Breaking News

ಜಿಲ್ಲೆ

ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಪತ್ರ ಬರೆದಿದ್ದು ಸರಿಯಲ್ಲ: ಜಗದೀಶ ಶೆಟ್ಟರ್

ಬೆಳಗಾವಿ: ‘ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಸರಿಯಲ್ಲ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಹಿರಂಗವಾಗಿ ಪತ್ರ ಬರೆಯುವುದು, ಅದನ್ನು ರಾಜ್ಯಪಾಲರಿಗಾಗಲಿ ಅಥವಾ ಪಕ್ಷದ ಮೇಲಿನವರಿಗಾಗಲಿ ಕಳುಹಿಸುವಂಥದು ಆಗಬಾರದಿತ್ತು. ಏನಿದ್ದರೂ ಮುಖ್ಯಮಂತ್ರಿ ಜೊತೆಯೇ ಚರ್ಚಿಸಬೇಕಿತ್ತು. ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಬೇಕಿತ್ತು. ಇದೆಲ್ಲವೂ ನಾಲ್ಕು ಗೋಡೆಗಳ ಒಳಗೆ ಆಗಬೇಕಾಗಿತ್ತು’ ಎಂದು ಪ್ರತಿಕ್ರಿಯಿಸಿದರು. ‘ನಾವೆಲ್ಲವೂ ಬಿ.ಎಸ್. ಯಡಿಯೂರಪ್ಪ ನಾಯಕತ್ವದಲ್ಲೇ …

Read More »

ವಿದ್ಯಾರ್ಥಿಯ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಪ್ರಾಂಶುಪಾಲೆ

ಹಾಸನ: ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರೊಬ್ಬರು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಮಸಿ ಬೆಳೆದಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯ ಉತ್ತರಗಳನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿದ್ದು, ಈ ಘಟನೆ ಹಾಸನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ. ಈ ಸಂಬಂಧ ಪ್ರಾಂಶುಪಾಲೆ ಶೋಭಾದೇವಮಾನೆ ವಿರುದ್ಧ ಹಾಸನ ಬಡಾವಣೆ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ನೊಂದ ವಿದ್ಯಾರ್ಥಿ ಚನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ. ಕಾಲೇಜಿನ …

Read More »

ಪೊಲೀಸ್ ಧ್ವಜ ದಿನಾಚರಣೆ: ಔರಾದಕರ್ ವರದಿ ಜಾರಿಗೆ ಆಗ್ರಹ

ವಿಜಯಪುರ: ರಾಘವೇಂದ್ರ ಔರಾದಕರ್ ವರದಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಪಿ.ಹುಲಸಗುಂದ ಆಗ್ರಹಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಕಲ್ಯಾಣ ಮತ್ತು ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು. ಈ ಮೂಲಕ ಪೊಲೀಸರನ್ನು ಒತ್ತಡ ಮುಕ್ತರನ್ನಾಗಿ ಮಾಡಬೇಕು. ಪೊಲೀಸರು ಬಿಡುವಿನ ವೇಳೆ ತಮ್ಮ ಕುಟುಂಬದ ಕಲ್ಯಾಣಕ್ಕೆ ಗಮನ ನೀಡಲು ಅವಕಾಶ …

Read More »

ಭ್ರಷ್ಟಾಚಾರ ಆರೋಪ: ಸರ್ಕಾರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ನೇರ ಆರೋಪ ಮಾಡಿರುವುದರಿಂದ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿಯನ್ನು ವಜಾಗೊಳಿಸಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಶಿಫಾರಸು ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ರಾಜ್ಯದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬಿಜೆಪಿ ಸರ್ಕಾರದಲ್ಲಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಕ್ರಮಗಳ ಕುರಿತು ವಿರೋಧ …

Read More »

ರಸ್ತೆ ದಾಟುವಾಗ ಮಿನಿಲಾರಿ ಹಾಯ್ದು ಬಾಲಕ ಸಾವು

ಗೋಕಾಕ ಬ್ರೇಕಿಂಗ್ ರಸ್ತೆ ದಾಟುವಾಗ ಮಿನಿಲಾರಿ ಹಾಯ್ದು ಬಾಲಕ ಸಾವು ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದ ಘಟನೆ ಸಿದ್ದಾರ್ಥ ಹಣಮಂತ ಮಲ್ಲನ್ನವರ (2) ಸಾವಿಗಿಡಾದ ಬಾಲಕ ಚಾಲಕ‌ನನ್ನು ವಶಕ್ಕೆ ಪಡೆದ ಪೋಲಿಸರು. ಮುಗಿಲು ಮುಟ್ಟಿದ ಕುಟುಂಬದ ಅಕ್ರಂದನ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ

Read More »

ಸೈಕಲ್‌ನಲ್ಲೇ ಕಚೇರಿಗೆ ಹೋಗಿ ಮಾದರಿಯಾದ ಎಸಿಪಿ ಸಂದೇಶ್‌ಕುಮಾರ್‌ ವರ್ಗ

ಮೈಸೂರು: 17 ತಿಂಗಳು ಮೈಸೂರಿನಲ್ಲಿ ಸೇವೆ ಸಲ್ಲಿಸಿ ಜನಸ್ನೇಹಿ ಪೊಲೀಸ್‌ ಎಂದೇ ಖ್ಯಾತರಾಗಿದ್ದ ಸಹಾಯಕ ಪೊಲೀಸ್‌ ಆಯುಕ್ತ (ಸಂಚಾರ) ಎಸ್‌.ಎನ್‌. ಸಂದೇಶ್‌ ಕುಮಾರ್‌ ಅವರು ವರ್ಗಾವಣೆಗೊಂಡಿದ್ದಾರೆ. ಸಂದೇಶ್‌ ಕುಮಾರ್‌ ಅವರು ಶ್ರೀರಂಗಪಟ್ಟಣದ ಉಪ ವಿಭಾಗ, ಮಂಡ್ಯ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಫಿಟ್‌ನೆಸ್‌ ಪ್ರಿಯರಾಗಿದ್ದ ಸಂದೇಶ್‌ ಕುಮಾರ್‌ ಅವರು ತಮ್ಮ ಕಚೇರಿಗೆ ಸೈಕಲ್‌ನಲ್ಲೇ ಹೋಗಿ ಬರುತ್ತಿದ್ದರು. ಪೆಟ್ರೋಲ್‌ ಬೆಲೆ ಏರಿಕೆಯಾಗಿರುವ ಸಮಯದಲ್ಲಿ ಸೈಕಲ್‌ ಬಳಸುವಂತೆ ಯುವ ಜನರಿಗೆ ಅವರು ಸಂದೇಶ ಕೊಟ್ಟರು. ಸಂದೇಶ್‌ …

Read More »

ಸತೀಶ ಜಾರಕಿಹೊಳಿ 3 ದಶಕಗಳ ಸಾಧನೆ ನೋಡಿ ಮತ ಹಾಕಿ : ಶಾಸಕಿ ಲಕ್ಷ್ಮಿ ಹೆಬ್ಟಾಳಕರ

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಮತ್ತು ಅಭ್ಯರ್ಥಿ ಸತೀಶ ಜಾರಕಿಹೊಳಿ ಪ್ರಚಾರ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಟಾಳಕರ, ನಮ್ಮ ಅಭ್ಯರ್ಥಿ ಸತೀಶ ಜಾರಕಿಹೊಳಿ ಕಾಂಗ್ರೆಸ್‌ ಪಕ್ಷದ ದೊಡ್ಡ ಶಕ್ತಿ. ಕಳೆದ 30 ವರ್ಷಗಳಿಂದ ಹಲವಾರು ಅಭಿವೃದ್ಧಿ ಕಾರ್ಯಗಳು ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದ …

Read More »

ಹಳೆಯ ದ್ವೇಷದ ಕಾರಣ ಯುವಕನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು

ಹಳೆಯ ದ್ವೇಷದ ಕಾರಣ ಯುವಕನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು ಹಳೆಯ ದ್ವೇಷದ ಕಾರಣ ಗೋಕಾಕದಲ್ಲಿ‌ ಯುವಕನೊರ್ವನಿಗೆ ಚಾಕು ಇರಿತದಿಂದ ಗಂಬೀರ ಗಾಯಗೊಂಡ ಕಾರಣ ಸಂಬಂದಿಕರು ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ವಿಶಾಲ ತಾಯಿ, ಸರೋಜಾ, ಮೇಸ್ತ್ರೀ ,23 ವರ್ಷದ, ಎಂಬ ಯುವಕನಿಗೆ ಗೋಕಾಕ ತಹಸಿಲ್ದಾರ ಕಚೇರಿಯ ಆವರಣದಲ್ಲಿ ಹಳೆಯ ದ್ವೇಷದ ಕಾರಣ 5-6 ಜನ ದುಷ್ಕರಮಿಗಳು ಚಾಕು ಹಾಕಿದ್ದರಿಂದ ಸ್ಥಳದಲ್ಲಿದ ಸಂಬಂದಿಕರು ತಕ್ಷಣ ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ

Read More »

ಸಿಡಿ ಸಂತ್ರಸ್ತೆಯ ಬಟ್ಟೆ ತೆಗೆದುಕೊಂಡ ಎಸ್​ಐಟಿ; ಎಫ್​​ಎಸ್​​ಎಲ್​​ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಸಂತ್ರಸ್ತ ಯುವತಿ ವಾಸವಿದ್ದ ಪಿಜಿ ಕೇಂದ್ರದಲ್ಲಿ ಎಸ್​ಐಟಿ ಅಧಿಕಾರಿಗಳು ಮಹಜರು ಕಾರ್ಯ ನಡೆಸಿದ್ದಾರೆ. ಆಕೆಗೆ ಸಂಬಂಧಿಸಿದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಪಿಜಿಯನ್ನು ಮಹಜರು ಮಾಡಲಾಗಿದ್ದು, ವಶಕ್ಕೆ ಪಡೆದ ಎಲ್ಲಾ ವಸ್ತುಗಳನ್ನೂ ಸೀಲ್​ ಮಾಡಿ ಎಫ್​​ಎಸ್​​ಎಲ್​ ಪ್ರಯೋಗಾಲಯಕ್ಕೆ ರವಾನಿಸುವುದಾಗಿ ತಿಳಿದುಬಂದಿದೆ. ಆ ಮೂಲಕ ಇಂದು ಬೆಳಗ್ಗೆಯಿಂದ ಸತತ …

Read More »

ಬಿಸಿಲಿಗೆ ಗೂಡಿನಿಂದೆದ್ದ ಹೆಜ್ಜೇನು; ಉಪಪ್ರಾಚಾರ್ಯ, ವಿದ್ಯಾರ್ಥಿಗಳು ಸೇರಿ 10 ಜನ ಆಸ್ಪತ್ರೆಗೆ ದಾಖಲು

ಬಾಗಲಕೋಟೆ: ಬೇಸಿಗೆಯ ಝಳ ಈಗಾಗಲೇ ಎಲ್ಲರನ್ನೂ ಕಂಗೆಡಿಸಲಾರಂಭಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಸೂರ್ಯನ ತಾಪಮಾನ ಮೈ ಸುಡುತ್ತಿದೆ. ಸೂರ್ಯನ ಶಾಖ ಮನುಷ್ಯ ಮಾತ್ರರಿಗಷ್ಟೇ ಅಲ್ಲದೇ ಪ್ರಾಣಿ, ಪಕ್ಷಿ, ಕೀಟ ಸಂಕುಲಗಳ ಮೇಲೂ ಪರಿಣಾಮ ಬೀರುತ್ತಿದೆ. ಬಾಗಲಕೋಟೆ ಜಿಲ್ಲೆಯ ಗಮಖಂಡಿಯಲ್ಲಿ ಬಿಸಿಲಿನ ತಾಪ ತಾಳಲಾರದೆ ಗೂಡಿನಿಂದ ಎದ್ದ ಹೆಜ್ಜೇನುಗಳು ಏಕಾಏಕಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಜಮಖಂಡಿ ನಗರದ ಸರ್ಕಾರಿ ಪಿಬಿ ಪ್ರೌಢಶಾಲೆ ಬಳಿ ಘಟನೆ ನಡೆದಿದ್ದು ಉಪಪ್ರಾಚಾರ್ಯರು ಹಾಗೂ 9 …

Read More »