ಬೆಂಗಳೂರು, ಡಿ.19- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ದೆಹಲಿಗೆ ಆಹ್ವಾನಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಮತ್ತೆ ಗರಿಗೆದರುವಂತೆ ಮಾಡಿದೆ. ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲು ಮುಖ್ಯ ಮಂತ್ರಿ ಯಡಿಯೂರಪ್ಪ ಮೂರು ಬಾರಿ ದೆಹಲಿಗೆ ಭೇಟಿ ನೀಡಿದ್ದರಾದರೂ ಪ್ರಯೋ ಜನವಾಗಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಭೇಟಿಗೆ ಸಮಯವನ್ನೇ ನೀಡಿರಲಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ …
Read More »ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.
ನವದೆಹಲಿ: ಆಕಾಶ್ ಮತ್ತು ಶ್ಲೋಕಾ ದಂಪತಿಗೆ ಇಂದು ಗಂಡು ಮಗು ಜನಿಸಿದೆ. ಈ ಮೂಲಕ ಖ್ಯಾತ ಉದ್ಯಮಿ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಧೀರೂಬಾಯಿ ಹಾಗೂ ಕೋಕಿಲಾಬೆನ್ ಅಂಬಾನಿ ಕುಟುಂಬದ ಮರಿಮೊಮ್ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ನೀತಾ ಮತ್ತು ಮುಕೇಶ್ ಅಂಬಾನಿ ಅಜ್ಜ, ಅಜ್ಜಿಯಾಗಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ …
Read More »ಜೆಟ್ ಏರ್‌ವೇಸ್ ಮುಂದಿನ ವರ್ಷ 2021ರ ಬೇಸಿಗೆ ವೇಳೆಗೆ ಮತ್ತೆ ತನ್ನ ಹಾರಾಟವನ್ನು ಆರಂಭಿಸಲಿದೆ.
ನವದೆಹಲಿ, ಡಿ.10- ಆರ್ಥಿಕ ಸಂಕಷ್ಟದಿಂದ ನಿಂತು ಹೋಗಿದ್ದ ಜೆಟ್ ಏರ್‌ವೇಸ್ ಮುಂದಿನ ವರ್ಷ 2021ರ ಬೇಸಿಗೆ ವೇಳೆಗೆ ಮತ್ತೆ ತನ್ನ ಹಾರಾಟವನ್ನು ಆರಂಭಿಸಲಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಕಾರ್ಯಚರಣೆಯನ್ನು ಆರಂಭಿಸುವ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೆಟ್ ಏರ್‌ವೇಸ್ ಮಾಲೀಕತ್ವ ವಹಿಸಿಕೊಂಡಿರುವ ಜಲನ್‍ಕಾಲ್‍ರಾಕ್ ಒಕ್ಕೂಟ (ಎನ್‍ಎಲ್‍ಸಿಟಿ) ಘೋಷಿಸಿದೆ. ಕಳೆದು ಹೋಗಿರುವ ನಮ್ಮ ಐತಿಹಾಸಿಕ ಸ್ಥಾನವನ್ನು ಮರುಪಡೆಯಲು ಮತ್ತು ವಿಮಾನಯಾನ ಉದ್ಯಮಕ್ಕೆ ಹೊಸ ಮಾನದಂಡಗಳನ್ನು ಸ್ಥಾಪಿಸಿ ಅತ್ಯುತ್ತಮ ಸೇವೆಯನ್ನು ನೀಡುವ …
Read More »ರಿಯಾ ಚಕ್ರವರ್ತಿ ಮತ್ತು ಶೋವಿಕ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ಅರೆಸ್ಟ್
ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿರುವ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್‍ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ನಾರ್ಕೋಟಿಕ್ಸ್ ಬ್ಯೂರೋ(ಎನ್‍ಸಿಬಿ) ಬಂಧಿಸಿದೆ.ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಬೆಳಕಿಗೆ ಬಂದ ನಂತರ ಪರಾರಿಯಾಗಿದ್ದ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ಎನ್‍ಸಿಬಿ ಈಗ ಮುಂಬೈನ ಪಶ್ಚಿಮ ಉಪನಗರದಲ್ಲಿ ಬಂಧಿಸಿದೆ. ಮಹಕಲ್ ಈ ಪ್ರಕರಣದ ಆರೋಪಿ ಅನುಜ್ ಕೇಶ್ವಾನಿಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದನು. ನಂತರ ಅದನ್ನು ಕೈಜಾನ್ ಎಂಬ ವ್ಯಕ್ತಿಗೆ …
Read More »250 ರೂ.ಗೆ 1 ಡೋಸ್ – ಮಾರ್ಚ್‌ನಲ್ಲಿ ಮೆಡಿಕಲ್ ಸ್ಟೋರ್‌ನಲ್ಲಿ ಲಭ್ಯ?
ನವದೆಹಲಿ: ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಲಸಿಕೆ ಖರೀದಿ ವಿಚಾರವಾಗಿ ಶೀಘ್ರವೇ ಪುಣೆಯ ಸೀರಂ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆಯುವ ಸಾಧ್ಯತೆಯಿದೆ.ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೀರಂ 1 ಡೋಸ್‌ಗೆ 250 ರೂ. ದರ ನಿಗದಿ ಪಡಿಸಿದ್ದು ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆಈ ಕುರಿತು ಮಾತನಾಡಿದ ಸಂಸ್ಥೆ ಸಿಇಒ ಅದರ್ ಪೂನಾವಾಲಾ, …
Read More »ರೈತರಿಗೆ ಬೆಂಬಲ; ದಿಲ್ಲಿ ಸಿಎಂ ಕೇಜ್ರಿವಾಲ್ ಗೆ ಗೃಹ ಬಂಧನ: ಆಪ್ ಆರೋಪ
ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಪೆÇಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, ದೆಹಲಿ ಪೆÇಲೀಸರು ಕೇಜ್ರೀವಾಲ್ ಅವರನ್ನು ಗೃಹಬಂಧನದಲ್ಲಿ ಇರಿಸಿದೆ. ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ದೆಹಲಿ ಪೆÇಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಂಗ್ಯೂ ಬಾರ್ಡರ್ ನಲ್ಲಿ ರೈತರನ್ನು ಭೇಟಿ ಮಾಡಿದ ನಂತರ ಗೃಹ ಬಂಧನದಲ್ಲಿರಿಸಲಾಗಿದೆ. ಅವರ ನಿವಾಸಕ್ಕೆ ತೆರಳಲು …
Read More »ಭಾರತ್ ಬಂದ್‍ಗೆ ಕಾಂಗ್ರೆಸ್ -ಟಿಎಸ್‍ಆರ್ ಬೆಂಬಲ
ನವದೆಹಲಿ, ಡಿ.6- ಕೃಷಿಗೆ ಸಂಬಂಧಪಟ್ಟ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಕರೆ ನೀಡಲಾರಿಗುವ ಭಾರತ್ ಬಂದ್‍ಗೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜ್ಯಗಳು ಬೆಂಬಲ ಘೋಷಿಸಿವೆ. ಕೃಷಿ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಅವುಗಳನ್ನು ಸಂಸತ್‍ನಲ್ಲಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಪಂಜಾಬ್‍ನ ರೈತರು ದೆಹಲಿಗೆ ತೆರಳಿ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ ಕೇಂದ್ರ …
Read More »ದೇಶದಲ್ಲಿ ಕೊವಿಡ್ ಪ್ರಕರಣ ಸಂಬಂಧಿತ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಲು ಪ್ರಧಾನಿ ಮೋದಿ
ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣ ಸಂಬಂಧಿತ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಲು ಪ್ರಧಾನಿ ಮೋದಿ ಇಂದು ಬೆಳಗ್ಗೆ 10.30ಕ್ಕೆ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಕೊರೊನಾ ಕುರಿತು ಚರ್ಚಿಸಲು ಕರೆಯಲಾಗಿರುವ ಎರಡನೇ ಸರ್ವಪಕ್ಷ ಸಭೆ ಇದು. ಮೊದಲ ಸಭೆಯನ್ನು ಏಪ್ರಿಲ್ 20ರಂದು ದೇಶವ್ಯಾಪಿ ಲಾಕ್ಡೌನ್ ಬಗ್ಗೆ ಮಾತನಾಡಲು ಕರೆಯಲಾಗಿತ್ತು. ದೀಪಾವಳಿ ನಂತರ ಕೊರೊನಾ ಪ್ರಕರಣಗಳಲ್ಲಿ ಉಂಟಾಗಿರುವ ಏರಿಳಿತ, ಚಳಿಗಾಲದ ಪರಿಣಾಮ, ಹೊಸವರ್ಷ, ಕ್ರಿಸ್ಮಸ್ ಸಂದರ್ಭದಲ್ಲಿ ರೂಪಿಸಬೇಕಾದ ನಿಯಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ …
Read More »ರ್ಜೂನಿಯರ್ ಇಂಜಿನಿಯರ್ ಕೊಲೆ ಪ್ರಕರಣ: ನಿವೃತ್ತ ಪೊಲೀಸ್ ಮಹಾನಿರ್ದೆಶಕ ಸುಮೇಂದ್‍ಸಿಂಗ್ ಸುಪ್ರೀಂ ಜಾಮೀನು
ನವದೆಹಲಿ,ಡಿ.3- ರ್ಜೂನಿಯರ್ ಇಂಜಿನಿಯರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪಂಜಾಬ್‍ನ ನಿವೃತ್ತ ಪೊಲೀಸ್ ಮಹಾನಿರ್ದೆಶಕ ಸುಮೇಂದ್‍ಸಿಂಗ್ ಶೈನಿ ಅವರಿಗೆ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್, ಆರ್.ಸುಭಾಷ್‍ರೆಡ್ಡಿ, ಎಂ.ಆರ್.ಶಾ ಅವರುಗಳನ್ನೊಗೊಂಡ ವಿಭಾಗೀಯ ಪೀಠ 29 ವರ್ಷದ ಹಳೆಯ ಪ್ರಕರಣದಲ್ಲಿ ಶೈನಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. 1991ರಲ್ಲಿ ಚಂಡೀಗಢದ ಕೈಗಾರಿಕಾ ಮತ್ತು ಪ್ರವಾಸೋದ್ಯಮ ನಿಗಮದ ಹಿರಿಯ ಇಂಜಿನಿಯರ್ ಮುಲ್ತಾನಿ ಅವರ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿ …
Read More »ಪಿಎಫ್‍ಐ ಅಧ್ಯಕ್ಷನ ಮನೆ ಮೇಲೇ ಇಡಿ ದಾಳಿ……
ನವದೆಹಲಿ,ಡಿ.3- ಸಿಎಎ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗೆ ಹಣಕಾಸು ಸಹಾಯ ಮಾಡಿದ ಆರೋಪದ ವಿಚಾರಣೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯ ಪಿಎಫ್‍ಐ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಅವರ ಮನೆ ಮೇಲೆ ದಾಳಿ ನಡೆಸಿದೆ. ಉನ್ನತ ಮೂಲಗಳ ಪ್ರಕಾರ ಕೇರಳದ ಮಲ್ಲಪುರಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ನಡೆಸಿದೆ. ಪಿಎಫ್‍ಐನ ಅಧ್ಯಕ್ಷ ಒ.ಎಂ.ಅಬ್ದುಲಸಲಾಂ, ರಾಷ್ಟ್ರೀಯ ಕಾರ್ಯದರ್ಶಿ ನಾಸಿರುದ್ದೀನ್ ಯಲಮಾರನ್ ಅವರಿಗೆ ಸೇರಿದ …
Read More »
Laxmi News 24×7