ಬೆಳಗಾವಿ: ಕೋಬ್ರಾ ಬಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್ಪಿಎಫ್ನ ವೀರ ಯೋಧ ಮೌಲಾಹುಸೇನ್ ಕಲೇಬಾಯಿ(40) ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. ಮೂಲತಃ ಗದಗ ತಾಲೂಕಿನ ಹೊಂಬಳ ಗ್ರಾಮದವರಾದ ಯೋಧ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ನಿನ್ನೆ ಸೇನಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನ ಅಗಲಿದ್ದಾರೆ. ಇಂದೇ ಹೊಂಬಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
Read More »ಪ್ರತಿಭಾನ್ವಿತ ಕ್ರೀಡಾಪಟುಗಳಾಗಿದ್ದವರಿಗೆ ಇನ್ಮುಂದೆ ಪೊಲೀಸ್ ನೇಮಕಾತಿಯಲ್ಲಿ ಕೋಟಾ.!
ಬೆಂಗಳೂರು:ಹೌದು ರಾಜ್ಯ ಸರಕಾರವು ಕರ್ನಾಟಕದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪೊಲೀಸ್ ಪಡೆ ನೇಮಕಾತಿಯಲ್ಲಿ ಶೇಕಡಾ ಎರಡು ಕೋಟಾ ನೀಡಲಾಗುವುದು ಎಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ವಿಶೇಷ ನಿಯಮಗಳನ್ನು ಕಳೆದ ವರ್ಷ ರೂಪಿಸಲಾಯಿತು ಮತ್ತು ಅಂತಿಮವಾಗಿ ಮಾರ್ಚ್ 3 ರಂದು ರಾಜ್ಯ ಗೆಜೆಟ್‌ನಲ್ಲಿ ತಿಳಿಸಲಾಯಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕೆಎಸ್‌ಆರ್‌ಪಿ) ಅಲೋಕ್ ಕುಮಾರ್ ಅವರು, ‘ಪೊಲೀಸ್ …
Read More »ಸಿಎಂಗೆ ಜಲ ಸಂಪನ್ಮೂಲ ಇಲಾಖೆ ತಮಗೇ ಬೇಕಿತ್ತು, ಹೀಗಾಗಿ ಜಾರಕಿಹೊಳಿಯನ್ನು ಸಿಲುಕಿಸಲಾಗಿದೆ: ಯತ್ನಾಳ್
ವಿಜಯಪುರ (ಮಾರ್ಚ್ 21)- ರಾಜ್ಯದಲ್ಲಿ ನಡೆದಿರುವ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಅವರು, “ಸಿಎಂ ಗೆ ಜಲ ಸಂಪನ್ಮೂಲ, ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ತಮ್ಮಲ್ಲಿಯೇ ಉಳಿಯಬೇಕಾಗಿದೆ. ಮಾರ್ಚ್ ಕೊನೆಯಲ್ಲಿ ಈ ಇಲಾಖೆಗಳಿಗೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಆ ಹಣ ಹೇಗೆ ತೆಗೆದುಕೊಳ್ಳಬೇಕು? ಎಂಬುದು ಮುಖ್ಯಮಂತ್ರಿ ಪ್ಲ್ಯಾನ್ ಆಗಿತ್ತು. ಇದೇ …
Read More »ಇನ್ನೂ 19 ಸಿ.ಡಿ ಇವೆಯಂತೆ. ಎಲ್ಲವೂ ಹಿಡಿತದಲ್ಲಿ ಇರಲಿ. :ಸಿದ್ದರಾಮಯ್ಯ
ಬೆಂಗಳೂರು,ಮಾ.21- ಇನ್ನೂ 19 ಸಿ.ಡಿ ಇವೆಯಂತೆ. ಎಲ್ಲವೂ ಹಿಡಿತದಲ್ಲಿ ಇರಲಿ. ನಾಲಿಗೆ ಕೂಡ ಎಂದು ಹೇಳುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್‍ಕಟೀಲ್ ಅವರಿಗೆ ಬಿಸಿ ಮುಟ್ಟಿಸಿದ್ದಾರೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಅವರಿಂದ 90 ಜೊತೆ ಬಟ್ಟೆ ಖರೀದಿಯಾಗಿದೆ ಎಂದು ನಳೀನ್‍ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್ಚಿ ಮರ್ಯಾದೆ ಕಳೆಯುತ್ತಿರುವ ಕರ್ನಾಟಕದ ಬಿಜೆಪಿ …
Read More »ಇನ್ನೂ 400 ಸಿಡಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್
ವಿಜಯಪುರ: ರಾಜ್ಯದಲ್ಲಿ ಸಿಡಿ ತಯಾರಿಸುವ ಎರಡು ಫ್ಯಾಕ್ಟರಿಗಳಿವೆ. ಒಂದು ಬಿಜೆಪಿಯಲ್ಲಿದೆ. ಇನ್ನೊಂದು ಕಾಂಗ್ರೆಸ್ ನಲ್ಲಿದೆ. ರಮೇಶ್ ಜಾರಕಿಹೊಳಿ ಸಿಡಿ ರೀತಿಯೇ ಇನ್ನೂ 400 ಸಿಡಿಗಳಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಡಿ ತಯಾರಿಸುವ ದೊಡ್ಡ ಗ್ಯಾಂಗ್ ಇದೆ. ಗ್ಯಾಂಗ್ ಕಟ್ಟಿಕೊಂಡು ಮೊದಲು ಶಾಸಕರು, ಸಚಿವರ ಜೊತೆ ಸಲುಗೆ ಬೆಳಸಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ತಯರೈಸಿ ಬಳಿಕ ಬ್ಲ್ಯಾಕ್ ಮೇಲ್ …
Read More »ಇಂಥವರನ್ನ ನಂಬಿದ್ರೆ ಲೈಫ್ ಬರ್ಬಾದ್: ಬಂಧಿತ ಮೂವರು ಸಹೋದರರ ಕರಾಳ ಮುಖವಿದು..!
ಬೆಂಗಳೂರು: ನೂರಾರು ಅಮಾಯಕ ಜನರಿಗೆ ಚೀಟಿ ಹೆಸರಲ್ಲಿ ಯಾಮಾರಿಸಿ ಲಕ್ಷ ಲಕ್ಷ ಹಣ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಶದಲ್ಲಿರುವ ವೆಂಕಟೇಶ ಬಾಬು, ಲೋಕೇಶ್ ಬಾಬು ಮತ್ತು ನಟರಾಜ ಬಾಬು ಎಂಬ ಐನಾತಿ ಸಹೋದರರು ಅಗರಬತ್ತಿ ಕಂಪನಿ, ನಟರಾಜ ಟ್ರೇಡರ್ಸ್, ಬಾಬು ಚಿಟ್ ಫಂಡ್ ಅಂತ ಬೋರ್ಡ್ ಹಾಕಿಕೊಂಡು ಸಾಕಷ್ಟು ವರ್ಷಗಳಿಂದ ಅಮಾಯಕ ಜನರನ್ನು ನಂಬಿಸಿ …
Read More »CD’ ಪ್ರಕರಣ : ಯುವತಿಯ ಪತ್ತೆಗಾಗಿ `SIT’ ತಂಡದಿಂದ ಬೆಳಗಾವಿಯಲ್ಲಿ ತೀವ್ರ ಶೋಧ
ಬೆಳಗಾವಿ : ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐಟಿ ತಂಡ ವಿಡಿಯೋದಲ್ಲಿರುವ ಯುವತಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಯುವತಿ ಅಪಹರಣ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಶನಿವಾರ ಬೆಳಗಾವಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಯುವತಿ ಕುಟುಂಬದವರು ವಾಸವಿದ್ದ ಬಾಡಿಗೆ ಮನೆಗೆ ಆಗಮಿಸಿದ್ದ ಎಸ್ ಐಟಿ ಅಧಿಕಾರಿಗಳ ತಂಡ ಮನೆ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಸಿಡಿಯಲ್ಲಿ …
Read More »ಕಿತ್ತೂರು ಮತ್ತು ಖಾನಾಪುರ ತಾಲೂಕೂಗಳ ಗಡಿಯಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೆಳಗಾವಿ: ಕಿತ್ತೂರು ಮತ್ತು ಖಾನಾಪುರ ತಾಲೂಕೂಗಳ ಗಡಿಯಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಖಾನಾಪುರ ತಾಲೂಕಿನ ಗಾಡಿಕೊಪ್ಪ, ಹಿರೇಹಟ್ಟಿಹೊಳಿ, ಬೆಳಗಾವಿ ತಾಲೂಕಿನ ಕುಕಡೊಳ್ಳಿ, ಕಿತ್ತೂರು ತಾಲೂಕಿನ ಅಮರಾಪುರ, ವೀರಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಎರಡು ಕಾಡು ೋಣಗಳು ಪ್ರತ್ಯಕ್ಷವಾಗಿ ಆತಂಕ ಮೂಡಿಸಿವೆ. ಅರಣ್ಯಪ್ರದೇಶ ದಿಂದ ದೂರವಿರುವ ಮತ್ತು ಬಹುಪಾಲು ಕಬ್ಬು ಮತ್ತು ತರಕಾರಿ ಬೆಳೆಗಳನ್ನು ಹೊಂದಿರುವ ಈ ಭಾಗದಲ್ಲಿ ಕಾಣಿಸಿಕೊಂಡ ಕಾಡುಕೋಣಗಳನ್ನು ಮರಳಿ ಅರಣ್ಯ ಪ್ರದೇಶಕ್ಕೆ ಓಡಿಸುವಂತೆ …
Read More »ಬಿರುಸುಗೊಂಡ ಉಪ ಚುನಾವಣೆ ಕಣ
ಬೆಂಗಳೂರು: ಬೆಳಗಾವಿ ಲೋಕ ಸಭೆ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನ ಸಭೆ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ 3 ಪಕ್ಷಗಳಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ಶನಿವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆದು ಮೂರೂ ಕ್ಷೇತ್ರಗಳಿಗೆ ಸಂಭಾವ್ಯರ ಬಗ್ಗೆ ಚರ್ಚಿಸಿದ್ದು, ಕೇಂದ್ರ ಚುನಾವಣ ಸಮಿತಿಗೆ ಹೆಸರು ಶಿಫಾರಸು ಮಾಡುವ ಅಧಿಕಾರ ರಾಜ್ಯಾಧ್ಯಕ್ಷರಿಗೆ ಕೊಡಲಾಗಿದೆ. ಈ ಮಧ್ಯೆ, ಬಳ್ಳಾರಿ ಜಿಲ್ಲೆಯ ತೋರಣಗಲ್ಲು ವಿಮಾನ ನಿಲ್ದಾಣದಲ್ಲಿ …
Read More »ಅತಿಥಿ ಉಪನ್ಯಾಸಕರಿಗೆ ಶುಭಸುದ್ದಿ : ಖಾಲಿ ಇರುವ 1,835 ಹುದ್ದೆಗಳಿಗೆ `ಅತಿಥಿ ಉಪನ್ಯಾಸಕರ’ ನೇಮಕಕ್ಕೆ ರಾಜ್ಯ ಸರ್ಕಾರ ಅನುಮೋದನೆ
ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1,835 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಸರ್ಕಾರ ಅನುಮೋದನೆ ನೀಡಿದೆ. ಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಪಿಯು ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. 2021 ನೇ ಸಾಲಿನ ಫೆಬ್ರವರಿ ತಿಂಗಳಿಂದ ಮಾಸಿಕ 9 ಸಾವಿರ ರೂ. ಗೌರವಧನದ ಆಧಾರದಲ್ಲಿ …
Read More »
Laxmi News 24×7