ಬೆಳಗಾವಿ: ಜಿಲ್ಲೆಯ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಹುಟ್ಟುಹಬ್ಬದ ಹಿನ್ನೆಲೆ ಪೊಲೀಸರು ದಂಪತಿಗೆ ಹೂಮಳೆ ಸುರಿಸಿ ಮಹಾರಾಜನಂತೆ ಮೆರೆಸಿದ ಘಟನೆ ನಡೆದಿದೆ. ಇಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹುಟ್ಟು ಹಬ್ಬವಿತ್ತು.. ಈ ಹಿನ್ನೆಲೆ ಅವರ ನಿವಾಸಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು ದಂಪತಿಯನ್ನ ಕೂರಿಸಿ ಹೂಮಳೆಗರೆದಿದ್ದಾರೆ. ಬೈಲಹೊಂಗಲ ಡಿಎಸ್ಪಿ, ಸಿಪಿಐ, ನೇಸರಗಿ ಪಿ.ಎಸ್.ಐ ಹಾಗೂ ಎ.ಎಸ್.ಐ ಭಾಗಿಯಾಗಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌರ್ ಅವರ ಅಂಧಾ ದರ್ಭಾರ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. …
Read More »ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ
ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ ಮತ್ತೆ ಇವತ್ತು ಶನಿವಾರ ಬಂತು ನಮ್ಮ ತಂಡ ಅನ್ನ ಸಂತರ್ಪಣೆ ಮಾಡಲು ಇವತ್ತು ಸಜ್ಜಾಗಿದ್ದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಮ್ಮ ತಂಡ ಇಂದಿನ ಕಾರ್ಯಕ್ರಮ ರೂಪಿಸಿದೆ ಹೌದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಇಂದಿನ ಅನ್ನ ಸಂತರ್ಪಣೆ ಮಾಡಲು ಶ್ರೀ ಸಂತೋಷ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಲ್ಲಿ ಎಲ್ಲ ತಂಡ …
Read More »ಅಚ್ಚರಿ ಬೆಳವಣಿಗೆ -ಸಿದ್ದರಾಮಯ್ಯರ ಭೇಟಿಯಾದ ಶಿಕ್ಷಣ ಸಚಿವ ಬಿಸಿ ನಾಗೇಶ್
ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ಮಾಡಿದ್ದಾರೆ. ಶಿಕ್ಷಣ ಸಚಿವರ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭೇಟಿ ಮಾಡಿದ ಬಿಸಿ ನಾಗೇಶ್, ಸಿದ್ದರಾಮಯ್ಯರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕೆಲವು ಹೊತ್ತುಗಳ ಕಾಲ ಇತ್ತೀಚೆಗಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿ.ಸಿ.ನಾಗೇಶ್, ಇದೊಂದು ಸೌಜನ್ಯದ ಭೇಟಿ ಅಂತಾ ತಿಳಿಸಿದ್ದಾರೆ.
Read More »ನಾಳೆ ವೀಕೆಂಡ್ ಕರ್ಫ್ಯೂ ಇರುವುದಿಲ್ಲ, ತಮ್ಮ ಗಮನಕ್ಕೆ…
ಗೋಕಾಕ ಕೋವಿಡ್ ಮಹಾಮಾರಿ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಗಡಿ ಜಿಲ್ಲೆ ಬೆಳಗಾವಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಹಿಂಪಡೆದು ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.ಗೋಕಾಕ ತಹಸೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಪ್ರತಿಕಾಗೋಷ್ಠಿ ತಿಳಿಸಿದ್ದಾರೆ.
Read More »ಕೃಷ್ಣಾ ನದಿ ನೀರಿನಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ12 ಕೆ.ಜಿ. ತೂಕದ ಬೃಹತ್ ಗಾತ್ರದ ಮೀನು ಸಿಕ್ಕಿದೆ.
ಬೆಳಗಾವಿ: ಕೃಷ್ಣಾ ನದಿ ನೀರಿನಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಜನ ಮೀಗಾರಿಕೆ ಆರಂಭಿಸಿದ್ದು, ಇದೇ ವೇಳೆ 12 ಕೆ.ಜಿ. ತೂಕದ ಬೃಹತ್ ಗಾತ್ರದ ಮೀನು ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು – ಕಲ್ಲೋಳ ಸೇತುವೆ ಬಳಿ 12 ಕೆ.ಜಿ. ತೂಕದ ಮೀನು ಬಲೆಗೆ ಬಿದ್ದಿದೆ. ಬೋರಗಾಂವ ಪಟ್ಟಣದ ಹೈದರ ಅವರಿಗೆ ಮೀನು ಸಿಕ್ಕಿದೆ. ಇಷ್ಟೊಂದು ದೊಡ್ಡ ಗಾತ್ರದ ಮೀನು ಸಿಕ್ಕಿರುವುದಕ್ಕೆ ಹವ್ಯಾಸಿ ಮೀನಗಾರ ಹೈದರ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು …
Read More »ನಾವು ಗೆದ್ದೇ ಗೆಲ್ತೇವೆ ಮತ್ತೇ ಮೆಜಾರಿಟಿ ತಂದೇ ತರ್ತೇವೆ: ಫಿರೋಜ್ ಸೇಠ್ ವಿಶ್ವಾಸ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತೇವೆ ಮತ್ತು ಮೆಜಾರಿಟಿ ಪಡೆದು ಪಾಲಿಕೆ ಚುಕ್ಕಾಣಿ ಹಿಯುತ್ತೇವೆ ಎಂದು ಫಿರೋಜ್ ಸೇಠ್ ಹೇಳಿದ್ದಾರೆ. ನಾವು ಜನರಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವರಿಕೆ ಮಾಡುತ್ತೇವೆ. ಈ ಹಿಂದೆ ನಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿದಂತೆ ಈ ಬಾರಿಯೂ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದಿದ್ದಾರೆ. ಎಂಐಎಂ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಪಶ್ಚಿಮ ಬಂಗಾಳದಲ್ಲಿ …
Read More »ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದಿಂದ ಇನ್ನೂ ಮನೆ ಹಂಚಿಕೆ ಮಾಡಿಲ್ಲ.
ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದಿಂದ ಇನ್ನೂ ಮನೆ ಹಂಚಿಕೆ ಮಾಡಿಲ್ಲ. ಇದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆ ಹಂಚಿಕೆ ಮಾಡುವಂತೆ ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಡುವುದಿದ್ದರೆ ಬಿಡಲಿ, ಇನ್ನು ಮುಂದೆ ಮನೆ ಹಂಚಿಕೆ ಮಾಡುವಂತೆ ಕೇಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಅವರು ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಮನೆ …
Read More »ಬೆಳಗಾವಿ ಸೇರಿ ರಾಜ್ಯದ 3 ಮಹಾನಗರ ಪಾಲಿಕೆಗೆ ಇಂದು ಚುನಾವಣೆ, ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ
ಬೆಂಗಳೂರು: ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಮತದಾನ ನಡೆಯಲಿದ್ದು, ಸೆಪ್ಟಂಬರ್ 6 ರಂದು ಚುನಾವಣೆಯ ಫಲಿತಾಂಶ ಪ್ರಕಟಿಸಲಾಗುವುದು. ಬೆಳಗಾವಿ ಮಹಾನಗರಪಾಲಿಕೆಯ 58 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ್ದು 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4,28,364 ಮತದಾರರು ಮತ ಚಲಾವಣೆ ಮಾಡಲಿದ್ದು, 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 162 …
Read More »ಕೋವಿಡ್ ಲಸಿಕೆ: ರಾಜ್ಯದ 9 ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಸಾಧನೆ
ಬೆಂಗಳೂರು: ಕೋವಿಡ್ ಲಸಿಕೆ ವಿತರಣೆಯಲ್ಲಿ ರಾಜ್ಯದ 9 ಜಿಲ್ಲೆಗಳು ಹಿಂದೆ ಬಿದ್ದಿದ್ದು, ಲಸಿಕಾ ಅಭಿಯಾನ ಪ್ರಾರಂಭವಾಗಿ ಏಳೂವರೆ ತಿಂಗಳು ಕಳೆದರೂ ಶೇ 50ರಷ್ಟ ಗುರಿ ಸಾಧನೆ ಸಾಕಾರವಾಗಿಲ್ಲ. ಕಳೆದ ಜ.16ರಿಂದ ರಾಜ್ಯದಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾಗಿದೆ. ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ವಾರಗಳಿಂದ ಲಸಿಕೆ ವಿತರಣೆಗೆ ವೇಗ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಬುಧವಾರ 15 ಲಕ್ಷ ಹಾಗೂ ಉಳಿದ ದಿನ 6 ಲಕ್ಷ ಡೋಸ್‌ಗಳನ್ನು ವಿತರಿಸುವ ಗುರಿಯನ್ನು …
Read More »ನಮ್ಮದು ಮಾತನಾಡುವ ಸರ್ಕಾರವಲ್ಲ, ಕಾರ್ಯ ಮಾಡಿ ತೋರಿಸುವ ಸರ್ಕಾರ : ಸಿಎಂ ಬೊಮ್ಮಾಯಿ
ದಾವಣಗೆರೆ : ರೈತ ಮಕ್ಕಳಿಗೆ ಶಿಷ್ಯವೇತನ, ವಿವಿಧ ಸಾಮಾಜಿಕ ಭದ್ರತಾ ಮಾಸಾಶನ ಹೆಚ್ಚಳ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನಮ್ಮದು ಮಾತನಾಡುವ ಸರ್ಕಾರವಲ್ಲ, ಕಾರ್ಯ ಮಾಡಿ ತೋರಿಸುವ ಸರ್ಕಾರ ಎಂದು ತೋರಿಸಿಕೊಟ್ಟಿದ್ದೇವೆ ಎಮದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದ ಜಿ.ಎಂ.ಐ.ಟಿ. ಕಾಲೇಜು ಆವರಣದಲ್ಲಿ ಇಂದು (ಗುರುವಾರ, ಸೆಪ್ಟೆಂಬರ್ 2) ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, …
Read More »
Laxmi News 24×7