Breaking News

ಜಿಲ್ಲೆ

ಉಪ ಚುನಾವಣೆಗೆ ನಾಳೆಯೇ ಮತದಾನ: ಮನವೊಲಿಕೆಗೆ ಕೊನೆ ಕ್ಷಣದ ಕಸರತ್ತು

ಬೆಂಗಳೂರು: ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಿನ್ನೆ ಸಂಜೆ ತೆರೆಬಿದ್ದಿದೆ. ಇಂದು ಮನೆಮನೆ ಪ್ರಚಾರ ನಡೆಯಲಿದ್ದು, ಪ್ರಚಾರಕ್ಕೆ ಆಗಮಿಸಿದ್ದ ನಾಯಕರೆಲ್ಲ ಕ್ಷೇತ್ರದಿಂದ ಹೊರಗೆ ತೆರಳಿದ್ದಾರೆ. ಸ್ಥಳೀಯ ಕಾರ್ಯಕರ್ತರು ಮತದಾರರ ಮನವೊಲಿಕೆಗೆ ಅಂತಿಮಹಂತದ ಕಸರತ್ತು ನಡೆಸಿದ್ದಾರೆ. ಏಪ್ರಿಲ್ 17 ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ …

Read More »

‘ಅನ್ನಭಾಗ್ಯ’ ಯೋಜನೆ BPL ಕಾರ್ಡ್ ದಾರರ ಅಕ್ಕಿ ಕಡಿತ, ಪಡಿತರಕ್ಕೆ ಹೊಸ ವ್ಯವಸ್ಥೆ -ರಾಗಿ ವಿತರಣೆ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ 2 ಕೆಜಿ ಅಕ್ಕಿ 3 ಕೆಜಿ ರಾಗಿ ಹಾಗೂ ಪ್ರತಿ ಕಾರ್ಡ್ ಗೆ 2 ಕೆಜಿ ಗೋಧಿ ವಿತರಿಸಲಾಗುತ್ತದೆ. ಹಿಂದೆ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು ಕೆಲವು ಪಡಿತರ ಚೀಟಿದಾರರು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಹೀಗೆ ಶೇಕಡ 15 ರಷ್ಟು ಅನ್ನಭಾಗ್ಯ ಅಕ್ಕಿ ದುರ್ಬಳಕೆಯಾಗುತ್ತಿದೆ ಎನ್ನಲಾಗಿದ್ದು ಹೀಗಾಗಿ ಹೊಸ …

Read More »

ಪ್ರಿಯಂಕಾ ಜಾರಕಿಹೊಳಿ ಹಾಗೂ ಸಂತೋಷ್ ಜಾರಕಿಹೊಳಿ ಸೌಹಾರ್ದತೆ ಭೇಟಿ

ಗೋಕಾಕ: ಗೋಕಾಕ ತಾಲೂಕಿನ ತುಂಬಾ ಸುಮಾರು {4-5}  ನಾಲ್ಕೈದು ವಾರದಿಂದ ಪ್ರಚಾರ ನಡೆಸುತ್ತಿದ್ದ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ಸಂತೋಷ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿದ್ದಾರೆ.   ಇಂದು ಬಹಿರಂಗ ಚುನಾವಣೆ ಪ್ರಚಾರ ಅಂತ್ಯ ವಾಗಿದ್ದು ಸಂತೋಷ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದಾರೆ ಪ್ರಿಯಂಕಾ ಜಾರಕಿಹೊಳಿ ಅವರು.   ಅಷ್ಟೆ ಅಲ್ಲದೆ ಗೋಕಾಕ ಹಾಗೂ ಅರಭಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ತಂದೆಯ ಪರ ಪ್ರಚಾರ ನಡೆಸಿದ್ದು …

Read More »

ಕೊರೊನಾ ವೈರಸ್ ಹೆಚ್ಚಳ : ಕರ್ನಾಟಕದಲ್ಲೂ `ವೀಕೆಂಡ್ ಲಾಕ್ ಡೌನ್’, ರಾತ್ರಿ ಕರ್ಪ್ಯೂ ಇಡೀ ರಾಜ್ಯಕ್ಕೆ ವಿಸ್ತರಣೆ?

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ವಾರಾಂತ್ಯ ಲಾಕ್ ಡೌನ್, ರಾತ್ರಿ ಕರ್ಪ್ಯೂ ವಿಸ್ತರಣೆಯಂಥ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಏಪ್ರಿಲ್ 18 ರ ಭಾನುವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಚರ್ಚಿಸಿದ ಬಳಿಕ ರಾಜ್ಯದಲ್ಲೂ ವಾರಂತ್ಯದ ಲಾಕ್ ಡೌನ್, ರಾಜ್ಯಾದ್ಯಂತ ರಾತ್ರಿ ಕರ್ಪ್ಯೂ ವಿಸ್ತರಣೆಯಂಥ ಕ್ರಮಗಳನ್ನು ಘೋಷಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ …

Read More »

1 ರಿಂದ 9 ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ: ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್ ಮಾಡಲು ಚಿಂತನೆ.?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಏರುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ 9 ನೇ ತರಗತಿಯ ಮಕ್ಕಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಚಿಂತನೆ ನಡೆದಿದೆ. ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದ್ದು, ಕೆಲವು ರಾಜ್ಯಗಳಲ್ಲಿ ಕೂಡ ಬೋರ್ಡ್ ಪರೀಕ್ಷೆ ರದ್ದು ಮಾಡಲಾಗಿದೆ. ರಾಜ್ಯದಲ್ಲಿ ಮೌಲ್ಯಾಂಕನ ಮೂಲಕ ಒಂದರಿಂದ 9ನೇ ತರಗತಿ ಮಕ್ಕಳನ್ನು ಪಾಸ್ ಮಾಡಲು ಚರ್ಚೆ ನಡೆದಿದ್ದು, ಮೌಲ್ಯಾಂಕನ ಪರೀಕ್ಷೆ ಕೂಡ ಇಲ್ಲದೆ ಎಲ್ಲರನ್ನು ಪಾಸ್ ಮಾಡಲು ತೀರ್ಮಾನಿಸಲಾಗಿದೆ ಎಂದು …

Read More »

ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ!?’

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಷ್ಟೊಂದು ಧನ ಸಂಪಾದಿಸಿದ್ದು ಹೇಗೆ? ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ ಎಂದು ಬಿಜೆಪಿ ಪ್ರಶ್ನಿಸಿದೆ. ಬಿಜೆಪಿ ಶಾಸಕ ಸಿ.ಟಿ. ರವಿ ಅವರು ಕೋಟ್ಯಂತರ ಬೆಲೆಯ ಆಸ್ತಿ ಸಂಗ್ರಹಿಸಿದ್ದು ಹೇಗೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಶ್ನಿಸಿದ ಬೆನ್ನಲ್ಲೇ ಬಿಜೆಪಿ ಸರಣಿ ಟ್ವಿಟ್ ಮೂಲಕ ತಿರುಗೇಟು ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾಮಾಲೆ ರೋಗ ಬಾಧಿಸುತ್ತಿದೆ. ರಾಬರ್ಟ್ ವಾದ್ರಾ, …

Read More »

ಚುನಾವಣಾ ಪ್ರಚಾರದಲ್ಲಿದ್ದ ಸಿಎಂ ಬಿಎಸ್ ವೈಗೆ ಮತ್ತೆ ಜ್ವರ : ಅರ್ಧಕ್ಕೆ ಮೊಟಕುಗೊಂಡ ರೋಡ್ ಶೋ

ಬೆಳಗಾವಿ: ಲೋಕಸಭಾ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರದ ಮತ್ತೆ ಜ್ವರ ಕಾಣಿಸಿಕೊಂಡಿದೆ. ಬುಧವಾರ ಅಷ್ಟೇ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಿಎಂ ಬಿಎಸ್ ವೈಗೆ ಜ್ವರ ಕಾಣಿಸಿಕೊಂಡಿತ್ತು. ಇಂದು ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ನಡೆಯುದಿದ್ದ ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಿದ ಸಿಎಂ ವಿಶ್ರಾಂತಿ ಪಡೆಯಲು ಹೋಟೆಲ್ ಗೆ ತೆರಳಿದ ಪ್ರಸಂಗ ನಡೆಯಿತು.   ಗುರುವಾರ ಬೆಳಿಗ್ಗೆ ವಿವಿದ ಮಠಾಧೀಶರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಗಳು …

Read More »

ನಮ್ಮಪ್ಪ ಗಡಿಬಿಡಿಯಲ್ಲಿ ತಿಂಡಿ ತಿನ್ನದೆ ಕೆಲ್ಸಕ್ಕೆ ಹೋಗ್ತಿದ್ರು: ಸಾರಿಗೆ ನೌಕರರಿಗೆ ಧೈರ್ಯ ತುಂಬಿದ ಯಶ್‌

ಬೆಂಗಳೂರು: ಸಾರಿಗೆ ನೌಕರರು ತಮಗೆ ಬರೆದಿದ್ದ ಪತ್ರಕ್ಕೆ ನಟ ಯಶ್‌ ಪತ್ರದ ಮೂಲಕವೇ ಪ್ರತಿಕ್ರಿಯಿಸಿ ತಾವು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರೊಂದಿಗೆ ನೌಕರರ ಸಮಸ್ಯೆಗಳ ಬಗ್ಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ನೌಕರನ ಮಗ. ನಮ್ಮಪ್ಪ ಎಷ್ಟೋ ದಿನ ತಿಂಡಿ ತಿನ್ನದೆ ಗಡಿಬಿಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ದಿನಗಳು ಈಗಲೂ ನೆನಪಿವೆ. ನಿಮ್ಮ ಹೋರಾಟ, ಅಳಲು ನನ್ನನ್ನು ಬಹುವಾಗಿ ಕಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ …

Read More »

ಸಾರಿಗೆ ನೌಕರರ ಮುಷ್ಕರದಿಂದ 170 ಕೋಟಿ ಲಾಸ್, ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ : ಡಿಸಿಎಂ ಲಕ್ಷ್ಮಣ ಸವದಿ ಮನವಿ

ಬೀದರ್ : ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಇಂದು 9 ನೇ ದಿನಕ್ಕೆ ಕಾಲಿಟ್ಟಿದ್ದು, ಸಾರಿಗೆ ನೌಕರರ ಮುಷ್ಕರದಿಂದ 170 ಕೋಟಿ ರೂ. ನಷ್ಟವಾಗಿದೆ ಹೀಗಾಗಿ ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಇಂದು 4,500 ಸಾರಿಗೆ ಬಸ್ ಸಂಚರಿಸಲಿವೆ. ನಾಳೆ 5 ಸಾವಿರ ಬಸ್ ಗಳು ಓಡಾಡುವ ವಿಶ್ವಾಸವಿದೆ. …

Read More »

ಸಿಎಂ ಯಡಿಯೂರಪ್ಪರಿಗೆ ಸುಸ್ತು, ಜ್ವರ: ವಿಶ್ರಾಂತಿ ಬಳಿಕ ಚುನಾವಣೆ ಪ್ರಚಾರ

ಬೆಳಗಾವಿ: ಏಪ್ರಿಲ್ 17 ರಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಬೆಳಗಾವಿಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರಿಗೆ ಜ್ವರ ಮತ್ತು ಸುಸ್ತು ಆಗಿದ್ದು ರಾತ್ರಿ ಕೆಎಲ್‌ಇ ಆಸ್ಪತ್ರೆಯ ಇಬ್ಬರು ವೈದ್ಯರು ಆರೋಗ್ಯ ತಪಾಸಣೆ ಮಾಡಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ಸಿಎಂಗೆ ಮಾತ್ರೆ ನೀಡಿದ್ದು ಸಿಎಂ ತಮ್ಮ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಅವರ ಆರೋಗ್ಯ ತಪಾಸಣೆಗೆ …

Read More »