ನವದೆಹಲಿ : ಮೈಕ್ರೊ ಬ್ಲಾಗಿಂಗ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಟ್ವೀಟ್ ಮಾಡಿದ ಕಾರಣ ನಟಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಗ್ಗೆ ಆಕ್ಷೇಪಾರ್ಹ ಸರಣಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ನಟಿಯ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. 2021ರ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಟಿಎಂಸಿ ಗೆದ್ದಿದೆ. ಇದೇ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬೇಕು ಎಂದು ಕಂಗನಾ ಒತ್ತಾಯ …
Read More »ವೆಂಟಿಲೇಟರ್‌ನಲ್ಲಿರುವ ಕೊರೊನಾ ಸೋಂಕಿತರೊಬ್ಬರಿಗೆ ಗೋಮೂತ್ರ ಕುಡಿಸಿದ ರಾಜಕಾರಣಿ
ನವದೆಹಲಿ, : ವೆಂಟಿಲೇಟರ್‌ನಲ್ಲಿರುವ ಮಹಿಳಾ ಕೊರೊನಾ ಸೋಂಕಿತರೊಬ್ಬರಿಗೆ ರಾಜಕಾರಣಿಯೊಬ್ಬರು ಒತ್ತಾಯಪೂರ್ವಕವಾಗಿ ಗೋಮೂತ್ರ ಕುಡಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು, ಆವರಿಗೆ ರಾಜಕಾರಣಿಯೊಬ್ಬರು ಗೋಮೂತ್ರ ಕುಡಿಸಿದ್ದರು. ಈ ಶಾಕಿಂಗ್ ವಿಡಿಯೋವನ್ನು ಸೂರತ್ ಬಿಜೆಪಿಯ ಜನರಲ್ ಸೆಕ್ರೆಟರಿ ಕಿಶೋರ್ ಬಿಂದಾಲ್ ಅವರು ಪೋಸ್ಟ್ ಮಾಡಿದ್ದರು. 80 ಸಾವಿರ ಮಂದಿ ಈ ವಿಡಿಯೋ ವೀಕ್ಷಿಸಿದ್ದರು, ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಮಾರಕ ಕೊರೋನಾ ವೈರಸ್ ಗುಣಪಡಿಸಲು ಇಡೀ …
Read More »ಆಜ್ ತಕ್ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾ ಸೋಂಕಿಗೆ ಬಲಿ
ನವದೆಹಲಿ: ಹಿರಿಯ ಪತ್ರಕರ್ತ, ಆಜ್ ತಕ್ ಸುದ್ದಿ ವಾಹಿನಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ರೋಹಿತ್ ಸರ್ದಾನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಜ್ ತಕ್ ನಲ್ಲಿ ದಂಗಲ್ ಎಂಬ ಚರ್ಚಾ ಕಾರ್ಯಕ್ರಮದ ಮೂಲಕ ರೋಹಿತ್ ಜನಪ್ರಿಯರಾಗಿದ್ದರು. ಕೊರೊನಾ ಸೋಂಕಿನಿಂದ ಹಿರಿಯ ಪತ್ರಕರ್ತ, ಸುದ್ದಿ ನಿರೂಪಕ ಸಾವನ್ನಪ್ಪಿರುವುದು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಹಿತ್ …
Read More »ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯುವರಿಗೆ ಆನ್ ಲೈನ್ ನಲ್ಲಿ ನೋಂದಿಣಿಗೆ ಇಂದಿನಿಂದ ಅವಕಾಶ
ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯುವರಿಗೆ ಆನ್ ಲೈನ್ ನಲ್ಲಿ ನೋಂದಿಣಿಗೆ ಇಂದಿನಿಂದ ಅವಕಾಶ ನೀಡಲಾಗಿದೆ. ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ವ್ಯಾಕ್ಸಿನ್ ಪಡೆಯಲು ಇಚ್ಛಿಸುವವರು ಕೋವಿನ್ ವೆಬ್ ಸೈಟ್ ಅಥವಾ ಆರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. * www,cowin.gov.in ವೆಬ್ ಸೈಟ್ ಗೆ ಭೇಟಿ ನೀಡಿ …
Read More »ರಾಜ್ಯಗಳು ಲಾಕ್‌ಡೌನ್ ಘೋಷಿಸಿದ್ದರೂ ರೈಲುಗಳು ಮಾತ್ರ ಎಂದಿನಂತೆ ಸಂಚರಿಸಲಿವೆ.:ಭಾರತೀಯ ರೈಲ್ವೆ ಮಂಡಳಿ
ನವದೆಹಲಿ: ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ನಿಯಂತ್ರಿಸಲು ಹಲವು ರಾಜ್ಯಗಳು ಲಾಕ್‌ಡೌನ್ ಘೋಷಿಸಿದ್ದರೂ ರೈಲುಗಳು ಮಾತ್ರ ಎಂದಿನಂತೆ ಸಂಚರಿಸಲಿವೆ. ಅಗತ್ಯಬಿದ್ದರೆ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಭಾರತೀಯ ರೈಲ್ವೆ ಮಂಡಳಿಯು ತಿಳಿಸಿದೆ. ಪ್ರಸ್ತುತ ಮೇಲ್ ಮತ್ತು ಎಕ್ಸ್‌ಪ್ರೆಸ್ ಸೇರಿದಂತೆ ಶೇ 70ರಷ್ಟು ರೈಲುಗಳು ಕೋವಿಡ್ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ, ಸುಮಾರು 330 ಬೇಸಿಗೆ ವಿಶೇಷ ರೈಲುಗಳು ಸಹ ಸಂಚರಿಸುತ್ತಿವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ಹೇಳಿದ್ದಾರೆ. ‘ಮಹಾರಾಷ್ಟ್ರ, ದೆಹಲಿ, …
Read More »ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ
ನಿಮಗೆ ನೆನಪಿದೆಯಾ? ಕಳೆದ ವರ್ಷ, ಕೊರೊನಾ ಮೊದಲ ಅಲೆ ಅಪ್ಪಳಿಸಿದಾಗ, ಎಲ್ಲೆಲ್ಲೂ ವೈದ್ಯಕೀಯ ವೆಂಟಿಲೇಟರ್ಗಾಗಿ ಹಾಹಾಕಾರ ಎದ್ದಿತ್ತು. ಹೌದು. ಅದೇ ರೀತಿ ಹೈಡ್ರೋಕ್ಸಿಕ್ಲೋರೊಕ್ವಿನ್ (ಎಚ್ಸಿಕ್ಯೂ) ಮಾತ್ರೆಗೂ ಬೇಡಿಕೆ ತುಂಬಾ ಇತ್ತು. ಭಾರತ ಅಮೇರಿಕಕ್ಕೆ (ಎಚ್ಸಿಕ್ಯೂ) ಮಾತ್ರೆಯನ್ನು ಕಳಿಸಿತ್ತು. ಭಾರತ ಸರ್ಕಾರ ಹೊಸ ಹೊಸ ವೆಂಟಿಲೇಟರ್ ತಯಾರಿಸಲು ಕರೆ ಕೊಟ್ಟಿತ್ತು. ಅದು ಹೇಗೋ, ಭಾರತದಲ್ಲಿ ಕೊರೊನಾ ವೈರಾಣು ಮಣ್ಣುಮುಕ್ಕಿತು. ನಾವು ಬೇರೆಲ್ಲಾ ದೇಶಗಳಿಗಿಂತಲೂ ಸುಲಭವಾಗಿ ಕೊವಿಡ್ 19 ಯುದ್ಧದಲ್ಲಿ ಗೆದ್ದುಬಿಟ್ಟೆವು ಎಂದು …
Read More »ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಿಸುವಂತೆ ಸಿಎಂ ಕೇಜ್ರಿವಾಲ್ ಆದೇಶ
ನವದೆಹಲಿ: ದೆಹಲಿಯಲ್ಲಿ ಕೊರೋನಾ ಹೆಚ್ಚುತ್ತಿದ್ದು, ಮತ್ತೊಂದೆಡೆ ಇಲ್ಲಿನ ಆಸ್ಪತ್ರೆಗಳನ್ನು ಆಮ್ಲಜನಕದ ಕೊರತೆೆ ಅತಿಯಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 3ರ ವರೆಗೂ ಲಾಕ್‌ಡೌನ್ ವಿಸ್ತರಿಸಿ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ‘ಆಮ್ಲಜನಕ ಪೂರೈಕೆಗೆ ಸಹಾಯವಾಗಲು ಪೋರ್ಟಲ್ ಆರಂಭಿಸಲಾಗಿದೆ. ಉತ್ಪಾದಕರು, ವಿತರಕರು ಹಾಗೂ ಆಸ್ಪತ್ರೆಗಳಿಂದ ಪ್ರಸ್ತುತ ಆಮ್ಲಜನಕ ಪೂರೈಕೆ ಮತ್ತು ಸಂಗ್ರಹದ ಮಾಹಿತಿ ಅಪ್‌ಡೇಟ್ ಆಗಲಿದೆ. ಪ್ರತಿ 2 ಗಂಟೆಗಳಿಗೊಮ್ಮೆ ಅಪ್‌ಡೇಟ್ ಮಾಡಲಾಗುತ್ತದೆ. ಕೇಂದ್ರ …
Read More »ಭಾರತದಿಂದ ಎಲ್ಲಾ ವಾಣಿಜ್ಯ ವಿಮಾನಗಳಿಗೆ ನಿಷೇಧ ಏರಿದ ಕುವೈತ್
ನವದೆಹಲಿ:ಏಪ್ರಿಲ್ 24 ರಿಂದ ಜಾರಿಗೆ ಬರುವ ಮತ್ತು ಮುಂದಿನ ಸೂಚನೆ ಬರುವವರೆಗೂ ಭಾರತದಿಂದ ಬರುವ ಎಲ್ಲಾ ನೇರ ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಕುವೈತ್‌ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶನಿವಾರ ಪ್ರಕಟಿಸಿದೆ. ಜಾಗತಿಕ ಕೋವಿಡ್-19 ಸ್ಥಿತಿಯ ಬಗ್ಗೆ ಕುವೈತ್ ಆರೋಗ್ಯ ಅಧಿಕಾರಿಗಳ ಮೌಲ್ಯಮಾಪನದ ಹಿನ್ನೆಲೆಯಲ್ಲಿ ಇದು ಬರುತ್ತದೆ.’ಭಾರತದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಕುವೈತ್ ರಾಜ್ಯಕ್ಕೆ ಬರುವ ಕನಿಷ್ಠ (14) ದಿನಗಳ ಮೊದಲು ಭಾರತದ ಹೊರಗೆ ವಾಸವಾಗದ ಹೊರತು ನೇರವಾಗಿ ಅಥವಾ …
Read More »ಬಯಲಾಯ್ತು ಖಾಸಗಿ ಆಸ್ಪತ್ರೆಗಳ ಬೆಡ್ ರಹಸ್ಯ: ಅಗತ್ಯವಿಲ್ಲದಿದ್ರೂ ರೋಗಿಗಳ ಹೆಸರಲ್ಲಿ ಹಾಸಿಗೆ ಭರ್ತಿ
ನವದೆಹಲಿ: ನೋಯ್ಡಾದ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದವರೂ ರೋಗಿಗಳ ಹೆಸರಲ್ಲಿ ಆಸ್ಪತ್ರೆಯ ಬೆಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿರುವ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದ ಅನೇಕ ಜನ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಗೌತಮಬುದ್ಧ ನಗರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನೋಯ್ಡಾ ಜಿಲ್ಲೆಯ ಅನೇಕ ಆಸ್ಪತ್ರೆಗಳಲ್ಲಿ 200 ಕ್ಕೂ ಹೆಚ್ಚು ಮಂದಿಯನ್ನು ಜಾಗ ಖಾಲಿ ಮಾಡಿಸಲಾಗಿದೆ. …
Read More »ʼಆಮ್ಲಜನಕದ ಪೂರೈಕೆʼಗೆ ಅಡ್ಡಿಪಡಿಸುವವರನ್ನ ಗಲ್ಲಿಗೇರಿಸುತ್ತೇವೆ: ದೆಹಲಿ ಹೈಕೋರ್ಟ್
ನವದೆಹಲಿ: ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಆಮ್ಲಜನಕ ಪೂರೈಕೆಯಲ್ಲಿ ಅಡಚಣೆಯನ್ನು ಉಂಟು ಮಾಡಿದ್ರೆ, ‘ನಾವು ಆ ವ್ಯಕ್ತಿಯನ್ನ ಗಲ್ಲಿಗೇರಿಸುತ್ತೇವೆ’ ಎಂದು ದೆಹಲಿ ಹೈಕೋರ್ಟ್ ಶನಿವಾರ ಹೇಳಿದೆ. ಮಹಾರಾಜ ಅಗ್ರಸೆನ್ ಆಸ್ಪತ್ರೆಯ ಅರ್ಜಿಯ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ರೇಖಾ ಪಲ್ಲಿ ಅವ್ರ ನ್ಯಾಯಪೀಠ ಈ ಹೇಳಿಕೆ ನೀಡಿದೆ. ಗಂಭೀರ ಅನಾರೋಗ್ಯದ ಕೊರೊನಾ ರೋಗಿಗಳಿಗೆ ಆಮ್ಲಜನಕದ ಕೊರತೆಯ ಬಗ್ಗೆ ಆಸ್ಪತ್ರೆ ಹೈಕೋರ್ಟ್‌ಗೆ ಮೊರೆ ಹೋಗಿತ್ತು. …
Read More »
Laxmi News 24×7