Breaking News

ಜಿಲ್ಲೆ

ಕೆಲಸಕ್ಕೆ ಹಾಜರಾಗದಿದ್ದರೆ ಮಾರ್ಚ್ ತಿಂಗಳ ವೇತನ ಕಟ್ :ಬಿಎಂಟಿಸಿ ಎಂಡಿ ಶಿಖಾ

ಬೆಂಗಳೂರು : ರಾಜ್ಯಾದ್ಯಂತ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ‌. ಇದರ ಪರಿಣಾಮ 135 ಬಸ್​ಗಳು ಮಾತ್ರ ಇವತ್ತು ಸಂಚಾರ ಮಾಡುತ್ತಿವೆ. ನಗರದ ಯಶವಂತಪುರ ಬಸ್​ ನಿಲ್ದಾಣಕ್ಕೆ ಬಿಎಂಟಿಸಿ ಎಂಡಿ ಶಿಖಾ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮಾತಾನಾಡಿದ ಅವರು, ಬೆಂಗಳೂರಿನಲ್ಲಿ ಈವರೆಗೆ 135 ಬಿಎಂಟಿಸಿ ಬಸ್​ಗಳು ಮಾತ್ರ ಸಂಚರಿಸುತ್ತಿವೆ. ಮಂಗಳವಾರದ ಸಭೆಯಲ್ಲಿನ ತೀರ್ಮಾನದಂತೆ ಪರ್ಯಾಯವಾಗಿ ಖಾಸಗಿ ಬಸ್​ಗಳನ್ನ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸ್ವಲ್ಪ …

Read More »

ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಯಲಿದೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಏ.7- ಆರನೆ ವೇತನ ಜಾರಿಯಾಗುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್‍ಗಳಿಂದ ಸರ್ಕಾರಕ್ಕೆ ನಷ್ಟವೇ ಹೊರತು ಲಾಭವಿಲ್ಲ. ಸರ್ಕಾರ ಅವೈಜ್ಞಾನಿಕ ಪ್ರಯತ್ನ ಮಾಡುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು. ಬಂದ್ ಯಶಸ್ಸಿಗೆ ಸಾರಿಗೆ ನೌಕರರ ನೋವುಗಳೇ ಕಾರಣ. ಹಲವು ದಿನಗಳಿಂದ ಅವರಿಗೆ ಸಾಕಷ್ಟು ಸಮಸ್ಯೆಗಳಿವೆ. ವ್ಯಕ್ತಿ ಪ್ರತಿಷ್ಠೆಗಿಂತ ನೌಕರರ ಸಮಸ್ಯೆ ಬಗೆಹರಿಸುವುದು …

Read More »

ಮನವಿ ಮಾಡಿದ್ರೂ ನೌಕರರು ಡೋಂಟ್ ಕೇರ್: ಸಾರಿಗೆ ನೌಕರರಿಗೆ ಶಾಕ್ ನೀಡಲು ಮುಂದಾದ ಸರ್ಕಾರ!

ಬೆಂಗಳೂರು: ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ಹೂಡಿದ್ದು, ಯಾವುದೇ ಕೆಎಸ್‌ಆರ್ ಟಿಸಿ, ಬಿಎಂಟಿಸಿ ಬಸ್ ಗಳು ರಸ್ತೆಗಿಳಿದಿಲ್ಲ. ಸರ್ಕಾರ, ಅಧಿಕಾರಿಗಳ ಮನವಿಗೆ ನೌಕರರು ಸೊಪ್ಪು ಹಾಕದೆ ಇರುವುದರಿಂದ ನೌಕರರಿಗೆ ಶಾಕ್ ನೀಡಲು ಸರ್ಕಾರ ನಿರ್ಧರಿಸಿದೆ. ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ನೌಕರರ ಮಾರ್ಚ್ ತಿಂಗಳ ವೇತನ ತಡೆಯಲು ಸರ್ಕಾರ ಮುಂದಾಗಿದೆ.   ಪ್ರತಿ ತಿಂಗಳು 10ನೇ ತಾರೀಖಿನೊಳಗೆ ನಿಗಮಗಳು ನೌಕರರಿಗೆ ವೇತನ ನೀಡುತ್ತಿದ್ದವು. ಆದರೆ …

Read More »

ಬಸ್ ಗಳಿಲ್ಲದೇ ವೃದ್ಧನ ಪರದಾಟ – ಹೃದಯಾಘಾತದಿಂದ ಸಾವು

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಬೆಳಿಗ್ಗೆಯಿಂದಲೇ ರಾಜ್ಯಾದ್ಯಂತ ಮುಷ್ಕರ ಆರಂಭಿಸಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆಯಾದರೂ ದುಪ್ಪಟ್ಟು ಹಣ, ಬಸ್ ಸಂಚಾರ ಸಮರ್ಪಕವಾಗಿಲ್ಲದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ನಡುವೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೃದ್ಧ ಅಂಗವಿಕಲರೊಬ್ಬರು ಹೃದಾಯಾಘಾತದಿಂದ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ. ! ಜಿಗಣಿಯಿಂದ ಬಂದಿದ್ದ ಚೆನ್ನಪ್ಪ ಮೆಜೆಸ್ಟಿಕ್ ನಲ್ಲಿ …

Read More »

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಮೇಶ್ ಜಾರಕಿಹೊಳಿ ಕೆಲ ದಿನ ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ

ಬೆಳಗಾವಿ : ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಡಿಸ್ಚಾರ್ಜ್, ಇನ್ನು ಕೆಲ ದಿನ ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಏಪ್ರಿಲ್ 4ರಂದು ರಾತ್ರಿ 10.30ರ ಸುಮಾರಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಬಿಪಿ, ಶುಗರ್ …

Read More »

ಅಧಿಕಾರದ ಅವಧಿ ಪೂರೈಸುತ್ತೀರಿ: ಯಡಿಯೂರಪ್ಪ ಅವರಿಗೆ ಜೈನ ಮುನಿ ಆಶೀರ್ವಾದ

ಬೆಳಗಾವಿ: ‘ನೀವು ಅಧಿಕಾರದ ಅವಧಿ ಪೂರೈಸುತ್ತೀರಿ. ಚಿಂತೆ ಬಿಡಿ. ಬಳಿಕ ರಾಜ್ಯಪಾಲ, ಉಪ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಆಗುತ್ತೀರಿ’ ಎಂದು ತಾಲ್ಲೂಕಿನ ಹಲಗಾದ ಸಿದ್ಧಸೇನಾ ಮುನಿ ಅವರು ತಮ್ಮ ಬಳಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಂಗಳವಾರ ಆಶೀರ್ವಾದ ಮಾಡಿದರು. ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಹೇಳಿ’ ಎಂದು ಯಡಿಯೂರಪ್ಪ ಕೇಳಿದಾಗ ಪ್ರತಿಕ್ರಿಯಿಸಿದ ಮುನಿ, ’40 ಸಾವಿರ ಮತಗಳ ಅಂತರದಿಂದ ಮಂಗಲಾ ಅಂಗಡಿ ಗೆಲ್ಲುತ್ತಾರೆ’ …

Read More »

ಸಿಡಿ ಬಂದ ವೇಗದಲ್ಲೇ ಮರಳಿ ಹೋಗುತ್ತದೆ : ಸಚಿವ ಆರ್. ಶಂಕರ್

ಬಾಗಲಕೋಟೆ : ಮಾಜಿ ಸಚಿವ ರಮೇಶ ಜಾರಕಿಹೋಳಿ ಕುರಿತು ಬಿಡುಗಡೆಯಾಗಿರುವ ಸಿಡಿ, ಎಷ್ಟು ವೇಗವಾಗಿ ಬಂತೋ ಅಷ್ಟೇ ವೇಗದಲ್ಲಿ ಮರಳಿ ಹೋಗುತ್ತದೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್. ಶಂಕರ ಹೇಳಿದರು. ತೋಟಗಾರಿಕೆ ವಿವಿಯ 10ನೇ ಘಟಿಕೋತ್ಸವದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನೂರಕ್ಕೆ ನೂರರಷ್ಟು ಸಿಡಿ ಮರಳಿ ಹೋಗುತ್ತದೆ. ಜನರು ಸಿಡಿ-ಪಿಡಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮೂರು ಉಪ ಚುನಾವಣೆಯಲ್ಲೂ …

Read More »

ಮುತ್ತಪ್ಪ ರೈ ಆಸ್ತಿ ಪರಭಾರೆಗೆ ಸಿವಿಲ್‌ ಕೋರ್ಟ್‌ ಬ್ರೇಕ್‌

ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಸ್ತಿ ವಿಭಾಗ ಸಂಬಂಧ ಪತ್ನಿ ಅನುರಾಧಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿವಿಲ್‌ ಕೋರ್ಟ್‌ ಸದ್ಯ ಆಸ್ತಿ ಪರಭಾರೆ ಮಾಡದಂತೆ ಮಧ್ಯಂತರ ಆದೇಶ ನೀಡಿದೆ. ಮುತ್ತಪ್ಪ ರೈ ಅವರು ನಿಧನರಾದ ಬಳಿಕ ಎರಡನೇ ಪತ್ನಿ ಅನುರಾಧಾ ಅವರು ಪತಿಯ ಆಸ್ತಿಯನ್ನು ಪರಭಾರೆ ವಿಚಾರ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಮುತ್ತಪ್ಪ ರೈ ಪುತ್ರ ರಾಕಿ, …

Read More »

7 ಜಿಲ್ಲೆಗಳಲ್ಲಿ ಶತಕ ದಾಟಿದ ಕೊರೊನಾ ಅಬ್ಬರ

ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಶತಕ ದಾಟಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ದಿನೇದಿನೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 4266 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಎಂದಿನಂತೆ ಅಪಾಯದ ಕರೆಗಂಟೆ ಬಾರಿಸುತ್ತಿದೆ. ಕಲಬುರಗಿಯಲ್ಲಿ 261, ಮೈಸೂರಿನಲ್ಲಿ 237, ತುಮಕೂರು 157, ಮಂಡ್ಯ 102, ಹಾಸನ 110 ಮತ್ತು ಬೀದರ್ ನಲ್ಲಿ 167 ಪ್ರಕರಣಗಳು …

Read More »

ಜನತೆಗೆ ತಟ್ಟಿದ ಸಾರಿಗೆ ಮುಷ್ಕರ ಬಿಸಿ, ಖಾಸಗಿ ವಾಹನಗಳಿಂದ ಸುಲಿಗೆ -ಪ್ರಯಾಣಿಕರ ಪರದಾಟ

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಕೈಗೊಂಡಿದ್ದು, ರಾಜ್ಯದ ಜನತೆಗೆ ಮುಷ್ಕರದ ಬಿಸಿ ತಟ್ಟಿದ್ದು ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಈ ನಡುವೆ ಖಾಸಗಿ ಬಸ್ ಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಮುಷ್ಕರ ಆರಂಭವಾಗುತ್ತಿದ್ದಂತೆ ಡೀಸೆಲ್ ದರ 80 ರ ರೂಪಾಯಿ ಇದೆ ಎಂದು ಹೇಳುತ್ತಿರುವ ಖಾಸಗಿ ಬಸ್ ಗಳಲ್ಲಿ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಬದಲಿ …

Read More »