Breaking News

ಜಿಲ್ಲೆ

ಕ್ಷಿಪ್ರ ಕಾರ್ಯ‍ಪಡೆ ಪಥಸಂಚಲನ

ಬೆಳಗಾವಿ: ರ‍್ಯಾಪಿಡ್‌ ಆಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯಪಡೆ) ಮತ್ತು ಪೊಲೀಸ್ ಅಧಿಕಾರಿಗಳು ನಗರದ ಕೆಲವು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿ, ಸಾರ್ವಜನಿಕರಿಗೆ ಧೈರ್ಯ ತುಂಬಲು ಶುಕ್ರವಾರ ಪ್ರಯತ್ನಿಸಿದರು.   65 ಮಂದಿಯ ‍ಪಡೆ ನಗರಕ್ಕೆ ಬಂದಿದೆ. ರಾಣಿ ಚನ್ನಮ್ಮ ವೃತ್ತದಿಂದ ಕಾಕತಿವೇಸ್, ಶನಿವಾರಕೂಟ್, ಕಂಜರ್‌ಗಲ್ಲಿ, ದರ್ಬಾರ್ ಗಲ್ಲಿ, ಶಾಸ್ತ್ರಿಚೌಕ, ಖಡಕ್‍ಗಲ್ಲಿ, ಖಡೇಬಜಾರ್ ರಸ್ತೆ, ಭಡಕಲ್ ಗಲ್ಲಿ, ನಾನಾಪಾಟೀಲ ಚೌಕ, ಚವಾಟ್ ಗಲ್ಲಿ, ಹಳೆಯ ಪಿ.ಬಿ. ರಸ್ತೆ, …

Read More »

ಗೋಕಾಕ ಹಾಗೂ ಮೂಡಲಗಿ ರೈತರು ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ಬೆಳಗಾವಿ: ಘಟಪ್ರಭಾ ಮೇಲ್ದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಜಿಲ್ಲೆಯ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳ ರೈತರು ಇಲ್ಲಿನ ಕ್ಲಬ್‌ ರಸ್ತೆಯಲ್ಲಿರುವ ನೀರಾವರಿ ನಿಗಮದ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿ, ಬಳಿಕ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು.   ಬೇಸಿಗೆ ಹಿನ್ನೆಲೆಯಲ್ಲಿ ಜನ-ಜಾನುವಾರಿಗೆ ನೀರಿನ ಅವಶ್ಯಕತೆ ಇದೆ. ನೀರಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ಧೇವೆ. ಪ್ರತಿ ನಿತ್ಯ 2ಸಾವಿರ ಕ್ಯುಸೆಕ್ ನೀರನ್ನು ಕಾಲುವೆಗೆ ಹರಿಸಬೇಕು’ ಎಂದು ಒತ್ತಾಯಿಸಿದರು. ‘ಎಡದಂಡೆ …

Read More »

ಪಿಯುಸಿ ಇಂಗ್ಲಿಷ್ ಪರೀಕ್ಷೆ: 2,530 ವಿದ್ಯಾರ್ಥಿಗಳು ಗೈರು

ಬೆಳಗಾವಿ: ಜಿಲ್ಲೆಯಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್‌ ವಿಷಯದ ವಾರ್ಷಿಕ ಪರೀಕ್ಷೆಗೆ ಒಟ್ಟು 2,530 ಮಂದಿ ಗೈರುಹಾಜರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿದ್ದ 21,823 ವಿದ್ಯಾರ್ಥಿಗಳ ಪೈಕಿ 20,652 ಮಂದಿ ಹಾಜರಾದರು. 1,171 ವಿದ್ಯಾರ್ಥಿಗಳು ಗೈರುಹಾಜರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 26,013 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಅವರಲ್ಲಿ 24,654 ಮಂದಿ ಹಾಜರಾದರೆ, 1,359 ಮಂದಿ ದೂರ ಉಳಿದರು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Read More »

ಮರಾಠಾ ಸಮುದಾಯದಕ್ಕೆ ಸಚಿವ ಸ್ಥಾನ ಕೊಡಬೇಕು: ರಮೇಶ ಜಾರಕಿಹೊಳಿ

ಬೆಳಗಾವಿ ಜಿಲ್ಲೆ): ಸಚಿವ ಸಂಪುಟ ಪುನರ್‌ರಚನೆ ಮಾತುಗಳು ಕೇಳಿಬರುತ್ತಿರುವ ನಡುವೆ, ಆಕಾಂಕ್ಷಿಗಳಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಕಾಗವಾಡದ ಶಾಸಕ ಶ್ರೀಮಂತ ಪಾಟೀಲ ಇಲ್ಲಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.   ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನ ಕೊಡುವುದು, ಬಿಡುವುದು ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದು ಪ್ರತಿಕ್ರಿಯಿಸಿದರು. ‘ಅಥಣಿ ಶಾಸಕ ಮಹೇಶ ಕುಮಠಳ್ಳಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮಂತ್ರಿ ಸ್ಥಾನ ಬೇಡ; ಕ್ಷೇತ್ರದಲ್ಲಿ ನೀರಾವರಿ …

Read More »

ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗುಡ್ ನ್ಯೂಸ್

ರಾಯಚೂರು: ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಮೇ ಮಾಹೆಗೆ ಪಡಿತರ ನೀಡಲಾಗುವುದು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜಿಲ್ಲೆಯ ಅಂತ್ಯೋದಯ(ಎಎವೈ) ಮತ್ತು ಬಿಪಿಎಲ್ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.   ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪ್ರತಿ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 15 ಕೆ.ಜಿ. ಜೋಳ ಮತ್ತು 20 ಕೆ.ಜಿ. ಅಕ್ಕಿ ಹಾಗೂ ಬಿಪಿಎಲ್ ಪಡಿತರ ಚೀಟಿಯಲ್ಲಿನ ಪ್ರತಿ ಸದ್ಯಸರಿಗೆ 2 …

Read More »

ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ: ಆಡಿಯೋ ಬಗ್ಗೆ ಮುಸ್ಲಿಂ ಮುಖಂಡರ ಖಂಡನೆ

ಮೈಸೂರು: ಕವಲಂದೆಯನ್ನು ಚೋಟಾ ಪಾಕಿಸ್ತಾನ್​​ ಎಂಬ ಆಡಿಯೋ ವೈರಲ್​ ಪ್ರಕರಣ ಸಂಬಂಧ ಆರೋಪಿಗಳ ಕೃತ್ಯವನ್ನು ಸ್ಥಳೀಯ ಮುಸ್ಲಿಂ ಮುಖಂಡರು ಖಂಡಿಸಿದ್ದಾರೆ. ಭಾರತ ನಮ್ಮ ದೇಶ, ನಾವು ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಬದುಕುತ್ತೇವೆ. ಕಿಡಿಗೇಡಿ ಯುವಕರನ್ನು ನಾವೇ ಹಿಡಿದುಕೊಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಘಟನೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಮುಸ್ಲಿಂ ಮುಖಂಡರು, ಇದು ನಾವು ಹುಟ್ಟಿ ಬೆಳೆದ ದೇಶ, 8-10 ತಲೆಮಾರುಗಳಿಂದ ನಾವು ಇಲ್ಲಿಯೇ ಬದುಕುತ್ತಿದ್ದೇವೆ. ಭಾರತ ಒಂದು ಸುಂದರವಾದ ಬೊಂಬೆಯಂತೆ. ಘಟನೆ …

Read More »

ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ, ಶಿವಾಜಿ ಮೂರ್ತಿ ಭಗ್ನ

ಬೀದರ್: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ಮಧ್ಯೆ ಅನ್ಯ ಕೋಮಿನ ಗುಂಪೊಂದು ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ನೂರ್ ಖಾನ್ ಕಾಲೋನಿಯ ಜೈ ಭವಾನಿ ಪಾಸ್‍ಫುಡ್ ಹೋಟೆಲ್‍ನಲ್ಲಿ ನಡೆದಿದೆ. ಗೋ ರಕ್ಷಣೆ ಸೇರಿದಂತೆ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಎಂಬ ಕಾರಣಕ್ಕೆ ಬಜರಂಗದಳದ ಕಾರ್ಯಕರ್ತನ ಮೇಲೆ ಗಂಭೀರವಾಗಿ ಅನ್ಯಕೋಮಿನ ಜನರು ಹಲ್ಲೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ತಡರಾತ್ರಿ ಹೋಟೆಲ್‍ಗೆ ಬಂದು ಊಟದ ವಿಚಾರಕ್ಕೆ ಗಲಾಟೆ …

Read More »

ನಾನು ಜನ್ಮ ದಿನಾಚರಣೆ ಆಚರಿಸಲ್ಲ, ಜಾಹೀರಾತು ನೀಡೋದಾದ್ರೇ ಕಾಂಗ್ರೆಸ್ ಹೋರಾಟ, ಪ್ರತಿಭಟನೆ ಬಗ್ಗೆ ನೀಡಿ – ಡಿಕೆ ಶಿವಕುಮಾರ್

ಬೆಂಗಳೂರು: ಮೇ.15ರಂದು ನನ್ನ ಜನ್ಮ ದಿನಾಚರಣೆಯನ್ನು ನಾನು ಆಚರಿಸಿಕೊಳ್ಳೋದಿಲ್ಲ. ನನ್ನ ಮನೆ ಬಳಿಗೆ ಬರಬೇಡಿ. ನಾನು ಉದಯಪುರದಲ್ಲಿ ಇರುತ್ತೇನೆ. ನನ್ನ ಜನ್ಮ ದಿನಾಚರಣೆ ನಿಮಿತ್ತ ಮಾಧ್ಯಮಗಳಿಗೆ ಜಾಹೀರಾತು ಕೊಡೋ ಬದಲಾಗಿ ಕಾಂಗ್ರೆಸ್ ಪಕ್ಷದಿಂದ ( Congress Party ) ಸರ್ಕಾರದ ವಿರುದ್ಧ ನಡೆಸಿದಂತ ಹೋರಾಟ, ಪ್ರತಿಭಟನೆಗಳ ಬಗ್ಗೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಮನವಿ ಮಾಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ …

Read More »

P.S.I.ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರ: ಭಾಸ್ಕರ್ ರಾವ್

ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ನೀಡಿರುವುದರ ಹಿಂದೆ ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರವಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.   ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರೇ ಆರೋಪಿಗಳಾಗಿರುವ ಹಗರಣವನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಐಡಿಯಿಂದಲೇ ತನಿಖೆ ಮಾಡಿಸುವುದು ಹಾಸ್ಯಾಸ್ಪದ. ಈ ತನಿಖೆಗೆ ಯಾವ ಬೆಲೆಯೂ ಇಲ್ಲ. ಅನುಮಾನಾಸ್ಪದ ಅಭ್ಯರ್ಥಿಯ ತನಿಖೆ ವೇಳೆ …

Read More »

ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ

ಚಿಕ್ಕೋಡಿ: ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಮುಗಳಖೋಡ ಪಟ್ಟಣದ ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡುವ ವಿಚಾರವಾಗಿ ಜಗಳ ನಡೆದಿದೆ. ಹಾರೂಗೇರಿ ಪಿಎಸ್‍ಐ ರಾಘವೇಂದ್ರ ಖೋತ್ ಹಾಗೂ ಶಿಕ್ಷಕ ಚಂದ್ರು ಲಮಾಣಿ ಮಧ್ಯೆ ವಾಗ್ವಾದ ನಡೆದಿದೆ. ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡಲು ಪುರಸಭೆ ಅಧಿಕಾರಿಗಳು ತಯಾರಿ …

Read More »