Breaking News

ಜಿಲ್ಲೆ

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಮೋದಲ್ನೆಯ ಸಕ್ಕರೆ ಉತ್ಪಾದನೆ ಪೂಜೆ ಸಲ್ಲಿಸಿದ ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿ ಹಾಗೂ ಛೋಟಾ ಸಾಹುಕಾರ

      ಗೋಕಾಕ ;ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಈ ವರ್ಷದ ಸಕ್ಕರೆ ಉತ್ಪಾದನೆ ಪ್ರಾರಂಭ ವಾಗಿದೆ     ಹೌದು ಶ್ರೀ ಸಂತೋಷ್ ಜಾರಕಿಹೊಳಿ ಅವರ್ ನೇತೃತ್ವದ ಈ ಒಂದು ಕಾರ್ಖಾನೆ ಮೊನ್ನೆ ಯಷ್ಟೇ ಕಬ್ಬು ನೂರಿಸಲು ಪ್ರಾರಂಭ ಮಾಡಿತ್ತು ಇಂದು ಸಕ್ಕರೆ ಆಗಿ ಹೊರ ಹೊಮ್ಮಿದೆ .ಇಂದು ಈ ವರ್ಷದ ಮೊದಲನೆಯ ಸಕ್ಕರೆ ಉತ್ಪಾದನೆ ಯಾಗಿದ್ದು ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಹಾಗೂ ಸುಪುತ್ರ ಶ್ರೀ ಸೂರ್ಯ …

Read More »

ಅವಿವೇಕಿ ಬಿಜೆಪಿ ರಾಜ್ಯಾಧ್ಯಕ್ಷ; ತಲೆಕೆಟ್ಟು ಮಾತನಾಡುತ್ತಿದ್ದಾರೆ; ನಳೀನ್ ಕುಮಾರ್ ಕಟೀಲ್ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

ಬೆಂಗಳೂರು: ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅವಿವೇಕಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮೊದಲು ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.   ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ನಳೀನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ತಲೆ ಕೆಟ್ಟಿದೆ. ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರ ಮನಸ್ಸು …

Read More »

ಕೇವಲ ₹500 ರೂ. ಹಣಕ್ಕಾಗಿ ವ್ಯಕ್ತಿ ಕೊಲೆ ಮಾಡಿ ಪರಾರಿಯಾದ ಖತರ್ನಾಕ್​​ ಗ್ಯಾಂಗ್​​..!

ವಿಜಯಪುರ: ಕೇವಲ ₹5,00 ರೂಪಾಯಿಗಾಗಿ ನಾಲ್ಕು ಜನರ ಗುಂಪೊಂದು ವ್ಯಕ್ತಿಯೋರ್ವನನ್ನು ಹತ್ಯೆಗೈದು ಪರಾರಿಯಾಗಿದೆ. ವಿಜಯಪುರದ ಜಾಡರ ಓಣಿಯಲ್ಲಿ ಘಟನೆ ನಡೆದಿದ್ದು, ನಿವಾಸಿ ಭೀಮ್ಸಿ ಪಾತ್ರೋಟಿ ಮೃತ ದುರ್ದೈವಿ ಎನ್ನಲಾಗಿದೆ. ನಾಲ್ವರು ಸೇರಿಕೊಂಡು ಭೀಮ್ಸಿ ಹತ್ಯೆಗೈದು ಪರಾರಿಯಾಗಿದ್ದಾರೆ. ಈ ಸಂಬಂಧ ಗೋಳಗುಮ್ಮಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

Read More »

ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು:ಸಂತೋಷ್ ಜಾರಕಿಹೊಳಿ

ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು ಎಲ್ಲರೂ ಹಬ್ಬವನ್ನ ಅತ್ಯಂತ ಸರಳ ರೀತಿಯಲ್ಲಿ ಆಚರಿಸಿ ಆದಷ್ಟು ಸೋಶಿಯಲ್ ಡಿಸ್ಟೆನ್ಸ್ ಮಂಟೇನ್ ಮಾಡಿ, ಹಬ್ಬದ ಜೊತೆ ಜೊತೆಗೆ ತಮ್ಮ ಹಾಗೂ ತಮ್ಮ ಕುಟುಂಬದ ಬಗ್ಗೆಯೂ ಕಾಳಜಿ ವಹಿಸಿ, ಈದ್ ಮಿಲಾದ್ ಮುಸ್ಲಿಂ ಬಾಂಧವರಿಗೆ ಪ್ರಮುಖ ಹಬ್ಬ ಗಳಲ್ಲಿ ಕೂಡ ಹೌದು ಹಬ್ಬದ ಜೊತೆಜೊತೆಗೆ ತಾವು ಕುಟುಂಬದ ಬಗ್ಗೆ ಕಾಳಜಿ ವಹಿಸಿ ಹಬ್ಬ ಆಚರಣೆ ಮಾಡಿ ಈ ಒಂದು ಶುಭ …

Read More »

ಹಾನಗಲ್ಲ ಕ್ಷೇತ್ರದ ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಬಹಳ ಮುಖ್ಯ : ಬಿ.ಸಿ.ಪಾಟೀಲ

ಹಾವೇರಿ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಹಾನಗಲ್ಲ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರುವುದಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸುವುದು ಬಹಳ ಮುಖ್ಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಜಿಲ್ಲೆಯ ಹಿರೇಕೆರೂರ ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ದಿವಂಗತ ಸಿ.ಎಂ.ಉದಾಸಿ ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ನೀರಾವರಿ, ರಸ್ತೆ ಸೇರಿದಂತೆ ಅನೇಕ ಯೋಜನೆಗಳನ್ನು ಈ …

Read More »

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷ ಸೋನಾಲಿ ಸರ್ನೋಬ ತ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

  ಖಾನಾಪುರ :ದಿ. 18-10-2021 ರಂದು ಖಾನಾಪುರ ತಾಲೂಕಿನ ಭೋರುಣಕಿ ಗ್ರಾಂ ಪಂ ವ್ಯಾಪ್ತಿಯಲ್ಲಿ ಬರುವ ಗಸ್ಟೋಳ್ಳಿ ಮತ್ತು ಚಣಕೆಬೈಲ ಗ್ರಾಮದಲ್ಲಿ ಪಡಿತರ ರೇಶನ್ ಪಡೆಯಲಿಕ್ಕೆ ಇಲ್ಲಿನ ಗ್ರಾಮಸ್ಥರು, ಇಲ್ಲಿಂದ ಸುಮಾರು 7km ದೂರದ ಗೊಳಿಹಳ್ಳಿಯಿಂದ ರೇಶನ್ ತೆಗೆದುಕೊಂಡು ಬರುತ್ತಿದ್ದರು. ಇದನ್ನು ಬೆಳಗಾವಿ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಹಾಗೂ ಖಾನಾಪುರ ತಾಲೂಕಿನ ಪ್ರಭಾರಿಗಳು ಆದ ಡಾ. ಸೋನಾಲಿ ಸರ್ನೋಬತ್. ರವರು ಗ್ರಾಮಸ್ಥರ ಸಮಸ್ಯೆಯನ್ನು ನೋಡಿ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ …

Read More »

ಮಂಡ್ಯ ಮೈಶುಗರ್ ಕಾರ್ಖಾನೆ ಪುನಶ್ಚೇತನ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು : ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಮಹತ್ವದ ಸಭೆ ನಡೆಸಲಾಯಿತು. ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯ ಮುಂದಿಟ್ಟರು. ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಹಣಕಾಸು …

Read More »

ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ: ಸತೀಶ ಜಾರಕಿಹೊಳಿ ಫೌಂಡೇಶನ್

ಗೋಕಾಕ :17-10-2021 ರಂದು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ದಿನಾಂಕ ಗೋಕಾಕ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು, ಕಚೇರಿಯ ಒಳಗಡೆ ಮತ್ತು ಹೊರಗಡೆ ಬಹಳ ಕಸ ಮತ್ತು ಗುಟಕಾ ಪಾಕೇಟ ತಿಂದು ಉಗುಳಿದ ಗಲಿಜು ಇವನೆಲ್ಲಾ ಸ್ವಚ್ಛತೆಯನ್ನು ಮಾಡಿರುತ್ತೇವೆ. ಇನ್ನು ಮುಂದೆ ತಮ್ಮ ತಹಶೀಲ್ದಾರರ ಕಚೇರಿಯ ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಸ್ವಚ್ಛತೆಗೆ ತಾವು ಕೆಲವು ನಿಯಮಗಳನ್ನು ಕಚೇರಿಯ ಆವರಣದಲ್ಲಿ ಜಾರಿಗೆ ತರಬೇಕು. ಕಸದ ಡಬ್ಬಿ …

Read More »

ಬೀದರ್: ನಗರದ ಕೊಳಚೆ ನೀರಿನಿಂದ ಮಲಿನವಾದ ಭೂಮಿ; ತರಕಾರಿ ಬೆಳೆಯಲಾಗದೆ ಕಂಗಾಲಾದ ರೈತರು

ಬೀದರ್: ಐತಿಹಾಸಿಕ ಬೀದರ್ ಕೋಟೆಯೊಳಗೊಂದು ಪುಟ್ಟ ಊರಿದೆ. ಈ ಊರಲ್ಲಿರುವ ಇನ್ನೂರು ಎಕರೆಯಷ್ಟು ಜಮೀನಿನಲ್ಲಿ ರೈತರು ತರಕಾರಿ ಬೆಳೆಸುತ್ತಾ ನೆಮ್ಮದಿಯಿಂದಿದ್ದರು. ಇಲ್ಲಿ ಬೆಳೆಸುವ ಪುದಿನಾ, ಪಾಲಕ್ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು. ಆದರೀಗ ಆ ರೈತರಿಗೆ ತರಕಾರಿ ಬೆಳೆಯೋಕೆ ಸಾಧ್ಯವಾಗುತ್ತಿಲ್ಲ ಯಾಕೆ ಅಂತೀರಾ ಈ ವರದಿ ನೋಡಿ. ನಗರದ ಗಲೀಜು ನೀರು ಗ್ರಾಮದ ಹೊಲಕ್ಕೆ ಬರುತ್ತಿದೆ. ಇದರಿಂದ ಇಲ್ಲಿರುವ ಬಾವಿಯ ನೀರು ಮಲಿನವಾಗುತ್ತಿದೆ. ಕುಡಿಯೋ ನೀರು ಸೇರಿ ಕೃಷಿಗೂ ಇದರಿಂದ …

Read More »

ಕೊನೆಗೂ ಬೆಂಗಳೂರು ಸಿಟಿ ರೌಂಡ್ಸ್​ಗೆ ಬಂದ್ರು ಸಿಎಂ ಬೊಮ್ಮಾಯಿ..!

ಬೆಂಗಳೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಸಾಲು ಸಾಲು ಅವಘಡ ಸಂಭವಿಸುತ್ತಿವೆ. ವಾಸ್ತವ ಸ್ಥಿತಿ ಅರಿಯುವ ಉದ್ದೇಶದಿಂದ ಸಿಎಂ ಬಸವರಾಜ್ ಬೊಮ್ಮಾಯಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಿಟಿ ರೌಂಡ್ಸ್​​ ಆರಂಭಿಸಿದ್ದಾರೆ. ಬೆಳ್ಳಂಬೆಳಗ್ಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದರು. ಬಳಿಕ ಮಳೆಯಿಂದ ಅವಘಡಕ್ಕೊಳಗಾದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ರಸ್ತೆ ಗುಂಡಿಗಳು, ಟ್ರಾಫಿಕ್ ಜಾಮ್ ಜಂಕ್ಷನ್ಸ್, ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಹಾಗೂ ರಾಜಕಾಲುವೆಯನ್ನು …

Read More »