Breaking News

ಜಿಲ್ಲೆ

ನಿಪ್ಪಾಣಿ ನಗರಕ್ಕೆ ಇಂದುನಿತಿನ್ ಗಡ್ಕರಿ

ನಿಪ್ಪಾಣಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇಂದು ನಿಪ್ಪಾಣಿ ನಗರಕ್ಕೆ ಆಗಮಿಸಲಿದ್ದಾರೆ. ಅವರು ಮುಜರಾಯಿ ಮತ್ತು ವಕ್ಫ್ ಸಚಿವೆ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅವರ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇಲ್ಲಿನ ಸರಕಾರಿ ಕನ್ನಡ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಪ್ರಚಾರ ಸಭೆ ಆಯೋಜನೆಗೊಂಡಿದೆ.

Read More »

ಮುದ್ದೇಬಿಹಾಳದಲ್ಲಿ ಚುನಾವಣಾ ಸಿಬ್ಬಂದಿಯಿದ್ದ ಬಸ್​ ಪಲ್ಟಿ: 15 ಜನರಿಗೆ ಗಾಯ

ವಿಜಯಪುರ: ಚುನಾವಣಾ ಕರ್ತವ್ಯಕ್ಕಾಗಿ ಹೊರಟಿದ್ದ ಬಸ್ ಪಲ್ಟಿಯಾಗಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಕ್ರಾಸ್‌ ಬಳಿ ಇಂದು ಬೆಳಗ್ಗೆ 7.30 ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಿಂಧಗಿ ವಿಧಾನಸಭಾ ಕ್ಷೇತ್ರದ ಮತಕೇಂದ್ರದ ತರಬೇತಿಗಾಗಿ ಸಿಬ್ಬಂದಿಯನ್ನು ಸಿಂಧಗಿಗೆ ಕರೆದೊಯ್ಯಲಾಗುತ್ತಿತ್ತು. ಬಸ್​ನ ಎಕ್ಸಲ್ ಕಟ್ ಆಗಿದ್ದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಬಸ್‌ನಲ್ಲಿ ಒಟ್ಟು 40ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ಬೆಳಗಾವಿ ಹಿರೇಬಾಗೇವಾಡಿ‌ಯಲ್ಲಿ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಿದ್ದಾರೆ.

ಬೆಳಗಾವಿ: ಹಿರೇಬಾಗೇವಾಡಿ‌ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಲವಾರು ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಬಿಜೆಪಿಗೆ ಗುಡ್ ಬೈ ಹೇಳಿ ಬೆಳಗಾವಿಯ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಸೇರಿದ್ದಾರೆ.ಮುಖಂಡರುಗಳಾದ ದಯಾನಂದ ಹಂಚಿನಮನಿ, ಬಸವರಾಜ ಹಂಚಿನಮನಿ, ಬಾಬು ಮುಸೆನ್ನವರ, ಅಜ್ಜಪ್ಪ ಮುಗಪ್ಪಗೋಳ, ನಾಗಪ್ಪ ಕಲಭಾಂವಿ, ನಿಜಲಿಂಗ ಅಂಗಡಿ, ಮಲ್ಲಪ್ಪ ಕಬ್ಬೂರ, ದೊಡ್ಡಯ್ಯ ಹಿರೇಮಠ, ಚಂದ್ರು ತಳವಾರ, ಮಾಂತಯ್ಯ ಹಿರೇಮಠ, ಉದಯ ಹುಲಮನಿ, ಬಾಳೇಶ ಕಕ್ಕಾಳಿ ಮತ್ತು ಅಪಾರ ಸಂಖ್ಯೆಯಲ್ಲಿ …

Read More »

ಕಾಂಗ್ರೆಸ್ 50 ಜನರ ಮನೆಗಳ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡುವ ಸಾಧ್ಯತೆ ಇದೆ.ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: ಕಾಂಗ್ರೆಸ್ ಮುಖಂಡರ ಮೇಲೆ ಸುಳ್ಳು ಕೇಸು ಹಾಕುವ ಯತ್ನ ನಡೆದಿದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಮೂವರು ಮುಖಂಡರನ್ನು ಟಾರ್ಗೆಟ್ ಮಾಡಲಾಗಿದೆ.ಮುಖಂಡರ ಮನೆಗಳ ಮೇಲೆ ಲೋಕಾಯುಕ್ತ ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸುವ ಮಾಹಿತಿ ಇದೆ. ನಮ್ಮ ಪಕ್ಷದ ಮುಖಂಡರ ಶಕ್ತಿ ತಡೆಯುವ ಪ್ರಯತ್ನ ನಡೆದಿದೆ ಎಂದು ದೂರಿದ್ದಾರೆ. ಸುಮಾರು 50 …

Read More »

ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಹ ಮೈಸೂರು, ರಾಮನಗರ, ಚಿನ್ನದ‌ ನಾಡು ಕೋಲಾರಕ್ಕೆ ಭೇಟಿ ನೀಡಿ ಚುನಾವಣೆಯ ರಣಕಹಳೆಯನ್ನು ಮೊಳಗಲಿಸಲು ಮುಂದಾಗಿದ್ದಾರೆ.

ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೋಲಾರ, ಚನ್ನಪಟ್ಟಣ ಬೃಹತ್​​ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ಮೈಸೂರಿಗೆ ತೆರಳಿ ಮೆಗಾ ರೋಡ್​​ ಶೋ ನಡೆಸಲಿದ್ದಾರೆ. ಕೋಲಾರ/ಮೈಸೂರು: ರಾಜ್ಯದಲ್ಲಿ ಚುನಾವಣೆಯ ಕಾವು‌ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳ ಪರ ಮತಯಾಚನೆ‌ ಮಾಡಲು ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಲಗ್ಗೆಯಿಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಹ ಮೈಸೂರು, ರಾಮನಗರ, ಚಿನ್ನದ‌ ನಾಡು ಕೋಲಾರಕ್ಕೆ ಭೇಟಿ ನೀಡಿ ಚುನಾವಣೆಯ ರಣಕಹಳೆಯನ್ನು ಮೊಳಗಲಿಸಲು ಮುಂದಾಗಿದ್ದಾರೆ. …

Read More »

ಅತೀ ಹೆಚ್ಚು ನೇಕಾರರನ್ನು ಹೊಂದಿರುವ, ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಗೆಲುವಿನ ಹಾರ ಯಾರ ಕೊರಳಿಗೆ

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ. ಸದ್ಯ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್​, ಜೆಡಿಎಸ್ ಮತ್ತು ಎಂಇಎಸ್​​ ಸಹ ಪೈಪೋಟಿ ನಡೆಸಿದ್ದು, ಗೆಲುವಿನ ಹಾರ ಯಾರ ಕೊರಳಿಗೆ ಎಂಬುದು ಕುತೂಹಲ ಮೂಡಿಸಿದೆ. ಬೆಳಗಾವಿ: ಕೈಗಾರಿಕೋದ್ಯಮದ ಶಕ್ತಿ ಕೇಂದ್ರ, ಅತೀ ಹೆಚ್ಚು ನೇಕಾರರನ್ನು ಹೊಂದಿರುವ, ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಕಪಿಲೇಶ್ವರ ಮಂದಿರ ಇರುವ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದ್ದು, ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ …

Read More »

ಕಾಂಗ್ರೆಸ್​ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರವಾಗಿ ಪ್ರಿಯಾಂಕಾ ಗಾಂಧಿ ರೋಡ್​ ಶೋ

ಕಾಂಗ್ರೆಸ್​ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರವಾಗಿ ಪ್ರಿಯಾಂಕಾ ಗಾಂಧಿ ರೋಡ್​ ಶೋ ನಡೆಸಿ ಮತಯಾಚನೆ ಮಾಡಿದರು. ಹುಬ್ಬಳ್ಳಿ: ಕಾಂಗ್ರೆಸ್​ ಯುವ ನಾಯಕಿ ಪ್ರಿಯಾಂಕಾ ಗಾಂಧಿ ಕುಂದಗೋಳದಲ್ಲಿ ರೋಡ್​ ಶೋ ನಡೆಸಿ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರವಾಗಿ ಪ್ರಚಾರ ನಡೆಸಿದರು. ಹೆಲಿಕಾಪ್ಟರ್ ಮೂಲಕ ಕುಂದಗೋಳಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿ ನೇರವಾಗಿ ಹೆಲಿಪ್ಯಾಡ್ ಸುತ್ತುವರಿದಿದ್ದ ಜನರತ್ತ ಹೋಗಿ ಕೈ ಕುಲುಕಿದರು. ನಂತರ ಪ್ರಚಾರದ ವಾಹನ ಏರಿದ ಅವರು ಹುಬ್ಬಳ್ಳಿ – ಲಕ್ಷ್ಮೇಶ್ವರ ರಾಜ್ಯ …

Read More »

ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

‘ಆಡಳಿತಾರೂಢ ಬಿಜೆಪಿ ಯಾವ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಬರೀ ಭಾವನಾತ್ಮಕ ವಿಚಾರ ಇಟ್ಟುಕೊಂಡು, ಧರ್ಮಾಧಾರಿತ ರಾಜಕಾರಣವನ್ನು ಬಿಜೆಪಿ ಮಾಡುತ್ತಿದ್ದು, ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿಲ್ಲ” ಎಂದು ವಿಧಾನ ಪರಿಷತ್ ಎಚ್. ವಿಶ್ವನಾಥ್ ಗರಂ ಆದರು.  ವಿಧಾನ ಪರಿಷತ್ ಎಚ್. ವಿಶ್ವನಾಥ್ ಮಾತನಾಡಿದರು. ಮೈಸೂರು: ”ಪದೇ ಪದೆ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರೇ, ನೀವು ರಾಜ್ಯಕ್ಕೆ ನೀಡಿರುವ ಕೊಡುಗೆಯಾದರು ಏನು? ಲಜ್ಜೆಗೆಟ್ಟ ಕರ್ನಾಟಕದ ಬಿಜೆಪಿಯನ್ನು ಮೊದಲು ಸರಿಮಾಡಿ. …

Read More »

ರಾಮದುರ್ಗದಲ್ಲಿ ಕುಣಿಯುತ್ತಿದೆ ಕುರುಡು ಕಾಂಚಾಣ,ಸ್ವಾಭಿಮಾನದ ಗೆಲುವು ಪಡೆಯಬೇಕು ಎಂಬ ಮಾತು ರಾಮದುರ್ಗ ಕ್ಷೇತ್ರದಲ್ಲಿ  ಕೇಳಿ ಬರುತ್ತಿದೆ.

“ರಾಮದುರ್ಗದಲ್ಲಿ ಹಗಲಿರುಳು ಸೇವೆ ಮಾಡಿದ್ದ ಮಹಾದೇವಪ್ಪ ಯಾದವಾಡ ಇದ್ದರು. ಜಿಲ್ಲೆಯಲ್ಲೇ ಸಂಘಟನೆ ಮೂಲಕ ಯುವ ನಾಯಕ ರಮೇಶ್ ದೇಶಪಾಂಡೆ ಇದ್ದರು. ಕಾರ್ಯಕರ್ತರ ಜೊತೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದ ಮಲ್ಲಣ್ಣ ಯಾದವಾಡ ಇದ್ದರು. ಮಹಿಳಾ ಶಕ್ತಿ ಮೂಲಕ ಸಂಘಟನೆ ಮಾಡಿದ್ದ ರೇಖಾ ಚಿನ್ನಾಕಟ್ಟಿ ಇದ್ದರು‌. ಪಂಚಮಸಾಲಿ ಸಮುದಾಯದ ಗಟ್ಟಿ ಧ್ವನಿಯಾದ ಪಿ.ಎಫ್ ಪಾಟೀಲ್ ಹಾಗೂ ವಿಜಯ್ ಗುಡದಾರಿ ಇದ್ದರು.” ರಾಮದುರ್ಗ : ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಈ ಬಾರಿ ಟಿಕೆಟ್ …

Read More »

ನಿಪ್ಪಾಣಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಚಿವೆ ಶಶಿಕಲಾ ಅ ಜೊಲ್ಲೆ ಬಿರುಸಿನ ಪ್ರಚಾರ

ನಿಪ್ಪಾಣಿ ಮತಕ್ಷೇತ್ರದ ಮಾಂಗುರ, ಕುನ್ನುರ, ನಾಂಗನುರ, ಸೌಂದಲಗಾ, ಆಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು, ಕಳೆದ ಎರಡು ಬಾರಿ ಶಾಸಕಿಯಾಗಿ ಆಯ್ಕೆ ಮಾಡುವ ಮೂಲಕ ಕ್ಷೇತ್ರದಲ್ಲಿ ಆಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಸದಾವಕಾಶ ನೀಡಿದ್ದೀರಿ. ನಾನು ಕ್ಷೇತ್ರದ ಮತದಾರರು ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದೇನೆ. ಕಳೆದ 10 ವರ್ಷಗಳಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.ಜನಸಾಮಾನ್ಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದು, ಕ್ಷೇತ್ರದ …

Read More »