ಬನಹಟ್ಟಿ : ಕೋವಿಡ್ ಮೂರನೇ ಅಲೆ ಬರುತ್ತಿದೆ. ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ಅವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ನಡೆದ ಸರಕಾರಿ ಹಾಗೂ ಖಾಸಗಿ ವೈದ್ಯರ ಸಭೆಯಲ್ಲಿ ಮಾತನಾಡಿದರು. ಸ್ಥಳೀಯರು ಆಕ್ಷಿಜನ್ ಸಾಂದ್ರಕ ಯಂತ್ರವನ್ನು ಸರಕಾರಿ ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ್ದರು. ಈ ವೇಳೆ ರಬಕವಿಯ ಖಾಸಗಿ ವೈದ್ಯ ರವಿ ಜಮಖಂಡಿ ಮಾತನಾಡುವ …
Read More »ರಾಜ್ಯದಲ್ಲಿ ಮೇ.10 ರಿಂದ ಮೇ.24 ರವರಗೆ ಚಿತ್ರೀಕರಣ ಸ್ಥಗಿತ, ʼಬಿಗ್ ಬಾಸ್ʼ ಶೂಟಿಂಗ್‌ಗೂ ಬ್ರೇಕ್..!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನ ಹತೋಟಿಗೆ ತರಲು ರಾಜ್ಯವನ್ನ 10ರಿಂದ 24ರವರೆಗೆ ಲಾಕ್ ಡೌನ್ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇನ್ನು ಲಾಕ್ ಡೌನ್ ಪರಿಣಾಮ ಮೇ 10 ರಿಂದ ಯಾವುದೇ ಚಿತ್ರ, ಧಾರಾವಾಹಿ ಸೇರಿ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮೇ 10ರಿಂದ ರಾಜ್ಯ ಲಾಕ್‌ಡೌನ್ ಆಗುವ ಪರಿಣಾಮ ಸಿನಿಮಾ ಸೇರಿದಂತೆ ಎಲ್ಲ ರೀತಿಯ ಚಿತ್ರೀಕರಣಗಳನ್ನ …
Read More »ರಾಜ್ಯಾಧ್ಯಂತ ಮೇ.10ರಿಂದ ಮೇ.24ರವರೆಗೆ ಲಾಕ್ ಡೌನ್ : ಈ ವೇಳೆ ಯಾವುದಕ್ಕೆ ಅವಕಾಶ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಮಾಹಿತಿ
ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಮೇ.10 ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮೇ.10ರ ಬೆಳಿಗ್ಗೆ 6 ಗಂಟೆಯಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಯಾವುದಕ್ಕೆ ಅವಕಾಶ ನೀಡಲಾಗಿದೆ.? ಯಾವುದಕ್ಕೆ ಅವಕಾಶ ನೀಡಲಾಗಿಲ್ಲ ಎನ್ನುವ ಬಗ್ಗೆ ಮುಂದೆ ಓದಿ. ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಮೊದಲು ನೈಟ್ ಕರ್ಪ್ಯೂ, ಆನಂತ್ರದ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಬಳಿಕ, …
Read More »ಪಿತೃದೋಷ ಇದೆ ಎಂದು ಜ್ಯೋತಿಷಿ ಹೇಳಿದ ಮಾತಿಗೆ ತಂದೆ-ತಾಯಿಯನ್ನೇ ಮುಗಿಸಿದ್ದ.!
ಬೆಂಗಳೂರು: ಮೊನ್ನೆ ಬೆಂಗಳೂರಿನ ಪೀಣ್ಯದ ಕರಹೋಬನಹಳ್ಳಿಯಲ್ಲಿ ಕೆಎಎಸ್ ಅಧಿಕಾರಿ ಕಚೇರಿಯಲ್ಲಿನ ಸೆಕ್ಯುರಿಟಿ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮಗನಿಂದ ಶಾಕಿಂಗ್ ವಿಚಾರ ಹೊರಬಿದ್ದಿದೆ. ಮೃತ ದಂಪತಿ ಮಗನಿಗೆ ಜ್ಯೋತಿಷಿ ಒಬ್ಬ ನಿನಗೆ ಪಿತೃದೋಷ ಇದೆ ಅಂತ ಹೇಳಿದ್ದನ್ನ ಕೇಳಿದ್ದ ಮಗ ಕಡೆಗೆ ಆ ದೋಷ ಪರಿಹಾರಕ್ಕೆ ತಂದೆ ತಾಯಿಯನ್ನೆ ಕೊಲೆಮಾಡಿದ್ದಾನೆ. ನೀನೂ ಚೆನ್ನಾಗಿ ಇರ್ಬೇಕು ಅಂದ್ರೆ ನಿಮ್ಮ ತಂದೆ ಸಾಯಬೇಕು ಎಂದು ಶಾಸ್ತ್ರ ಹೇಳಿದ್ದರಂತೆ. ಇದೇ ವಿಚಾರಕ್ಕೆ ತಂದೆ …
Read More »ಹಲವು ದಿನಗಳ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ
ಬೆಳಗಾವಿ/ಗೋಕಾಕ: ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿದ್ದ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಶನಿವಾರ ಕೋವಿಡ್ ನಿಯಂತ್ರಣದಲ್ಲಿ ಸಭೆ ನಡೆಸುವ ಮೂಲಕ ಬಹಿರಂಗವಾಗಿ ಕಾಣಿಸಿಕೊಂಡರು. ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಮೇಶ್ ಜಾರಕಿಹೊಳಿ ಅವರು ಸೋಮವಾರದಿಂದ ಗೋಕಾಕ ನಗರ ಮತ್ತು ತಾಲೂಕು ಪ್ರದೇಶದಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಿದರು. ಗೋಕಾಕ್ ತಾಲೂಕಿನಾದ್ಯಂತ ಲಾಕ್ ಡೌನ್ …
Read More »ಆಕ್ಸಿಜನ್ ದುಬಾರಿ ಬೆಲೆಗೆ ಮಾರಾಟ: ಆರೋಪಿ ಅರೆಸ್ಟ್
ಬೆಂಗಳೂರು: ಕೊರೊನಾ ಬಿಕ್ಕಟ್ಟು ಕೆಲ ಖದೀಮರ ಪಾಲಿಗೆ ಬಂಡವಾಳವಾಗಿ ಬಿಟ್ಟಿದ್ದೆ. ರಾಜ್ಯದಲ್ಲಿ ಬೆಡ್ ಹಾಗೂ ರೆಮಿಡಿಸಿವರ್ನ್ನ ಕಾಳಸಂತೆಯಲ್ಲಿ ಮಾರಿದ್ದಾಯ್ತು. ಇದೀಗ ಪ್ರಾಣವಾಯುವಿನ ಮೇಲೆ ಖದೀಮರ ಕಣ್ಣು ಬಿದ್ದಿದೆ. ನಗರದಲ್ಲಿ ದುಬಾರಿ ಬೆಲೆಗೆ ಆಕ್ಷಿಜನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ ಬಂಧಿತ ಆರೋಪಿ ಖಾಸಗಿ ಗ್ಯಾಸ್ ಏಜೆನ್ಸಿಯಲ್ಲಿ ಬ್ರಾಂಚ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಆಕ್ಸಿಜನ್ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. 47ಲೀಟರ್ ಆಕ್ಸಿಜನ್ಗೆ …
Read More »18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸ್ಥಗಿತ – ಸಿಎಂ ಮನೆಗೆ ಸಂಸದ ಸಿದ್ದೇಶ್ವರ್ ಮುತ್ತಿಗೆ ಎಚ್ಚರಿಕೆ
ಬೆಂಗಳೂರು: ದೇಶದಲ್ಲಿ ಇಲ್ಲಿವರೆಗೆ 16 ಕೋಟಿ 49 ಲಕ್ಷದ 73 ಸಾವಿರದ 058 ಜನರಿಗೆ ವ್ಯಾಕ್ಸಿನೇಷನ್ ಆಗಿದೆ. ಆದರೆ ವ್ಯಾಕ್ಸಿನ್ ಕೊರತೆ ಹೆಚ್ಚಾಗ್ತಿದೆ. ಈ ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡದಂತೆ ಆಸ್ಪತ್ರೆಗಳಿಗೆ ಬಿಬಿಎಂಪಿ ಆದೇಶಿಸಿದೆ. 2ನೇ ಡೋಸ್ ನೀಡೋವ್ರಿಗೆ ಅಗತ್ಯ ವ್ಯಾಕ್ಸಿನ್ ಕೊರತೆ ಆಗಬಹುದು. ಹಾಗಾಗಿ ಮುಂದಿನ ಆದೇಶದವರೆಗೂ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಬೇಡಿ ಅಂತ ಸೂಚಿಸಿದೆ. ವ್ಯಾಕ್ಸಿನ್ ಕೊರತೆ ಇದೆ ಅನ್ನೋದು ಗೊತ್ತಿದ್ದರೂ ಕೂಡ …
Read More »ಸಂಸದ ತೇಜಸ್ವಿ ವಿರುದ್ಧ ಕಂಪ್ಲೆಂಟ್ – ತನಿಖೆಗೆ ಆಗ್ರಹಿಸಿ ಕಾಂಗ್ರೆಸ್‍ನಿಂದಲೂ ದೂರು
ಬೆಂಗಳೂರು: ಸೌತ್ ಝೋನ್‍ನಲ್ಲಿ ಬೆಡ್‍ಬ್ಲಾಕ್ ದಂಧೆ ಪ್ರಕರಣದಲ್ಲಿ ಕೋಮು ವೈಷಮ್ಯ ಬಿತ್ತುವ ಯತ್ನ ಆರೋಪ ಕೇಳಿ ಬಂದಿದೆ. ಐಎಎಸ್ ಅಧಿಕಾರಿ ಮೇಲಿನ ದೌರ್ಜನ್ಯ, ಬೆಡ್‍ಗಳ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿದ ತೇಜಸ್ವಿ ಸೂರ್ಯ ಹಾಗೂ ಸತೀಶ್ ರೆಡ್ಡಿ ವಿರುದ್ಧ ಪೊಲೀಸ್ ಆಯುಕ್ತರು, ಬಿಬಿಎಂಪಿ ಚೀಪ್ ಗೌರವ್ ಗುಪ್ತಾಗೆ ಕಾಂಗ್ರೆಸ್ ನಿಯೋಗ ದೂರು ಕೊಟ್ಟಿದೆ. ಇನ್ನೊಂದೆಡೆ ತೇಜಸ್ವಿ ಸೂರ್ಯ ವಿರುದ್ಧ ಎಫ್‍ಐಆರ್‍ಗೆ ಕೋರಿ ಜೆಡಿಎಸ್ ಸ್ಟೇಟ್ ಕಮಿಟಿ ಅಬ್ಸರ್ವರ್ ನಜ್ಮಾ ಜನೀರ್ …
Read More »ಕೋವಿಡ್ ಲಸಿಕಾ ಅಭಿಯಾನ: ಸದ್ಯಕ್ಕೆ ಎರಡನೇ ಡೋಜ್ ಲಸಿಕೆ ಮಾತ್ರ ನೀಡಿಕೆ
ಬೆಳಗಾವಿ : ಜಿಲ್ಲೆಯಲ್ಲಿ ಕೋವಿಡ್ 19 ರ ಕೋರೋನ ಲಸಿಕ ಅಭಿಯಾನವು ಪ್ರಗತಿಯಲ್ಲಿದ್ದು, ಈಗಾಗಲೇ ಜಿಲ್ಲೆಯಲ್ಲಿ 6,24,485 ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗಿರುತ್ತದೆ. ಜಿಲ್ಲೆಯಲ್ಲಿ ಕೋವಿಶೀಲ್ಡ್ ಹಾಗೂ ಕೋ ವ್ಯಾಕ್ಸಿನ್ ಲಸಿಕೆಯನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಕೋವಿಶೀಲ್ಡ್ ಲಸಿಕೆ ಪಡೆದವರು ಎರಡನೇ ಡೋಜ್ ಅನ್ನು ಮೊದಲ ಲಸಿಕೆ ಪಡೆದ 42 ದಿನಗಳ ನಂತರ ಪಡೆಯುವುದು. ಅದೇ ರೀತಿ ಕೋವ್ಯಾಕ್ಸಿನ್ ಲಸಿಕೆ ಪಡೆದವರು ಎರಡನೇ ಡೋಜನ್ನು 28 ದಿನಗಳ ನಂತರ ಪಡೆಯುವುದು. ಸದ್ಯಕ್ಕೆ ಜಿಲ್ಲೆಯಲ್ಲಿ …
Read More »ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : ಬೇಸಿಗೆ ರಜೆಯಲ್ಲೂ ಪಡಿತರ ವಿತರಣೆ!
ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಶಾಲಾ ಮಕ್ಕಳಿಗೆ ಶೈಕ್ಷಣಿಕ ವರ್ಷದ ಆರಂಭದಿಂದಲೂ ಬಿಸಿಯೂಟದ ಬದಲಿಗೆ ಆಹಾರ ಧಾನ್ಯವನ್ನೇ ನೀಡಲಾಗುತ್ತಿದ್ದು, ಬೇಸಿಗೆ ರಜೆಯಲ್ಲೂ ಬಿಸಿಯೂಟದ ಬದಲು ಪಡಿತರ ನೀಡಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9 ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಇಲ್ಲದೇ ತೇರ್ಗಡೆ ಮಾಡಿ ಬೇಸಿಗೆ ರಜೆ ಪ್ರಕಟಿಸಿದೆ. …
Read More »
Laxmi News 24×7