Breaking News

ನವದೆಹಲಿ

ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ: 5 ಕೆಜಿ ಉಚಿತ ರೇಷನ್ ಇನ್ನೂ 4 ತಿಂಗಳು ಮುಂದುವರಿಕೆ

ನವದೆಹಲಿ: ಕೊರೋನಾ ಸಂಕಷ್ಟದ ಕಾರಣದಿಂದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಉಚಿತ ಪಡಿತರ ವಿತರಿಸುವ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ. ಗರಿಬ್ ಕಲ್ಯಾಣ ಯೋಜನೆಯಡಿ 80 ಕೋಟಿ ಪಡಿತರ ಫಲಾನುಭವಿಗಳಿಗೆ ಉಚಿತ ಪಡಿತರ ನೀಡಲಾಗುತ್ತದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿ 53,344 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದರೊಂದಿಗೆ ಉಚಿತ ಪಡಿತರ ವಿತರಣೆ ಮಾಡಲು …

Read More »

ಇಂದು ಸಿಎಂ ಬಸವರಾಜ ಬೊಮ್ಮಾಯಿ ದಾವಣಗೆರೆ ಪ್ರವಾಸ : ಸಂವಿಧಾನ ದಿವಸ ಆಚರಣೆಯಲ್ಲಿ ಭಾಗಿ

ದಾವಣಗೆರೆ : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಗೆ ಭೇಟಿ ನೀಡಲಿದ್ದಾರೆ.ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂವಿಧಾನ ದಿವಸ ಆಚರಣೆ ಅಂಗವಾಗಿ ಭಾರತ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.   ಮುಖ್ಯಮಂತ್ರಿಗಳು ನ.26 ರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ತುಮಕೂರು-ಚಿತ್ರದುರ್ಗ ಮಾರ್ಗವಾಗಿ ಬೆಳಿಗ್ಗೆ 10.30 ಕ್ಕೆ ದಾವಣಗೆರೆಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 11.30 ಕ್ಕೆ ನಗರದ ಹದಡಿ ರಸ್ತೆಯಲ್ಲಿರುವ ಎಸ್.ಎಸ್.ಕಲ್ಯಾಣ ಮಂಟಪದಲ್ಲಿ ಪಕ್ಷದ ವತಿಯಿಂದ ಆಯೋಜಿಸಿರುವ ಶಾಸಕರಾದ …

Read More »

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ

ನವದೆಹಲಿ : ಕಳೆದ 24 ಗಂಟೆಯಲ್ಲಿ ಮತ್ತೆ 10,549 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಪತ್ತೆಯಾಗಿದೆ.ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 466980ಕ್ಕೆ ಏರಿಕೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ಭಾರಿ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 488 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ದೇಶದಲ್ಲಿ 110133 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 9868 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 33977830 ಜನರು ಕೋವಿಡ್ ನಿಂದ ಗುಣಮುಖರಾಗಿ …

Read More »

ಪುನೀತ್ ನುಡಿನಮನದ ಹೆಸರಲ್ಲಿ ಬೇಕಾಬಿಟ್ಟಿ ಚಂದಾ ವಸೂಲಿ: ಆರೋಪಕ್ಕೆ ಗುರಿಯಾದ ಫಿಲ್ಮ್ ಚೇಂಬರ್

ನವೆಂಬರ್ 16 ರಂದು ನಡೆಯಲಿರುವ ‘ಪುನೀತ ನಮನ’ ಕಾರ್ಯಕ್ರಮದ ಹೆಸರಲ್ಲಿ ಚಂದಾ ವಸೂಲಿ ಮಾಡುತ್ತಿದ್ದು, ಚೆಕ್ ಪಡೆದು, ವೈಯಕ್ತಿಕ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.   ಮೇರು ನಟನಿಗೆ ನುಡಿನಮನ ಸಲ್ಲಿಸಲು ಫಿಲ್ಮ್ ಚೇಂಬರ್ ಬಳಿ ಹಣ ಇಲ್ವಾ? ಇಲ್ಲದಿದ್ದರೆ ಸದಸ್ಯರೇ ಸೇರಿ ಹಣ ಕೊಡುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾ ನಿರ್ದೇಶಕ ಜೆಜೆ ಶ್ರೀನಿವಾಸ್, ಕುಮಾರ್ …

Read More »

ವಿವಾಹಿತ ಮಹಿಳೆ ಜೊತೆ 21ರ ಯುವಕನ ಚೆಲ್ಲಾಟ; ಬುದ್ಧಿವಾದ ಹೇಳಿದ್ದ ವ್ಯಕ್ತಿಯನ್ನೇ ಕೊಂದ!

ಕೋಲಾರ: ತಪ್ಪು ಮಾಡಿದ್ದನ್ನ ತಿದ್ದುಕೊಂಡು ಜೀವನ ಸಾಗಿಸು ಎಂದು ಹೇಳಿದ್ದಕ್ಕೆ 52 ವರ್ಷದ ವ್ಯಕ್ತಿಯನ್ನ 21 ರ ಯುವಕ (21 Year Old Youth)ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆ ಕೆಜಿಎಫ್ ತಾಲೂಕಿನ ಪೂಗಾನಹಳ್ಳಿ (Pooganahalli, KGF) ಗ್ರಾಮದಲ್ಲಿ ನಡೆದಿದೆ, ಗ್ರಾಮದ ನಾರಾಯಣಸ್ವಾಮಿ, ಇದೇ ನವೆಂಬರ್ ತಿಂಗಳ 2 ನೇ ತಾರೀಖು ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದು, ದೇಹ ಒಂದು ಕಡೆ, ತಲೆ ಒಂದು ಕಡೆ ಬಿದ್ದಿತ್ತು. ಕಳೆದ ಎರಡು …

Read More »

ಆರ್ಯನ್ ಖಾನ್​ ಇಂದು ಬಿಡುಗಡೆ ಆಗೋದು ಡೌಟ್​; ‘ಪಿಕ್ಚರ್ ಅಭಿ ಬಾಕಿ ಹೈ’ ಎಂದ ನವಾಬ್ ಮಲಿಕ್..!

ನವದೆಹಲಿ: ಬಾಲಿವುಡ್​ ಐಷಾರಾಮಿ ಡ್ರಗ್ಸ್​ ಕೇಸ್​ನಲ್ಲಿ ಜೈಲು ಪಾಲಾಗಿದ್ದ ಆರ್ಯನ್​ ಖಾನ್​ಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ನಿನ್ನೆ ಬಾಂಬೆ ಹೈಕೋರ್ಟ್​ನ ಏಕ ಸದಸ್ಯ ಪೀಠ ಜಾಮೀನು ನೀಡುವ ಮೂಲಕ, ​ಆರ್ಯನ್ ಖಾನ್​ನ 22 ದಿನಗಳ ಜೈಲು ವಾಸದಿಂದ ಮುಕ್ತಗೊಳಿಸಿದೆ. ಆದ್ರೆ ರಿಲೀಸ್​ ಭಾಗ್ಯ ಮಾತ್ರ ಇವತ್ತೂ ಸಿಗೋದು ಡೌಟ್​. ಡ್ರಗ್ಸ್​ ಕೇಸ್​​ನಲ್ಲಿ ಅಂದರ್​​ ಆಗಿದ್ದ ಆರ್ಯನ್​ಗೆ ಬೇಲ್​​ 23 ದಿನಗಳ ಬಳಿಕ ಜೈಲು ಹಕ್ಕಿಗೆ ಬಿಡುಗಡೆಯ ಭಾಗ್ಯ ಬಾಲಿವುಡ್​ …

Read More »

ಮುಂಗಾರು ಅಧಿವೇಶನ ವೇಳೆ ಪ್ರತಿಭಟನೆ ನಡೆಸಲು ಸಂಸದ ಬದಲು ಬೇರೆ ಸ್ಥಳ ಆಯ್ಕೆ ಮಾಡಿ : ರೈತರರಿಗೆ ಪೊಲೀಸ್ ರಿಂದ ಸಲಹೆ

40 ಕ್ಕೂ ಹೆಚ್ಚು ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿದಿನ ಸಂಸತ್ತಿನ ಹೊರಗೆ 200 ರೈತರನ್ನು ಒಳಗೊಂಡ ಪ್ರತಿಭಟನೆಯನ್ನು ಯೋಜಿಸಿದೆ. ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಾಹನ್, ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ಮೋರ್ಚಾದ ಹಲವಾರು ಸದಸ್ಯರು ಶನಿವಾರ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಿಗೆ , ರೈತರ ಬೇಡಿಕೆಗೆ ದನಿಯಾಗಬೇಕು ಮತ್ತು ಅಧಿವೇಶನದಿಂದ ಹೊರನಡೆಯಬೇಕು ಎಂದು ರೈತ ಮುಖಂಡರು …

Read More »

ಗೋಗಿ ಗ್ಯಾಂಗ್‌ನ 4 ಚೂಪಾದ ಶೂಟರ್‌ಗಳ ದೆಹಲಿ ಪೊಲೀಸರು ಬಂಧನ

ನವದೆಹಲಿ: ಒಂದು ಪ್ರಮುಖ ದಮನದಲ್ಲಿ, ದಿಲ್ಲಿ ಪೊಲೀಸರ ವಿಶೇಷ ಸೆಲ್ ದರೋಡೆಕೋರ ಗೋಗಿ ಗ್ಯಾಂಗ್‌ನ ನಾಲ್ಕು ಶಾರ್ಪ್-ಶೂಟರ್‌ಗಳನ್ನು ಬಂಧಿಸಿದೆ ಮತ್ತು ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ಇಲ್ಲಿ ಹೇಳಿದರು. “ಬಂಧನಕ್ಕೊಳಗಾದ ನಾಲ್ಕು ಚೂಪಾದ ಶೂಟರ್‌ಗಳು ಕೊಲೆಗಳ ಸರಣಿಯನ್ನು ಯೋಜಿಸುತ್ತಿದ್ದರು” ಎಂದು ಅಧಿಕಾರಿ ಹೇಳಿದರು.ಈ ಹಿಂದೆ ಮೋಸ್ಟ್ ವಾಂಟೆಡ್ ದರೋಡೆಕೋರ ಜಿತೇಂದರ್ ಮನ್ ಅಲಿಯಾಸ್ ‘ಗೋಗಿ’ ಮತ್ತು ಇತರ ಇಬ್ಬರು ದುಷ್ಕರ್ಮಿಗಳು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ …

Read More »

ಟಾಪ್​​ 10 ಸುದ್ದಿಗಳ ಕ್ವಿಕ್​ರೌಂಡಪ್​ ATM ಕೇಂದ್ರದಲ್ಲಿ ಯುವತಿಯ ಭರ್ಜರಿ ಡ್ಯಾನ್ಸ್​​

1. ದೀದಿ ಭವಿಷ್ಯ ನಿರ್ಧಾರಕ್ಕೆ ಕ್ಷಣಗಣನೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದೆ. ಭವಾನಿಪುರ ಕ್ಷೇತ್ರದಲ್ಲಿ ಕಳೆದ ಗುರುವಾರ ಮತದಾನ ನಡೆದು, ಶೇಕಡಾ 57ರಷ್ಟು ಮತದಾನವಾಗಿತ್ತು. ‌ ಅದರಂತೆ ಇಂದು ಬೆಳಿಗ್ಗೆ 8 ಗಂಟೆಗೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶಗಳು ಟ್ರೆಂಡ್ ಆಧಾರದ ಮೇಲೆ ಸ್ಪಷ್ಟವಾಗುತ್ತವೆ. ಇನ್ನು ಭವಾನಿಪುರ …

Read More »

ಧಾರ್ಮಿಕ ಕಟ್ಟಡ ರಕ್ಷಣೆ ವಿಧೇಯಕ ಅಂಗೀಕಾರ

ಸಾರ್ವಜನಿಕ ಸ್ಥಳ ಗಳಲ್ಲಿರುವ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರವಾಗಿದೆ.”ಮೈಸೂರಿನಲ್ಲಿ 261 ಸ್ಥಳಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 161ನ್ನು ಸ್ಥಳಾಂತರಿಸಲಾಗಿದೆ” ಎಂದು ಚರ್ಚೆಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. “ಸರ್ಕಾರದ ಕಟ್ಟಡಗಳನ್ನು ಸರ್ಕಾರದ ಗಮನಕ್ಕೆ ಬಾರದೇ ಒಡೆಯಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಈ ಮಸೂದೆ ತರಲಾಗಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಆಡಳಿತದ ಸಂದರ್ಭ ಎಲ್ಲವನ್ನೂ ತೆರವುಗೊಳಿಸಿಲ್ಲ. ಹಿಂದಿನ ಸರ್ಕಾರಗಳ ಅವಧಿಯ …

Read More »