ಬೆಳಗಾವಿ: ಶಿಶು ಅಭಿವೃದ್ಧಿ ಇಲಾಖೆಯ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಖಾಲಿ ಇರುವ ನಗರ ಪ್ರದೇಶಗಳಲ್ಲಿ ಅದೇ ವಾರ್ಡಿನ ಇಚ್ಛೆಯುಳ್ಳ ಅಭ್ಯರ್ಥಿಗಳು ವೆಬ್‍ಸೈಟ್ ವಿಳಾಸ: anganwadiruit.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ಜು.14 ರಿಂದ ಅಗಸ್ಟ್ 14 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಜಿಲ್ಲಾ ಬಾಲ ಭವನ ಕಟ್ಟಡ, …
Read More »ರಾಜಾಹುಲಿ ಯನ್ನಾ ಸಿ ಎಂ ಸ್ಥಾನದಿಂದ ಇಳಿಸಿ ಬೆಳಗಾವಿ ಯವರೆ ಆಗ್ತಾರಾ ಮುಂದಿನ ಸಿ ಎಂ..?
ಈಗ ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಿರುಗಾಳಿ ಬೀಸುತ್ತಿದೆ.ಜುಲೈ 26 ಕ್ಕೆ ಸಿಎಂ ಬದಲಾವಣೆ ಖಚಿತ ಎಂದು ಬಿಜೆಪಿಯ ಕೆಲವು ನಾಯಕರು ತಮ್ಮ ಆಪ್ತರ ಬಳಿ ಹೇಳಿಕೊಳ್ಳುತ್ತಿದ್ದಾರೆ.ಹಾಗಾದ್ರೆ ಮುಂದಿನ ಮುಖ್ಯಮಂತ್ರಿ ಯಾರು ? ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ.ಈ ಕುರಿತು ದೃಶ್ಯಮಾದ್ಯಮಗಳಲ್ಲಿ ಕ್ಷಣಕ್ಕೊಂದು ಬ್ರೇಕಿಂಗ್ ಸುದ್ಧಿ ಪ್ರಕಟವಾಗುತ್ತಿದೆ. ಸಿಎಂ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ.ಆದ್ರೆ ಅವರ ಅಧಿಕಾರದ ಅವಧಿ ಜುಲೈ 26 ರರವೆಗೆ ಮಾತ್ರ ಎನ್ನುವ ಸುದ್ಧಿ ರಾಜ್ಯದ …
Read More »ನದಿಯಲ್ಲಿ ಹುಚ್ಚು ಸಾಹಸ; ಸೇತುವೆ ಕೆಳಕ್ಕೆ ಉರುಳಿಬಿದ್ದ ಟ್ರ್ಯಾಕ್ಟರ್
ವಿಜಯಪುರ: ಜಿಲ್ಲೆಯಲ್ಲಿ ಡೋಣಿ ನದಿಯ ರಭಸಕ್ಕೆ ಸೇತುವೆಯ ಕೆಳಗೆ ಟ್ರ್ಯಾಕ್ಟರ್ ಉರುಳಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಗುಂಡಕಾನಾಳ ಗ್ರಾಮದ ಮಧುಗೌಡ ಪಾಟೀಲ ಅವರ ಎಂಬುವವರಿಗೆ ಸೇರಿದ್ದ ಟ್ರ್ಯಾಕ್ಟರ್ ಹಡಗಿನಾಳ ಮಾರ್ಗದಲ್ಲಿ ಡೋಣಿ ಸೇತುವೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೆಲಮಟ್ಟದ ಸೇತುವೆಯ ಮೇಲೆ ವಾಹನ ಚಲಾಯಿಸುತ್ತಿರುವಾಗ ಟ್ರ್ಯಾಕ್ಟರ್ ಸೇತುವೆಯ ಕೆಳಗೆ ಉರುಳಿದೆ. ತಾಳಿಕೋಟಿ ಪಟ್ಟಣದಿಂದ ಮೂಕಿಹಾಳ ಗ್ರಾಮದತ್ತ ಹೊರಟಿದ್ದ ಟ್ರ್ಯಾಕ್ಟರ್ ಡೋಣಿ ನದಿಯ ಮೇಲೆ ಪ್ರವಾಹದ ನೀರು ಇದ್ದರೂ …
Read More »ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ.
ಗದಗ: ಆತ 12 ವರ್ಷಗಳಿಂದ ಸೈನಿಕನಾಗಿ ದೇಶ ಕಾಯ್ತಿದ್ದ. ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದ. ಬಳಿಕ ಮೇಲಾಧಿಕಾರಿಗಳ ಕರೆ ಮೇಲೆ ಮತ್ತೆ ಸೇವೆಗೆ ಹಾಜರಾದ. ಆದ್ರೆ ಬೆಳಿಗ್ಗೆ ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ. ಇಂದು ಛತ್ತೀಸ್ಘಡದಲ್ಲಿ ಗದಗ ಮೂಲದ ಯೋಧ ಹುತಾತ್ಮನಾಗಿರೋ ಸುದ್ದಿ ತಿಳಿದು ಗೊಜನೂರು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. …
Read More »ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಆದೇಶ: B.S.Y.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತಕ್ಷಣ ಹಿಂದಿನ ಬಾಕಿಯೂ ಸೇರಿ ಶೇ.11 ತುಟ್ಟಿ ಭತ್ಯೆಯನ್ನು ಜುಲೈ 1ರಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶದಿಂದ 6 ಲಕ್ಷ …
Read More »ವಿಶೇಷ ಜಿಲ್ಲಾಧಿಕಾರಿ: ಐಎಎಸ್ ಅಧಿಕಾರಿ ನೇಮಕಕ್ಕೆ ಸೂಚನೆ
ಕೆಎಎಸ್ ಅಧಿಕಾರಿಗಳಾದ ಎಂ. ಕೆ.ಜಗದೀಶ್ ಮತ್ತು ಬಸವರಾಜ್ ಅವರನ್ನು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ನಗರದ ವಕೀಲ ವಾಸುದೇವ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ‘ಐಎಎಸ್ ಅಧಿಕಾರಿಗಳನ್ನೇ ಈ ಹುದ್ದೆಗಳಿಗೆ ನೇಮಕ ಮಾಡಬೇಕು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿದೆ. ‘ಕರ್ನಾಟಕ ಭೂಕಂದಾಯ …
Read More »ಕೊಡವ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ: ಅಧ್ಯಯನದ ಮಾನದಂಡ ಪರಿಶೀಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು: ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಡಗದ ಸ್ಥಾನಮಾನ ಕಲ್ಪಿಸುವ ವಿಚಾರವಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಲ್ಲಿಸಿರುವ ಅಧ್ಯಯನ ವರದಿಯನ್ನು ಪರಿಗಣಿಸುವ ಮೊದಲು ಸೂಕ್ತ ಮಾನದಂಡಗಳನ್ನು ಅನುಸರಿಸಿ ಅಧ್ಯಯನ ನಡೆಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಅಧ್ಯಯನದ ಸಂದರ್ಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನೀಡಿರುವ ಪ್ರಶ್ನಾವಳಿ ಮತ್ತು ಅರ್ಜಿ ನಮೂನೆಯನ್ನು ರದ್ದಪಡಿಸುವಂತೆ ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ …
Read More »ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಐದು ಜಿಲ್ಲೆಗಳ 1261 ವಿದ್ಯಾರ್ಥಿಗಳು 600 ಅಂಕಗಳಿಗೆ 600 ಅಂಕ ಗಳಿಸುವಲ್ಲಿ ಯಶಸ್ವಿ
ಬೆಂಗಳೂರು, ಜು. 20: ಕರ್ನಾಟಕದಲ್ಲಿ ಮಂಗಳವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಐದು ಜಿಲ್ಲೆಗಳ 1261 ವಿದ್ಯಾರ್ಥಿಗಳು 600 ಅಂಕಗಳಿಗೆ 600 ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 445 ವಿದ್ಯಾರ್ಥಿಗಳು 600 ಅಂಕಗಳಿಗೆ ಸರಾಸರಿ 600 ಅಂಕ ಗಳಿಸಿದ್ದಾರೆ. ಮಂಗಳವಾರ ಸಂಜೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದರು. ಪರೀಕ್ಷೆ ಇಲ್ಲದಿದ್ದರೂ ಪ್ರಥಮ ಪಿಯುಸಿ ಹಾಗೂ ಎಸ್‌ಎಸ್‌ಎಲ್ ಸಿ ಯಲ್ಲಿ …
Read More »ಕ್ರಿಮಿನಲ್ ಗಳು ಒಳ್ಳೆಯ ಕೆಲಸ ಮಾಡಲು ಸಾಧ್ಯವೇ?: ಕೇಂದ್ರದ ವಿರುದ್ಧ ಕಿಡಿಕಾರಿದ ದಿನೇಶ್
ಬೆಂಗಳೂರು: ಪೆಗಸಸ್ ಸ್ಪೈವೇರ್ ಮೂಲಕ ಪ್ರತಿಷ್ಟಿತ ವ್ಯಕ್ತಿಗಳ ಮೇಲೆ ಕಣ್ಗಾವಲು ಇಡುವ ಕೇಂದ್ರದ ದುಷ್ಟ ಬುದ್ದಿ ಜಗತ್ತಿನ ಮುಂದೆ ಬೆತ್ತಲಾಗಿದೆ. ಮುಖ್ಯ ನ್ಯಾಯಮೂರ್ತಿಗಳ ಮೇಲೂ ಕಣ್ಗಾವಲು ನಡೆಸಿರುವುದು ಕ್ರಿಮಿನಲ್‌ಗಳು ಮಾಡುವಂತ ಕೆಲಸ. ಕೇಂದ್ರದ ಆಯಕಟ್ಟಿನ ಜಾಗದಲ್ಲಿ ಕ್ರಿಮಿನಲ್‌ಗಳೇ ಇರುವಾಗ ಕ್ರಿಮಿನಲ್ ಕೆಲಸವಲ್ಲದೆ ಒಳ್ಳೆ ಕೆಲಸ ಮಾಡಲು ಸಾಧ್ಯವೇ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಅಸಮರ್ಥ ನಾಯಕನಿಗೆ ಸದಾ ಅಸ್ತಿತ್ವದ ಭಯ ಕಾಡುತ್ತದೆ. ಮೋದಿಯವರಿಗೂ …
Read More »ಸಚಿವ ಮುರಿಗೇಶ್ ನಿರಾಣಿ ಓರ್ವ ‘ಸಿಡಿ ಬಾಬಾ’; ಅವರ ಬಳಿ 500 ಸಿಡಿಗಳಿವೆ; ಹೊಸ ಬಾಂಬ್ ಸಿಡಿಸಿದ ಆಲಂ ಪಾಷಾ
ಬೆಂಗಳೂರು: ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿಡಿಗಳಿವೆ. ಯಾರದ್ದೂ ಬೇಕಾದರೂ ಸಿಡಿ ಇರಬಹುದು. ಒಂದು ವೇಳೆ ಇವರಿಗೆ ಆರೂವರೆ ಕೋಟಿ ಜನರ ಬೆಂಬಲ ಸಿಕ್ಕರೆ ಈ ಸಿಡಿಗಳ ಸಂಖ್ಯೆ 50 ಲಕ್ಷ ಆಗಬಹುದು ಎಂದು ಉದ್ಯಮಿ ಎ.ಆಲಂ ಪಾಷ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುರುಗೇಶ್ ನಿರಾಣಿ ರಾಜ್ಯದ ಮಂತ್ರಿಗೂ ಸಿಡಿ ಇದೆ ಎಂದು ಹೆದರಿಸಿದ್ದಾರೆ. ಅವರು ಕೋರ್ಟ್ ನಿಂದ ಸ್ಟೇ …
Read More »
Laxmi News 24×7