Breaking News

ನವದೆಹಲಿ

ದೇಶದಲ್ಲಿ ಒಂದೇ ದಿನ 2,31,456 ಕೊರೊನಾ ಸೋಂಕಿತರು ಗುಣಮುಖ!

ನವದೆಹಲಿ, : ಭಾರತದ ಮಟ್ಟಿಗೆ ಮೇ ತಿಂಗಳಿನಲ್ಲಿ ಅಟ್ಟಹಾಸ ತೋರಿದ ಕೊರೊನಾವೈರಸ್ ಪ್ರಭಾವ ಜೂನ್ ಆರಂಭದಲ್ಲಿ ತಗ್ಗಿದೆ. ದಿನದಿಂದ ದಿನಕ್ಕೆ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಹೊಸ ಪ್ರಕರಣಕ್ಕಿಂತ ಗುಣಮುಖರ ಸಂಖ್ಯೆ ಪ್ರತಿನಿತ್ಯ ಏರಿಕೆಯಾಗುತ್ತಿದೆ. ದೇಶದಲ್ಲಿ ಒಂದೇ ದಿನ 1,32,788 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,31,456 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 3,207 …

Read More »

ಸಿಬಿಎಸ್ ಇ 12ನೇ ತರಗತಿ ಪರೀಕ್ಷೆ ರದ್ದು; ಮೋದಿ

ನವದೆಹಲಿ : ಸಿಬಿಎಸ್ ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷ ಯಾವುದೇ ಪರೀಕ್ಷೆಗಳು ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಿಳಿಸಿದ್ದಾರೆ. ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯನ್ನು ನಡೆಸಬೇಕೇ, ಬೇಡವೇ ಎನ್ನುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ, ಈ ವರ್ಷದ 12ನೇ ತರಗತಿ ಪರೀಕ್ಷೆಯನ್ನು ನಡೆಸದೇ ಇರುವಂತ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ವಿದ್ಯಾರ್ಥಿಗಳ …

Read More »

ಕ್ರೇಜಿ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾದ ಕನ್ನಡಿಗ ಚಿತ್ರದ ಟೀಸರ್

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಇಂದು ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅದರ ಪ್ರಯುಕ್ತ ಅವರ ಹೊಸ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ‘ ಕನ್ನಡಿಗ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಯುಟ್ಯೂಬ್ ನಲ್ಲಿ ಗುಣಭದ್ರ ಎಂಬ ವಿದ್ವಾಂಸನ ಪಾತ್ರದ ಟೀಸರ್ ಬಿಡುಗಡೆಯಾಗಿದೆ . ಅದು , ತಲೆಮಾರುಗಳಿಂದ ಕನ್ನಡ ಭಾಷೆ , ಪರಂಪರೆಯ ಉಳಿವಿಗಾಗಿ ಹೋರಾಡಿದ ಕುಟುಂಬದ ಸದಸ್ಯನ ಪಾತ್ರವಾಗಿದೆ. ಅಲ್ಲದೆ ಈ ಚಿತ್ರದ ಮೂಲಕ ಟಾಮ್ ಆಲ್ಟರ್‌ …

Read More »

ಜನ ಸಹಕರಿಸಿದರೆ ಜೂ.7ರ ನಂತರ ಲಾಕ್‍ಡೌನ್ ಇರಲ್ಲ : ಸಿಎಂ

ಬೆಂಗಳೂರು,- ಜನ ಅಗತ್ಯ ಸಹಕಾರ ನೀಡಿದರೆ ಜೂನ್ 7ರ ನಂತರ ಲಾಕ್‍ಡೌನ್ ಮುಂದುವರೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 7ರವರೆಗೂ ಎಂದಿನಂತೆ ಲಾಕ್‍ಡೌನ್ ಮುಂದುವರೆಯಲಿದೆ. 7ರ ನಂತರ ಪರಿಸ್ಥಿತಿ ಅವಲೋಕಿಸಿ ಲಾಕ್‍ಡೌನ್ ವಿಸ್ತರಣೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಜನ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಜೂನ್ 7ರ ನಂತರ ಲಾಕ್‍ಡೌನ್ ವಿಸ್ತರಣೆಯ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಜನರು ಲಾಕ್‍ಡೌನ್ ಸಂದರ್ಭದಲ್ಲಿ …

Read More »

ಆರ್ಗ್ಯಾನಿಕ್​​ ಬ್ಯೂಟಿ’ ಹೆಸರಿನಲ್ಲಿ ಸೆಕ್ಸ್‌ ; ಐವರು ಮಹಿಳೆಯರ ಬಂಧನ

ಗ್ವಾಲಿಯರ್​(ಮಧ್ಯಪ್ರದೇಶ): ಗ್ವಾಲಿಯರ್​ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸೆಕ್ಸ್​​ ರಾಕೆಟ್​​ ಅಡ್ಡೆ ಮೇಲೆ ದಾಳಿ ನಡೆಸಿರುವ ಕ್ರೈಂ ಬ್ರ್ಯಾಂಚ್​ ಪೊಲೀಸರು ಮಾಲೀಕ ಸೇರಿದಂತೆ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಐವರು ಮಹಿಳೆಯರ ಬಂಧನ’ಆರ್ಗ್ಯಾನಿಕ್​​ ಬ್ಯೂಟಿ’ ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು ಐವರು ಮಹಿಳೆಯರು ಹಾಗೂ ದಂಧೆ ನಡೆಸುತ್ತಿದ್ದ ಮಾಲೀಕನ ಬಂಧನ ಮಾಡಿದ್ದಾರೆ. ಕಳೆದ ಕೆಲ ತಿಂಗಳಿಂದ ಗೋವಿಂದ್​ಪುರ ಇಲಾಖೆಯಲ್ಲಿ ಆರ್ಗ್ಯಾನಿಕ್​ ಬ್ಯೂಟಿ …

Read More »

ಎರಡು ವಿಭಿನ್ನ ಕೋವಿಡ್ ಲಸಿಕೆ ಪಡೆದರೆ ಏನಾಗುತ್ತದೆ.ಡಾ.ವಿಕೆ ಪೌಲ್ ಹೇಳಿದ್ದೇನು?

ನವದೆಹಲಿ: ರೋಗ ನಿರೋಧಕ ಶಕ್ತಿ ಹೆಚ್ಚಳವಾಗುವ ನಿಟ್ಟಿನಲ್ಲಿ ಮೊದಲು ಯಾವ ಕೋವಿಡ್ (ಕೋವಿಶೀಲ್ಡ್/ಕೋವ್ಯಾಕ್ಸಿನ್) ಲಸಿಕೆಯನ್ನು ಪಡೆದುಕೊಂಡಿರುತ್ತೀರೋ ಎರಡನೇ ಬಾರಿಯೂ ಅದೇ ಲಸಿಕೆಯನ್ನು ತೆಗೆದುಕೊಳ್ಳುವ ಬಗ್ಗೆ ಹೆಚ್ಚಿನ ಗಮನಕೊಡಿ. ಒಂದು ವೇಳೆ ಜನರು ಎರಡು ಬಗೆಯ ಕೋವಿಡ್ ಲಸಿಕೆ ತೆಗೆದುಕೊಂಡರೂ ಸಹ ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಭಾರತದ ಉನ್ನತ ಕೋವಿಡ್ 19 ಸಲಹೆಗಾರ ಡಾ.ವಿ.ಕೆ.ಪೌಲ್ ಗುರುವಾರ(ಮೇ 27) ತಿಳಿಸಿದ್ದಾರೆ.   ಉತ್ತರಪ್ರದೇಶದ ಸಿದ್ದಾರ್ಥನಗರದ ಗ್ರಾಮವೊಂದರಲ್ಲಿ 20 ಮಂದಿ ಮೊದಲು …

Read More »

ಸ್ನೇಹಿತರ ಸಹಾಯ; ಧಾರವಾಡಕ್ಕೆ ಬಂತು ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್

ಧಾರವಾಡ, ಮೇ 27; ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಮ್ಮ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮುನ್ನಡೆಸುತ್ತಿರುವ ‘ಮೆಡಿಕಲ್ ಆಕ್ಸಿಜನ್ ಫಾರ್ ಆಲ್’ ತಂಡದಿಂದ ಪಡೆದ ಆಕ್ಸಿಜನ್ ಕಾನ್ಸನ್‍ಟ್ರೇಟರ್‌ಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿದರು. ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿವಿಧ ಕಡೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ, ಅಲ್ಲಿ ದಾಖಲಿರುವ ಸೋಂಕಿತರಿಗೆ ಉಸಿರಾಟ ತೊಂದರೆ ಉಂಟಾದರೆ ತಕ್ಷಣ ಅವರ ಸಹಾಯಕ್ಕೆ ನೆರವಾಗಲು ಆಕ್ಸಿಜನ್ ಕಾನ್ಸನ್‍ಟ್ರೇಟರ್ …

Read More »

6 ರಾಜ್ಯಗಳಿಗೆ 24 ಗಂಟೆಗಳಲ್ಲಿ 969 ಟನ್ ಆಕ್ಸಿಜನ್‌ ಸಾಗಿಸಿದ ರೈಲ್ವೆ ಇಲಾಖೆ

ನವದೆಹಲಿ: “ಪ್ರತಿಕೂಲ ಹವಾಮಾನದ ಮಧ್ಯೆಯೂ 12 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲುಗಳು 24 ಗಂಟೆಗಳ ಅವಧಿಯೊಳಗೆ 6 ರಾಜ್ಯಗಳಿಗೆ 969 ಟನ್ ದ್ರವ ವೈದ್ಯಕೀಯ ಆಕ್ಸಿಜನ್‌ ಅನ್ನು ಸಾಗಿಸಿವೆ” ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಮೂರು ರೈಲುಗಳು ತಮಿಳುನಾಡಿಗೆ ತಲುಪಿದರೆ, ನಾಲ್ಕು ಆಂಧ್ರಪ್ರದೇಶಕ್ಕೆ, ತಲಾ ಒಂದೊಂದು ರೈಲುಗಳು ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ ಹಾಗೂ ಕೇರಳಕ್ಕೆ ತಲುಪಿವೆ. “ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನಿಂದ ಈ ರೈಲುಗಳು ಆಕ್ಸಿಜನ್‌ ಸಂಗ್ರಹಿಸಿಕೊಂಡು …

Read More »

SBI ವಾಹಿವಾಟುಗಳಿಗೆ ಹೊಸ ನಿಯಮ; ಜುಲೈ 1ರಿಂದ ಜಾರಿ

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಶಾಖೆಗಳು ಮತ್ತು ಎಟಿಎಂಗಳಿಂದ ಹಣ ಹಿಂಪಡೆಯುವುದು, ಚೆಕ್ ಬುಕ್ ಶುಲ್ಕ, ಹಣ ವರ್ಗಾವಣೆ ಮತ್ತು ಹಣಕಾಸೇತರ ವಹಿವಾಟುಗಳಿಗೆ ನಿಯಮಗಳು ಮತ್ತು ಕಟ್ಟುಪಾಡುಗಳನ್ನು ಬದಲಾಯಿಸಿದೆ. ಎಸ್ಬಿಐನ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಖಾತೆದಾರರಿಗೆ ಅನ್ವಯವಾಗುವ ಈ ನಿಯಮಗಳು 2021ರ ಜುಲೈ 1ರಿಂದ ಜಾರಿಗೆ ಬರಲಿವೆ. ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್ಬಿಡಿ) ಖಾತೆಯು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ. …

Read More »

ಬಾಬಾ ರಾಮ್‍ದೇವ್ ಅವರಿಗೆ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದ ಐಎಂಎ

ನವದೆಹಲಿ: ಅಲೋಪತಿ ಔಷಧಿ ಕುರಿತು ಯೋಗ ಗುರು ಬಾಬಾ ರಾಮ್‍ದೇವ್ ನೀಡಿದ ಹೇಳಿಕೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಉತ್ತರಾಖಂಡ್ ವಿಭಾಗ ಬರೋಬ್ಬರಿ 1000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದೆ. ಬಾಬಾ ರಾಮ್‍ದೇವ್ ಅವರು ತಮ್ಮ ಹೇಳಿಕೆ ಕುರಿತು ವೀಡಿಯೋ ಪೋಸ್ಟ್ ಮಾಡಬೇಕು ಹಾಗೂ 15 ದಿನಗಳೊಳಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು.  ಇಲ್ಲವಾದಲ್ಲಿ 1000 ಕೋಟಿ ರೂ.ಗಳನ್ನು ಬೇಡಿಕೆ ಇಡುತ್ತೇವೆ ಎಂದು ಐಎಂಎ ನೋಟಿಸ್‍ನಲ್ಲಿ ಬರೆಯಲಾಗಿದೆ. ಅಲ್ಲದೆ ಐಎಂಎ …

Read More »