮೌಲ್ಯ ಮಾಪನ ವಾದ ಬಳಿಕ ಬರೋಬ್ಬರಿ 2,047 ವಿದ್ಯಾರ್ಥಿ ಗಳಿಗೆ ಹೆಚ್ಚುವರಿ ಅಂಕ ದೊರೆತಿದ್ದರೆ, 2020 ರಲ್ಲಿ 2,318 ಮಂದಿಗೆ ದೊರಕಿತ್ತು. ಮೌಲ್ಯಮಾಪಕರ …
Read More »ಅಂಬಾರಿ’ಯಲ್ಲಿ ಮಧ್ಯರಾತ್ರಿವರೆಗೂ ದೀಪಾಲಂಕಾರ ವೀಕ್ಷಿಸಿದ ಸಿಎಂ
ಮೈಸೂರು: ದಸರಾ ಅಂಗವಾಗಿ ನಗರದಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಇಂಧನ ಸಚಿವ ಸುನೀಲ್‌ಕುಮಾರ್ ಭಾನುವಾರ ಮಧ್ಯರಾತ್ರಿವರೆಗೂ ವೀಕ್ಷಿಸಿದರು. ರಾತ್ರಿ 10.30ರ ಸುಮಾರಿಗೆ ನಗರ ಪ್ರದಕ್ಷಿಣೆ ಆರಂಭಿಸಿದ ಅವರು, ರ‍್ಯಾಡಿಷನ್ ಬ್ಲೂ ಹೋಟೆಲ್‌ನಿಂದ ಕೆಎಸ್‌ಆರ್‌ಟಿಸಿಯ ಎರಡು ವೋಲ್ವೋ ಬಸ್ ಮೂಲಕ ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತಕ್ಕೆ ಬಂದರು. ಅಲ್ಲಿಂದ ಪ್ರವಾಸೋದ್ಯಮ ನಿಗಮದ ‘ಅಂಬಾರಿ’ ಡಬ್ಬಲ್ ಡೆಕ್ಕರ್ …
Read More »ಭ್ರಷ್ಟಾಚಾರ ಮುಚ್ಚಲು ಜಾತಿ ಮೊರೆ ಹೋದ ಬಿಜೆಪಿ: ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿಯವರ ಭ್ರಷ್ಟಾಚಾರ, ತಪ್ಪುಗಳನ್ನು ಮುಚ್ಚಿಕೊಳ್ಳಲು ಜಾತಿ ಮೊರೆ ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್‌ನ ಪೇಸಿಎಂ ಅಭಿಯಾನ ಲಿಂಗಾಯತ ಮುಖ್ಯಮಂತ್ರಿಗೆ ಅಪಮಾನ ಮಾಡುವ ಷಡ್ಯಂತ್ರ ಎಂಬ ಆರೋಪಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರ ಸಂಘದವರು ಶೇ. 40 ಪರ್ಸೆಂಟೆಜ್ ಬಗ್ಗೆ ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಕಳೆದ 1 ವರ್ಷದಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ವಿಚಾರವನ್ನು ಅಸೆಂಬ್ಲಿಯಲ್ಲಿ ಎತ್ತಿದರೆ ಜಾತಿ ವಿಚಾರ ಹೇಗೆ …
Read More »
Laxmi News 24×7