ಬೆಂಗಳೂರು: ಸಂಪುಟ ವಿಸ್ತರಣೆ ಬಗ್ಗೆ ಅನುಮತಿ ಕೇಳುವುದಕ್ಕಾಗಿ ಯಾರೂ ದಿಲ್ಲಿಗೆ ಬರುವುದು ಬೇಡ. ವಿಸ್ತರಣೆ ಮಾಡುವಾಗ ನಾವೇ ಹೇಳುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ಅವರ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್.ಅಶೋಕ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಅವರು, ಸಂಪುಟ …
Read More »ಕರಾವಳಿ ಘಟನೆ ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ: ಆರಗ ವಿರುದ್ಧ ಶಾ ಗರಂ
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಕುರಿತು ಮಾಹಿತಿ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸದಿರುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಗರಂ ಆಗಿದ್ದಾರೆ. ಕಾರ್ಯಕರ್ತರ ರಕ್ಷಣೆ ಮತ್ತು ವಿಶ್ವಾಸ ಗಳಿಸಲು ಪ್ರಯತ್ನಿಸುವಂತೆ ಸಿಎಂ ಬಸವ ರಾಜ ಬೊಮ್ಮಾಯಿಗೆ ಸೂಚಿಸಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ “ಸಂಕಲ್ಪ್ ಸೆ ಸಿದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಶಾ, ಗುರುವಾರ ಬೆಳಗ್ಗೆ ಸಿಎಂ …
Read More »ಅನೈತಿಕ ಸಂಬಂಧಕ್ಕೆ ಶಿಕ್ಷಕಿ ಬಲಿ: 6 ತಿಂಗಳ ಬಳಿಕ ಆರೋಪಿಗಳ ಹೆಡೆಮುರಿ ಕಟ್ಟಿದ ನಂಜನಗೂಡು ಪೊಲೀಸರು
ಮೈಸೂರು: ಆರು ತಿಂಗಳ ಹಿಂದೆ ನಡೆದಿದ್ದ ಶಿಕ್ಷಕಿ ನಿಗೂಢ ಸಾವಿನ ಪ್ರಕರಣವನ್ನು ನಂಜನಗೂಡು ಪೊಲೀಸರು ಕೊನೆಗೂ ಭೇದಿಸಿದ್ದು, ನಗರಸಭಾ ಸದಸ್ಯೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ನಂಜನಗೂಡು 5ನೇ ವಾರ್ಡ್ ನಗರಸಭಾ ಸದಸ್ಯೆ ಗಾಯತ್ರಿ, ಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತರು. ಕಳೆದ ಮಾರ್ಚ್ 9 ರಂದು ಶಿಕ್ಷಕಿ ಸುಲೋಚನಾ ಅನುಮಾನಸ್ಪಾದವಾಗಿ ಮನೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡು ನಿಗೂಢ ಸಾವಿನ ಪ್ರಕರಣ ಬೆನ್ನತ್ತಿದ್ದ ನಂಜನಗೂಡು ಪೊಲೀಸರಿಗೆ ಒಂದು ಮಹತ್ವದ ಸುಳಿವು ದೊರೆಯಿತು. ಯಾವುದು …
Read More »ಮುಖ್ಯಮಂತ್ರಿ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವ ಸೋಮಶೇಖರ್, ಬಿಜೆಪಿ ಅಧ್ಯಕ್ಷ ಜಟೀಲ್ ಇದರಲ್ಲಿ ಭಾಗಿ*
*ಬೆಂಗಳೂರು:* ಬೆಂಗಳೂರಿನ ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ರ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ರವರು ಉಪಸ್ಥಿತರಿದ್ದರು. ಕಹಾಮದ …
Read More »ಬೆಳಿಗ್ಗೆ 8-11 ಗಂಟೆವರೆಗೆ ಭಾರಿ ವಾಹನಗಳಿಗೆ ಬೆಳಗಾವಿ ನಗರಕ್ಕೆ ನಿರ್ಬಂಧ ವಿಧಿಸುತ್ತೇವೆ: ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ
ಬೆಳಿಗ್ಗೆ 9 ಗಂಟೆಯಿಂದ 11 ಗಂಟೆವರೆಗೆ ಅದೇ ರೀತಿ ಸಾಯಂಕಾಲ 4 ಗಂಟೆಯಿಂದ 8 ಗಂಟೆವರೆಗೆ ನಗರದ ಕೇಂದ್ರ ಸ್ಥಳಗಳಿಗೆ ಭಾರಿ ವಾಹನಗಳು ಬರದಂತೆ ಈಗಾಗಲೇ ಮಾರ್ಗಸೂಚಿ ಇದೆ. 7.30 ಅಥವಾ 8 ಗಂಟೆಯಿಂದ 11 ಗಂಟೆವರೆಗೆ ಬದಲಾವಣೆ ಮಾಡಬೇಕಾಗುತ್ತದೆ. ಈ ಬಗ್ಗೆ ವರದಿ ತರಿಸಿಕೊಂಡು ಶೀಘ್ರವೇ ಒಂದು ಆದೇಶ ಹೊರಡಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ರಸ್ತೆ …
Read More »ಜಮೀನು ಕೆಲಸಕ್ಕೆಂದು ಹೋದ ರೈತ ನಾಪತ್ತೆ.. ನೀರುಪಾಲು ಶಂಕೆ
ರಾಯಚೂರು: ನಿನ್ನೆ ಸುರಿದ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತನೋರ್ವ ಕೊಚ್ಚಿ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಘಟನೆ ಜರುಗಿದೆ. ವೆಂಕಟೇಶ(36) ಕೊಚ್ಚಿ ಹೋದ ರೈತ ಎಂದು ಹೇಳಲಾಗುತ್ತಿದೆ. ಜಮೀನು ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವಾಗ ಘಟನೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ. ಘಟನಾ ಮಾಹಿತಿ ದೊರೆತ ಬಳಿಕ ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. …
Read More »ಬೆಳಗಾವಿ ನಗರದಲ್ಲಿ ಭಾರಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ
ಬೆಳಗಾವಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ ಬಳಿಕ ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದು ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 11 ಗಂಟೆವರೆಗೆ ಯಾವುದೇ ಭಾರಿ ವಾಹನಗಳು ಪ್ರವೇಶ ಮಾಡದಂತೆ ಕ್ರಮ ತೆಗೆದುಕೊಂಡಿದ್ದಾರೆ. ಹೌದು ಕ್ಯಾಂಪ್ ಮತ್ತು ಪೋರ್ಟ ರಸ್ತೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಭಾರಿ ವಾಹನಗಳಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರಿಂದ ಬೆಳಗಾವಿ ನಗರ ಪೊಲೀಸರ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಗುರುವಾರ ತಮ್ಮ ಕಚೇರಿಯಲ್ಲಿ ಡಿಸಿಪಿ ಪಿ.ವ್ಹಿ.ಸ್ನೇಹಾ ಅವರು ಕ್ಯಾಂಪ್ ಪ್ರದೇಶದ …
Read More »ಬೆಳಗಾವಿ: ನಗರದಲ್ಲಿ ಬುಧವಾರ ಸಂಜೆ ಎರಡು ತಾಸಿಗೂ ಹೆಚ್ಚು ಸುರಿದ ಮಳೆಯಿಂದಾಗಿ ಇಲ್ಲಿನ ಹಳೇ ಪಿ.ಬಿ. ರಸ್ತೆಯಲ್ಲಿ ಹಲವು ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿತು. ಅದನ್ನು ಹೊರಹಾಕಲು ವ್ಯಾಪಾರಸ್ಥರು ಹಾಗೂ ನಿವಾಸಿಗಳು ಹರಸಾಹಸಪಟ್ಟರು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ವರುಣ ಅಬ್ಬರಿಸಿದ್ದರಿಂದ ಹಳೇ ಪಿ.ಬಿ. ರಸ್ತೆ ಕಾಲುವೆಯಂತಾಯಿತು. ಮೊಣಕಾಲುದ್ದ ನಿಂತಿದ್ದ ನೀರಲ್ಲೇ ಶಾಲಾ- ಕಾಲೇಜು ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಸಾಗಿದರು. ವಾಹನ ಸವಾರರು ಸರ್ಕಸ್ ಮಾಡುತ್ತ ಸಂಚರಿಸುತ್ತಿರುವುದು ಕಂಡುಬಂತು. ಹಳೇ ಪಿ.ಬಿ. ರಸ್ತೆ ಮೇಲ್ಸೇತುವೆ ಪಕ್ಕದ ಸರ್ವೀಸ್ ರಸ್ತೆ, ಹಿಂದವಾಡಿಯ ಕೆಲ ಅಪಾರ್ಟ್‌ಮೆಂಟ್‌ಗಳ ನೆಲ ಮಹಡಿಗೂ ಮಳೆ ನೀರು ನುಗ್ಗಿದ್ದರಿಂದ ಜನರು ತೊಂದರೆ ಅನುಭವಿಸಿದರು. ಶಿವಬಸವ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ರಸ್ತೆಯಲ್ಲೂ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಮಳೆಯಿಂದಾಗಿ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲೂ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದರು. ಖಡೇಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ ಸೇರಿ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ-ವಹಿವಾಟಿಗೆ ತೊಡಕಾ ಯಿತು. ಜನರು ರಸ್ತೆಯ ಇಕ್ಕೆಲ ಗಳಲ್ಲಿ ಆಶ್ರಯ ಪಡೆದರು. ರಾತ್ರಿಯ ವರೆಗೂ ಮಳೆ ಮುಂದುವರಿದಿತ್ತು. ಪೊಲೀಸ್ ಉಪಠಾಣೆ ಮುಳುಗಡೆ: ರಾಮದುರ್ಗ ತಾಲ್ಲೂಕಿನ ಸುರೇಬಾನ – ಮನಿಹಾಳ ಗ್ರಾಮದಲ್ಲಿನ ರಸ್ತೆ ಗಳು ಕೆರೆಯಂತಾದವು. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಸುರೇಬಾನ ಪೊಲೀಸ್ ಉಪಠಾಣೆ ಮುಳುಗಡೆಯಾಗಿತ್ತು. ಗ್ರಾಮದ ಫಲಹಾರ ಶಿವಯೋಗೀಶ್ವರ ಸಂಯುಕ್ತ ಪದವಿಪೂರ್ವ ಮಹಾ ವಿದ್ಯಾಲಯದ ಆಟದ ಮೈದಾನವೂ ಜಲಾವೃತವಾಗಿತ್ತು. ರಸ್ತೆ ಮೇಲೆ ಅಪಾರ ಪ್ರಮಾಣ ನೀರು ಹರಿದಿದ್ದರಿಂದ ವಾಹನ ಸಂಚಾರರು ಪರದಾಡಿದರು. ವಿದ್ಯಾರ್ಥಿಗಳು ಸೈಕಲ್ ಮೇಲೆ ಸಾಗಿದರು.
ಬೆಳಗಾವಿ: ನಗರದಲ್ಲಿ ಬುಧವಾರ ಸಂಜೆ ಎರಡು ತಾಸಿಗೂ ಹೆಚ್ಚು ಸುರಿದ ಮಳೆಯಿಂದಾಗಿ ಇಲ್ಲಿನ ಹಳೇ ಪಿ.ಬಿ. ರಸ್ತೆಯಲ್ಲಿ ಹಲವು ಅಂಗಡಿಗಳು, ಮನೆಗಳಿಗೆ ನೀರು ನುಗ್ಗಿತು. ಅದನ್ನು ಹೊರಹಾಕಲು ವ್ಯಾಪಾರಸ್ಥರು ಹಾಗೂ ನಿವಾಸಿಗಳು ಹರಸಾಹಸಪಟ್ಟರು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ಹೊತ್ತಿಗೆ ವರುಣ ಅಬ್ಬರಿಸಿದ್ದರಿಂದ ಹಳೇ ಪಿ.ಬಿ. ರಸ್ತೆ ಕಾಲುವೆಯಂತಾಯಿತು. ಮೊಣಕಾಲುದ್ದ ನಿಂತಿದ್ದ ನೀರಲ್ಲೇ ಶಾಲಾ- ಕಾಲೇಜು ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ಸಾಗಿದರು. ವಾಹನ ಸವಾರರು ಸರ್ಕಸ್ …
Read More »ಭಕ್ತಿ ಭಾವದ ಪ್ರತೀಕ ಬೂದಿಹಾಳ ಅಡಿವೆಪ್ಪ ಮಹಾರಾಜರು
ಹೂವಿನಹಿಪ್ಪರಗಿ: ಭಕ್ತಿಯಿಂದ ನಡೆದು ಗುರುವಿನ ದಾಸನಾಗಿ ದುಡಿದು ಗುರು ಮಿರಿಸಿ ತನ್ನ ಭಕ್ತ ಬಳಗಕ್ಕೆ ಬೇಡಿದ ವರವನ್ನು ನೀಡಿ ಭಕ್ತಿ ಭಾವದ ಪ್ರತೀಕವಾಗಿ ಇಂದು ಸಾವಿರಾರು ಜನರಿಗೆ ದಾರಿ ದೀಪವಾಗಿರುವ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರು ಎಂದು ಸರೂರ ರೇವಣಸಿದ್ದೇಶ್ವರ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಕರಿಸಿದ್ದೇಶ್ವರ ಮಠದ ಸಿದ್ದಪುರುಷ ಅಡಿವೆಪ್ಪ ಮಹಾರಾಜರ ಶ್ರಾವಣ ಮಾಸದ ಜಾತ್ರೆಯಲ್ಲಿ ಮಾತನಾಡಿದ ಅವರು, ಭಕ್ತರನ್ನು …
Read More »ತ್ತೂರು ಜನತೆ ಹಾಗೂ ರಾಣಿ ಚನ್ನಮ್ಮನಿಗೆ ಸರ್ಕಾರ ಅವಮಾನ ಮಾಡಿದೆ
ಬೆಳಗಾವಿ/ಚ.ಕಿತ್ತೂರು: ಚನ್ನಮ್ಮನ ಕಿತ್ತೂರು ಕೋಟೆಯ ಪ್ರತಿರೂಪ ಅರಮನೆಯನ್ನು ಬಚ್ಚನಕೇರಿಯಲ್ಲಿ ನಿರ್ಮಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕಿತ್ತೂರಿನ ಜನತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಕಿತ್ತೂರಿನಲ್ಲಿ ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅಂಗಡಿ ಮುಂಗಟ್ಟು ಸೇರಿದಂತೆ ವ್ಯಾಪಾರ ವಹಿವಾಟು ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಿತ್ತೂರು ಬಂದ್ ಯಶಸ್ವಿಯಾಯಿತು. ನಂತರ ಬೆಳಗಾವಿ …
Read More »
Laxmi News 24×7