ಬೆಂಗಳೂರು: ಲಕ್ಷ್ಮೀಹೆಬ್ಬಾಳ್ಕರ್ ಹಾಗು ನನ್ನ ನಡುವೆ ಅಸಮಾಧಾನವಿಲ್ಲ. ಎಲ್ಲವೂ ಊಹಾಪೋಹ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ನಗರದಲ್ಲಿ ಗುರುವಾರ ಮಾತನಾಡಿದ ಅವರು, ಯಾವುದೇ ಕೋಲ್ಡ್ ವಾರ್ ಕೂಡ ನಮ್ಮ ಮಧ್ಯೆ ಇಲ್ಲ. ಡಿ.ಕೆ.ಶಿವಕುಮಾರ್ ಯಾಕೆ ಹಸ್ತಕ್ಷೇಪ ಮಾಡ್ತಾರೆ?. ನಾನು ಯಾವ ಹೈಕಮಾಂಡ್ಗೂ ತಿಳಿಸಿಲ್ಲ. ಸಮಸ್ಯೆ ಇದ್ದರೆ ನಾವೇ ಸರಿಮಾಡಿಕೊಳ್ಳುತ್ತೇವೆ ಎಂದರು. ಬೆಳಗಾವಿ ಪಾಲಿಕೆಯಲ್ಲಿ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿ, ಬೇಕೆಂದೇ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಲವು ದಾಖಲೆಗಳು ನಾಪತ್ತೆಯಾಗಿವೆ. ಯಾಕೆ, …
Read More »ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಆತ್ಮಹತ್ಯೆ
ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ಅಂತರರಾಷ್ಟ್ರೀಯ ಮಹಿಳಾ ಕಬಡ್ಡಿ ಆಟಗಾರ್ತಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ್ಲಿ ನಡೆದಿದೆ. ಧನಲಕ್ಷ್ಮೀ (25) ಮೃತಪಟ್ಟವರು. ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ಸಹೋದರ ಮನೆಯಲ್ಲಿದ್ದ ಸಂದರ್ಭದಲ್ಲಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕಷ್ಟು ಸಮಯವಾದರೂ ಮಗಳು ಕೊಠಡಿಯಿಂದ ಹೊರಬಾರದೇ ಇದ್ದುದರಿಂದ ಅನುಮಾನಗೊಂಡ ತಂದೆ, ಹೋಗಿ ನೋಡಿದಾಗ ಪ್ರಕರಣ …
Read More »ನವಿಲು ಭೇಟೆಯಾಡಿ ಮಾಂಸ ಭಕ್ಷಣೆ; ಒಡಿಶಾ ಮೂಲದ ಮೂವರ ಬಂಧನ
ತುಮಕೂರು: ರಾಜ್ಯಾದ್ಯಂತ ಹುಲಿ ಉಗುರಿನ ಪೆಂಡೆಂಟ್ ಪ್ರಕರಣದ ಸದ್ದು ಜೋರಾಗಿರುವ ಬೆನ್ನಲ್ಲೇ ತುಮಕೂರು ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರನಾಯಕನಪಾಳ್ಯದ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಬಿಟ್ಟಿಂಗ್ ನಾಯಕ್, ಬೈಷಾಕ್‌ದಾವು, ದುಬಾ ಕಾಪತ್ ಬಂಧಿತರು. ಇವರು ಅನೇಕ ದಿನಗಳಿಂದ ನವಿಲುಗಳನ್ನು ಕೊಂದು ಭಕ್ಷಿಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು, 1.5 …
Read More »25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬೆಳಗಾವಿ ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ
ಬೆಳಗಾವಿ: 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಬೆಳಗಾವಿ ವಿಭಾಗದ ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದಾಕ್ಷಾಯಿಣಿ ಚೌಶೆಟ್ಟಿ ಎಂಬವರು ತನಿಖಾಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಅಧಿಕಾರಿ. ಬೆಳಗಾವಿಯ ಆಟೊ ನಗರದಲ್ಲಿರುವ ವಿಕಾಸ ಕಂಪೋಸಿಟ್ಸ್ ಕಂಪನಿಯಿಂದ ಪೂರೈಸಲಾದ ಸಾಮಗ್ರಿಗಳಿಗೆ ಸಂಬಂಧಿಸಿದಂತೆ, ಸಿ ಫಾರ್ಮ್ ಸ್ಟೇಟ್ ಜಿಎಸ್‌ಟಿ ಸಲ್ಲಿಸಿದ ಬಳಿಕ, 41 ಸಾವಿರ ರೂ ಮರಳಿ ಪಡೆಯಲು ದಾಕ್ಷಾಯಣಿ ಚೌಶೆಟ್ಟಿ ಲಂಚಕ್ಕೆ ಬೇಡಿಕೆ …
Read More »ಅ.28, 29ರಂದು ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರದ ವಿವಿಧ ನೇಮಕಾತಿ ಪರೀಕ್ಷೆ ನಡೆಯಲಿದೆ.:D.C.
ಬೆಳಗಾವಿ: ಜಿಲ್ಲೆಯಲ್ಲಿ 28 ಹಾಗೂ 29 ರಂದು ಸರ್ಕಾರದ ವಿವಿಧ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಮಾರ್ಗಸೂಚಿ ಪ್ರಕಾರ ಸುರಕ್ಷಿತವಾಗಿ ಸಾಗಣೆ ಮಾಡುವುದು ಸೇರಿದಂತೆ ಒಟ್ಟಾರೆ ಪರೀಕ್ಷೆಯನ್ನು ಸುಗಮ ಮತ್ತು ಸುಸೂತ್ರವಾಗಿ ನಡೆಸಲು ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಎಂದು ಸಿಬ್ಬಂದಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅ.28 ಹಾಗೂ 29 ರಂದು ವಿವಿಧ ನೇಮಕಾತಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ …
Read More »ಟೊಮೆಟೊ ಲಾಭ ಗಳಿಕೆ ಕಂಡು ಹೊಟ್ಟೆಕಿಚ್ಚು.. ಹತ್ತಿಗೆ ಕಳೆನಾಶಕ ಸಿಂಪಡನೆ ಮಾಡಿದ ಕಿಡಿಗೇಡಿಗಳು: ರೈತನ ಆರೋಪ
ಧಾರವಾಡ: ಮುಂಗಾರು ಮಳೆ ಕೈಕೊಟ್ಟರೂ ಟೊಮೆಟೊ ಬೆಳೆಯಲ್ಲಿ ಭರ್ಜರಿ ಲಾಭ ಗಳಿಸಿದ್ದನ್ನು ಕಂಡು ಸಹಿಸಲಾಗದೇ ಕಿಡಿಗೇಡಿಗಳು ರಾತ್ರೋರಾತ್ರಿ ತಮ್ಮ ಒಂದೂವರೆ ಎಕರೆ ಹತ್ತಿ ಬೆಳೆಗೆ ಕಳೆನಾಶಕ ಹೊಡೆದು ಹಾಳು ಮಾಡಿದ್ದಾರೆ ಎಂದು ರೈತ ಧಾರವಾಡ ತಾಲೂಕಿನ ಗರಗ ಗ್ರಾಮದ ಗಂಗಪ್ಪ ಬಾರ್ಕಿ ಎಂಬ ರೈತ ಆರೋಪಿಸಿದ್ದಾರೆ. ಗಂಗಪ್ಪ ಬಾರ್ಕಿ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ಬರಗಾಲ ಇದ್ದರೂ, ಈ ರೈತ ನೀರು ಹಾಯಿಸಿ ಹತ್ತಿ ಬೆಳೆದಿದ್ದರು. …
Read More »ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ರಾಯಚೂರು: ಇಲ್ಲಿನ ಲಿಂಗಸುಗೂರು (Lingasaguu Taluku) ತಾಲೂಕಿನ ಹಟ್ಟಿ ಚಿನ್ನದಗಣಿಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಹಟ್ಟಿ ಚಿನ್ನದಗಣಿ ಕ್ಯಾಂಪಿನ ಗುಂಡುರಾವ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಮೃತ ಮಹಿಳೆಯನ್ನ ಮಂಜುಳಾ (45) ಅಂತ ಗುರುತಿಸಲಾಗಿದೆ. ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಯಾಬ್ ಟೆಕ್ನೀಷಿಯನ್ ಆಗಿದ್ದ ಮಂಜುಳಾ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿ ಬೆಂಕಿ ಹಚ್ಚಿರಬಹುದು ಅಂತ ಶಂಕಿಸಲಾಗಿದೆ. ಮಂಜುಳಾ ಮನೆಯಿಂದ ಸ್ವಲ್ಪ ದೂರದಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ …
Read More »ಹುಲಿ ಉಗುರು ಮಾದರಿ ಪೆಂಡೆಂಟ್ ಪ್ರಕರಣ: ತಲೆತಗ್ಗಿಸುವ ಯಾವ ಕೆಲಸವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ ಎಂದ ನಟ ಜಗ್ಗೇಶ್
ಬೆಂಗಳೂರು: ಹುಲಿ ಉಗುರಿನ ಮಾದರಿ ಪೆಂಡೆಂಟ್ ಹೊಂದಿರುವ ಆರೋಪದ ಮೇಲೆ ನಟ ದರ್ಶನ್, ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ನಟ ನಿಖಿಲ್ ಕುಮಾರಸ್ವಾಮಿ ನಿವಾಸಗಳಲ್ಲಿ ಅರಣ್ಯ ಅಧಿಕಾರಿಗಳು ಬುಧವಾರ ಶೋಧ ಕಾರ್ಯಾಚರಣೆ ನಡೆಸಿದರು. ಆ ಬಳಿಕ ಪ್ರಕರಣ ಕುರಿತು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾವು ಧರಿಸುವ ಲಾಕೆಟ್ ನಮ್ಮ ತಾಯಿ ಕೊಟ್ಟಿರುವ ಕಾಣಿಕೆಯಾಗಿದ್ದು, ಅದನ್ನು …
Read More »ನ.1ರ ಬಳಿಕ ಯಾವ ದಿನವಾದರೂ ಸರಿ, ಬಹಿರಂಗ ಚರ್ಚೆಗೆ ಸಮಯ ಫಿಕ್ಸ್ ಮಾಡಿ; ಡಿ ಕೆ ಶಿವಕುಮಾರ್
ಬೆಂಗಳೂರು: ಯಾವಾಗಾದ್ರೂ ಸರಿ. ಚರ್ಚೆಗೆ ಸಮಯ ಫಿಕ್ಸ್ ಮಾಡಿ. ನವೆಂಬರ್ 1ರ ನಂತರ ಯಾವ ದಿನಾಂಕವಾದ್ರೂ ನಿಗದಿಪಡಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಚರ್ಚೆಗೆ ಒಪ್ಪಿದ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಬಹಿರಂಗ ಚರ್ಚೆಗೆ ಒಪ್ಪಿಗೆ ಸೂಚಿಸಿ ಸಮಯ ನಿಗದಿಪಡಿಸುವಂತೆ ಹೇಳಿದ್ದಾರೆ. ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಪಟಾಲಮ್ನಿಂದ ರೈತರ ಪರಿಹಾರದಲ್ಲಿ ಲೂಟಿ ಎಂಬ ಹೆಚ್ಡಿಕೆ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದರು. …
Read More »ಮೈಸೂರು ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ
ಮೈಸೂರು: ಪ್ರಸಿದ್ಧ ದಸರಾಜಂಬೂಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮಾವುತರು ಹಾಗು ಕಾವಾಡಿಗರನ್ನು ಇಂದು ಸನ್ಮಾನಿಸಲಾಯಿತು. ಈ ಮೂಲಕ ಅರಮನೆಯ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಆತ್ಮೀಯ ಬೀಳ್ಕೊಡುಗೆ ನೀಡಿತು. ಕಳೆದ 56 ದಿನಗಳಿಂದ ಅರಮನೆ ಆವರಣದಲ್ಲಿ ಗಜಪಡೆ ಹಾಗೂ ಅದರೊಂದಿಗೆ ಬಂದಿದ್ದ ಮಾವುತರು, ಕಾವಾಡಿಗರ ಕುಟುಂಬದವರು ಬೀಡುಬಿಟ್ಟಿದ್ದರು. ಮಾವುತ, ಕಾವಾಡಿಗರಿಗೆ ಗೌರವ ಧನದ ಚೆಕ್ ನೀಡಲಾಯಿತು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು. ಗಜಪಯಣದ ಮೂಲಕ 14 …
Read More »
Laxmi News 24×7