ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ ಅಂತಾರೆ. ಯಾರ‌್ಯಾರ ಬಾಳಲ್ಲಿ ಯಾರ‌್ಯಾರು ಸಂಗಾತಿಯಾಗಬೇಕು ಅಂತಾ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಆದ್ರೆ ಇಲ್ಲಿ ಎರಡು ಕುಟುಂಬಗಳು ತಮ್ಮ ಮೂಗ – ಕಿವುಡ ಮಕ್ಕಳ ಮದುವೆ ಆಗುತ್ತೋ ಇಲ್ವೋ ಅಂತಾ ಚಿಂತೆಯಲ್ಲಿದ್ದಾಗ ಮೂಗನೊಬ್ಬ ಆಪತ್ಬಾಂಧವನಾಗಿ ಬಂದಿದ್ದಾನೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಅಪರೂಪದ ಮದುವೆಯೊಂದು ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ನಿವಾಸಿ ಜ್ಯೋತೆಪ್ಪ ಉಮರಾಣಿ ನೆಚ್ಚಿನ ಮಗಳಾದ ಸ್ವಾತಿ ಮದುವೆ ಮಾಡಲು ಆಗದೇ …
Read More »ತಲ್ವಾರ್‌ನಿಂದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ
ಯುವಕರಿಬ್ಬರು ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಜುಲೈ ೨೩ ರಂದು ನಡೆದ ಘಟನೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ಮಲ್ಲಿಕ್ ನದಾಫ್, ಅಶೋಕ ಗಾಡಿವಡ್ಡರ ಎಂಬ ಇಬ್ಬರು ಯುವಕರ ಹುಟ್ಟುಹಬ್ಬವಿತ್ತು. ಈ ವೇಳೆ ಸಾರ್ವಜನಿಕವಾಗಿ ಈ ಯುವಕರು ತಲ್ವಾರ್‌ನಿಂದ …
Read More »ಉ.ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ಶೀಘ್ರ ನಿರ್ಧಾರ: ಕೆ.ಸುಧಾಕರ್
ಬೆಂಗಳೂರು: ಶಿರೂರು ಟೋಲ್ ಗೇಟ್ ನಲ್ಲಿ ಇತ್ತೀಚೆಗೆ ನಡೆದ ಆಯಂಬುಲೆನ್ಸ್ ಅಪಘಾತದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂಬ ಆಗ್ರಹ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಭಿಯಾನಗಳು ನಡೆಯುತ್ತಿದೆ. ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಸರ್ಕರದ ಗಮನ ಸೆಳೆಯುವ ಕೆಲಸ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಕೆ.ಸುಧಾಕರ್, ”ಉತ್ತರ ಕನ್ನಡ …
Read More »ಮಕ್ಕಳ ಮುದ್ದಿನ ಬೆಕ್ಕು ರಕ್ಷಿಸಿದ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ
ಬೆಳಗಾವಿ: ಇಲ್ಲಿನ ಖಡೇಬಜಾರ್‌ನಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಬಾಲ್ಕನಿ ತುದಿಯಲ್ಲಿ ಸಿಲುಕಿದ್ದ ಬೆಕ್ಕನ್ನು ಕಾಪಾಡಲು ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಹಾಗೂ ಪೊಲೀಸರೇ ಬರಬೇಕಾಯಿತು! ಹೌದು. ಖಡೇಬಜಾರಿನಲ್ಲಿ ವಾಸವಾಗಿರುವ ಕುಟುಂಬದ ಮಕ್ಕಳು ಸಾಕಿದ ಮುದ್ದಿನ ಬೆಕ್ಕು, ಶನಿವಾರ ರಾತ್ರಿ ಕಟ್ಟಡದ ಮೂರನೇ ಅಂತಸ್ತಿನ ಬಾಲ್ಕನಿಯ ತುದಿಗೆ ಇಳಿದಿತ್ತು. ಅತ್ತ ಮರಳಿ ಬಾಲ್ಕನಿಯ ಕಿಟಕಿಗೂ ನೆಗೆಯಲಾಗದೇ, ಇತ್ತ ಕೆಳಗೂ ಇಳಿಯಲಾಗದೆ ಪ್ರಾಣ ಭಯದಿಂದ ಪರದಾಡುತ್ತಿತ್ತು. ಎರಡು ತಾಸು ‘ಮ್ಯಾಂವ್ ಗುಡುತ್ತ…’ ಅತ್ತಿಂದಿತ್ತ …
Read More »ಸಚಿವರ ಹೇಳಿಕೆಗೆ ವಿರೋಧ: ಶಿಕ್ಷಕನಿಗೆ ನೋಟಿಸ್
ಬೆಳಗಾವಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, 13,800 ಸರ್ಕಾರಿ ಶಾಲೆಗಳ ವಿಲೀನ ಕುರಿತು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ವಿರೋಧಿಸಿ, ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರಿಗೆ ಚಿಕ್ಕೋಡಿ ಡಿಡಿಪಿಐ ಎಂ.ಎಲ್. ಹಂಚಾಟೆ ಅವರು ಕಾರಣ ಕೇಳಿ ಜುಲೈ 22ರಂದು ನೋಟಿಸ್ ಜಾರಿಗೊಳಿಸಿದ್ದಾರೆ. ‘ಸಚಿವರ ಹೇಳಿಕೆಗೆ ನೀವು, ಇದು 13,800 ಶಾಲೆಗಳ …
Read More »ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ಬಿತ್ತು ವಿಂಡ್ ಪವರ್ ಫ್ಯಾನ್
ಬಾಗಲಕೋಟೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೇ ಏಕಾಏಕಿ ವಿಂಡ್ ಪವರ್ ಫ್ಯಾನ್ ಬಿದ್ದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕೆಲಸಗಾರರು ಪಾರಾಗಿದ್ದಾರೆ. ಹಿರೇಓತಗೇರಿ ಗ್ರಾಮದಲ್ಲಿ ಹೊಲಗಳಿಗೆ ಅಳವಡಿಸಲಾಗಿರುವ ವಿಂಡ್ ಪವರ್ ಫ್ಯಾನ್ ಬಿದ್ದಿದ್ದು, ಅದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಯಾವುದೇ ಹಾನಿಯಾಗಿಲ್ಲ. ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ ಕೆಲವೆಡೆ ವಿಂಡ್ ಪವರ್ ಫ್ಯಾನ್ ಅಳವಡಿಕೆ ಮಾಡಲಾಗಿದೆ. ಆದರೆ ಭಾನುವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿಯೇ ತುಂಡಾಗಿ ಬಿದ್ದಿದ್ದು, ಇಲ್ಲಿನ ಜನರಿಗೆ ಆತಂಕ …
Read More »ರೈತರೇ ಗಮನಿಸಿ : `ರೈತ ಶಕ್ತಿ ಯೋಜನೆ’ಯಡಿ ಡೀಸಲ್ ಸಹಾಯಧನ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಬೆಂಗಳೂರು : 2022-23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ ರೂ. 250/- ಗಳಂತೆ ಗರಿಷ್ಟ 5 ಎಕರೆಗೆ ರೂ. 1250/- ರವರೆಗೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಡೀಸಲ್‌ಗೆ ಸಹಾಯಧನಕ್ಕಾಗಿ ಕೃಷಿ ಇಲಾಖೆ ವತಿಯಿಂದ ‘ರೈತ ಶಕ್ತಿ’ ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕೆಂದು ಜಂಟಿ ಕೃಷಿ …
Read More »ನಾಯಿಗಳ ಹಾವಳಿಗೆ ಬೆಚ್ಚಿಬಿದ್ದ ಕುಂದಾನಗರಿ ಜನ
ಬೆಳಗಾವಿ: ನಾಯಿಗಳ ಹಾವಳಿಗೆ ಕುಂದಾನಗರಿ ಜನ ಬೆಚ್ಚಿ ಬಿದಿದ್ದು, ಕಳೆದ ಆರು ತಿಂಗಳಲ್ಲಿ ಅದೇಷ್ಟೂ ಜನರಿಗೆ ನಾಯಿ (Dog Attack) ಕಚ್ಚಿದೆ ಅನ್ನೋದನ್ನ ಕೇಳಿದ್ರೇ ನೀವು ಶಾಕ್ ಆಗುತ್ತೀರಿ. ಸಾವಿರಲ್ಲ ಎರಡು ಸಾವಿರಲ್ಲ ಬರೋಬ್ಬರಿ 14ಸಾವಿರ ಜನರ ರಕ್ತ ಹೀರಿವೆ ನಾಯಿಗಳು. ಆರೋಗ್ಯ ಇಲಾಖೆಯಿಂದಲೇ ಸ್ಪೋಟಕ ಮಾಹಿತಿ ಹೊರ ಬಿದಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶ್ವಾನಗಳು ಅಟ್ಟಹಾಸ ಮೆರೆಯುತ್ತಿವೆ. ನಾಯಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರಿಂದ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಲಾಗಿದೆ. ಈ ಕುರಿತಾಗಿ ಡಿಎಚ್‌ಒ …
Read More »ಬಿಎಸ್ವೈ ನಂತರ ವರ್ಷ ಮುಗಿಸಿದ ಮೊದಲ ಬಿಜೆಪಿ ಸಿಎಂ ಬೊಮ್ಮಾಯಿ
ಬೆಂಗಳೂರು : ದಕ್ಷಿಣ ಭಾರತದಲ್ಲಿ ಕಮಲ ಅರಳಿದ ಮೊದಲ ರಾಜ್ಯವಾದ ಕರ್ನಾಟಕದಲ್ಲಿ ಯಡಿಯೂರಪ್ಪ ನಂತರ ಒಂದು ವರ್ಷದ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆ ಬಸವರಾಜ ಬೊಮ್ಮಾಯಿ ಅವರದ್ದಾಗಿದೆ. ರಾಜ್ಯದಲ್ಲಿ ಈವರೆಗೆ ನಾಲ್ವರು ಬಿಜೆಪಿಯಿಂದ ಮುಖ್ಯಮಂತ್ರಿಗಳಾಗಿದ್ದಾರೆ. ಯಡಿಯೂರಪ್ಪ ಮೊದಲ ಬಿಜೆಪಿ ಮುಖ್ಯಮಂತ್ರಿಯಾದರೆ ಡಿ.ವಿ. ಸದಾನಂದಗೌಡ ಎರಡನೇ ಸಿಎಂ, ಜಗದೀಶ್ ಶೆಟ್ಟರ್ ಮೂರನೇ ಮುಖ್ಯಮಂತ್ರಿಯಾಗಿದ್ದು, ಪ್ರಸ್ತುತ ಇರುವ ಬಸವರಾಜ ಬೊಮ್ಮಾಯಿ ನಾಲ್ಕನೇ ಮುಖ್ಯಮಂತ್ರಿಯಾಗಿದ್ದಾರೆ. ಈ ನಾಲ್ವರು ಮುಖ್ಯಮಂತ್ರಿಗಳಲ್ಲಿ …
Read More »ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ಸಮಾವೇಶ
ಬೆಳಗಾವಿ ನಗರದಲ್ಲಿ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಹಳೆ ಪಿಬಿ ರಸ್ತೆಯ ಸಾಯಿ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗಾಗಿ ಚಿಂತನಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂಎಲ್‌ಇ ಚನ್ನರಾಜ್ ಹಟ್ಟಿಹೊಳಿರವರು, ಕಾಂಗ್ರೆಸ್ ನಾಯಕರ ಆತ್ಮಬಲವನ್ನು …
Read More »
Laxmi News 24×7