ಬಳ್ಳಾರಿ : ಅ.14 ರ ಇಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು ಬೆಳಿಗ್ಗೆ 10.50 ಗಂಟೆಗೆ ತೋರಣಗಲ್ಲಿನ ಜಿಂದಾಲ್ ಏರ್‌ಸ್ಟ್ರಿಪ್ ಗೆ ಆಗಮಿಸುವರು. ಬಳಿಕ ಮುಖ್ಯಮಂತ್ರಿಗಳು ಬೆಳಿಗ್ಗೆ 11.15 ಗಂಟೆಗೆ ಸಂಡೂರಿಗೆ ಆಗಮಿಸಿ, ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಇವರ ವತಿಯಿಂದ ಸಂಡೂರು ಪಟ್ಟಣದ ಅಗ್ನಿಶಾಮಕದಳ ಮುಂಭಾಗದ ವಿಶ್ವಾಸ್ ಯು.ಲಾಡ್ ಮೈದಾನದ ಆವರಣದಲ್ಲಿ ಆಯೋಜಿಸಿರುವ ಸಂಡೂರು ತಾಲ್ಲೂಕಿನ ಸಾಧನಾ …
Read More »ಅರಮನೆಗೆ ಜನರ ಲಗ್ಗೆ
ಮೈಸೂರು: ವಿಜಯದಶಮಿ ಮೆರವಣಿಗೆ ವೀಕ್ಷಣೆ ಪಾಸ್ ಇದ್ದವರನ್ನು ಅರಮನೆ ಆವರಣದೊಳಗೆ ಬಿಡಲು ಸಾಕಷ್ಟು ಹೊತ್ತು ಕಾಯಿಸಿದ್ದಲ್ಲದೆ, ಎಲ್ಲ ಆಸನಗಳು ಭರ್ತಿಯಾಗಿವೆ ಎಂದು ಗೇಟ್‌ನಲ್ಲಿನ ಸಿಬ್ಬಂದಿ ತಿಳಿಸಿದ್ದರಿಂದ ಇಲ್ಲಿನ ವರಾಹ ದ್ವಾರದ ಬಳಿ ಶನಿವಾರ ಜನರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರವೇಶ ಗೊಂದಲದಿಂದ ಆಕ್ರೋಶಗೊಂಡ ಜನರು ವರಾಹ ದ್ವಾರದ ಗೇಟ್ ತಳ್ಳಿ ಒಳ ನುಗ್ಗಿದರು. ಅರಮನೆ ಉದ್ಯಾನದ ಗುಲಾಬಿ ತೋಟದಲ್ಲೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡಿದರು. ಭದ್ರತಾ ಸಿಬ್ಬಂದಿಯೂ …
Read More »ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದ ವಿಜಯೇಂದ್ರ
ಬೆಳಗಾವಿ: ‘ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಡಾ ಹಗರಣದ ಕಾರ್ಮೋಡ ಮುಖ್ಯಮಂತ್ರಿ ಕುರ್ಚಿ ಆವರಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಅವರೇ ಒಪ್ಪಿಕೊಂಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಅವರ ಸ್ಥಾನದ ಮೇಲೆ ಕಣ್ಣಿಟ್ಟಿರುವರು, ತಮಗೆ ಬೆಂಬಲ ಕೋರಿ ರಹಸ್ಯ ಸಭೆ ನಡೆಸುತ್ತಿದ್ದಾರೆ’ ಎಂದರು. ‘ವಿಜಯೇಂದ್ರ ಅವರನ್ನು ಬಿಜೆಪಿ …
Read More »ದಸರಾ ವೇಳೆಯೇ ಮೈಸೂರು ರಾಜಮನೆತನಕ್ಕೆ ಮತ್ತೊಂದು ಕುಡಿ, ದುಪ್ಪಟ್ಟಾಯ್ತು ಸಂಭ್ರಮ
ಮೈಸೂರು ರಾಜವಂಶಸ್ಥರಾದ ಒಡೆಯರ್ ಅವರಿಂದಾಗಿ ದಸರಾ ಜಗದ್ವಿಖ್ಯಾತಿಯಾಗಿದೆ. ಹಬ್ಬದ ಸಮಯದಲ್ಲೇ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ದಸರಾ ಹೊತ್ತಲ್ಲೇ ಒಡೆಯರ್ ಕುಟುಂಬದಲ್ಲಿ ಡಬಲ್ ಧಮಾಕಾದ ಸಂಭ್ರಮ ಮನೆಮಾಡಿದೆ. ಯದುವೀರ್ ಹಾಗೂ ಪತ್ನಿ ರಾಣಿ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು …
Read More »ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರ ₹3.69 ಕೋಟಿ ಆಸ್ತಿ ತೆರಿಗೆ ಬಾಕಿ
ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರ ₹3.69 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಅದರ ವಸೂಲಾತಿಗಾಗಿ ಸಾಂಬ್ರಾ ಗ್ರಾಮ ಪಂಚಾಯಿತಿ ನೋಟಿಸ್ ಜಾರಿಗೊಳಿಸಿದೆ. ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನ ನಡದಿವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರಂತರವಾಗಿ ಸಭೆ ನಡೆಸಿ, ಇದಕ್ಕೆ ಪೂರಕವಾಗಿ ಮೂಲಸೌಕರ್ಯ ಸಿದ್ಧಪಡಿಸುತ್ತಿದ್ದಾರೆ. ಹೊಸ ಟರ್ಮಿನಲ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ಆರಂಭಗೊಂಡಿವೆ. ಆದರೆ, ವಿಮಾನ ನಿಲ್ದಾಣದವರು ಕಳೆದ ಏಳು …
Read More »‘ಕೆರೆಗಳ ಅಭಿವೃದ್ಧಿ ಶ್ರೇಷ್ಠ ಕೆಲಸ’
ಬೆಳಗಾವಿ: ‘ಸಾಮಾಜಿಕ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುವ ಮೂಲಕ ಧರ್ಮಸ್ಥಳದ ಧರ್ಮಾಧ್ಯಕ್ಷರಾದ ವೀರೇಂದ್ರ ಹೆಗ್ಗಡೆ ಅವರು ಮಾದರಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಿಲಜಿ ಗ್ರಾಮ ಪಂಚಾಯಿತಿ, ಶಿಂದೊಳ್ಳಿ ಕೆರೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಪುನಃಶ್ಚೇತನಗೊಳಿಸಿದ ಶಿಂದೊಳ್ಳಿ ಸರ್ಕಾರಿ ಕೆರೆ ಹಸ್ತಾಂತರ ಮತ್ತು ಬಾಗಿನ ಅರ್ಪಣೆ ಮಾಡಿ ಮಾತನಾಡಿದರು. ‘ಧರ್ಮಸ್ಥಳ ಯೋಜನೆಯವರು ಜಿಲ್ಲೆಯಲ್ಲಿ ಸುಮಾರು 48 ಕೆರೆಗಳನ್ನು …
Read More »ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಕಠಿಣ ಶಿಕ್ಷೆ
ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ. ಇಲ್ಲಿನ ರುಕ್ಮಿಣಿ ನಗರದ ನಿವಾಸಿ ಚಂದ್ರು ಮೋಹನ ಹರಿಜನ (26) ಶಿಕ್ಷೆಗೆ ಒಳಗಾದವ. ಮದುವೆ ಆಗುವುದಾಗಿ ನಂಬಿಸಿ, 2019ರ ಜನವರಿ 14ರಂದು ಬಾಲಕಿ ಒಡವೆಗಳನ್ನು ಬ್ಯಾಂಕಿನಲ್ಲಿ ಒತ್ತೆ ಇರಿಸಿ ಹಣ ಪಡೆದಿದ್ದ. ನಂತರ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಅಪಹರಿಸಿಕೊಂಡು ಹೋಗಿ, ನಿರಂತರವಾಗಿ …
Read More »ಅಗತ್ಯ ದಾಖಲೆ ನೀಡುವಂತೆ ಮುಡಾಕ್ಕೆ ಜಾರಿ ನಿರ್ದೇಶನಾಲಯ ಸೂಚನೆ?
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದೂರಿಗೆ ಸಂಬಂಧಿಸಿ ಅಗತ್ಯ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯವು ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ. ‘ಇ.ಡಿ. ಬೆಂಗಳೂರು ಕಚೇರಿಯಿಂದ ಮುಡಾ ಕಚೇರಿಗೆ ಪತ್ರ ರವಾನೆಯಾಗಿದ್ದು, ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ದಾಖಲಾದ ಎಫ್‌ಐರ್‌ಗೆ ಸಂಬಂಧಿಸಿ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಒದಗಿಸುವಂತೆ ಕೇಳಿದೆ’ ಎಂದು ಮೂಲಗಳು ತಿಳಿಸಿವೆ. ಆದರೆ ಮುಡಾ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ. ಮುಡಾ ವ್ಯಾಪ್ತಿಯಲ್ಲಿ ‘ಸೆಟ್ಲ್‌ಮೆಂಟ್ …
Read More »ಆಟೊದವರ ಸಮಸ್ಯೆಗಳೇನು?
ಆಟೊದವರ ಸಮಸ್ಯೆಗಳೇನು? * ನಗರದಲ್ಲಿ ಎಲ್ಲ ಕಡೆಯೂ ‘ಶೇರಿಂಗ್’ ವ್ಯವಸ್ಥೆಗೆ ಜನ ಮುಗಿಬೀಳುತ್ತಾರೆ. ಮೀಟರ್ ಅಳವಡಿಸುವ ಮುನ್ನ ಶೇರಿಂಗ್ ವ್ಯವಸ್ಥೆ ಬಂದ್ ಮಾಡಿಸಬೇಕು. * ಗ್ರಾಮೀಣ ಪ್ರದೇಶಕ್ಕೆ ಪರವಾನಗಿ ಪಡೆದವರೂ ನಗರದಲ್ಲಿ ಓಡಿಸುತ್ತಾರೆ. ನಗರದ ಪರವಾನಗಿ ಇದ್ದವರು ಏನು ಮಾಡಬೇಕು? * ಕನಿಷ್ಠ ದೂರದ ದರವನ್ನು ₹30 ಮಾಡಲಾಗಿದೆ. ಇದು ಏಳು ವರ್ಷಗಳ ಹಿಂದಿನ ದರ. ಕನಿಷ್ಠ ದರವನ್ನೂ ಹೆಚ್ಚಿಸಬೇಕು. * ಮೀಟರ್‌ಗಳ ದುರಸ್ತಿ ಮಾಡುವವರು ಒಬ್ಬರೂ ಬೆಳಗಾವಿಯಲ್ಲಿ ಇಲ್ಲ. …
Read More »ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಜೈಲು ಶಿಕ್ಷೆ
ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಗ್ರಾಮವೊಂದರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ. ತಿಗಡೊಳ್ಳಿ ಗ್ರಾಮದ ಗಂಗಪ್ಪ ಕಲ್ಲಪ್ಪ ಕೋಲಕಾರ ಶಿಕ್ಷೆಗೆ ಒಳಗಾದವ. ಬಾಲಕಿಯನ್ನು ಪುಸಲಾಯಿಸಿ, ಪ್ರೀತಿಸುತ್ತೆನೆ- ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. 2017ರ ಸೆಪ್ಟೆಂಬರ್‌ನಲ್ಲಿ ಬೈಕ್ ಮೇಲೆ ಅಪಹರಿಸಿಕೊಂಡು ಮಹಾರಾಷ್ಟ್ರದ ತಾಸಗಾಂವ ಎಂಬಲ್ಲಿ ಬಿಲ್ಡಿಂಗ್‌ವೊಂದರಲ್ಲಿ ಇರಿಸಿದ್ದ. ಅಲ್ಲಿಯೇ …
Read More »
Laxmi News 24×7