ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮೃತಪಟ್ಟಿದ್ದಾರೆ. 12 ಬಾಲಕರು, 8 ಬಾಲಕಿಯರು ಸೇರಿ 186 ಮಂದಿ ಅಸ್ವಸ್ಥ ರಾಗಿದ್ದಾರೆ. ಇವರಲ್ಲಿ ಆರೋಗ್ಯ ಸ್ಥಿತಿ ಗಂಭೀರ ವಾಗಿರುವ 94 ಮಂದಿಯನ್ನು ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇದೇ ಊರಿನ ಸರಸ್ವತಿ ನಿಂಗಪ್ಪ ಹಾವಳ್ಳಿ (70) ಅವರು ಅ.23ರಂದು, ಶಿವಪ್ಪ ಯಂಡಿಗೇರಿ (70) ಬುಧವಾರ ಮೃತಪಟ್ಟರು. ಅಸ್ಪತ್ರೆಗೆ ದಾಖಲಾಗಿರುವ ಹಲವರಿಗೆ …
Read More »ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಬೆಳಗಾವಿಯ ಕರಾಟೆಪಟು
ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಕರಾಟೆ ಪಟು ಕೇತನ ಕಲ್ಲಪ್ಪಾ ಫಾಟಕೆ ಬ್ಲ್ಯಾಕ್ ಬೆಲ್ಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಳಗಾವಿಯ ಮಂಡೋಳಿ ರಸ್ತೆಯ ಮನೋಪ್ರಭಾ ಮಂಗಲ ಕಾರ್ಯಾಲಯದಲ್ಲಿ ಇದೇ ಅಕ್ಟೋಬರ್ 23ರಂದು ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 70 ಕರಾಟೆ ಪಟುಗಳು ಭಾಗಿಯಾಗಿದ್ದರು. ಈ ವೇಳೆ ಮುಖ್ಯ ತೀರ್ಪುಗಾರರಾಗಿ ಗಜೇಂದ್ರ ಕಾಕತಿಕರ ಆಗಮಿಸಿದ್ದರು. ಕಳೆದ 9 ವರ್ಷಗಳಿಂದ ಇಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ …
Read More »ಜಮೀನು ನಕ್ಷೆಗಳು ಆನ್ ಲೈನ್ ನಲ್ಲೇ ಲಭ್ಯ; ನಕ್ಷೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಬೆಂಗಳೂರು: ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರ ನಕ್ಷೆಗಳು ಇನ್ನು ಮುಂದೆ ಆನ್ ಲೈನ್ ನಲ್ಲೇ ಸಿಗುವುದಕ್ಕೆ ಈಗ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆ. 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳಿಗೆ ಅರ್ಜಿ ಸಲ್ಲಿಸಿದ ನಾಗರಿಕರು https:// 103,138.196.154/service19/Report/ ವೆಬ್ಸೈಟ್ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಸಹ ವೀಕ್ಷಿಸಬಹುದು. ಅರ್ಜಿ ಸ್ವೀಕಾರಗೊಂಡು ಸರ್ವೇ ಸಿಬ್ಬಂದಿ ತಮ್ಮ ಜಮೀನಿಗೆ ಬಂದು …
Read More »ಆಹ್ವಾನ ಪತ್ರಿಕೆಯಲ್ಲಿ ದಿವಂಗತ ಶಾಸಕ ಆನಂದ ಮಾಮನಿ ಹೆಸರು ಶಿಕ್ಷಣ ಇಲಾಖೆಯ ಯಡವಟ್ಟು..!
ದಿವಗಂತ ಶಾಸಕ ಆನಂದ ಮಾಮನಿ ಹೆಸರು ಆಹ್ವಾನ ಪತ್ರಿಕೆಯಲ್ಲಿ ಹಾಕಿ ಅದ್ವಾನವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢ ಶಾಲೆಗಳ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರ ಆಹ್ವಾನ ಪತ್ರಿಕೆಯಲ್ಲಿ ದಿವಂಗತ ಶಾಸಕ ಆನಂದ ಮಾಮನಿ ಹೆಸರನ್ನು ಹಾಕಿದ್ದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ತಿಂಗಳ ಅಕ್ಟೋಬರ್ 23ರಂದು ಸವದತ್ತಿ ಶಾಸಕರು ಹಾಗೂ ವಿಧಾನಸಭೆಉ ಉಪಸಭಾಧ್ಯಕ್ಷರು ಆಗಿದ್ದ ಆನಂದ ಮಾಮನಿ ನಿಧನ ಹೊಂದಿದ್ದರು. ನಾಳೆ ಶುಕ್ರವಾರ ನಡೆಯಲಿರುವ ಕ್ರೀಡಾಕೂಟ ಕಾರ್ಯಕ್ರಮದ …
Read More »ಮಹಾನಗರ ಪಾಲಿಕೆ ಮುಂಭಾಗದ ಕನ್ನಡ ಬಾವುಟ ಹಾರಾಡುತ್ತಿದೆ. ಆದರೆ ಇದೀಗ ಆ ಬಾವುಟಕ್ಕೆ ಅಪಮಾನ:
ಕನ್ನಡ ಹೋರಾಟಗಾರರ ಹೋರಾಟದ ಪರಿಣಾಮ ಬೆಳಗಾವಿಯ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಇಂದು ಕನ್ನಡ ಬಾವುಟ ಹಾರಾಡುತ್ತಿದೆ. ಆದರೆ ಇದೀಗ ಆ ಬಾವುಟಕ್ಕೆ ಅಪಮಾನ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಹರಿದ ಬಾವುಟವೇ ಹಾರಾಡುತ್ತಿರೋದು ಸಧ್ಯ ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹರಿದ ಕನ್ನಡ ಬಾವುಟವೇ ಹಾರಾಡುತ್ತಿದೆ. ಮಳೆ, ಗಾಳಿಗೆ ಹರಿದ ಕನ್ನಡ ಬಾವುಟ ಬದಲಾಯಿಸಲು ಪಾಲಿಕೆ ಮುಂದಾಗುತ್ತಿಲ್ಲ. ಕನ್ನಡ ರಾಜ್ಯೋತ್ಸವ ಹೊಸ್ತಿಲಿನಲ್ಲಿ ಯಡವಟ್ಟಾಗಿದೆ. …
Read More »ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಸಾರಾಯಿ ಕುಡಿದ ನಶೆಯಲ್ಲಿ ಹತ್ಯೆ ಮಾಡಿರುವ ಪಾಪಿ ಪತಿ
ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಸಾರಾಯಿ ಕುಡಿದ ನಶೆಯಲ್ಲಿ ಪಾಪಿ ಪತಿ ಹತ್ಯೆ ಮಾಡಿರುವ ಬೆಚ್ಚಿ ಬೀಳಿಸುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಪಾಂಡುರಂಗ ಹಾರೂಗೇರಿ(55) ಗಂಡನಿಂದ ಕೊಲೆಯಾದ ಪತ್ನಿ. ಪಾಂಡುರಂಗ ಹಾರೂಗೇರಿ ಹೆಂಡತಿಯನ್ನು ಕೊಲೆ ಮಾಡಿದ ಪಾಪಿ ಪತಿ. ಹೆಂಡತಿಯನ್ನು ಕೊಂದು ತಲೆ ಮರೆಸಿಕೊಂಡ ಪತಿಯನ್ನು ಪೆÇೀಲೀಸರು ಪತ್ತೆ ಮಾಡುತ್ತಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮೂಡಲಗಿ ಪೆÇಲೀಸರು …
Read More »ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ
ಮೂರು ದಿನಗಳ ಹಿಂದೆ ಬೆಳಗಾವಿ ತಾಲೂಕಿನ ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮುಳುಗಿದ್ದ ಯುವಕನ ಶವ ಪತ್ತೆಯಾಗಿದೆ. ಹೌದು ಮಂಗಳವಾರ ಸಾಯಂಕಾಲ ಮೂವರು ಸ್ನೇಹಿತರು ದೀಪಾವಳಿ ಹಬ್ಬದ ಮೋಜು ಮಸ್ತಿ ಮಾಡುತ್ತಾ, ಅಲತಗಾದ ಕಡಿ ಮಶಿನ್ ಬಳಿಯ ಕಲ್ಲಿನ ಕ್ವಾರಿಯಲ್ಲಿ ನೀರಿಗೆ ಇಳಿದಿದ್ದರು. ಇದರಲ್ಲಿ ಅನಗೋಳದ 22 ವರ್ಷದ ಸತೀಶ ಹನಮನ್ನವರ ಎಂಬ ಯುವಕ ನೀರಿನಲ್ಲಿ ಮುಳುಗಿದ್ದ. ಈತನ ಸ್ನೇಹಿತರು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದರು. ಸುದ್ದಿ …
Read More »ಸಚಿವ ಸಂಪುಟ ವಿಸ್ತರಣೆ ಆಗಲಿ, ಬಿಡಲಿ ನಾನಂತೂ ಅದರಲ್ಲಿ ಇಲ್ಲ ಎಂದ ಯತ್ನಾಳ್
ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಂಪುಟ ವಿಸ್ತರಣೆ ಆಗಲಿ, ಬಿಡಲಿ ಅದರಲ್ಲಿ ನಾನಂತೂ ಇಲ್ಲ ಎಂದು ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನನಗೆ ಕರೆ ಮಾಡಿದ್ದರು. ಡಿಸೆಂಬರ್ ನಲ್ಲಿ ಟೆಕ್ಸ್ ಟೈಲ್ ಪಾರ್ಕ್ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗುತ್ತದೆ. ವಿಜಯಪುರ ಮಹಾನಗರ ಪಾಲಿಕೆಗೆ ಹೆಚ್ಚುವರಿ 100 ಕೋಟಿ …
Read More »ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ
ಬೆಂಗಳೂರು: ಇಡೀ ಕರುನಾಡೇ ಕಾಯುತ್ತಿರೋ ಅಪ್ಪು ಕನಸಿನ ಕೊನೆಯ ಚಿತ್ರ ಗಂಧದಗುಡಿ (Gandhadagudi) ನಾಳೆ ತೆರೆಗೆ ಬರುತ್ತಿದೆ. ಇದರಲ್ಲಿ ಪುನೀತ್ ಅಭಿನಯಿಸಿದ್ದಾರೆ ಅನ್ನೋದಕ್ಕಿಂತ ಅಪ್ಪು ಅಪ್ಪುವಾಗಿಯೇ ಇದ್ರು ಅನ್ನೋದು ಸತ್ಯ. ಗಂಧದಗುಡಿ, ಪುನೀತ ಪರ್ವ (Puneetha Parva) ಕಾರ್ಯಕ್ರಮದ ಬಗ್ಗೆ ಇದೀಗ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್‍ರಾಮ್ (Santhosh Ananddram) ಸಂದರ್ಶನದಲ್ಲಿ ಅಶ್ವಿನಿ ಮಾತನಾಡಿದ್ದು, ಶೂಟಿಂಗ್ ಸಂದರ್ಭದ ಕೆಲ ಘಟನೆಗಳನ್ನ ಹಂಚಿಕೊಂಡಿದ್ದಾರೆ ಪುನೀತ್ ಪರ್ವ ಮಾಡಿದ್ದೇ ಅಭಿಮಾನಿಗಳು. …
Read More »ಬೆಳಗಾವಿ: ಕಾರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವು
ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ಮಂಗಳವಾರ ರಾತ್ರಿ ಕಿತ್ತೂರು ಉತ್ಸವದ ಕಾರ್ಯಕ್ರಮ ನೋಡಿಕೊಂಡು ಮರಳುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಕಾರ್ ಹರಿದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಾನಾಪುರ ತಾಲ್ಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33) ಹಾಗೂ ಕರೆಪ್ಪ ತಳವಾರ (36) ಮೃತಪಟ್ಟವರು. ಮಂಗಳವಾರ ರಾತ್ರಿ ಗಾಯಕ ರಘು ದೀಕ್ಷಿತ್ ಅವರ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದಿದ್ದ ಇಬ್ಬರೂ ಊರಿಗೆ ಮರಳಲು ವಾಹನಕ್ಕೆ ಕಾಯುತ್ತಿದ್ದರು. ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ …
Read More »
Laxmi News 24×7