Breaking News

ಜಿಲ್ಲೆ

ಎತ್ತಿನಹೊಳೆ ಯೋಜನೆಗೆ ₹ 7,721 ಕೋಟಿ ವೆಚ್ಚ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 2020ರ ಡಿಸೆಂಬರ್‌ ಅಂತ್ಯದವರೆಗೆ ₹ 7,721.65 ಕೋಟಿ ವೆಚ್ಚ ಮಾಡಲಾಗಿದೆ ಎಂದು ಗೃಹ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಗುರುವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವರ ಪರವಾಗಿ ಉತ್ತರ ನೀಡಿದ ಅವರು, ‘2023ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಕೆಲವು ಸ್ಥಳಗಳಲ್ಲಿ ರೈತರ ಅಸಹಕಾರದಿಂದ ಭೂಸ್ವಾಧೀನ ಪ್ರಕ್ರಿಯೆ …

Read More »

ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ ಆಗುತ್ತೇನೆ: ಬಸವರಾಜ ಹೊರಟ್ಟಿ

ಬೆಂಗಳೂರು: ನಾನೇ ಬಹುತೇಕ ಸಭಾಪತಿ ಅಭ್ಯರ್ಥಿ ಆಗುತ್ತೇನೆ. ನಮ್ಮ ಪಕ್ಷ ತೀರ್ಮಾನ ಮಾಡಿದೆ ಎಂದು ಜೆಡಿಎಸ್‌ನ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ವಿಧಾನಪರಿಷತ್ ಕಲಾಪ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಫೆ. 8ರಿಂದ 19ರವರೆಗೆ ಮೂರು ದಿನಗಳ ಕಾಲ ವಿಧಾನಪರಿಷತ್ ಕಲಾಪ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕಾರ್ಯಕಲಾಪ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿದೆ. ಜೊತೆಗೆ ಸಭಾಪತಿ ಚುನಾವಣೆ ಪ್ರಕ್ರಿಯೆ ಕೂಡ ನಡೆಯಬೇಕಿದೆ. …

Read More »

ಉಪಚುನಾವಣೆಯಲ್ಲೂ ಗೆಲುವು ನಮ್ಮದೇ : ಮತ್ತೊಮ್ಮೆ ಚಾಲೆಂಜ್ ಹಾಕಿದ ಸಿಎಂ

ಬೆಂಗಳೂರು,ಫೆ.5- ಬೆಂಗೂರು,ಫೆ.5- ಮುಂಬರುವ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ. ಇದನ್ನು ಇದಂದೇ ಬರೆದಿಟ್ಟುಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು. ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದೇ ಗೆಲ್ಲುತ್ತದೆ. ಯಾವುದೇ ಕಾರಣಕ್ಕೂ ಕಾಂಗ್ರೆಸಿಗರು ಗೆಲ್ಲುವುದಿಲ್ಲ. ಇದನ್ನು ಈ ಸದನದಲ್ಲಿ ನಾನು ಹೇಳುತ್ತೇನೆ ಎಂದರು. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಮುಂದೆ ಯಾವ ಚುನಾವಣೆಯನ್ನು …

Read More »

k.p.c.c. ಸಾಮಾಜಿಕ ಜಾಲತಾಣ ಮುಖ್ಯಸ್ಥರಾಗಿ ಬಿ.ಆರ್.ನಾಯ್ಡು ನೇಮಕ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಯುವ ಮುಖಂಡ ಬಿ.ಆರ್.ನಾಯ್ಡು ನೇಮಕಗೊಂಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಕರ್ನಾಟಕ ರಾಜ್ಯದ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಬಿ.ಆರ್.ನಾಯ್ಡು ಅವರಿಗೆ ವಹಿಸಿದ್ದಾರೆ. ಈ ವರೆಗೆ ನಟರಾಜ ಗೌಡ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಇದೀಗ ಇವರನ್ನು ನೇಮಕ ಮಾಡಲಾಗಿದೆ.

Read More »

ಅಸೆಂಬ್ಲಿ ನಡೆಸೋದು ಬೇಡ ನಡೀರಿ, ಎಲ್ಲರೂ ಪಿಕ್‍ನಿಕ್‍ಗೆ ಹೋಗೋಣ: ಸಿದ್ದರಾಮಯ್ಯ

ಬೆಂಗಳೂರು: ಕಲಾಪ ನಡೆಸೋದು ಬೇಡ ನಡೀರಿ, ಎಲ್ಲರೂ ಪಿಕ್‍ನಿಕ್‍ಗೆ ಹೋಗೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನಸಭಾ ಕಲಾಪದ ಸಂದರ್ಭದಲ್ಲಿ ಸಚಿವರು ಹಾಗೂ ಅಧಿಕಾರಿಗಳು ಗೈರಾಗಿದ್ದರು. ಇದರಿಂದ ಗರಂ ಆದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೀತಿದೆ. ಇಂತಹ ಸಂದರ್ಭದಲ್ಲಿ ಸಚಿವರು, ಅಧಿಕಾರಿಗಳು ಇರಬೇಕು. ಇವರು ಇಲ್ಲದೆ ಚರ್ಚೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಹೀಗಂದ ಕೂಡಲೇ ಡಿಸಿಎಂ ಗೋವಿಂದ ಕಾರಜೋಳ ಎದ್ದು ನಿಂತು …

Read More »

ದೆಹಲಿ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಪೂಜಾರಿ ಒತ್ತಾಯ

ಗೋಕಾಕ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ರಾಜಕೀಯದ ಬಣ್ಣಕೊಡುತ್ತಿರುವುದು ದುರ್ದೈವದ ಸಂಗತಿ ಎಂದು ಜೆ‌ಡಿಎಸ್ ಮುಖಂಡ ಅಶೋಕ ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಯಾವುದೇ ಪ್ರತಿಭಟನೆಗಳಲ್ಲಿ ನಡೆಯುವ ಹಿಂಸಾಕೃತ್ಯಗಳು ಅಕ್ಷಮ್ಯ ಮತ್ತು ಖಂಡನೀಯ. ದೆಹಲಿಯಲ್ಲಿ ಜ.26 ರಂದು ರೈತರ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಕಾಣದ ಕೈಗಳು ದುಷ್ಕೃತ್ಯ ನಡೆಸಿವೆ ಎಂಬ ಅನುಮಾನ ಕಂಡುಬರುತ್ತಿದೆ. …

Read More »

ಕೋರ್ಟ್ ಆವರಣದಲ್ಲಿ ಸಾಹಿತಿ ಕೆ.ಎಸ್ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

ಬೆಂಗಳೂರು, : ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆನ್ನಲಾದ ಚಿಂತಕ, ಹಿರಿಯ ಸಾಹಿತಿ ಕೆ.ಎಸ್ ಭಗವಾನ್ ಅವರ ಮುಖಕ್ಕೆ ಬಿಜೆಪಿ ಕಾರ್ಯಕರ್ತೆ, ವಕೀಲೆಯೊಬ್ಬರು ಮಸಿ ಬಳಿದ ಘಟನೆ ನಗರದ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಇಂದು ಮದ್ಯಾಹ್ನ ನಡೆದಿದೆ. ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದು, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಈ ಕೃತ್ಯ ಎಸಗಲಾಗಿದೆ ಎಂದು …

Read More »

ಮಹಿಳೆಗೆ ಚೂಡಾಯಿಸಿದ ಆರೋಪ ಮರಕ್ಕೆ ಕಟ್ಟಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ.

ಗೋಕಾಕ ಬ್ರೇಕಿಂಗ್   ಸಂಗನಕೇರಿ ಗ್ರಾಮದ ಗೋಕಾಕ್ ರಸ್ತೆಯಲ್ಲಿ ನಡೆದಿರುವ ಘಟನೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮ ಹನುಮಂತ ಹಿರೇಮಠ ಎಂಬ ಯುವಕನನ್ನು ತೆಂಗಿನ ಮರಕ್ಕೆ ಕಟ್ಟಿ ಥಳಿತ *ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಚೂಡಾಯಿಸಿದ ಆರೋಪ *ತೆಂಗಿನಮರಕ್ಕೆ ಯುವಕನ ಕಟ್ಟಿ ಥಳಿಸುತ್ತಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ   *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ …

Read More »

ಶಿವಳ್ಳಿ ಗ್ರಾಮ ಪಂಚಾಯತಿ “ಕೈ” ಪಾಲು..!

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿದಂತಾಗಿದೆ.           ಶಿವಳ್ಳಿ ಗ್ರಾಮದ ಮೂರನೇಯ ವಾರ್ಡಿನಲ್ಲಿ ಜಯ ಗಳಿಸಿದ ವಿಜಯಮಹಾಂತೇಶ ಶಿವಲಿಂಗಯ್ಯ ವಸ್ತ್ರದ ಅವರು ಅಧ್ಯಕ್ಷರಾಗಿಯೂ, ಉಪಾಧ್ಯಕ್ಷರಾಗಿ ಶಂಕರೆವ್ವ ಈಶ್ವರಪ್ಪ ಸಣ್ಣಮುದ್ದಿಯವರು ಅವಿರೋಧವಾಗಿ ಆಯ್ಕೆಯಾದರು.   ಶಿವಳ್ಳಿ ಪಂಚಾಯತಿಯಲ್ಲಿ ಒಟ್ಟು ಒಂಬತ್ತು ಸದಸ್ಯರ ಬಲ ಹೊಂದಿದ್ದು, ಅತೀ ಹೆಚ್ಚು ಸದಸ್ಯರು …

Read More »

ಮಾಜಿ ಸಚಿವ ವಿನಯ ಕುಲಕರ್ಣಿ-ಚಂದ್ರಶೇಖರ ಇಂಡಿ ನ್ಯಾಯಾಂಗ ಬಂಧನ ವಿಸ್ತರಣೆ..!

ಧಾರವಾಡ: ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಮಾವನವರಾದ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನವನ್ನ ಮತ್ತೆ ಹದಿನಾಲ್ಕು ದಿನಗಳವರೆಗೆ ಮುಂದೂಡಿ ಆದೇಶ ಮಾಡಲಾಗಿದೆ. ನವೆಂಬರ್ 5ರಂದು ಬಂಧನವಾಗಿರುವ ವಿನಯ ಕುಲಕರ್ಣಿ ಹಾಗೂ ಕೆಲವು ದಿನಗಳ ಹಿಂದೆ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಚಂದ್ರಶೇಖರ ಇಂಡಿಯವರನ್ನ ಕಾರಾಗೃಹದಲ್ಲಿ ಇಡಲಾಗಿದ್ದು, ಇಂದು ಮತ್ತೆ 14 ದಿನದ ನ್ಯಾಯಾಂಗ ಬಂಧನವನ್ನ …

Read More »