Breaking News

ಜಿಲ್ಲೆ

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್‌ವೊಂದು ಅಪಘಾತಕ್ಕೀಡಾದ ಘಟನೆ ಪುಣಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ನಡೆದಿದೆ. ಹೌದು ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್‌ವೊಂದು ಬೆಳಗಾವಿ ಹಿರೇಬಾಗೇವಾಡಿ ಮಧ್ಯೆ ಕಮಕಾರಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಬಸ್ ಪಲ್ಟಿಯಾಗಿದೆ.. ಸರಕಾರಿ ಬಸ್ ಕೊಲ್ಹಾಪೂರದಿಂದ ರಾಣೇಬೆನ್ನೂರಿಗೆ ಪ್ರಯಾಣ ಬೆಳೆಸಿತ್ತು. ಇದರಲ್ಲ್ಲಿ ಒಟ್ಟು ೩೫ ಜನ ಪ್ರಯಾಣ ಮಾಡುತ್ತಿದ್ದರು. ಜಿಟಿ ಜಿಟಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ …

Read More »

ಬೆಳಗಾವಿಯಲ್ಲಿ ​​​​​​​ಇನ್ನೂ ಪತ್ತೆಯಾಗದ ಚಿರತೆ: ಹೊರಗೆ ಬಾರದ ಜನ

ಬೆಳಗಾವಿ: ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ನುಗ್ಗಿದ ಚಿರತೆ 24 ತಾಸುಗಳ ನಂತರವೂ ಸೆರೆ ಸಿಕ್ಕಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ನಿರಂತರ ಶೋಧ ನಡೆಸಿದ್ದಾರೆ. ಇನ್ನೊಂದೆಡೆ, ಚಿರತೆ ಭಯದಿಂದಾಗಿ ಈ ಪ್ರದೇಶದಲ್ಲಿ ಜನರು ಮನೆಯಿಂದ ಹೊರಬಂದಿಲ್ಲ. ಪ್ರತಿ ದಿನ ವಾಯು ವಿಹಾರಿಗಳಿಂದ ತುಂಬಿರುತ್ತಿದ್ದ ಇಲ್ಲಿನ ಜಾಧವ ನಗರ, ಹನುಮಾನ್ ನಗರ, ಸಹ್ಯಾದ್ರಿ ನಗರ, ಟಿ.ವಿ ಸೆಂಟರ್ ಮುಂತಾದ ಪ್ರದೇಶದ ರಸ್ತೆಗಳು ಶನಿವಾರ ಬೆಳಿಗ್ಗೆ ಬಿಕೋ ಎನ್ನುತ್ತಿದ್ದವು. ಶಾಲೆ, …

Read More »

ಉದ್ದ ತೋಳಿನ ಶರ್ಟ್ ಧರಿಸಿ ಬಂದ ಪರೀಕ್ಷಾರ್ಥಿಗಳಿಗೆ ಕೆಪಿಟಿಸಿಎಲ್ ನೀಡಿತು ಶಾಕ್​! ಬಟ್ಟೆ ಕಟ್​ ಕಟ್​

ಕೊಪ್ಪಳ: ರಾಜ್ಯಾದ್ಯಂತ ಇಂದು ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆ ನಡೆಯುತ್ತಿದೆ. ಕೊಪ್ಪಳದಲ್ಲಿ ಪರೀಕ್ಷೆ ಬರೆಯಲು ತುಂಬು ತೋಳಿನ ಅಂಗಿ ಹಾಕಿಕೊಂಡು ಬಂದವರಿಗೆ ಪರೀಕ್ಷಾ ಸಿಬ್ಬಂದಿ ತೋಳು ಕತ್ತರಿಸುವ ಮೂಲಕ ಶಾಕ್ ನೀಡಿದ್ದಾರೆ.   ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮದಿಂದಾಗಿ ಇತರ ನೇಮಕಾತಿ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ಕಟ್ಟಳೆ ವಿಧಿಸಲಾಗಿದೆ. ಇಂದು ನಡೆಯುತ್ತಿರುವ ಪರೀಕ್ಷೆಗೆ ತುಂಬು ತೋಳಿನ ಅಂಗಿ ಹಾಕಿ ಬಂದವರನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟಿಲ್ಲ. ಬೇರೆ ಶರ್ಟ್ ಧರಿಸಿ ಬರುವಂತೆ …

Read More »

2023ರ ವಿಧಾನಸಭೆ ಚುನಾವಣೆಗೆ ತಾಲೀಮು

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜೆಡಿಎಸ್‍ ಜನತಾ ಜಲಧಾರೆ ಸಮಾವೇಶದ ಮೂಲಕ ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿದೆ. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಿಸುವ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕರ್ನಾಟಕ ಭೇಟಿ ಚುನಾವಣಾ ಸಿದ್ಧತೆಗೆ ಮುನ್ನುಡಿ ಎಂದೇ ಅರ್ಥೈಸಬಹುದು. ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಸಿಎಂ …

Read More »

ಬಿಜೆಪಿ ಶಾಸಕರಿಗೆ ಗೌನ್ ಉಡುಗೊರೆ- ಶಾಸಕ ಸತೀಶ್ ಜಾರಕಿಹೊಳಿ

ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಮೇಯರ್, ಉಪಮೇರ್ ಆಗಿರುವ ಸ್ಥಳೀಯ ಬಿಜೆಪಿ ಶಾಸಕರಿಗೆ ಆ.9 ರಂದು ಕಾಂಗ್ರೆಸ್ ನಿಂದ ಗೌನ್ ಉಡುಗರೆ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. : ಇಂದು ಶನಿವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ರವರು, ವಿಧಾನ ಸಭೆಯ ಚುನಾವಣೆ ಮುಗಿಯುವವರೆಗೂ ಮೇಯರ್, ಉಪಮೇಯರ್ ಆಯ್ಕೆಯಾಗುವುದಿಲ್ಲ. ಈಗಾಗಲೇ ಅನಧಿಕೃತವಾಗಿ ಬೆಳಗಾವಿಯ …

Read More »

ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1 ಇಂದು ಆರಂಭ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌

ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1 ಇಂದು ಆರಂಭವಾಗಿದ್ದು ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸಾಕಷ್ಟು ಕಾಂಟ್ರವರ್ಸಿ ಜೊತೆ ತಮ್ಮ ಜೋತಿಷ್ಯದ ಮೂಲಕ ಚಿರಪರಿಚಿತರಾದ ಆರ್ಯವರ್ಧನ್ ಗುರೂಜಿ‌ ಈಗ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1ರ ಮೊದಲ ಸ್ಪರ್ಧಿಯಾಗಿದ್ದಾರೆ.   ಇನ್ನೂಆರ್ಯವರ್ಧನ್ ಗುರೂಜಿ‌ಯನ್ನಸ್ಟೇಜ್‌ ಮೇಲೆ ಬರಮಾಡಿಕೊಂಡ ಅಭಿನಯ ಚಕ್ರವರ್ತಿ ಸುದೀಪ್ ಅವರು, ಆರ್ಯವರ್ಧನ್ ಜೊತೆ ಕೆಲಕಾಲ ಮಾತನಾಡಿದರು. ಈ ವೇಳೆ ಮಾತನಾಡೋದಕ್ಕೆ ತುಂಬಾ ಚಡಪಡಿಸುತ್ತಿದ್ದ ಆರ್ಯವರ್ಧನ್ …

Read More »

ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ನಡೆಸಿದ ನಕಲಿ ವೈದ್ಯನ ಬಂದನ

ಬಾಗಲಕೋಟೆ: ಗರ್ಭ ಧರಿಸಿದ್ದ ಎಮ್ಮೆಗೆ ನಕಲಿ ವೈದ್ಯನೊಬ್ಬ ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ ನಡೆಸಿದ್ದು, ತೀವ್ರ ರಕ್ತಸ್ರಾವವಾಗಿ ಎಮ್ಮೆ ಮತ್ತು ಕರು ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ನಕಲಿ ವೈದ್ಯನ ಹೆಸರು ಶಿವಾನಂದ ಮಲ್ಲಪ್ಪ ರುದ್ರಪ್ಪನವರ. ಈತ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಲಿ ಗ್ರಾಮದವ. ಮುಧೋಳ ತಾಲೂಕಿನ ಕನಸಗೇರಿ ಗ್ರಾಮದ ಹನುಮಂತ ಬಾಳಪ್ಪ ಪೂಜೇರಿ ಅವರಿಗೆ ಸೇರಿದ ಎಮ್ಮೆ ಗರ್ಭ ಧರಿಸಿ ಹಲವು ತಿಂಗಳಾಗಿತ್ತು. ಅನಾರೋಗ್ಯ ಕಾರಣ ಮಾಲೀಕರು ಪಶು …

Read More »

BJP ಗೆ ಸೆಡ್ಡು ಹೊಡೆಯುತ್ತಾ ಹಿಂದೂಸ್ಥಾನ ಜನತಾ ಪಾರ್ಟಿ ಪಕ್ಷ ?

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಸೆಡ್ದು ಹೊಡೆಯುವ ನಿಟ್ಟಿನಲ್ಲಿ ಹೊಸದೊಂದು ರಾಜಕೀಯ ಪಕ್ಷ ಉದಯವಾಗಲಿದ್ದು, ನಾಳೆ ನೂತನ ಪಕ್ಷಕ್ಕೆ ಚಾಲನೆ ದೊರೆಯಲಿದೆ. ವಿನಾಯಕ ಮಾಳದಕರ್ ನೇತೃತ್ವದಲ್ಲಿ ಹಿಂದೂಸ್ಥಾನ ಜನತಾ ಪಾರ್ಟಿ ಎಂಬ ಹೊಸ ಪಕ್ಷ ಅಸ್ತಿತ್ವಕ್ಕೆ ಬರಲಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿರುವ ಶರಣ ಸೇವಾ ಸಮಾಜದಲ್ಲಿ ನಾಳೆ ಉದ್ಘಾಟನಾ ಸಮಾರಂಭ ನಡೆಯಲಿದೆ.   ನಾಳೆ ಶರಣ ಸೇವಾ ಸಮಾಜದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆ ಬಳಿಕ ಮಠಾಧೀಶರಿಂದಲೇ ಹಿಂದೂಸ್ಥಾನ ಜನತಾ …

Read More »

600 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯಿಂದ ರಸ್ತೆ, ಒಳಚರಂಡಿ ನಿರ್ಮಾಣ ಮಾಡಿದರೂ ಅದು ಸರಿಯಾಗಿಲ್ಲ:A.A.P.

ಬೆಳಗಾವಿ ಸ್ಮಾರ್ಟ್ ಸಿಟಿಯು ಮಹತ್ವದ ವಿಶ್ವಸಂಸ್ಥೆ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೆಸ್ 9 ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿರುವುದು ಯಾವ ಮಾನದಂಡದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ತಂಡವನ್ನು ಬೆಳಗಾವಿಗೆ ಕಳುಹಿಸಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪರಿಶೀಲನೆ ನಡೆಸಬೇಕು ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಆಗ್ರಹಿಸಿದ್ದಾರೆ. ಶನಿವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್‍ಕುಮಾರ್ ಟೋಪಣ್ಣವರ್ ರವರು, …

Read More »

ಬ್ಯಾಂಕಿಂಗ್ ವ್ಯವಹಾರದಲ್ಲಿ ಗ್ರಾಹಕರಿಗೆ ತಿಳುವಳಿಕೆ ನೀಡುವುದು ಅತ್ಯವಶ್ಯ- ಕರ್ನಾಟಕ ಬ್ಯಾಂಕ್ ಎಂ.ಡಿ ಮಹಾಬಳೇಶ್ವರ್..!!

ಬ್ಯಾಂಕಿನ ವ್ಯವಹಾರಗಳನ್ನು ಶಿಸ್ತಿನ ಇತಿ ಮಿತಿಯೊಳಗೆ ನಡೆಸುವುದು ಹೇಗೆ ಎಂಬುದು ಕೆಲವರಿಗೆ ಗೊತ್ತಿದೆ. ಇನ್ನೂ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಬ್ಯಾಂಕಿಂಗ್ ವ್ಯವಹಾರಗಳನ್ನು ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ಕಾರ್ಯಮಾಡುತ್ತಿದೆ ಎಂದು ಬ್ಯಾಂಕ್‍ನ ಎಂಡಿ ಮಹಾಬಳೇಶ್ವರ್ ರವರು ತಿಳಿಸಿದ್ದಾರೆ. : ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿನ ವ್ಯವಹಾರಗಳನ್ನು ಶಿಸ್ತಿನ ಇತಿ ಮಿತಿಯೊಳಗೆ ನಡೆಸುವುದು ಹೇಗೆ ಎಂಬುದು ಕೆಲವರಿಗೆ ಗೊತ್ತಿದೆ. ಇನ್ನೂ ಹಲವರಿಗೆ ಗೊತ್ತಿಲ್ಲ. …

Read More »