Breaking News

ಜಿಲ್ಲೆ

ರಾತ್ರಿ ಪಾರ್ಟಿ ಬೆನ್ನಲ್ಲೇ ಮನೆಯಲ್ಲಿ ಬೆಂಕಿ: 5 ವರ್ಷದ ಮಗ-ಸ್ನೇಹಿತ ಸಾವು, ಕೊಲೆ ಶಂಕೆ

ಮೈಸೂರು: ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಮಗು ಹಾಗೂ ಓರ್ವ ವ್ಯಕ್ತಿ ಸಜೀವವಾಗಿ ದಹನವಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿಯಲ್ಲಿ ನಡೆದಿದೆ. ತನ್ವೀತ್​(5) ಹಾಗು ದೀಪಕ್​ ಮೃತ ದುರ್ದೈವಿಗಳು. ಕಳಸ ಮೂಲದ ಪೇಂಟರ್​ ಭರತ್​ ಮೈಸೂರಲ್ಲಿ​ ಬಾಡಿಗೆ ಮನೆ ಮಾಡಿಕೊಂಡು ಪುತ್ರ ತನ್ವಿತ್ ಜೊತೆ ವಾಸವಾಗಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಭರತ್​​ ಎಣ್ಣೆ ಪಾರ್ಟಿ ಆಯೋಜಿಸಿದ್ದರು. ಸ್ನೇಹಿತರೆಲ್ಲ ರಾತ್ರಿ ಪೂರ ವಿಪರೀತ ಮದ್ಯಪಾನ ಮಾಡಿದ್ದರು. ಬಳಿಕ ಭರತ್​ನ ಒಬ್ಬ …

Read More »

ಕುಡಚಿ ಪಟ್ಟಣದಲ್ಲಿ ಗಾಂಜಾ ಮಾರಾಟ : ಮೂವರ ಬಂಧನ

ಚಿಂಚಲಿ :  ಕುಡಚಿ ಪಟ್ಟಣದ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಧಿಕ ನಬಿಲಾಲ ಮೇವೆಗಾರ (41), ಜಾಫರ ಬಾಬಾಸಾಬ ಮುಲ್ಲಾ(60) , ಪರಶುರಾಮ ಕಾಂಬಳೆ (32) ಬಂಧಿತರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 22.000 ಸಾವಿರ ಮೊತ್ತದ 2025 ಗ್ರಾಮ ಗಾಂಜಾ ಹಾಗೂ 450 ನಗದು, 4 ಮೊಬೈಲ್  ವಶಕ್ಕೆ ಪಡೆದುಕೊಂಡಿದ್ದಾರೆ. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ …

Read More »

ಸತೀಶಣ್ಣನವರನ್ನು ಬೆಂಬಲಿಸಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಹಾಗೂ ನಮ್ಮೆಲ್ಲರ ಕೂಗನ್ನು ದಿಲ್ಲಿಯವರೆಗೆ ಮುಟ್ಟಿಸೋಣ “

ಸತೀಶಣ್ಣನವರನ್ನು ಬೆಂಬಲಿಸಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಹಾಗೂ ನಮ್ಮೆಲ್ಲರ ಕೂಗನ್ನು ದಿಲ್ಲಿಯವರೆಗೆ ಮುಟ್ಟಿಸೋಣ “ ಹಿರೇ ಬಾಗೇವಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಬರಲಿರುವ ಲೋಕಸಭಾ ಉಪ ಚುನಾವಣೆಯ ಸಲುವಾಗಿ ಸಭೆಯನ್ನು ನಡೆಸಿ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರವಾಗಿ ಮತ ಯಾಚಿಸಲಾಯಿತು. ಕಾಂಗ್ರೆಸ್ ಪಕ್ಷವು ಬಡವರ, ಶ್ರಮಿಕರ ಹಾಗೂ ನಿರ್ಗತಿಕರ ಪಕ್ಷವಾಗಿ ಹೊರಹೊಮ್ಮಿದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತಂದಿದೆ, ನೂರಾರು ವರ್ಷಗಳ ಇತಿಹಾಸವಿರುವ …

Read More »

ವೇತನ ಹೆಚ್ಚಳ ಬಗ್ಗೆ ಸಿಹಿ ಸುದ್ದಿ ನೀಡಿದ ಡಿಸಿಎಂ ಸವದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನವನ್ನು ಸೋಮವಾರ ಹೆಚ್ಚಳಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೆಎಸ್‌ಆರ್ಟಿಸಿ ನೌಕರರ ತರಬೇತಿ ಕೇಂದ್ರ ಆವರಣದಲ್ಲಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರ ಜೊತೆ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸೋಮವಾರ ಹಣಕಾಸು ಇಲಾಖೆ ಹಾಗೂ ಸಿಎಂ …

Read More »

6 -9 ನೇ ತರಗತಿ ಸ್ಥಗಿತ, ಸಿನಿಮಾ ಶೇ. 50 ರಷ್ಟು ಸೀಟ್ ಭರ್ತಿ; ಮತ್ತೆ ಕಠಿಣ ನಿಯಮ ಜಾರಿ -ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆತಂಕವನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. 10, 11, 12 ನೇ ತರಗತಿಗಳು ಪ್ರಸ್ತುತವಿರುವಂತೆಯೇ ಮುಂದುವರೆಯುತ್ತದೆ. ಆದರೆ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ವಸತಿ ಶಾಲೆಗಳು ಬೋರ್ಡಿಂಗ್ ಶಾಲೆಗಳಲ್ಲಿ 10, 11 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ …

Read More »

ರಾಬರ್ಟ್ , ಹೀರೋ ಬಳಿಕ ‘ಯುರತ್ನ’ನಿಗೂ ತಟ್ಟಿದ ಪೈರೆಸಿ ಬಿಸಿ..!

ಬೆಂಗಳೂರು: ನಿನ್ನೆ ಅಂದ್ರೆ ಏಪ್ರಿಲ್ 1ರಂದು ರಿಲೀಸ್ ಆಗಿ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣ್ತಿರುವ ಯುವರತ್ನ ಸಿನಿಮಾಗೂ ಪೈರಸಿ ಬಿಸಿ ತಟ್ಟಿದೆ. ಹೌದು ಪೊಗರು, ಹೀರೋ, ರಾಬರ್ಟ್ ಸಿನಿಮಾಗಳ ನಂತರ ಇದೀಗ ಯುವರತ್ನ ಸಿನಿಮಾಗೂ ಪೈರೆಸಿ ಕಾಟ ಎದುರಾಗಿದೆ. ಸಿನಿಮಾ ತೆರೆಕಂಡ ಮೊದಲ ಮೊದಲ ದಿನವೇ ಚಿತ್ರ ಪೈರಸಿ ಆಗಿದ್ದು, ಟೆಲಿಗ್ರಾಂ ಸೇರಿದಂತೆ ಎಲ್ಲೆಡೆ ಯುವರತ್ನ ಚಿತ್ರ ಹರಿದಾಡುತ್ತಿದೆ. ಇತ್ತ ಪುನೀತ್ ಅಭಿಮಾನಿಗಳು ಪೈರಸಿ ವಿರುದ್ಧ ಧ್ವನಿಯೆತ್ತಿದ್ದು, ಟೆಲಿಗ್ರಾಂ …

Read More »

ನನ್ನ ರಾಜಕೀಯ ಏಳ್ಗೆಗೆ ಗೋಕಾಕ ಕ್ಷೇತ್ರದ ಜನರ ಸಹಕಾರವೇ ಪ್ರಮುಖ ಕಾರಣ: ಸತೀಶ ಜಾರಕಿಹೊಳಿ

ಗೋಕಾಕ: “ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಗೋಕಾಕ ಮತಕ್ಷೇತ್ರದಿಂದ. ಗೋಕಾಕ ಜನರೇ ನನ್ನ ರಾಜಕೀಯ ಏಳ್ಗೆಗೆ ಪ್ರಮುಖ ಕಾರಣ” ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು. ಗೋಕಾಕ ವಿಧಾನಸಭಾ ಮತಕ್ಷೇತ್ರದ ಮಮದಾಪುರ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರ ನಡೆಸಿ ಅವರು ಮಾತನಾಡಿದರು. “ಕಳೆದ 30 ವರ್ಷಗಳಿಂದ ನಾನು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ರಾಜಕೀಯ ಜೀವನ ಆರಂಭವಾಗಿದ್ದೆ ಗೋಕಾಕನಿಂದ. ಮಮದಾಪುರ ಗ್ರಾಮದ ಮುಖಂಡರು ಹಾಗೂ ಈ ಭಾಗದ …

Read More »

ಡಿಕೆಶಿವಕುಮಾರ್ , ಸಿದ್ದರಾಮಯ್ಯ ಪ್ರಚಾರಕ್ಕೆ ಬರಲಿದ್ದಾರೆ : ಸತೀಶ್ ಜಾರಕಿಹೊಳಿ

ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು. ಗೋಕಾಕದಲ್ಲಿ ಪ್ರಚಾರದ ವೇಳೆ ಮಾತನಾಡಿ, ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಚಾರಕ್ಕೆ ಬರಲಿದ್ದಾರೆ. ರಾಜಕೀಯದಲ್ಲಿ ಪರ ವಿರೋಧ ಇದ್ದೇ ಇರುತ್ತದೆ ಎಂದರು. ಗೋಕಾಕ್, ಅರಭಾವಿ ಕ್ಷೇತ್ರ ಬಿಟ್ಟು ಬೇರೆ ಕಡೆ ಪ್ರಚಾರ ಮಾಡುವ ಕುರಿತು ಚರ್ಚೆ ಮಾಡುತ್ತೇನೆ. ಇನ್ನು ಸಿಡಿ …

Read More »

ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಜಾರಕಿಹೊಳಿ

ಗೋಕಾಕ: ನಗರದ ಶೂನ್ಯ ಸಂಪಾದನಾ ಮಠ ಹಾಗೂ ಕೊಳವಿ ಹನುಮಪ್ಪ ದೇವಸ್ಥಾನಕ್ಕೆ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಭೇಟಿ ನೀಡಿದರು. ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶೂನ್ಯ ಸಂಪಾದನಾ ಮಠಕ್ಕೆ ಭೇಟಿ ನೀಡಿ, ಮುರುಘರಾಜೇಂದ್ರ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಪ್ರಿಯಾಂಕಾ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು, ಆಶೀರ್ವಾದ ಮಾಡಿದರು. ಇದೇ ಸಂದರ್ಭದಲ್ಲಿ ಕೊಳವಿ ಹನುಮಪ್ಪ ದೇವಸ್ಥಾನಕ್ಕೆ ತೆರಳಿದ ಅವರು, ತಂದೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ …

Read More »

ಈಗ ಈಶ್ವರಪ್ಪನವರಿಗೆ ತಲೆಕೆಟ್ಟಿದೆ – ಸಿಎಂ ಬದಲಾಗದಿದ್ದರೆ ಇನ್ನೂ ಹಲವರಿಗೆ ತಲೆ ಕೆಡಲಿದೆ: ಯತ್ನಾಳ್

ವಿಜಯಪುರ: ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪನವರ ಆರೋಪಕ್ಕೆ ಮಹತ್ವ ನೀಡಬೇಕು. ಅವರು ಮಾಡಿರುವ ತಪ್ಪಾದರೂ ಏನು ಎಂದು ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿಯನ್ನು ಈ ಹಿಂದೆ ಕಟ್ಟಿದವರು ಈಶ್ವರಪ್ಪ. ನಿನ್ನೆ ಮೊನ್ನೆ ಬಂದವರು ಅವರ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಹಾಗೂ ಯಡಿಯೂರಪ್ಪ ಪಕ್ಷ ಬಿಟ್ಟು ಮತ್ತೆ ಬಂದವರು. ಆದರೆ ಈಶ್ವರಪ್ಪ ಬಿಜೆಪಿಯಲ್ಲೇ …

Read More »