Breaking News

ಜಿಲ್ಲೆ

ಚಿನ್ನ ಕಳವು ಮಾಡಿದವನೂ, ಅದನ್ನು ಖರೀದಿವನೂ, ಅರೆಸ್ಟ್….

ಬೆಳಗಾವಿ- ಖಾನಾಪೂರ ಪೋಲೀಸರು ವಿಶೇಷ ಕಾರ್ಯಾಚರಣೆಯ ಮೂಲಕ ಚಿನ್ನ ಕಳ್ಳತನ ಮಾಡಿದವನನ್ನು,ಜೊತೆಗೆ ಕಳವು ಮಾಡಿದ ಚಿನ್ನವನ್ನು ಖರೀಧಿ ಮಾಡಿದ ಜ್ಯುವಲರಿ ವ್ಯಾಪಾರಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಚಿನ್ನದ ಆಭರಣ ಕದ್ದು ಅದನ್ನು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಅವನ ಬಳಿಯಿದ್ದ 26,5300 ಮೌಲ್ಯದ ಚಿನ್ನಾಭರಣಗಳು ವಶಪಡಿಸಿಕೊಂಡಿದ್ದಾರೆ ಕಳ್ಳತನ ಆರೋಪಿಗೆ ಸಹಾಯ ಮಾಡಿದ್ದ ಕಳುವಾದ ಚಿನ್ನವನ್ನು ಖರೀಧಿ ಮಾಡಿದ್ದ ಜ್ಯುವೆಲರಿ ಶಾಪ್ ಮಾಲೀಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳಗಾವಿಯ ವಡಗಾಂವ ಗಲ್ಲಿಯ …

Read More »

ಬಿಎಸ್‍ವೈ ಸಂಪುಟದಲ್ಲಿ 7 ಮಂತ್ರಿ ಸ್ಥಾನಗಳು ಖಾಲಿಯಿದ್ದು, 2 ಡಜನ್‍ಗೂ ಅಧಿಕ ಶಾಸಕರು ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಬೆಂಗಳೂರು,ನ.10- ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಆರ್ ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಯಾವುದೇ ಸಂದರ್ಭದಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದೆ. ದೆಹಲಿ ವರಿಷ್ಠರು ಅನುಮತಿ ಕೊಟ್ಟರೆ ದೀಪಾವಳಿ ಹಬ್ಬದ ನಂತರ ಯಾವುದೇ ವೇಳೆಯೂ ಸಂಪುಟ ವಿಸ್ತರಣೆಗೆ ಮುಹೂರ್ತ ಯಾವುದೇ ವೇಳೆಯಲ್ಲಿ ನಿಗದಿಯಾಗಲಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಸದ್ಯ ಬಿಎಸ್‍ವೈ ಸಂಪುಟದಲ್ಲಿ 7 ಮಂತ್ರಿ ಸ್ಥಾನಗಳು ಖಾಲಿಯಿದ್ದು, 2 ಡಜನ್‍ಗೂ ಅಧಿಕ ಶಾಸಕರು ಮಂತ್ರಿ …

Read More »

ನಾಯಕತ್ವ ಬದಲಾವಣೆ ಎಂಬ ವದಂತಿಗೆ ಪೂರ್ಣ ವಿರಾಮ ಬಿದ್ದಿದ್ದು, ಬಿಎಸ್‍ವೈ 2023ರವರೆಗೂ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಸಂಶಯವೇ ಇಲ್ಲ

ಬೆಂಗಳೂರು,ನ.10- ಭಾರೀ ಹಣಾಹಣಿಯಿಂದ ಕೂಡಿದ್ದ ರಾಜ್ಯದ ಎರಡು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುರ್ಚಿ ಇನ್ನಷ್ಟು ಸುಭದ್ರ ಮಾಡಿದೆ. ಒಂದು ವೇಳೆ ಅಪ್ಪಿತಪ್ಪಿಯೂ ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ್ದರೆ ಸಿಎಂ ಬಿಎಸ್‍ವೈ ಕುರ್ಚಿಗೆ ನಿಸ್ಸಂದೇಹವಾಗಿ ಕಂಟಕ ಎದುರಾಗುತ್ತಿತ್ತು.ಕುರಿ ಹಳ್ಳಕ್ಕೆ ಬಿದ್ದಾಗಲೇ ಹಾಳಿಗೊಂದು ಕಲ್ಲು ಎಂಬಂತೆ ಸೋಲಿನ ಹೊಣೆಯನ್ನು ಯಡಿಯೂರಪ್ಪನವರಿಗೆ ಕಟ್ಟಿ ನಾಯಕತ್ವ ಬದಲಾವಣೆಯಾಗಬೇಕೆಂಬ ಕೂಗಿಗೆ ಬಲ …

Read More »

ಸಚಿವ ಜಗದೀಶ್ ಶೆಟ್ಟರ್ ಪುತ್ರನ ಕಾರು ಅಪಘಾತ

ದಾವಣಗೆರೆ: ಸಚಿವ ಜಗದೀಶ್ ಶೆಟ್ಟರ್ ಪುತ್ರನ ಕಾರು ಅಪಘಾತಕ್ಕೀಡಾದ ಘಟನೆ ದಾವಣಗೆರೆ ನಗರದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಘಟನೆಯಲ್ಲಿ ಪ್ರಶಾಂತ್ ಶೆಟ್ಟರ್ ಹಾಗೂ ಅವರ ಪತ್ನಿ ಅಂಚಲ್ ಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಹೈಟೆಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಡಿವೈಡರ್ ಬಳಿ ಲಾರಿ ಹಾಗೂ ಲ್ಯಾಂಡ್ ರೋವರ್ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಶೆಟ್ಟರ್ ಪುತ್ರ ಇಂದು ದಾವಣಗೆರೆಯಿಂದ ಹುಬ್ಬಳ್ಳಿ ನಿವಾಸಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ …

Read More »

ಕಾಂಂಗ್ರೆಸ್ ಕಾಮಿಡಿಯನ್ ಸಿದ್ದರಾಮಯ್ಯ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.:bjp

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರತ್ನ ಜಯಗಳಿಸಿದ ಬೆನ್ನಲ್ಲೇ ಬಿಜೆಪಿ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಕಾಲೆಳೆದಿದೆ. ಪ್ರಚಾರದ ಸಮಯದಲ್ಲಿ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಲೆಯೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆಇಂದು ತಿರುಗೇಟು ನೀಡಿದ ಬಿಜೆಪಿ, ಅಯ್ಯೋ ಸಿದ್ದರಾಮಯ್ಯನವರೇ ಆರ್. ಆರ್ ನಗರದಲ್ಲಿ ಕಾಂಗ್ರೆಸ್ಸ್ ಪಕ್ಷವೇ ಇಲ್ಲವಲ್ಲ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕವಾಗಿ ವಂಗ್ಯವಾಡಿದೆ. ಟ್ವೀಟ್‍ನಲ್ಲಿ ಏನಿದೆ? ಸಿದ್ದರಾಮಯ್ಯ: ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯ ಅಲೆಯೇ …

Read More »

ಅಶೋಕ್ ಗಸ್ತಿ ನಿಧನದಿಂದ ತೆರವಾದ ರಾಜ್ಯಸಭೆ ಸ್ಥಾನಕ್ಕೆ ಡಿ.1ರಂದು ಉಪಚುನಾವಣೆ

ಬೆಂಗಳೂರು,ನ.10-ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಡಿಸೆಂಬರ್ 1ರಂದು ಉಪಚುನಾವಣೆ ನಡೆಯಲಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ(ಪ್ರ) ಹಾಗೂ ಉಪಚುನಾವಣೆ ಅಧಿಕಾರಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ನವೆಂಬರ್ 18ರವರೆಗೂ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ನವೆಂಬರ್ 19ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ನವೆಂಬರ್ 23ರವರೆಗೆ ಕಾಲಾವಕಾಶವಿದೆ.

Read More »

ಬರೀ ಕಣ್ಣೀರು ಹಾಕಿದರೆ ಮತದಾರರು ಕರಗುವುದಿಲ್ಲ: ಕುಸುಮಾಗೆ ಟಾಂಗ್

ಬೆಂಗಳೂರು: ಬರೀ ಕಣ್ಣೀರು ಹಾಕಿದರೆ ಮತದಾರರು ಕರಗುವುದಿಲ್ಲ ಎಂದು ಉಪಚುನಾವಣಾ ಫಲಿತಾಂಶದಲ್ಲಿ ಜಯಗಳಿಸಿರುವ ಮುನಿರತ್ನ ಅವರು ಕಾಂಗ್ರೆಸ್ಸಿನ ಕುಸುಮಾಗೆ ಟಾಂಗ್ ನೀಡಿದ್ದಾರೆ. ಗೆಲುವು ಸಾಧಿಸಿರುವ ಮುನಿರತ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ರಾಜರಾಜೇಶ್ವರಿ ನಗರದ ಮತದಾರರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿ, ಸತ್ಯ ಮಾತಾಡಿ. ಕೊನೆಯ ಕ್ಷಣದಲ್ಲಿ ನಾನು ಬಳಸದೇ ಇರುವ ಪದವನ್ನು ಬಳಸಿದ್ದೇನೆ ಅಂತ ಕಣ್ಣೀರು ಹಾಕಿದ್ದೀರಲ್ವ ಅದಕ್ಕಿಂತ ದೊಡ್ಡ ತಪ್ಪು ಇನ್ಯಾವುದೂ ಇಲ್ಲ. ಇನ್ನು …

Read More »

ಲೈಟ್ ಕಂಬದ ವಿಚಾರಕ್ಕೆ ಜಗಳ – ನಾದಿನಿಗೆ ಹಿಗ್ಗಾಮುಗ್ಗ ಥಳಿಸಿದ ಬಾವ

ಕೋಲಾರ: ಕ್ಷುಲ್ಲುಕ ಕಾರಣಕ್ಕೆ ಉಂಟಾದ ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ತಮ್ಮನ ಹೆಂಡತಿಯನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಲ್ಲುಕುಂಟೆ ಗ್ರಾಮದಲ್ಲಿ ನಡೆದಿದೆ.ಮನೆ ಬಳಿ ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಬಾವನೊಂದಿಗೆ ಜಗಳ ಕಿತ್ತ ನಾದಿನಿ, ಮೊದಲಿಗೆ ಬಾವನಿಗೆ ಪೊರಕೆ ಸೇವೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಹೆಚ್ಚಾದಾಗ ಜಗಳ ಬಿಡಿಸುವ ನೆಪದಲ್ಲಿ ಬಂದ ಬಾವನ ಮಗನೂ ಕೂಡ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. …

Read More »

ವೀರಶೈವ ಮಹಾಸಭಾ ಯುವ ಘಟಕಕ್ಕೆ ಸುರೇಶ ಅಂಗಡಿ ಅಣ್ಣನ ಮಗ

ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಮೋಹನ ಅಂಗಡಿ ಅವರ ಪುತ್ರ ಚೇತನ ಅಂಗಡಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ವೀರಶೈವ ಬಾಂಧವರನ್ನು ಅದರಲ್ಲೂ ಮುಖ್ಯವಾಗಿ ಸಮಾಜದ ಯುವ ಪೀಳಿಗೆಯನ್ನು ಒಗ್ಗೂಡಿಸುವುದು, ಅವರಿಗೆ …

Read More »

ಭಾರತೀಯ ಜನತಾಪಾರ್ಟಿ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿದೆ.

ಬೆಳಗಾವಿ – ಭಾರತೀಯ ಜನತಾಪಾರ್ಟಿ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿದೆ. ಅಂದು ಇಡೀ ದಿನ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರತಿ 3 ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆ ನಡೆಯಬೇಕು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಸಭೆ ನಡೆದಿರಲಿಲ್ಲ. ಕಳೆದ ವಾರ ಮಂಗಳೂರಿನಲ್ಲಿ ಸಭೆ ನಡೆದಿತ್ತು. ಬೆಳಗಾವಿ ಲೋಕಸಭಾ ಉಪಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕಾರಿಣಿ ಬೆಳಗಾವಿಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಲೋಕಸಭಾ ಚುನಾವಣೆ ಪೂರ್ವತಯಾರಿಯ ಭಾಗವಾಗಿ …

Read More »