Breaking News

ರಾಜಕೀಯ

ಪೊಲೀಸರೇ. 6 ತಿಂಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ; ಪೊಲೀಸರಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಚಾಮರಾಜನಗರ: ಕಾಂಗ್ರೆಸ್ ಪಕ್ಷವು ದೇಶವ್ಯಾಪಿ ನಡೆಸಲು ಉದ್ದೇಶಿಸಿರುವ ಭಾರತ್ ಜೋಡೋ ಯಾತ್ರೆ ಶುರುವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಲ್ಲಿ ಬೃಹತ್‌ ಸಮಾವೇಶ ನಡೆಯುತ್ತಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.     ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆ ಕಿಡಿಗೇಡಿಗಳು ಪೋಸ್ಟರ್‌ ಅನ್ನು ಹರಿದು ಹಾಕಿದ ವಿಚಾರವಾಗಿ ಮಾತನಾಡಿ, ನಮ್ಮ ಪೋಸ್ಟರ್‌ಗಳನ್ನು ಹರಿದು ಹಾಕುತ್ತಿದ್ದಾರೆ. ಇದೇ ರೀತಿ ಮಾಡಿದ್ರೆ ಬಿಜೆಪಿಯವರು ಓಡಾಡದ ರೀತಿ ಮಾಡುತ್ತೇವೆ ಎಂದು ಎಚ್ಚರಿಕೆ …

Read More »

ಬಂಡೀಪುರ ಮೂಲಕ ರಾಜ್ಯಕ್ಕೆ ರಾಹುಲ್ ಗಾಂಧಿಎಂಟ್ರಿ

ಚಾಮರಾಜನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಂಡೀಪುರ ಅರಣ್ಯ ಪ್ರದೇಶದ ಮೂಲಕ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ. ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್​​ ನಾಯಕರು ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ತೆರಳಿ ಸ್ವಾಗತಿಸಿದ್ದಾರೆ‌‌. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂ.ಬಿ‌. ಪಾಟೀಲ್, ಆರ್.ವಿ. ದೇಶಪಾಂಡೆ, ವೀರಪ್ಪ ಮೊಯಿಲಿ, ಕೆ‌.ಜೆ. ಜಾರ್ಜ್ ಸೇರಿದಂತೆ ಹತ್ತು ಹಲವು ನಾಯಕರುಗಳು ಭಾಗಿಯಾಗಿದ್ದಾರೆ. ಗುಂಡ್ಲುಪೇಟೆಯ ಹಂಗಳ ಗ್ರಾಮದ …

Read More »

ಬೆಳಗಾವಿಯ VTUಗೆ ನೂತನ ಕುಲಪತಿ: VC ಆಗಿ ವಿದ್ಯಾಶಂಕರ ನೇಮಕ

ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ನೂತನ ಕುಲಪತಿ ಆಗಿ ಡಾ. ವಿದ್ಯಾಶಂಕರ ಎಸ್ ನೇಮಕಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಆದೇಶದ ಮೇರೆಗೆ ಡಾ. ವಿದ್ಯಾಶಂಕರ ಅವರು ಮೂರು ವರ್ಷಗಳ ಅವಧಿಗೆ ವಿಟಿಯು ಕುಲಪತಿ ಆಗಿ ನೇಮಕಗೊಂಡಿದ್ದಾರೆ.

Read More »

ಇಲ್ಲಿದೆ ನೋಡಿ ಕೆರೆಗಳನ್ನು ನುಂಗಿ ನೀರುಕುಡಿದು ನಿವೇಶನ ಪಡೆದ ರಾಜಕಾರಣಿಗಳ ಪಟ್ಟಿ

ಕೆರೆ ಮುಚ್ಚಿ ಬಡಾವಣೆ ನಿರ್ಮಿಸಿದ ಬಿಡಿಎನಲ್ಲಿ ನಿವೇಶನ ಪಡೆದಿರುವ, ಬಂಗಲೆ ಕಟ್ಟಿರುವವರ ಪಟ್ಟಿ ನಗರದಲ್ಲಿದ್ದ 23ಕ್ಕೂ ಹೆಚ್ಚು ಕೆರೆಗಳನ್ನು ನುಂಗಿ ನೀರು ಕುಡಿದು ಬಿಡಿಎ ನಿರ್ಮಿಸಿರುವ ಬಡಾವಣೆಗಳಲ್ಲಿ ಜಿ ಕೆಟಗರಿ ಕೋಟಾದಲ್ಲಿ ನಿವೇಶನ ಪಡೆದು ಬಂಗಲೆ ನಿರ್ಮಿಸಿಕೊಂಡು ವಾಸಿಸುತ್ತಿರುವ ರಾಜಕಾರಣಿಗಳ ಪಟ್ಟಿ ಈ ಸಂಜೆಗೆ ಲಭ್ಯವಾಗಿದೆ.   ಲಭ್ಯವಿರುವ ಮಾಹಿತಿಗಳ ಪ್ರಕಾರ ಪ್ರಮುಖ ಮೂರು ಪಕ್ಷಗಳ ಪ್ರಭಾವಿ ರಾಜಕಾರಣಿಗಳಿರುವುದು ವಿಶೇಷವಾಗಿದೆ. ಅದರಲ್ಲೂ ಕೆರೆ ಒತ್ತುವರಿ ತೆರವುಗೊಳಿಸಿ ಎಂದು ಬೊಬ್ಬೆ ಹೊಡೆಯುತ್ತಿರುವ …

Read More »

ಮತ್ತೆ ಪಿಎಸ್‌ಐ ಪರೀಕ್ಷಾ ಅಕ್ರಮದ ಸದ್ದು; ಬ್ಲೂಟೂತ್ ನಲ್ಲಿ ಉತ್ತರ ಹೇಳಿದ್ದಾತನ ಬಂಧನ

ಕಲಬುರಗಿ: ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಸಹಚರ, ಹಾಸ್ಟೆಲ್ ವಾರ್ಡನ್ ರಾವುತಪ್ಪ‌ ಬಸವಂತ್ರಾಯ ವಾಲೀಕಾರ (35) ಎಂಬಾತನನ್ನು ಗುರುವಾರ ಬಂಧಿಸಿದೆ.   ನಗರದ ಜ್ಞಾನಜ್ಯೋತಿ ಇಂಗ್ಲಿಷ್ ‌ಮಾಧ್ಯಮ ಶಾಲೆಯ ಪಿಎಸ್‌ಐ ‌ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ರಾವುತಪ್ಪ ಬ್ಲೂಟೂತ್ ಬಳಸಿ ಉತ್ತರ ಹೇಳುವ ಮೂಲಕ ಅಭ್ಯರ್ಥಿಗಳು ಪಾಸ್ ಆಗಲು ಸಹಕರಿಸಿದ್ದ. ಜೊತೆಗೆ ಆರ್.ಡಿ. ಪಾಟೀಲಗೆ ಗಿರಾಕಿಗಳನ್ನು ಹುಡುಕಿ …

Read More »

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

ಮೈಸೂರು: ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಬ್ಯಾನ್ ಮಾಡಿ ಎನ್ನುತ್ತಿದ್ದಾರೆ. ಮೊದಲು ಅವರ‌ ಮಂಪರು ಪರೀಕ್ಷೆ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿದರೆ ಮಂಗಳೂರಿನಲ್ಲಿ ಪಿಎಫ್ ಐ – ಎಸ್ ಡಿಪಿಐ ಜೊತೆ ಯಾರ ಸಂಬಂಧವಿದೆ ಎಂದು ಗೊತ್ತಾಗುತ್ತದೆ ಎಂದರು. ಗುಜರಾತ್ ಚುನಾವಣೆ ವೇಳೆ ಯಾವಾಗಲೂ ನರೇಂದ್ರ ಮೋದಿಗೆ …

Read More »

ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕಕರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್

ಸರ್ಕಾರಿ ಉದ್ಯೋಗವೇ ಹಾಗೆ, ಒಮ್ಮೆ ಜಾಬ್ ಆದ್ರೆ ಸಾಕು ಆಮೇಲೆ ಲೈಫ್ ಫುಲ್ ಸೆಟಲ್ ಅನ್ನೋದು ಹೆಚ್ಚಿನವರ ಅಭಿಪ್ರಾಯ. ‌ಅದರಲ್ಲೂ ವೇತನ‌ ಹೆಚ್ಚಾಯಿತು ಅಂದ್ರೆ ಅದರಲ್ಲಿ ಸಿಗೋ ಸಂತೋಷ ಮತ್ಯಾವುದರಿಂದಲೂ‌ ಸಿಗಲ್ಲ‌‌ ಎಂಬ‌ ಅನುಭವ ಆಗುತ್ತದೆ. ಇದೀಗ ಇದೇ ಸರ್ಕಾರಿ ನೌಕರರಿಗೆ ಹೊಸ ವರ್ಷಾರಂಭದಲ್ಲಿ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಮೂಲಕ ಚುನಾವಣೆ ವರ್ಷದಲ್ಲಿ ನೌಕರ ವರ್ಗಕ್ಕೆ ಭರ್ಜರಿ ಗಿಫ್ಟ್ ದೊರಕಲಿದೆ. ರಾಜ್ಯ ಸರ್ಕಾರಿ ನೌಕರರಿಗೆ ಆರನೇ ವೇತನ ಆಯೋಗದ …

Read More »

BIGGNEWS : ನಾನು ಮನಸ್ಸು ಮಾಡಿದ್ರೆ, ಬಿಜೆಪಿ ಕಾರ್ಯಕ್ರಮ ಫ್ಲೆಕ್ಸ್‌ ಎಲ್ಲೂ ಹಾಕೋದಕ್ಕೆ ಬಿಡಲ್ಲ : ಡಿಕೆಶಿ

ಬೆಂಗಳೂರು : ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ‌ ಯಾತ್ರೆ ಫ್ಲೆಕ್ಸ್‌ ಹಾಕಿದ್ದನ್ನು ಹರಿದು ಹಾಕಿದ ವಿಚಾರ ತಿಳಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಫ್ಲೆಕ್ಸ್‌ ಹರಿದು ಹಾಕುವುದು ಒಳ್ಳೆಯ ಸಂಸ್ಕೃತಿಯಲ್ಲ. ಚುಚ್ಚಿದರು ಗುಂಡುಕ್ಕಿದರೂ ಕಾಂಗ್ರೆಸ್ಸಿಗರು ಹೆದರಲ್ಲ. ನಾನು ಮನಸ್ಸು ಮಾಡಿದ್ರೆ ಅವರು ಎಲ್ಲೂ ಕಾರ್ಯಕ್ರಮ ಪ್ಲೇಕ್ಸ್‌ ಹಾಕೋದಕ್ಕೆ ಆಗಲ್ಲ. ಸಿಎಂ ಮತ್ತು ಅವರ ಕಾರ್ಯಕರ್ತರಿಗೆ ಡಿಕೆಶಿ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ‌ ಕನ್ಯಾಕುಮಾರಿಯಿಂದ …

Read More »

ಆರು ತಿಂಗಳ ಬೆಳೆ : ಬದನೆಯಿಂದ ಲಕ್ಷಾಂತರ ಲಾಭ ಮಾಡಿಕೊಂಡ ರೈತ ಮಲ್ಲಿಕಾರ್ಜುನ

ರಬಕವಿ-ಬನಹಟ್ಟಿ: ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಅದನ್ನೇ ಪ್ರತಿನಿತ್ಯ ತಮ್ಮ ಕುಟುಂಬದೊಂದಿಗೆ ಮುಂದುವರೆಸಿಕೊಂಡು ಕಲ್ಲು ಗುಡ್ಡಗಳ ಭೂಮಿಯನ್ನು ಹದ ಮಾಡಿ ಈ ಭಾಗದಲ್ಲಿ ಹೊಸತನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆದು ಲಕ್ಷಾಂತರೂಗಳ ಲಾಭಗಳಿಸಬಹುದು ಎಂಬುದನ್ನು ರಬಕವಿ-ಬನಹಟ್ಟಿ ತಾಲ್ಲೂಕಿನ ನಾವಲಗಿಯ ಮಲ್ಲಿಕಾರ್ಜುನ ಹನಮಂತ ಜನವಾಡ ತೋರಿಸಿಕೊಟ್ಟಿದ್ದಾರೆ.   ಮಲ್ಲಿಕಾರ್ಜುನ ಕಲಿತಿದ್ದು ಎಸ್.ಎಸ್.ಎಲ್.ಸಿ ಆದರೆ ಸಾಧನೆ ಮಾತ್ರ ಮುಗಿಲೆತ್ತರದು. ಕೇವಲ 1 ಎಕರೆ ಜಾಗದಲ್ಲಿ ಗ್ಯಾಲನ್ ತಳಿಯ ಬದನೆಕಾಯಿಗಳನ್ನು ಬೆಳೆದು ಆರು ತಿಂಗಳ ಅವಧಿಯಲ್ಲಿ …

Read More »

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಬುಧವಾರ (ಸೆಪ್ಟೆಂಬರ್ 28) ಶೇ.34ರಿಂದ ಶೇ.38ಕ್ಕೆ ಏರಿಕೆ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ದೇಶಾದ್ಯಂತ 50 ಲಕ್ಷಕ್ಕಿಂತ ಅಧಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.     ಭಾರತ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ಅಥವಾ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆಯನ್ನು ನೀಡುತ್ತದೆ. ಈ ಹಿಂದೆ ಕೇಂದ್ರ …

Read More »