Breaking News

ನವದೆಹಲಿ

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಿಸುವಂತೆ ಸಿಎಂ ಕೇಜ್ರಿವಾಲ್ ಆದೇಶ

ನವದೆಹಲಿ: ದೆಹಲಿಯಲ್ಲಿ ಕೊರೋನಾ ಹೆಚ್ಚುತ್ತಿದ್ದು, ಮತ್ತೊಂದೆಡೆ ಇಲ್ಲಿನ ಆಸ್ಪತ್ರೆಗಳನ್ನು ಆಮ್ಲಜನಕದ ಕೊರತೆೆ ಅತಿಯಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮೇ 3ರ ವರೆಗೂ ಲಾಕ್‌ಡೌನ್‌ ವಿಸ್ತರಿಸಿ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ‘ಆಮ್ಲಜನಕ ಪೂರೈಕೆಗೆ ಸಹಾಯವಾಗಲು ಪೋರ್ಟಲ್‌ ಆರಂಭಿಸಲಾಗಿದೆ. ಉತ್ಪಾದಕರು, ವಿತರಕರು ಹಾಗೂ ಆಸ್ಪತ್ರೆಗಳಿಂದ ಪ್ರಸ್ತುತ ಆಮ್ಲಜನಕ ಪೂರೈಕೆ ಮತ್ತು ಸಂಗ್ರಹದ ಮಾಹಿತಿ ಅಪ್‌ಡೇಟ್‌ ಆಗಲಿದೆ. ಪ್ರತಿ 2 ಗಂಟೆಗಳಿಗೊಮ್ಮೆ ಅಪ್‌ಡೇಟ್‌ ಮಾಡಲಾಗುತ್ತದೆ. ಕೇಂದ್ರ …

Read More »

ಭಾರತದಿಂದ ಎಲ್ಲಾ ವಾಣಿಜ್ಯ ವಿಮಾನ‌ಗಳಿಗೆ ನಿಷೇಧ ಏರಿದ ಕುವೈತ್

ನವದೆಹಲಿ:ಏಪ್ರಿಲ್ 24 ರಿಂದ ಜಾರಿಗೆ ಬರುವ ಮತ್ತು ಮುಂದಿನ ಸೂಚನೆ ಬರುವವರೆಗೂ ಭಾರತದಿಂದ ಬರುವ ಎಲ್ಲಾ ನೇರ ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಕುವೈತ್‌ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶನಿವಾರ ಪ್ರಕಟಿಸಿದೆ. ಜಾಗತಿಕ ಕೋವಿಡ್-19 ಸ್ಥಿತಿಯ ಬಗ್ಗೆ ಕುವೈತ್ ಆರೋಗ್ಯ ಅಧಿಕಾರಿಗಳ ಮೌಲ್ಯಮಾಪನದ ಹಿನ್ನೆಲೆಯಲ್ಲಿ ಇದು ಬರುತ್ತದೆ.’ಭಾರತದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಕುವೈತ್ ರಾಜ್ಯಕ್ಕೆ ಬರುವ ಕನಿಷ್ಠ (14) ದಿನಗಳ ಮೊದಲು ಭಾರತದ ಹೊರಗೆ ವಾಸವಾಗದ ಹೊರತು ನೇರವಾಗಿ ಅಥವಾ …

Read More »

ಬಯಲಾಯ್ತು ಖಾಸಗಿ ಆಸ್ಪತ್ರೆಗಳ ಬೆಡ್ ರಹಸ್ಯ: ಅಗತ್ಯವಿಲ್ಲದಿದ್ರೂ ರೋಗಿಗಳ ಹೆಸರಲ್ಲಿ ಹಾಸಿಗೆ ಭರ್ತಿ

ನವದೆಹಲಿ: ನೋಯ್ಡಾದ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದವರೂ ರೋಗಿಗಳ ಹೆಸರಲ್ಲಿ ಆಸ್ಪತ್ರೆಯ ಬೆಡ್ ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿರುವ ಅನೇಕ ಆಸ್ಪತ್ರೆಗಳಲ್ಲಿ ಅಗತ್ಯವಿಲ್ಲದ ಅನೇಕ ಜನ ಹಾಸಿಗೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಗೌತಮಬುದ್ಧ ನಗರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ನೋಯ್ಡಾ ಜಿಲ್ಲೆಯ ಅನೇಕ ಆಸ್ಪತ್ರೆಗಳಲ್ಲಿ 200 ಕ್ಕೂ ಹೆಚ್ಚು ಮಂದಿಯನ್ನು ಜಾಗ ಖಾಲಿ ಮಾಡಿಸಲಾಗಿದೆ. …

Read More »

ʼಆಮ್ಲಜನಕದ ಪೂರೈಕೆʼಗೆ ಅಡ್ಡಿಪಡಿಸುವವರನ್ನ ಗಲ್ಲಿಗೇರಿಸುತ್ತೇವೆ: ದೆಹಲಿ ಹೈಕೋರ್ಟ್

ನವದೆಹಲಿ: ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ಆಮ್ಲಜನಕ ಪೂರೈಕೆಯಲ್ಲಿ ಅಡಚಣೆಯನ್ನು ಉಂಟು ಮಾಡಿದ್ರೆ, ‘ನಾವು ಆ ವ್ಯಕ್ತಿಯನ್ನ ಗಲ್ಲಿಗೇರಿಸುತ್ತೇವೆ’ ಎಂದು ದೆಹಲಿ ಹೈಕೋರ್ಟ್ ಶನಿವಾರ ಹೇಳಿದೆ.‌ ಮಹಾರಾಜ ಅಗ್ರಸೆನ್ ಆಸ್ಪತ್ರೆಯ ಅರ್ಜಿಯ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ರೇಖಾ ಪಲ್ಲಿ ಅವ್ರ ನ್ಯಾಯಪೀಠ ಈ ಹೇಳಿಕೆ ನೀಡಿದೆ. ಗಂಭೀರ ಅನಾರೋಗ್ಯದ ಕೊರೊನಾ ರೋಗಿಗಳಿಗೆ ಆಮ್ಲಜನಕದ ಕೊರತೆಯ ಬಗ್ಗೆ ಆಸ್ಪತ್ರೆ ಹೈಕೋರ್ಟ್‌ಗೆ ಮೊರೆ ಹೋಗಿತ್ತು. …

Read More »

ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಪೂರೈಕೆಗೆ 24/7 ವಾರ್ ರೂಮ್ ಸ್ಥಾಪನೆ : ಡಾ. ಸುಧಾಕರ್

ಬೆಂಗಳೂರು : ಕೋವಿಡ್ ರೂಪಾಂತರಿ ಅಲೆ ರಾಜ್ಯದಲ್ಲಿ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿನ್ನೆ(ಮಂಗಳವಾರ, ಏಪ್ರಿಲ್ 20) ರಾತ್ರಿ ವೀಕೆಂಡ್ ಲಾಕ್ ಡೌನ್, ವಾರದ ಐದು ದಿನಗಳ ನೈಟ್ ಕರ್ಫ್ಯೂ ಘೋಷಣೆ ಮಾಡಿ ಕೆಲವು ಕಠಿಣ ನಿರ್ಬಂಧಗಳನ್ನು ಹೇರಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ವಾರಗಳ ಭಾಗಶಃ ಲಾಕ್ ಡೌ ನ್ ರಾಜ್ಯದಲ್ಲಿರಲಿದೆ. ಕೋವಿಡ್ ಸೋಂಕಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರ ಜೊತೆಗೆ ರಾಜ್ಯದಲ್ಲಿ …

Read More »

ಲಾಕ್‍ಡೌನ್ ಮಾಡಿದ್ರೆ ಜನ ಸಾಯ್ತಾರೆ, ಸೆಕ್ಷನ್ 144 ತನ್ನಿ: ಸಿ.ಎಂ.ಇಬ್ರಾಹಿಂ

ಬೆಂಗಳೂರು: ಲಾಕ್‍ಡೌನ್ ಮಾಡಿದ್ರೆ ಜನರು ಸಾಯ್ತಾರೆ. ಅದರ ಬದಲಾಗಿ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಗೆ ತರಬೇಕು. ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ಕಾಂಗ್ರೆಸ್ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಸಿಎಂ, ಸಚಿವರು, ಬೆಂಗಳೂರಿನ ಶಾಸಕರ ಜೊತೆಗಿನ ಸಭೆ ಬಳಿಕ ಸಿಎಂ ಇಬ್ರಾಹಿಂ ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಸಂಪೂರ್ಣವಾಗಿ ಗೊಂದಲದಲ್ಲಿದ್ದು, ಗಂಟು ಹಾಕಿ ಹೊಳೆಯಲ್ಲಿ ಬಿಟ್ಟಂತಾಗಿದೆ. ರಾಜ್ಯದಲ್ಲಿ ಬೆಡ್, ಆಕ್ಸಿಜನ್, ಇಂಜೆಕ್ಷನ್, ಲಸಿಕೆ ಮತ್ತು ಔಷಧಿಗಳ ಕೊರತೆ ಇದೆ. ಈ …

Read More »

ಕೊರೊನಾ ಸೋಂಕಿನಿಂದ ಬಜಾವ್‌ ಆಗೋಕೆ ಯಾವ ಆಹಾರ ಸೇವಿಸ್ಬೇಕು..? WHO ನೀಡಿದ ಸಲಹೆಯೇನು ಗೊತ್ತಾ..?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತೊಮ್ಮೆ ತನ್ನ ಭೀಕರ ರೂಪವನ್ನ ತೋರಿಸಲಾರಂಭಿಸಿದೆ. ಕೊರೊನಾ ಹೊಸ ರೂಪವು ತುಂಬಾ ಸಾಂಕ್ರಾಮಿಕವಾಗಿದ್ದು, ಸ್ವಲ್ಪ ಅಸಡ್ಡೆ ತೋರಿಸಿದ್ರು ವಕ್ಕರಿಸೋದು ಗ್ಯಾರೆಂಟಿ. ಹಾಗಾಗಿ ಈ ಸಮಯದಲ್ಲಿ ಕೈ ತೊಳೆಯುವುದು, ಮಾಸ್ಕ್‌ ಹಾಕುವುದು ಮತ್ತು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವುದರ ಕಡೆಗೆ ವಿಶೇಷ ಗಮನ ನೀಡಬೇಕಾಗಿದೆ. ಇನ್ನು ಈ ಋತುವಿನಲ್ಲಿ ನೀವು ತಿನ್ನುವ ಉತ್ತಮ ಆಹಾರ, ನಿಮ್ಮ ರೋಗ ನಿರೋಧಕ ಶಕ್ತಿಯನ್ನ ಬಲಪಡಿಸುತ್ತೆ. ಇದು ಗಂಭೀರ ಕಾಯಿಲೆಯ ಅಪಾಯವನ್ನ …

Read More »

ರೇಕಿಂಗ್ : CBI ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ನಿಧನ

ನವದೆಹಲಿ : ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. 1974 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ರಂಜಿತ್ ಸಿನ್ಹಾ ಸಿಬಿಐ ನಿರ್ದೇಶಕರು ಮತ್ತು ಡಿಜಿ ಐಟಿಬಿಪಿ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ನಿವೃತ್ತ ಅಧಿಕಾರಿ ರಂಜಿತ್ ಸಿನ್ಹಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಇಂದು ಬೆಳಗ್ಗೆ 4.30 ಸುಮಾರಿಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಆಕ್ಸಿಜನ್ ಮಾಸ್ಕ್ ಕಿತ್ತುಹಾಕಿದ ವಾರ್ಡ್ ಬಾಯ್: ಕೋವಿಡ್ ರೋಗಿ ಸಾವು

ಭೋಪಾಲ್, ಮಧ್ಯಪ್ರದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟ ಸಂಖ್ಯೆಯನ್ನು ಸರ್ಕಾರ ಅಡಗಿಸುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಅಲ್ಲಿನ ಆರೋಗ್ಯ ವ್ಯವಸ್ಥೆಯ ಹೀನಾಯ ಸ್ಥಿತಿಯನ್ನು ತೋರಿಸುವ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಶಿವಪುರಿಯಲ್ಲಿ ವಾರ್ಡ್ ಬಾಯ್ ಒಬ್ಬಾತ ಕೋವಿಡ್ ರೋಗಿಗೆ ಅಳವಡಿಸಿದ್ದ ಆಕ್ಸಿಜನ್ ಮಾಸ್ಕ್ ಅನ್ನು ತೆಗೆದುಹಾಕಿದ್ದಾನೆ. ಇದರಿಂದ ಆಮ್ಲಜನಕವಿಲ್ಲದೆ ವೃದ್ಧ ರೋಗಿ ನರಳಿ ಮೃತಪಟ್ಟಿದ್ದಾರೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುರೇಂದ್ರ ಶರ್ಮಾ ಎಂಬ ರೋಗಿಯನ್ನು ಶಿವಪುರಿಯ ಆಸ್ಪತ್ರೆಯೊಂದರ …

Read More »

ಸ್ವಂತ ಚಾನೆಲ್ ‘ಐಎನ್‌ಸಿ ಟಿವಿ’ ಆರಂಭಿಸಲಿದೆ ಕಾಂಗ್ರೆಸ್

ನವದೆಹಲಿ, ಏಪ್ರಲ್ 14: ಕಾಂಗ್ರೆಸ್ ಪಕ್ಷವು ತನ್ನದೇ ಸ್ವಂತ ಡಿಜಿಟಿಲ್ ವೇದಿಕೆ ‘ಐಎನ್‌ಸಿ ಟಿವಿ’ಯನ್ನು ಏ. 14ರಂದು ಆರಂಭಿಸುತ್ತಿದೆ. ಪಕ್ಷದ ಸಂದೇಶಗಳು, ವಿಚಾರಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಅದು ಈ ಚಾನೆಲ್ ಆರಂಭಿಸುತ್ತಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ತನ್ನ ಆನ್‌ಲೈನ್ ವೇದಿಕೆಯ ಹೆಚ್ಚಿನ ವಿವರಗಳನ್ನು ಅದು ನೀಡಲಿದೆ. ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ, ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಸುಷ್ಮಿತಾ …

Read More »