Breaking News

ಜಿಲ್ಲೆ

ರಾಜ್ಯದಲ್ಲಿ 1,781 ಮಂದಿಗೆ ಸೋಂಕು 17 ಮಂದಿ ಮೃತ

ಬೆಂಗಳೂರು:  ರಾಜ್ಯದಲ್ಲಿ 1,781 ಮಂದಿಗೆ ಸೋಂಕು ತಗುಲಿದ್ದು, 2,181 ಜನ ಆಸ್ಪ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 8,69,561ಕ್ಕೆ ಏರಿಕೆಯಾಗಿದೆ. ಈ ಪೈಕಿ 8,33,169 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,752 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,621 ಮಂದಿ ಸೋಂಕಿಗೆ ಮೃತಪಟ್ಟಿದ್ದು, 539 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

ರಾಜ್ಯದಲ್ಲಿ ಫ್ಲ್ಯಾಟ್ ಕೊಳ್ಳುವವರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ.

ಬೆಂಗಳೂರು – ರಾಜ್ಯದಲ್ಲಿ ಫ್ಲ್ಯಾಟ್ ಕೊಳ್ಳುವವರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ. ಕರ್ನಾಟಕ ಸ್ಟ್ಯಾಂಪ್ ಆ್ಯಕ್ಟ್ ಗೆ ತಿದ್ದುಪಡಿ ತರುವ ಮೂಲಕ ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಫ್ಲ್ಯಾಟ್ ಕೊಳ್ಳುವುದಕ್ಕೆ ಇರುವ ಸ್ಟ್ಯಾಂಪ್ ಡ್ಯೂಟಿಯನ್ನು ಗಣನೀಯವಾಗಿ ಇಳಿಸಿದೆ. ಈ ಕುರಿತು ಗುರುವಾರ ರಾಜ್ಯಪತ್ರ ಪ್ರಕಟವಾಗಿದೆ. 5 ಲಕ್ಷ ರೂ.ವರೆಗಿನ ಫ್ಲ್ಯಾಟ್ ಖರೀದಿಸುವವರಿಗೆ ಈವರೆಗೆ ಇದ್ದ ಶೇ.6ರ ಸ್ಟ್ಯಾಂಪ್ ಡ್ಯೂಟಿಯನ್ನು ಶೇ.2ಕ್ಕೆ ಇಳಿಸಲಾಗಿದೆ. 25 ಲಕ್ಷ ರೂ.ಗಳಿಂದ 35 ಲಕ್ಷ ರೂ.ಗಳವರೆಗಿನ …

Read More »

ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಕಳೆದ ವರ್ಷ ಪ್ರವಾಹ ಹಾಗೂ ಮಳೆಯಿಂದ ಹಾನಿಗೀಡಾಗಿರುವ ಸಂತ್ರಸ್ತರ ಕುಟುಂಬಗಳಿಗೆ 15 ದಿನಗಳೊಳಗಾಗಿ ವಸತಿ ಸೌಕರ್ಯ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಅವರು, ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಹೇಳಿದರು. 2019 ರ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರವಾಹ …

Read More »

ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ವಿಚಾರವಾಗಿ ಸಭೆ

ಬೆಂಗಳೂರು: ಇಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ವಿಚಾರವಾಗಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಸರ್ಕಾರದ ತೀರ್ಮಾನಕ್ಕೆ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆಯೇ ಇದರ ವಿರುದ್ಧ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್ ಮಾಡುವುದಾಗಿ ಕನ್ನಡ ಪರ ಸಂಘಟನೆಗಳು ಹೇಳಿಕೊಂಡಿದ್ದವು. ಈ ವಿಚಾರವಾಗಿ ಇಂದು ಸಭೆ ನಡೆಸಿದ್ದು, ಈ ಸಭೆಯಲ್ಲಿ …

Read More »

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯು ಚುನಾವಣೆಗೆ ಮಾಡಿರುವ ತಂತ್ರ: ಸತೀಶ್ ಜಾರಕಿ ಹೊಳಿ

ಗೋಕಾಕ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯು ಚುನಾವಣೆಗೆ ಮಾಡಿರುವ ತಂತ್ರವಾಗಿದೆ. ನಿಗಮ, ಪ್ರಾಧಿಕಾರ ಸ್ಥಾಪನೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಬೇಕು. ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ಭಾರತದಲ್ಲಿ 5 ರಿಂದ ಆರು ಸಾವಿರ ಜಾತಿಗಳಿವೆ ಎಲ್ಲಾ ಜಾತಿಗಳಿಗೆ ಬಿಜೆಪಿಯು ನಿಗಮ ಪ್ರಾಧಿಕಾರ ಮಾಡುವ ಮುಖಾಂತರ ಪ್ರಜಾಪ್ರಭುತ್ವ ವಿರೋಧಿ ಕೆಲಸವನ್ನು ಮಾಡಲು ಹೊರಟಿದೆ ಎಂದು ಶಾಸಕ, ಕೆಪಿಸಿಸಿ …

Read More »

ಸರಕಾರದ ನಿರ್ಧಾರ ಖಂಡಿಸಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್‍ಗೆ ಕರೆ

ಬೆಂಗಳೂರು : ಮರಾಠ ಅಭಿವೃಧಿ ಪ್ರಾಧಿಕಾರ ರಚನೆ ಖಂಡಿಸಿ ಇಂದು ವಾಟಲ್ ನಾಗರಾಜ್ ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರಕಾರದ ನಿರ್ಧಾರವನ್ನು ಖಂಡಿಸಿ ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿ ಬೆಂಬಲ ಸೂಚಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವಿರೋಧ ವ್ಯಕ್ತವಾಗುತ್ತಿದ್ದು, ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಈ ಹಿಂದೆ …

Read More »

ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸುತ್ತಿದ್ದ ಆರು ಮಂದಿಯನ್ನು ಭಾರತೀನಗರ ಪೊಲೀಸರು ಬಂಧಿಸಿ 5.83 ಲಕ್ಷ ಹಣವನ್ನು ವಶ

ಬೆಂಗಳೂರು,:- ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸುತ್ತಿದ್ದ ಆರು ಮಂದಿಯನ್ನು ಭಾರತೀನಗರ ಪೊಲೀಸರು ಬಂಧಿಸಿ 5.83 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸಾಹೀಲ್ ಅಹಮ್ಮದ್(25), ಸಯ್ಯದ್ ಸುಹೇಲ್(25), ಸಯ್ಯದ್ ಜವಾದ್(20), ಮಹಮದ್ ಸಾಲ್ಹೆ ಅಲಿ ಅಪೀಸ್(20), ಮಹಮದ್ ಶಾಬಾಜ್(24) ಮತ್ತು ಸಯ್ಯದ್ ರವೂಪ್(19) ಬಂಧಿತರು. ಆರೋಪಿಗಳು ಎಕೆಝೆಡ್ ಸೀಫುಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ವೇಳೆ ಸಂಚು ರೂಪಿಸಿ ದರೋಡೆ ನಡೆಸಿ, ನಂತರ ಅವರೇ ಠಾಣೆಗೆ ಬಂದು ದೂರು ನೀಡುತ್ತಿದ್ದರು ನವೆಂಬರ್ 9 …

Read More »

ರಸ್ತೆ ಮಧ್ಯೆ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಮಾನ್ವಿ ಠಾಣೆ ಪೊಲೀಸರು ಭೇದಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಓಮಿನಿ ವಾಹನವನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಮಾನ್ವಿ ಠಾಣೆ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ರಾಯಚೂರು ಮಾನ್ವಿ ಮಧ್ಯೆ ರಸ್ತೆಯಲ್ಲಿ ಓಮಿನಿ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದ ಶೇಕ್ ಅಬ್ದುಲ್, ಗುರುಕುಮಾರ್, ಸೈಯದ್ ಹಕೀಂ ,ಅಸ್ಲಾಂ ಷಾ ಹಾಗೂ ದರೋಡೆಗೆ ಸಾಥ್ ನೀಡಿದ್ದ ಓಮಿನಿ ಚಾಲಕ ಗುರುರಾಜನನ್ನ ಬಂಧಿಸಲಾಗಿದೆ ನಾಲ್ಕು ಜನರ ತಂಡ ವಾಹನವನ್ನ ಅಡ್ಡಗಟ್ಟಿ 5 ಲಕ್ಷ …

Read More »

ಡಿಸೆಂಬರ್ 10ರ ವರೆಗೆ ಬಸ್‍ಗಳಲ್ಲಿ ವಿದ್ಯಾರ್ಥಿಗಳು ಸಂಚರಿಸಬಹುದಾಗಿದೆ.

ಬೆಂಗಳೂರು: ವಿದ್ಯಾರ್ಥಿಗಳು ಕಾಲೇಜಿಗೆ ಸಂಚರಿಸಲು ಅನುಕೂಲವಾಗುವಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದ್ದು, 2019-20ನೇ ಸಾಲಿನಲ್ಲಿ ವಿತರಿಸಲಾಗಿರುವ ಬಸ್ ಪಾಸ್ ಬಳಸಿ ಡಿಸೆಂಬರ್ 10ರ ವರೆಗೆ ಸಂಚರಿಸಲು ಅವಕಾಶ ನೀಡಿದೆ. ಈ ಕುರಿತು ಸಾರಿಗೆ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನವೆಂಬರ್ 17ರಿಂದ ರಾಜ್ಯದ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು, ಪದವಿ, ವೂದ್ಯಕೀಯ, ತಾಂತ್ರಿಕ, ಡಿಪ್ಲೋಮಾ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿದೆ. …

Read More »

B.S.Y.ಮಾಧ್ಯಮ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಮಹದೇವ ಪ್ರಕಾಶ್ ಅವರು ಮಾಧ್ಯಮ ಸಲಹೆಗಾರರಾಗಿ ಕಳೆದ ಒಂದು ವರ್ಷದಿಂದ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ನನ್ನ ವೈಯಕ್ತಿಕ ಕಾರಣಗಳಿಂದ ಮಾಧ್ಯಮ ಸಲಹೆಗಾರರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.ಮೂಲಗಳ ಪ್ರಕಾರ ಇತ್ತೀಚಿಗೆ ಮಹಾದೇವ ಪ್ರಕಾಶ್ ಕಾರ್ಯವೈಖರಿಗೆ, ಯಡಿಯೂರಪ್ಪ ಅವರು …

Read More »