Breaking News

ನವದೆಹಲಿ

ಗಮನಿಸಿ, ಜನವರಿ 1 ರಿಂದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ

ನವದೆಹಲಿ: ಜನವರಿ 1, 2021ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, 2017ಕ್ಕಿಂತ ಹಿಂದಿನ ಹಾಗೂ ನಂತರದ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಲಾಗಿದೆ. 2021ರ ಜನವರಿಯಿಂದ ಇದು ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ. 2017ರ ಡಿಸೆಂಬರ್‌ 1 ರಿಂದ ಮಾರಾಟವಾಗುವ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ …

Read More »

ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ತೆಗೆದುಹಾಕಿ : ಗೌತಮ್ ಗಂಭೀರ್

ನವದೆಹಲಿ,ನ.7-ನಿರಂತರ ವೈಫಲ್ಯಕ್ಕೆ ಕಾರಣವಾಗಿರುವ ವಿರಾಟ್ ಕೊಹ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ನಾಯಕತ್ವದಿಂದ ತೆಗೆದು ಹಾಕಬೇಕೆಂದು ಖ್ಯಾತ ಕ್ರಿಕೆಟ್ ತಾರೆ ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ.  ನೇರ ಮತ್ತು ನಿಷ್ಠೂರ ಮಾತುಗಳಿಗೆ ಹೆಸರಾಗಿರುವ ಮಾಜಿ ಆರಂಭಿಕ ಆಟಗಾರ ಮತ್ತು ಎರಡು ಬಾರಿ ಐಪಿಎಲ್ ಚಾಂಪಿಯನ್‍ಶಿಪ್ ಗೆದ್ದ ತಂಡದ ನಾಯಕತ್ವದ ವಹಿಸಿದ್ದ ಗೌತಮ್, ವಿರಾಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ರೀಡಾ ವಾರ್ತಾ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ ಗೌತಮ್, ಇದು ವಿಶ್ವಾಸಾರ್ಹತೆ ಮತ್ತು …

Read More »

ಗ್ರಾಮ ಪಂಚಾಯಿತಿ ಮಟ್ಟದಿಂದಲೂ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ- ಸಿ.ಟಿ.ರವಿ

ಮಂಗಳೂರು: ಮುಂದಿನ ಚುನಾವಣೆಗಳಲ್ಲಿ ನಾವು ಗೆಲವು ಸಾಧಿಸಲಿದ್ದು, ಇದರಿಂದಾಗಿ ಗ್ರಾಮ ಪಂಚಾಯತ್‍ನಿಂದಲೂ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹರಿಹಾಯ್ದಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ, ಮುಂದಿನ 4 ವಿಧಾನಪರಿಷತ್, 2 ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವುವಾಗಲಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಈ ಮೂಲಕ ಗ್ರಾಮ ಪಂಚಾಯತಿ ಮಟ್ಟದಿಂದಲೂ ಕಾಂಗ್ರೆಸ್ ಮುಕ್ತವಾಗಲಿದೆ …

Read More »

ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು 75 ರೂಪಾಯಿ ಹೆಚ್ಚಿಸಲಾಗಿದೆ.

ಹೊಸದಿಲ್ಲಿ:  ತರಕಾರಿ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿದ ಜನತೆಗೆ ಮತ್ತೆ ಎಲ್ ಪಿ ಜಿ ದರ ಏರಿಕೆಯ ಬಿಸಿ ತಟ್ಟಿದೆ. ಕಳೆದ ತಿಂಗಳಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿತ್ತು. ಮತ್ತೆ ಇದೀಗ 19 ಕೆಜಿ ಕಮರ್ಷಿಯಲ್ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯನ್ನು 75 ರೂಪಾಯಿ ಹೆಚ್ಚಿಸಲಾಗಿದೆ. ಈ ಕುರಿತು ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. 19 …

Read More »

8 ತಿಂಗಳ ಬಳಿಕ 1 ಲಕ್ಷ ಕೋಟಿ ದಾಟಿದ ಜಿಎಸ್‍ಟಿ ಸಂಗ್ರಹ..!

ನವದೆಹಲಿ, ನ.1-ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಸಂಗ್ರಹ ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳು ದಾಟಿದೆ. ಅಕ್ಟೋಬರ್‍ನಲ್ಲಿ ಜಿಎಸ್‍ಟಿ ಸಂಗ್ರಹ 1.05 ಲಕ್ಷ ಕೋಟಿ ರೂ.ಗಳಷ್ಟು ದಾಖಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಅಕ್ಟೋಬರ್ 31, 2020ಕ್ಕೆ ಕೊನೆಗೊಂಡ ಅವಧಿಯಲ್ಲಿ ಒಟ್ಟು 80 ಲಕ್ಷ ಜಿಎಸ್‍ಟಿಆರ್-3ಬಿ ರಿಟನ್ರ್ಸ್ ಸಲ್ಲಿಕೆಯಾಗಿವೆ ಎಂದು ತಿಳಿಸಿದೆ. ಅಕ್ಟೋಬರ್‍ನಲ್ಲಿ ಒಟ್ಟು 1,05,555 ಕೋಟಿ ರೂ.ಗಳ …

Read More »

ದೇಶದಲ್ಲಿ ಅತ್ಯುತ್ತಮ ಆಡಳಿತವಿರುವ ರಾಜ್ಯಗಳ ಪಟ್ಟಿ :ಕೇರಳ ಆಗ್ರಸ್ಥಾನ, ಉತ್ತರ ಪ್ರದೇಶ ಕೊನೆಯ ಸ್ಥಾನ

ನವದೆಹಲಿ: ದೇಶದಲ್ಲಿ ಅತ್ಯುತ್ತಮ ಆಡಳಿತವಿರುವ ರಾಜ್ಯಗಳ ಪಟ್ಟಿಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರ ಕೇರಳ ಆಗ್ರಸ್ಥಾನದಲ್ಲಿದ್ದು, ಯೋಗಿ ಆದಿತ್ಯಾನಾಥ್ ಆಡಳಿತ ವಿರುವ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಪಬ್ಲಿಕ್ ಅಫೇರ್ಸ್ ಸೆಂಟರ್ ಎಂಬ ಸಂಸ್ಥೆ ಬಿಡುಗಡೆಗೊಳಿಸಿದ ‘ಪಬ್ಲಿಕ್ ಅಫೇರ್ಸ್ ಇಂಡೆಕ್ಸ್-2020’ ಇದರಲ್ಲಿ ಕೇರಳ ದೇಶದ ಅತ್ಯುತ್ತಮ ಆಡಳಿತವಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ ಉತ್ತರ ಪ್ರದೇಶ ಈ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢ ಮೊದಲ ಸ್ಥಾನ ಪಡೆದಿದೆ. …

Read More »

ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

ನವದೆಹಲಿ: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ನಟಿ ಅಲಿಯಾ ಭಟ್ ನಂತರ ಇದೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಮನೆಯ ಸಿಬ್ಬಂದಿಯೊಬ್ಬರಿಗೆ ಕಾರು ಗಿಫ್ಟ್ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ. ಹೌದು. ಜಾಕ್ವೆಲಿನ್ ಅವರು ಮುಂಬೈಗೆ ಭೇಟಿ ನೀಡಿ, ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ ಹಬ್ಬಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ಸಿಬ್ಬಂದಿ ಜೊತೆ ಸೇರಿ ಕಾರಿಗೆ ಆಯುಧ ಪೂಜೆ …

Read More »

ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ

ಇಸುವಾ(ಬಿಹಾರ),ಅ.23- ಅತ್ತ ಎನ್‍ಡಿಎ ಪರವಾಗಿ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಚುನಾವಣೆಗಾಗಿ ಪಾಂಚಜನ್ಯ ಮೊಳಗಿಸಿದ್ದರೆ, ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರ್‍ಜೆಡಿ ನೇತೃತ್ವದ ಮೈತ್ರಿಕೂಟಕ್ಕಾಗಿ ರಣಕಹಳೆ ಊದಿದ್ದಾರೆ. ಇಸುವಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಲಡಾಕ್‍ನಲ್ಲಿ ಚೀನಿ ಸೈನಿಕರು ಗಡಿಯೊಳಗೆ ನುಸುಳಿ ಹಿಂಸಾಚಾರ …

Read More »

ದಿಗ್ಗಜ ಆಟಗಾರ ಕಪಿಲ್ ದೇವ್ ಅವರಿಗೆ ಹೃದಯಘಾತಆಸ್ಪತ್ರೆಗೆ ದಾಖಲು

ನವದೆಹಲಿ: ಟೀ ಇಂಡಿಯಾ ಚೊಚ್ಚಲ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ, ದಿಗ್ಗಜ ಆಟಗಾರ ಕಪಿಲ್ ದೇವ್ ಅವರಿಗೆ ಹೃದಯಘಾತವಾಗಿತ್ತು. ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. 61 ವರ್ಷದ ಕಪಿಲ್ ದೇವ್ ಅವರಿಗೆ ಸದ್ಯ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆ ನೀಡಲಾಗುತ್ತಿದೆ, ಕಪಿಲ್ ದೇವ್ ಅವರಿಗೆ ಹೃದಯಾಘಾತವಾಗಿರುವ ವಿಚಾರವನ್ನು ಖ್ಯಾತ ಪತ್ರಕರ್ತೆ ಟೀನಾ ಠಾಕೂರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 2020ರ ಐಪಿಎಲ್ ಟೂರ್ನಿಯ …

Read More »

ಚೀನಾಗೆ ಮತ್ತೆ ಹೊಡೆತ – ಮಾರುಕಟ್ಟೆಗೆ ಬರಲಿದೆ 33 ಕೋಟಿ ಸ್ವದೇಶಿ ಹಣತೆ

ನವದೆಹಲಿ: ರಕ್ಷಾ ಬಂಧನದ ಸಮಯದಲ್ಲಿ ಚೀನಾಗೆ ತಿರುಗೇಟು ನೀಡಿದ್ದ ಭಾರತ ಈಗ ದೀಪಾವಳಿ ಸಮಯದಲ್ಲೂ ಆರ್ಥಿಕವಾಗಿ ಹೊಡೆತ ನೀಡಲು ಮುಂದಾಗುತ್ತಿದೆ. ಈ ವರ್ಷದ ದೀಪಾವಳಿಗೆ 33 ಕೋಟಿ ಪರಿಸರ ಸ್ನೇಹಿ ಹಣತೆ ಮಾರುಕಟ್ಟೆಗೆ ಬರಲಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಈ ವಿಚಾರವನ್ನು ತಿಳಿಸಿದ್ದು, ಮುಂದಿನ ತಿಂಗಳು 33 ಕೋಟಿ ಪರಿಸರ ಸ್ನೇಹಿ ಹಣತೆಗಳು ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದ್ದಾರೆ. ವದೇಶಿ ಉತ್ಪನ್ನಗಳ ರಕ್ಷಣೆ ಮತ್ತು ಉತ್ತೇಜನಕ್ಕೆ …

Read More »