Breaking News

ಜಿಲ್ಲೆ

ಭತ್ತ ಹಾಗೂ ಕಬ್ಬು ಬೆಳೆಗಳು ಅಪಾರ ನಷ್ಟ, ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ

ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರ ಬೆಳೆಗಳು ಕೊಚ್ಚಿ ಹೊಗುತ್ತಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಬಿಜೆಪಿ  ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಶನಿವಾರ ಮನವಿ ಸಲ್ಲಿಸಲಾಯಿತು. ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಭತ್ತ ಹಾಗೂ ಕಬ್ಬು ಬೆಳೆಗಳು ಅಪಾರ ನಷ್ಟವಾಗಿದೆ. ನಿನ್ನೆ ನಂದಗಡದಲ್ಲಿ ಬೆಳೆ ನಷ್ಟದಿಂದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನೆಲ್ಲ ಉಲ್ಲೇಖಿಸಿ ಜಿಲ್ಲಾಧಿಕಾರಿ ವೆಂಕಟೇಶಕುಮಾರ ಅವರಿಗೆ ಮನವಿ …

Read More »

ವಿಧಾನಪರಿಷತ್ ಚುನಾವಣೆಗೆ ಶನಿವಾರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ.

– ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಶನಿವಾರ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. 5ನೇ ದಿನ ಪಕ್ಷೇತರ ಅಭ್ಯರ್ಥಿಯಾಗಿ ರಾಮದುರ್ಗ ತಾಲೂಕಿನ ಲಖನಾಯಕನಕೊಪ್ಪದ ಸಂಗಮೇಶ ನಾಗಪ್ಪ ಚಿಕ್ಕನರಗುಂದ ಎನ್ನುವವರ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೂ ಯಾವುದೇ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ. ನ.23 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ ನಿಂದ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆ ಖಚಿತವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

Read More »

ಸುವರ್ಣ ವಿಧಾನಸೌಧದಲ್ಲಿ ಡಿ.13ರಿಂದ ಚಳಿಗಾಲದ ಅಧಿವೇಶನ

ಬೆಂಗಳೂರು,ನ.20- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಸುವರ್ಣವಿಧಾನಸೌಧದಲ್ಲಿ ಉಭಯ ಸದನಗಳು ಸಮಾವೇಶಗೊಳ್ಳುವಂತೆ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯಪಾಲ ತಾವರ್‍ಚಂದ್ ಗೆಲ್ಹೋಟ್ ಅವರು ನಿನ್ನೆ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಅಧಿವೇಶನಗಳನ್ನು ಕರೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಅಧಿವೇಶನವನ್ನು ಸುವರ್ಣ ವಿಧಾನಸೌಧದಲ್ಲಿ ನಡೆಸಲಾಗಿತ್ತು. ಆನಂತರ ಈವರೆಗೂ ಅಧಿವೇಶನ ನಡೆಸಿಲ್ಲ. ಕಳೆದೆರಡು ವರ್ಷಗಳಿಂದ …

Read More »

ಠಾಣೆಯಲ್ಲಿ ಸಿಬ್ಬಂದಿ ಎದುರು ಅಸಭ್ಯ ವರ್ತನೆ ಆರೋಪ: ಹುಬ್ಬಳ್ಳಿ ಪೊಲೀಸ್​ ಕಾನ್ಸ್​​ಟೇಬಲ್​ ಅಮಾನತು

ಹುಬ್ಬಳ್ಳಿ: ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ನಗರದ ಕಸಬಾಪೇಟ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಶ್ರೀಕಾಂತ ಗೋಣೆಪ್ಪನವರ ಅವರನ್ನು ಅಮಾನತು ಮಾಡಲಾಗಿದೆ. ಶಿಸ್ತಿನ ಇಲಾಖೆಯಲ್ಲಿ ಶ್ರೀಕಾಂತ ಅಶಿಸ್ತಿನಿಂದ ವರ್ತಿಸುತ್ತಿದ್ದರು. ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಎದುರು ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ಹೀಗೆ ಮಾಡದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿದ್ದರು ಎನ್ನಲಾಗ್ತಿದೆ.   ಈ ಕಾರಣಕ್ಕೆ ಡಿಸಿಪಿ ಕೆ. ರಾಮರಾಜನ್ ಅವರು ತಮ್ಮ ವರ್ಗಾವಣೆಗೂ ಮುನ್ನವೇ ಶ್ರೀಕಾಂತ ಅಮಾನತು …

Read More »

ವಿವೇಕರಾವ್ ಪಾಟೀಲ್ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ,

*ಚಿಕ್ಕೋಡಿ ಬ್ರೇಕಿಂಗ್*   ವಿವೇಕರಾವ್ ಪಾಟೀಲ್ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ,   ಒಂದು ಗಂಟೆಗೂ ಹೆಚ್ಚಿನ ಕಾಲ ವಿವೇಕ್ ಕತೆ ರಮೇಶ್ ಚರ್ಚೆ,   ಕಾಂಗ್ರೇಸ್ ನಿಂದ ಪರಿಷತ್ ಟಿಕೇಟ್ ವಂಚಿತರಾಗಿರೋ ವಿವೇಕರಾವ್ ಪಾಟೀಲ್, ಬೆಕ್ಕೇರಿ ಗ್ರಾಮದ ವಿವೇಕರಾವ್ ಪಾಟೀಲ್ ಮನೆಗೆ ಭೇಟಿ ನೀಡಿ ಮಾತುಕತೆ,   ಬಿಜೆಪಿಗೆ ಬರುವಂತೆ ವಿವೇಕ್ ಬಳಿ ಮನವಿ ಮಾಡಿರುವ ರಮೇಶ್ ಜಾರಕಿಹೊಳಿ,   ಸ್ವತಂತ್ರ ಸ್ಪರ್ಧೆಯ ಬಗ್ಗೆ ಇನ್ನೂ …

Read More »

ರಾಜ್ಯಾದ್ಯಂತ ಮುಂದಿನ ಐದು ದಿನ ಭಾರೀ ಮಳೆ : ಮುನ್ಸೂಚನೆ ನೀಡಿದ ಹವಮಾನ ಇಲಾಖೆ

ಬೆಂಗಳೂರು: ಮುಂದಿನ ಐದು ದಿನ ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊದಲ ಮೂರು ದಿನ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದ್ದು, ನಂತರದ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳು ಮಳೆ ಸಾಧ್ಯತೆ ಇದ್ದು, ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ನಾಳೆ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ಘೋಷಣೆ …

Read More »

ಲಖನ್ ಜಾರಕಿಹೊಳಿ ಅವರಿಗೆB.J.P. ಟಿಕೆಟ್ ನೀಡಿಲ್ಲ, ಪಕ್ಷೇತರರಾಗಿ ಲಖನ್ ಸ್ಪರ್ಧೆ ಸಾಧ್ಯತೆ..?

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ 25 ಸ್ಥಾನಗಳಲ್ಲಿ 20 ಅಭ್ಯರ್ಥಿಗಳನ್ನು ಘೋಷಿಸಿದೆ. ಬೆಳಗಾವಿ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿಲ್ಲ. ಮಹಂತೇಶ್ ಕವಟಗಿಮಠ ಅವರಿಗೆ ಬೆಳಗಾವಿ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಲಖನ್ ಜಾರಕಿಹೊಳಿಯವರಿಗೆ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದರು. ಆದರೆ, ಟಿಕೆಟ್ ಕೈ ತಪ್ಪಿದೆ. …

Read More »

RTE ಶುಲ್ಕ ಮರುಪಾವತಿ’ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನ

ಬೆಂಗಳೂರು: 2021-22ನೇ ಸಾಲಿನ ಆರ್ ಟಿ ಇ ಶುಲ್ಕ ( RTE Seat School Fee ) ಮರುಪಾವತಿಗೆ ಬೇಡಿಕೆ ಸಲ್ಲಿಸಲು ತಂತ್ರಾಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ( School Education Department ) ಬಿಡುಗಡೆ ಮಾಡಿದೆ. ಈ ತಂತ್ರಾಂಶದಡಿ ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು, ಕ್ರಮ ಕೈಗೊಳ್ಳುವಂತೆ ತಿಳಿಸಿದೆ.   ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಶಿಕ್ಷಣ ಹಕ್ಕು …

Read More »

ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತಿದ್ದೇವೆ’; ಪಿಆರ್​ಕೆ ಪ್ರೊಡಕ್ಷನ್​​ನಿಂದ ಭಾವುಕ ಪೋಸ್ಟ್

2017ರ ಜುಲೈ 20ರಂದು ಪಿಆರ್​ಕೆ ಪ್ರೊಡಕ್ಷನ್​ ಸ್ಥಾಪನೆ ಆಯಿತು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ನಿರ್ಮಾಣ ಸಂಸ್ಥೆ ಆರಂಭಗೊಂಡಿದೆ. ‘ಕವಲುದಾರಿ’ ಈ ಪ್ರೊಡಕ್ಷನ್​ ಹೌಸ್​ನಿಂದ ಹೊರ ಬಂದ ಮೊದಲ ಸಿನಿಮಾ.ಪುನೀತ್​ ರಾಜ್​ಕುಮಾರ್​ (Puneeth Rajkumar) ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಭೇಷ್​ ಎನಿಸಿಕೊಂಡಿದ್ದಾರೆ. ಅವರು ಪಿಆರ್​ಕೆ ಪ್ರೊಡಕ್ಷನ್ (PRK Production)​ ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ಅವರು ಎಲ್ಲರಿಂದಲೂ …

Read More »

ನಕಲಿ ಛಾಪಾ ಕಾಗದ ಸಿದ್ಧಪಡಿಸುತ್ತಿದ್ದ ಐವರು ಆರೋಪಿಗಳನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ನಕಲಿ ಛಾಪಾ ಕಾಗದ ಸಿದ್ಧಪಡಿಸುತ್ತಿದ್ದ ಐವರು ಆರೋಪಿಗಳನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಹುಸೇನ್ ಮೋದಿ ಬಾಬು, ಸೀಮಾ, ನಯಾಜ್ ಅಹ್ಮದ್, ಶಬ್ಬೀರ್ ಅಹ್ಮದ್, ಹರೀಶ್​ನನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 63 ಲಕ್ಷ ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದ (stamp papers) ವಶಕ್ಕೆ ಪಡೆದಿದ್ದಾರೆ. ಹೈಕೋರ್ಟ್ (High court) ಸೂಚನೆ ಮೇರೆಗೆ ರಚನೆಯಾಗಿದ್ದ ಎಸ್‌ಐಟಿ (SIT) ಅಧಿಕಾರಿಗಳಿಂದ ಈ ಕಾರ್ಯಾಚರಣೆ ನಡೆಸಿದ್ದು, ಐವರು ಆರೋಪಿಗಳನ್ನು ಸದ್ಯ ವಿಚಾರಣೆಗೊಳಪಡಿಸಲಾಗಿದೆ. ನಕಲಿ …

Read More »