Breaking News

ಜಿಲ್ಲೆ

3 ಆಯಂಬುಲೆನ್ಸ್ ಕೊಡುಗೆ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್

ಬೆಳಗಾವಿ: ಇತ್ತೀಚೆಗೆ ಶಾಸಕ ಎಂಪಿ ರೇಣುಕಾಚಾರ್ಯ ತಾವಾಗಿಯೇ ಆಯಂಬುಲೆನ್ಸ್ ಡ್ರೈವ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ತಾವೇ ಌಂಬುಲೆನ್ಸ್​ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಖಾನಾಪೂರದಲ್ಲಿ ತಾಯಿ ಫೌಂಡೇಶನ್​ ವತಿಯಿಂದ ಸಾರ್ವಜನಿಕರಿಗೆ ನೀಡಲಾದ ಅಂಬ್ಯುಲೆನ್ಸ್​ನ್ನು ತಾವೇ ಚಲಾಯಿಸುವ ಮೂಲಕ ಉದ್ಘಾಟಿಸಿದ್ದಾರೆ. ಅಂಜಲಿ ನಿಂಬಾಳ್ಕರ್ ಫೌಂಡೇಶನ್ ವತಿಯಿಂದ ತನ್ನ ಕ್ಷೇತ್ರದ ಜನರಿಗೆ ಮೂರು ಅಂಬ್ಯುಲೆನ್ಸ್ ಕೊಡುಗೆ ನೀಡಿದ್ದಾರೆ. ಈ ವೇಳೆ ತಾವೇ ಌಂಬುಲೆನ್ಸ್​ ಚಲಾಯಿಸಿದ್ದನ್ನ ಕಂಡು …

Read More »

ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ  ಚಿರತೆಯನ್ನು ಬೈಲಹೊಂಗಲದ ಬಿಜೆಪಿ ಯುವ ಮುಖಂಡ ಗುರು ಮೆಟಗುಡ್ಡ ದತ್ತು ಸ್ವೀಕರಿಸಿದರು.

ಬೆಳಗಾವಿ – ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದ  ಚಿರತೆಯನ್ನು ಬೈಲಹೊಂಗಲದ ಬಿಜೆಪಿ ಯುವ ಮುಖಂಡ ಗುರು ಮೆಟಗುಡ್ಡ ದತ್ತು ಸ್ವೀಕರಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಮ್ ವಿ ಅಮರನಾಥ, ವಲಯ ಅರಣ್ಯ ಅಧಿಕಾರಿ  ಡಿ. ಶಿವಕುಮಾರ್, ರಾಕೇಶ್ ಅರ್ಜುನವಾಡ, ಪರಿಸರ ಪ್ರೇಮಿ ದಯಾನಂದ ಪರಾಳಶೆಟ್ಟರ್ ಉಪಸ್ಥಿತಿಯಲ್ಲಿ ಗುರು ಮೆಟಗುಡ್ ದತ್ತು ಸ್ವೀಕಾರ ಪ್ರಮಾಣ ಪತ್ರ ಪಡೆದರು. ಮುಂದಿನ ಒಂದು ವರ್ಷಗಳ ಅವಧಿಗೆ ಚಿರತೆಯನ್ನು ಅವರು ದತ್ತು ಸ್ವೀಕರಿಸಿದ್ದಾರೆ.

Read More »

ಸಾಲ ಕೊಡಿಸ್ತೀವಿ, ಫೀಸ್ ಕಟ್ಟಿ ಎಂದ ಖಾಸಗಿ ಶಾಲೆ

ಬೆಂಗಳೂರು: ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯೊಂದು ಸಾಲ ದಂಧೆ ಶುರು ಮಾಡಿಕೊಂಡಿದೆ. ಸಾಲ ಕೊಡಿಸ್ತೀವಿ, ನಮಗೆ ಫೀಸ್ ಕಟ್ಟಿ ಎಂದು ಲಗ್ಗೆರೆಯ ಖಾಸಗಿ ಶಾಲೆಯೊಂದು ಪೋಷಕರಿಗೆ ದುಂಬಾಲು ಬಿದ್ದಿದೆ. ಲಗ್ಗೆರೆಯ ಈ ಖಾಸಗಿ ಶಾಲೆ, ಫೈನಾನ್ಸ್ ಪೀರ್ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಯ ಟಿಸಿಯನ್ನು ಅಡಮಾನ ಇಟ್ಟುಕೊಂಡು ಪೊಷಕರಿಗೆ ಸಾಲ ವಿತರಣೆಗೆ ಈ ಫೈನಾನ್ಸ್ ಕಂಪನಿ ಮುಂದಾಗಿದೆ. ಸಾಲ ತೆಗೆದುಕೊಂಡ 6 ತಿಂಗಳವರೆಗೆ ಯಾವುದೇ ರೀತಿಯ …

Read More »

ಹಿರಿಯ ನಟ ಸುರೇಶ್ ಚಂದ್ರ ಕೊರೊನಾದಿಂದ ನಿಧನ

ಬೆಂಗಳೂರು: ಚೆಲುವಿನ ಚಿತ್ತಾರ ಚಿತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟ ಸುರೇಶ್ ಚಂದ್ರ (69) ಇಂದು ವಿಧಿವಶರಾಗಿದ್ದಾರೆ. ಸುರೇಶ್ ಚಂದ್ರ ಅವರಿಗೆ ಇತ್ತೀಚಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅನೇಕ ನಟ ದಿಗ್ಗಜರ ಜೊತೆ ನಟಿಸಿದ್ದ ಸುರೇಶ್​ ಚಂದ್ರ ಅವರು, ಗೋಲ್ಡ್​ನ್​ ಸ್ಟಾರ್​ ಗಣೇಶ್​ ಅಭಿನಯದ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದರು.

Read More »

ಯೂಟ್ಯೂಬ್​ ಚಾನೆಲ್​​ ಸಬ್​ ಎಡಿಟರ್​ನ್ನ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ

ಬೆಳಗಾವಿ: ಯೂಟ್ಯೂಬ್​ ಚಾನೆಲ್​​ ಸಬ್​ ಎಡಿಟರ್​ನ್ನ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಹತ್ತಿರದ ಚುನಿಮಟ್ಟಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ ಕಾಚ್ಯಾಗೋಳ(30) ಕೊಲೆಯಾದ ದುರ್ದೈವಿ. ನಿನ್ನೆ ತಡರಾತ್ರಿ ಈ ಘಟನೆ ಸಂಭವನಿಸಿದ್ದು, ಕೊಲೆಗೆ ನಿಖರ ಕಾರಣ ಈವರೆಗೆ ತಿಳಿದು ಬಂದಿಲ್ಲ. ಇನ್ನು ಮೃತ ಶಿವಾನಂದ್​ ಖಾಸಗಿ ಯೂಟ್ಯೂಬ್ ಚಾನಲ್‌ನ ಸಹ ಸಂಪಾದಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ಘಟಪ್ರಭಾ ಪೊಲೀಸರು …

Read More »

ಬೆಂಗಳೂರು : ಪರಪುರುಷನ ಸಂಗದಿಂದ ಮಕ್ಕಳಿಗೆ ವಿಲನ್ ಆದ ತಾಯಿ : ಸದ್ಯ ಪೊಲೀಸರ ಅತಿಥಿ

ಬೆಂಗಳೂರು : ನಗರದ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಯಮ್ಮ ಎಂಬಾಕೆ ತನ್ನ ಇಬ್ಬರು ಮಕ್ಕಳ ಪಾಲಿಗೆ ವಿಲನ್ ಆಗಿದ್ದಾಳೆ.ಹೌದು ಜಯಮ್ಮಳದ್ದು ವಯಸ್ಸಲ್ಲ ವಯಸ್ಸಿನಲ್ಲಿ ಮದುವೆಯಾಗಿ ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾಳೆ. ಹೀಗೆ ಅಪ್ರಾಪ್ತಳನ್ನು ಮದುವೆಯಾಗಿದಕ್ಕೆ ಆಕೆಯ ಗಂಡ ಜೈಲು ಸೇರಿದ್ದಾನೆ. ಈ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಜಯಮ್ಮ ಜೀವನ ನಿರ್ವಹಣೆಗಾಗಿ ಆಸ್ಪತ್ರೆವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಅಲ್ಲಿ ಪರಿಚಯವಾದ ಮತ್ತೊಬ್ಬಳ ಗಂಡನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಆತನ ಹೆಸರು …

Read More »

ಬೆಳಗಾವಿ ತಾಲ್ಲೂಕಿನಲ್ಲಿ ಕೋವೀಡ್ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಇಂದು ಶುಕ್ರವಾರದ ಹೆಲ್ತ್ ಬುಲಿಟೀನ್ ಬಿಡುಗಡೆ ಆಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಕೋವೀಡ್ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗಿತ್ತಿದೆ. ಇಂದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 436 ಸೊಂಕಿತರು ಪತ್ತೆಯಾಗಿದ್ದು,ಬೆಳಗಾವಿ ತಾಲ್ಲೂಕಿನಲ್ಲಿ ಇಂದು ಕೇವಲ 91 ಸೊಂಕಿತರು ಪತ್ತೆಯಾಗಿದ್ದಾರೆ.ಚಿಕ್ಕೋಡಿಯಲ್ಲಿ ಅತೀ ಹೆಚ್ವು 157 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಅತೀ ಕಡಿಮೆ ,6 ಜನ ಸೊಂಕಿತರು,ಅಥಣಿಯಲ್ಲಿ,40,ಗೋಕಾಕಿನಲ್ಲಿ 11,ಹುಕ್ಕೇರಿ 32,ಖಾನಾಪೂರ 14,ರಾಯಬಾಗ 49,ಸವದತ್ತಿಯಲ್ಲಿ 12,ಬೈಲಹೊಂಗಲದಲ್ಲಿ …

Read More »

ಗಮನಿಸಿ: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯಲಿದೆ ಆನ್ ಲೈನ್ ಪರೀಕ್ಷೆ

ಬೆಂಗಳೂರು: ಕೋವಿಡ್ ಕಾರಣದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡಿದ್ದ ಶಿಕ್ಷಣ ಇಲಾಖೆ ಇದೀಗ ಶಾಕ್ ನೀಡಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಲು ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಎರಡು ಪ್ರಶ್ನೆ ಪತ್ರಿಕೆಗಳನ್ನು ಹಾಳೆಯಲ್ಲಿ ಉತ್ತರಿಸಿ ಸ್ಕ್ಯಾನ್ ಮಾಡಿ ವಾಟ್ಸಪ್ ಅಥವಾ ಇ ಮೇಲ್ ಅಥವಾ ಅಂಚೆ ಮೂಲಕ ಉಪನ್ಯಾಸಕರಿಗೆ ಕಳುಹಿಸಬೇಕು. ಇವುಗಳನ್ನು ಸಂಬಂಧಿಸಿದ ಉಪನ್ಯಾಸಕರು …

Read More »

ರಸ್ತೆಗೆ ಇಳಿಯಬೇಡಿ: ಸಾರ್ವಜನಿಕರಿಗೆ ಸಚಿವ ಬಸವರಾಜ ಬೊಮ್ಮಾಯಿ ಮನವಿ

ಬೆಂಗಳೂರು: ಲಾಕ್‌ಡೌನ್‌ನ ಕೆಲವು ವಿನಾಯ್ತಿಗಳು ಆರಂಭವಾಗುವುದು ಇದೇ 14 ರ ಬಳಿಕ. ಎಲ್ಲವು ಮುಗಿಯಿತು ಎಂದು ಇವತ್ತೇ ರಸ್ತೆಗೆ ಇಳಿಯುತ್ತಿರುವುದು ಸರಿಯಲ್ಲ. ಸ್ವಲ್ಪ ತಾಳ್ಮೆ ವಹಿಸಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಗುರುವಾರ ರಾತ್ರಿ ನಿರ್ಧಾರ ಪ್ರಕಟಿಸಿದ್ದರಿಂದ ಕೆಲವರು ಇವತ್ತಿನಿಂದಲೇ ಲಾಕ್‌ಡೌನ್‌ ತೆರವು ಮಾಡಲಾಗಿದೆ ಎಂದು ಭಾವಿಸಿ ರಸ್ತೆಗೆ ಇಳಿಯುತ್ತಿದ್ದಾರೆ. ಇದು ಸರಿಯಲ್ಲ ಎಂದರು. ಕೋವಿಡ್‌ ಈಗಷ್ಟೇ ನಿಯಂತ್ರಣಕ್ಕೆ …

Read More »

Lock down ; ಸೋಮವಾರದಿಂದ ಯಾವುದಕ್ಕೆ ಅವಕಾಶ? ಯಾವುದಕ್ಕೆ ನಿರ್ಬಂಧ?

ಬೆಂಗಳೂರು : ತಿಂಗಳಿಗೂ ಹೆಚ್ಚು ಸಮಯದಿಂದ ಕರ್ನಾಟಕದಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ. ದಿನದಿಂದ ದಿನಕ್ಕೆ ಕೊರೋನಾ ಕೇಸುಗಳು ನಿಯಂತ್ರಣಕ್ಕೆ ಬರುತ್ತಿದ್ದರೂ ಸರ್ಕಾರ ನಿರೀಕ್ಷಿಸಿದ ಮಟ್ಟಿಗೆ ಕೋವಿಡ್ ಪ್ರಕರಣಗಳು ಕಡಿಮೆಯಾಗಿಲ್ಲ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಜೂನ್ 14ರಿಂದ ಅನ್​ಲಾಕ್​ ಘೋಷಿಸಲಾಗಿದೆ. ಆದರೆ, ಅನ್​ಲಾಕ್​ ಮಾಡಲಾಗಿರುವ ಜಿಲ್ಲೆಗಳಲ್ಲೂ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ? ಆ …

Read More »