Breaking News

ಜಿಲ್ಲೆ

ಮಾನಕ್ಕೆ ಹಾನಿ ವರದಿ ಪ್ರಕಟಿಸದಂತೆ ಕೇಂದ್ರ ಸಚಿವ ಡಿವಿಎಸ್‌ ತಡೆಯಾಜ್ಞೆ

ಬೆಂಗಳೂರು: ತಮ್ಮ ಮಾನಕ್ಕೆ ಹಾನಿ ತರುವ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಬಿಜೆಪಿಯ ರಮೇಶ ಜಾರಕಿಹೊಳಿ ವಿರುದ್ಧ ಸಿ.ಡಿ ಬಿಡುಗಡೆ ಮಾಡಿದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅದರ ಬೆನ್ನಲ್ಲೇ ಹಲವು ಸಚಿವರು ತಮ್ಮ ವಿರುದ್ಧ ಸಿ.ಡಿ ಬಿಡುಗಡೆ …

Read More »

ಶ್ರೀರಾಮುಲು ಪಿಎ ಬಗ್ಗೆ, ವಿಜಯೇಂದ್ರ ಬಗ್ಗೆ ಮಾತಾಡೋದು ನನ್ನ ಲೆವೆಲ್ ಅಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರು ಬಳಸಿ ಹಲವರಿಗೆ ವಂಚನೆ ಎಸಗಿದ್ದ ಆರೋಪದ ಮೇಲೆ ಸಚಿವ ಶ್ರೀರಾಮುಲು ಪಿಎ ರಾಜಣ್ಣರನ್ನು ಸಿಸಿಬಿ ಪೊಲೀಸರು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಶ್ರೀರಾಮುಲು, ವಿಜಯೇಂದ್ರ ವಿಚಾರವಾಗಿ ನಾನು ಮಾತಾಡೋದು ನನ್ನ ಲೆವೆಲ್​ ಅಲ್ಲ. ಪಿಎಗಳ ವ್ಯವಹಾರಕ್ಕೆ ನಾನು ಮಧ್ಯ ಪ್ರವೇಶ ಮಾಡೊಲ್ಲ. ಅದರ ಬಗ್ಗೆ ನಾನು ಕಾಮೆಂಟ್ ಕೂಡಾ ಮಾಡೊಲ್ಲ. …

Read More »

ಫೋನ್‌ ಕದ್ದಾಲಿಕೆ: ಪೊಲೀಸರಿಗೆ ಅರ್ಚಕರ ನಂಬರ್‌ ನೀಡಿದ್ದ ಅರವಿಂದ್‌ ಬೆಲ್ಲದ್‌?

ಬೆಂಗಳೂರು: ಫೋನ್‌ ಕದ್ದಾಲಿಕೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಈ ಹಿಂದೆ ಪೊಲೀಸರಿಗೆ ನೀಡಿದ ನಂಬರ್‌ ಹೈದಾರಾಬಾದ್‌ ಮೂಲದ ಅರ್ಚಕರದ್ದು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬುಧವಾರ ಶೇಷಾದ್ರಿಪುರಂ ಎಸಿಪಿ ಕಚೇರಿಗೆ ಆಗಮಿಸಿದ ಶಾಸಕರನ್ನು ಎಸಿಪಿ ಪೃಥ್ವಿ ಅವರು ಸುಮಾರು ಒಂದು ಗಂಟೆ ವಿಚಾರಣೆ ನಡೆಸಿದ್ದು, ಕೆಲವೊಂದು ಮಾಹಿತಿ ಪಡೆದು ಕೊಂಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ “ಕೆಲ ದಿನಗಳಹಿಂದೆ ಯುವರಾಜ ಸ್ವಾಮಿ ಎಂಬ …

Read More »

ಕಿತ್ತೂರು ತಾಲೂಕಿನ ವೈದ್ಯರಿಗೆ Thermos ವಿತರಿಸಿ ವೈದ್ಯರ ಸೇವೆಯನ್ನು ಗುಣಗಾನ ಮಾಡಿದ ಪೆಂಡಾಲ್ ಗುತ್ತಿಗೆದಾರ ಪಕ್ಕಿರಪ್ಪ ಮುರಗೋಡ..!!

ಕಿತ್ತೂರು ತಾಲೂಕಿನ ವೈದ್ಯರಿಗೆ Thermos ವಿತರಿಸಿ ವೈದ್ಯರ ಸೇವೆಯನ್ನು ಗುಣಗಾನ ಮಾಡಿದ ಪೆಂಡಾಲ್ ಗುತ್ತಿಗೆದಾರ ಪಕ್ಕಿರಪ್ಪ ಮುರಗೋಡ..!! ಕಿತ್ತೂರು :ಗುರುವಾರ ದಂದು ಕಿತ್ತೂರು ಪಟ್ಟಣದಲ್ಲಿರುವ ಕಲ್ಮಠ ಸಭಾಭವನದಲ್ಲಿ ವೈದ್ಯರ ದಿನಾಚರಣೆ ನಿಮಿತ್ಯ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ರಾಜಗುರು ಸಂಸ್ಥಾನ ಕಲ್ಮಠದ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ತಾಲೂಕಿನ ಗಣ್ಯ ವ್ಯಕ್ತಿಗಳು ಮತ್ತು ಪೆಂಡಾಲ್ ಗುತ್ತಿಗೆದಾರರು ಆದ ಪಕ್ಕಿರಪ್ಪ …

Read More »

ರಾಜ್ಯದಲ್ಲೂ ಪ್ರವಾಸಿ ಥೀಮ್‌ಪಾರ್ಕ್‌

ಬೆಂಗಳೂರು: ಒಡಿಶಾದ ಕೊನಾರ್ಕ್‌ ಸೂರ್ಯ ದೇಗುಲದಲ್ಲಿ ಇರುವ ಥೀಮ್‌ ಪಾರ್ಕ್‌ ಮಾದರಿಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ಮತ್ತು ಐತಿಹಾಸಿಕ ತಾಣಗಳಲ್ಲಿ ಥೀಮ್‌ ಪಾರ್ಕ್‌ ಸ್ಥಾಪಿಸುವ ಇರಾದೆ ರಾಜ್ಯ ಸರಕಾರಕ್ಕೆ ಇದೆ. ಮೊದಲ ಹಂತದಲ್ಲಿ ಹಂಪಿಯ 200 ಎಕರೆ ಪ್ರದೇಶ ದಲ್ಲಿ ಥೀಮ್‌ ಪಾರ್ಕ್‌ ಸ್ಥಾಪನೆಯಾಗಲಿದೆ. ಅದರಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ಕುರಿತು ಡಿಜಿಟಲ್‌ ಸ್ಪರ್ಶದೊಂದಿಗೆ ಕಿರುಚಿತ್ರ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಸಮೀಪದಲ್ಲೇ ಆಂಜನೇಯನ ಜನ್ಮಸ್ಥಳ ಎಂದು ಪ್ರತೀತಿ ಇರುವ ಅಂಜನಾದ್ರಿ ಬೆಟ್ಟವೂ ಇರುವುದರಿಂದ …

Read More »

ಮೊಬೈಲಿದ್ದರೂ ನೆಟ್‌ ಇಲ್ಲ

ಬೆಂಗಳೂರು: ಶಾಲೆಗಳನ್ನು ಪುನರಾರಂಭಿಸಬೇಕು ಎಂದು ರಾಜ್ಯ ಸರಕಾರದ ಮೇಲೆ ಒತ್ತಡ ಇದೆ. ಇದರ ನಡುವೆ ರಾಜ್ಯದ ಶೇ. 75ರಷ್ಟು ವಿದ್ಯಾರ್ಥಿಗಳ ಹೆತ್ತವರ ಬಳಿ ಮೊಬೈಲ್‌ ಇದ್ದರೂ ಶೇ. 49 ಮಂದಿ ಬಳಿ ಮಾತ್ರ ಇಂಟರ್‌ನೆಟ್‌ ಸೌಲಭ್ಯ ಹೊಂದಿದ್ದಾರೆ. ಶಿಕ್ಷಣ ಇಲಾಖೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ. ಮಕ್ಕಳ ಶಾಲಾ ದಾಖಲಾತಿ ಸಂದರ್ಭ ದಲ್ಲಿ ಮೊಬೈಲ್‌ ಫೋನ್‌ ಹೊಂದಿರುವ ಮತ್ತು ಹೊಂದಿರದ ಹೆತ್ತವರು, ಸ್ಮಾರ್ಟ್‌ ಫೋನ್‌ ಮತ್ತು ಸಾಮಾನ್ಯ ಫೋನ್‌ …

Read More »

ಅಪ್ಪ-ಅಮ್ಮ ಇಲ್ಲದ ಕಾಂಗ್ರೆಸ್ ಪಕ್ಷದಲ್ಲಿ ಜಾತಿಗೊಬ್ಬ ಮುಖ್ಯಮಂತ್ರಿ: ಈಶ್ವರಪ್ಪ ಲೇವಡಿ

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಜಾತಿಗೊಬ್ಬರಂತೆ ಐವರು ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಇಳಿಯಬಾರದಿತ್ತು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಮುಂದಿನ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಬೆಂಬಲಿಗ ಶಾಸಕರ ಬಾಯಿ ಮುಚ್ಚಿಸಲು ಸಿದ್ದರಾಮಯ್ಯ ಮುಂದಾಗಿಲ್ಲ. ಡಿ.ಕೆ. ಶಿವಕುಮಾರ್‌ ಕೂಡಾ ಯಾರ ಬಾಯಿಯನ್ನೂ ಮುಚ್ಚಿಸಿಲ್ಲ. ಎಂ.ಬಿ. ಪಾಟೀಲ ನಾನು ಸನ್ಯಾಸಿ ಅಲ್ಲ ಅಂತಿದ್ದಾರೆ. ದಲಿತ ಮುಖ್ಯಮಂತ್ರಿ ಎಂದು ಜಿ. ಪರಮೇಶ್ವರ, ನಾನೂ ಮುಖ್ಯಮಂತ್ರಿ ಅಭ್ಯರ್ಥಿ …

Read More »

ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರೇಳಿಕೊಂಡು ಹಣ ವಸೂಲಿ ಆರೋಪದಲ್ಲಿ ಸಚಿವ ಶ್ರೀರಾಮುಲು ಪಿಎ ಅರೆಸ್ಟ್ ಆಗಿದ್ದಾರೆ. ಸ್ವತಃ ವಿಜಯೇಂದ್ರ ದೂರು ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶ್ರೀರಾಮುಲು ಮನೆಯಲ್ಲೇ ಆರೋಪಿ ರಾಜಣ್ಣನನ್ನ ವಶಕ್ಕೆ ಪಡೆದಿದ್ದಾರೆ. ಕೆಲಸ ಕೊಡಿಸ್ತೀನಿ, ವರ್ಗಾವಣೆ ಮಾಡಿಸ್ತೀನಿ ಅಂತ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ. ರಾಜಣ್ಣ 8 ವರ್ಷದಿಂದ ರಾಮುಲು ಬಳಿ ಕೆಲಸ ಮಾಡ್ತಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯಲಿದೆಯೇ?

ಬೆಳಗಾವಿ – ಇದೇ ತಿಂಗಳಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯಲಿದೆಯೇ? ವಿಧಾನ ಪರಿಷತ್ ಸಭಾಪತಿ, ವಿಧಾನಸಭಾಧ್ಯಕ್ಷ, ವಿಧಾನಪರಿಷತ್ ಮುಖ್ಯಸಚೇತಕ – ಈ ಮೂವರೂ ಬೆಳಗಾವಿಯ ಸುವ್ರಣ ವಿಧಾನಸೌಧದಲ್ಲಿ ಜುಲೈ ತಿಂಗಳಲ್ಲಿ ವಿಧಾನಮಂಡಳದ ಅಧಿವೇಶನ ನಡೆಸಲು ಸಹಮತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಇದೇ ತಿಂಗಳಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಳದ ಅಧಿವೇಶನ ನಡೆಸುವಂತೆ ಪತ್ರ ಬರೆದಿದ್ದಾರೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ …

Read More »

ಕೈ ಹಿಡಿದ ಪತ್ನಿಯನ್ನೇ ವೇಶ್ಯೆಯನ್ನಾಗಿ ಬಿಂಬಿಸಲು ಟೆಕ್ಕಿ ಪತಿ ಕುತಂತ್ರ

ಬೆಂಗಳೂರು: ಟೆಕ್ಕಿಯೊಬ್ಬ ಕೈ ಹಿಡಿದ ಪತ್ನಿಗೆ ಹಿಂಸೆ ನೀಡಲು ಆತ ಕಂಡುಕೊಂಡ ದಾರಿ ಕೇಳಿದ್ರೆ ಹಿಡಿಶಾಪ ಹಾಕ್ತೀರಿ. ಪತ್ನಿಯನ್ನ ವೇಶ್ಯೆ ಎಂದು ಬಿಂಬಿಸಲು ಅವಳ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಅವಳ ಮೊಬೈಲ್ ನಂಬರ್ ಅನ್ನೂ ಹಾಕಿದ್ದ. ಹಲವು ಮೊಬೈಲ್​ ನಂಬರ್​ಗಳಿಂದ ಪತ್ನಿಗೆ ಅಶ್ಲೀಲ ಸಂದೇಶ ಕಳಿಸಿದ್ದ. ಸಾವಿರಕ್ಕೂ ಹೆಚ್ಚಿನ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಅಸಭ್ಯವಾಗಿ ಕಮೆಂಟ್ ಮಾಡಿ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದ 29 ವರ್ಷದ ಯುವಕ ಸ್ಟೋರಿ …

Read More »