*ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಹೈವೇ ಪೆಟ್ರೋಲ್’ ಪೊಲೀಸರ ಬಿಂದಾಸ್ ವಸೂಲಿ ದಂಧೆ* *ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪೊಲೀಸರ ವಸೂಲಿ ದಂಧೆಗೆ ಲಾರಿ ಚಾಲಕರು ಕಂಗಾಲು* ಬೆಳಗಾವಿ ಸುವರ್ಣಸೌಧ ಮುಂಭಾಗದ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ವಸೂಲಿ ದಂಧೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಓವರ್‌ಲೋಡ್ ನೆಪದಲ್ಲಿ ಲಾರಿ ಚಾಲಕರಿಂದ ನಿತ್ಯ ಲೂಟಿ ಆರೋಪ? ‘ಪ್ರತಿಯೊಂದು ಲಾರಿ ಚಾಲಕರು 200 ರೂಪಾಯಿ ಹಣ ನೀಡಲೇಬೇಕು’ ‘200 ರೂ. ಹಣ …
Read More »ಬೆಳಿಗ್ಗೆ 11 ಗಂಟೆಗೆ ಡಾ. ಬಾಬು ಜಗಜೀವನರಾಮ ರವರ 118 ನೇ ಜನ್ಮ ದಿನಾಚರಣೆ ಹಾಗೂ 12 ಗಂಟೆಗೆ ಡಾ. ಬಿ. ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆಯ ಪೂರ್ವಭಾವಿ
ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರೀಲ್ 5, 2025 ರಂದು ಡಾ. ಬಾಬು ಜಗಜೀವನ ರಾಮ ಹಾಗೂ ಏಪ್ರೀಲ್ 14, 2025 ರಂದು ಡಾ. ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಆಚರಿಸುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾರ್ಚ್ 17, 2025 ರಂದು ಜಿಲ್ಲಾ ಪಂಚಾಯತ ಸಭಾಂಗಣ 1ನೇ ಮಹಡಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆಯನ್ನು ಆಯೋಜಿಸಿಲಾಗಿದೆ. …
Read More »ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಮಗ್ರ ಸಿದ್ಧತೆ:D.C.
ಬೆಳಗಾವಿ: ರಾಜ್ಯಾದ್ಯಂತ ಮಾರ್ಚ್ 21 ರಿಂದ ಏಪ್ರಿಲ್ 04 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಗಳು ಸುಗಮವಾಗಿ ನಡೆಸಲು ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ಸಮಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ (ಮಾ.15) ನಡೆದ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರ ಕುರಿತು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಬೆಳಗಾವಿ 518, …
Read More »ಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ ಶರಣರ ಕಾಯಕ ದಾಸೋಹ ಸಂಸ್ಕೃತಿ ಲೋಕಕ್ಕೆ ಮಾದರಿ- ಸಾಹಿತಿ,ಬಸವರಾಜ ಕುಪ್ಪಸ ಗೌಡ್ರ
ಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ ಶರಣರ ಕಾಯಕ ದಾಸೋಹ ಸಂಸ್ಕೃತಿ ಲೋಕಕ್ಕೆ ಮಾದರಿ- ಸಾಹಿತಿ,ಬಸವರಾಜ ಕುಪ್ಪಸ ಗೌಡ್ರ ಶರಣರ ಕಾಯಕ, ದಾಸೋಹ, ಸಂಸ್ಕೃತಿ ಲೋಕಕ್ಕೆ ಮಾದರಿ ಉಪನ್ಯಾಸಕ, ಸಾಹಿತಿ ಬಸವರಾಜ ಕುಪ್ಪಸಗೌಡ್ರ , ಪ್ರಾರಂಭದಲಿೢ ಸುರೇಶ ನರಗುಂದ ಪ್ರಾಥ೯ನೆ ನಡೆಸಿಕೊಟ್ಟರು ಶರಣ ಬಿಬ್ಬಿ ಬಾಚಯ್ಯ ನವರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಸವರಾಜ ಕುಪ್ಪಸಗೌಡ್ರ, ಕಾಯಕ, ದಾಸೋಹ ಪ್ರಸಾದದ ಮಹತ್ವವನ್ನು 12ನೇ …
Read More »ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ
ಬೆಂಗಳೂರು : ಸಿಐಡಿ ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಆ್ಯಂಡ್ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ದಿಂದ ಜಂಟಿಯಾಗಿ ಸ್ಥಾಪಿಸಲ್ಪಟ್ಟಿರುವ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ (CCITR) ವತಿಯಿಂದ ಒಂದು ದಿನದ ಸೈಬರ್ ಅಪರಾಧ ತನಿಖಾ ಶೃಂಗಸಭೆ (ಸಿಐಡಿ ಡಿಕೋಡ್-2025)ನ್ನ ಇಂದು ಆಯೋಜಿಸಲಾಗಿತ್ತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಹೆಚ್ಚುತ್ತಿರುವ ಹೊಸ ಸೈಬರ್ ಅಪರಾಧಗಳು, ಜ್ಞಾನದ ಹಂಚಿಕೆ, ಕೌಶಲ್ಯಾಭಿವೃದ್ಧಿ ಹಾಗೂ ಸಹಯೋಗದ ಮೂಲಕ ಪರಿಹರಿಸುವ …
Read More »ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ
ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ ಬೆಳಗಾವಿಯ ರಾಮತೀರ್ಥ ನಗರದ ಸುರೇಶ ಯಾದವ ಪೌಡೇಶನ್ ಹಾಗೂ ರಾಮತೀರ್ಥ ನಗರದ ರಹವಾಸಿಗಳ ಸಂಯುಕ್ತ ಆಶ್ರಯದಲ್ಲಿ ಹೋಳಿ ಹಬ್ಬದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸುರೇಶ ಯಾದವ ಅವರು ಪೂರ್ವದಲ್ಲಿ ತಾರಕಾಸುರನೆಂಭ ರಾಕ್ಷಸನಿದ್ದನು ಆತ ದುರಹಂಕಾರಿಯು ಹಾಗೂ ಕ್ರೂರಿಯು ಆಗಿದ್ದನು. ತಾರಕಾಸುರ ತನಗೆ ಸಾವು ಬಾರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ. …
Read More »ವಿಕಲಚೇತನರಿಗೆ ಒಂದು ಲಕ್ಷದವರೆಗೂ ವೈದ್ಯಕೀಯ ಪರಿಹಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಂಗಳೂರು: ರಾಜ್ಯದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ, ನಿರಾಮಯ ಆರೋಗ್ಯ ವಿಮಾ ಯೋಜನೆ ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗಳು ಜಾರಿಯಲ್ಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಶುಕ್ರವಾರ ವಿಧಾನಪರಿಷತ್ ಕಲಾಪದಲ್ಲಿ ವೈ.ಎಂ.ಸತೀಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಕಲಚೇತನರಿಗಾಗಿ ಪ್ರಮುಖ ಮೂರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ …
Read More »ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ಬೆಂಗಳೂರು ಯೋಜನೆಗಳ ಬಗ್ಗೆ ವಿವರವಾಗಿ ಉತ್ತರ ನೀಡಿದ ಡಿ.ಕೆ.ಶಿ
ಬೆಂಗಳೂರು: “ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಆಲಮಟ್ಟಿ ಜಲಾಶಯ ಎತ್ತರಿಸಲು ಆಗಬೇಕಾದ ಭೂಸ್ವಾಧೀನ, ಕಲ್ಪಿಸಬೇಕಾದ ಪರಿಹಾರ ಹಾಗೂ ಪರಿಷ್ಕೃತ ಮೊತ್ತಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯರಾದ ಪಿ.ಎಚ್.ಪೂಜಾರ್ ಹಾಗೂ ಹನುಮಂತ ರುದ್ರಪ್ಪ ನಿರಾಣಿ ಕೇಳಿದ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು. “ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜನಪ್ರತಿನಿಧಿಗಳು …
Read More »ಸವದತ್ತಿ ಯಲ್ಲಮ್ಮ ದೇವಿಗೆ ಹರಿದು ಬಂತು ಕೋಟಿ ಕೋಟಿ ಕಾಣಿಕೆ
ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ಯಲ್ಲಮ್ಮದೇವಿ ಮಂದಿರದಲ್ಲಿ ಗುರುವಾರ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಈ ಬಾರಿ 3.68 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಪ್ರತಿ ಬಾರಿ ಎಣಿಕೆ ಮಾಡಿದಾಗಲೂ 1ರಿಂದ 1.5 ಕೋಟಿ ರೂ.ವರೆಗೆ ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ ಮೂರೂವರೆ ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ಮೂಲಕ ಹೊಸ ದಾಖಲೆಯಾಗಿದೆ. 2024ರ ಡಿಸೆಂಬರ್ 14ರಿಂದ 2025ರ ಮಾರ್ಚ್ 12ರವರೆಗೆ(89 ದಿನ) ಏಳುಕೊಳ್ಳದ ತಾಯಿ ಎಂದೇ ಖ್ಯಾತಿ …
Read More »ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.:zp ceo
ಮೈಸೂರು : ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಲು ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಆದರೂ, ಕೂಲಿ ಕಾರ್ಮಿಕರನ್ನು ಕೆರೆಗಳ ಹೊಳೆತ್ತುವ ಕೆಲಸ ಮಾಡಿಸುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಉಕೇಶ್ ಕುಮಾರ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಜಲಾಶಯಗಳಲ್ಲಿ ಈಗಾಗಲೇ ಸಾಕಷ್ಟು ನೀರು ಲಭ್ಯವಿದ್ದು, ಯಾವುದೇ ರೀತಿ …
Read More »
Laxmi News 24×7