ಉಗಾರ್ – ಮಂಗಸೂಳಿ ಬಸ್ ಸಂಚಾರಕ್ಕೆ ಶಾಸಕ ರಾಜು ಕಾಗೆ ಚಾಲನೆ ಕಾಗವಾಡ : ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ವತಿಯಿಂದ ಪ್ರತಿಯೊಬ್ಬರಿಗೆ ಬಸ್ಸ ಸೇವೆ ನೀಡಲು ವಿಶೇಷವಾಗಿ ಶ್ರಮಿಸುತ್ತಿದೆ ಅದರಲ್ಲಿ ಹೊಸದಾಗಿ ಉಗಾರ-ಮಂಗಸುಳಿ, ಈ ಮಾರ್ಗದಲ್ಲಿ ಅನೇಕ ಪ್ರಯಾಣಿಕರ ಬೇಡಿಕೆ ಗಮನದಲ್ಲಿ ತೆಗೆದುಕೊಂಡು ಪ್ರಾರಂಭಿಸಲಾಗಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು. ಸೋಮವಾರ ರಂದು ಉಗಾರ-ಮಂಗಸೂಳಿ ಮಾರ್ಗದಲ್ಲಿ ಪ್ರಾರಂಭಿಸಿದ್ದು ಇದರ ಪೂಜೆ ವಿಜಯಪುರ ಜ್ಞಾನಯೋಗ ಆಶ್ರಮದ ಬಸವಲಿಂಗ ಸ್ವಾಮೀಜಿ …
Read More »ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣ…
ಬಾಗಲಕೋಟೆ : ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರಭಾಗ್ಯ ಹಾಲಿನಪುಡಿ & ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣ… ವಿಚಾರಣಾ ವರದಿಗೆ 2 ತಿಂಗಳ ಗಡುವು ನೀಡಿದ ಶಿಕ್ಷಣ ಇಲಾಖೆ… ರಾಜ್ಯದಿಂದ ಮಹಾರಾಷ್ಟ್ರಕ್ಕೆ ಕ್ಷೀರ ಭಾಗ್ಯ ಹಾಲಿನಪುಡಿ ಮತ್ತು ರಾಗಿ ಮಾಲ್ಟ್ ಮಾರಾಟ ಗೋಲಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಶಿಕ್ಷಣ ಇಲಾಖೆ ವಿಚಾರಣಾ ವರದಿಗೆ ಎರಡು ತಿಂಗಳ ಗಡುವು ನೀಡಿದೆ ಬಾಗಲಕೋಟೆ ಜಿಲ್ಲೆಯಲ್ಲಿ ನೋಟಿಸ್ ಪಡೆದ ಶಿಕ್ಷಕ ಸಮುದಾಯದಲ್ಲಿ ಶುರುವಾಯ್ತು ಆತಂಕ …
Read More »ಶಾಂತಾಯಿ ವೃದ್ಧಾಶ್ರಮಕ್ಕೆ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಭೇಟಿ
ಶಾಂತಾಯಿ ವೃದ್ಧಾಶ್ರಮಕ್ಕೆ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಭೇಟಿ ಮರಾಠಾ ಲೈಟ್ ಇನಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್’ದೀಪ್ ಮುಖರ್ಜಿ ಅವರು ತಮ್ಮ ಕುಟುಂಬ ಮತ್ತು ಸೈನಿಕರೊಂದಿಗೆ ಇಂದು ಶಾಂತಾಯಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ವೃದ್ಧಾಶ್ರಮದ ಅಜ್ಜಿಯರು ಬ್ರಿಗೇಡಿಯರ್ ಮುಖರ್ಜಿಯವರನ್ನು ಸಾಂಪ್ರದಾಯಿಕ ಆರತಿಯೊಂದಿಗೆ ಸ್ವಾಗತಿಸಿದರು. ವೃದ್ಧಾಶ್ರಮದ ಹಸಿರು, ಸ್ವಚ್ಛ ಪರಿಸರ ಮತ್ತು ಸಂತೋಷದ ವಾತಾವರಣವನ್ನು ನೋಡಿ ಅವರು ತುಂಬಾ ಸಂತೋಷಪಟ್ಟರು. ಜೀವನ ಮತ್ತು ಸಂತೋಷದಿಂದ ತುಂಬಿರುವ ಇಂತಹ ವೃದ್ಧಾಶ್ರಮವನ್ನು ಹಿಂದೆಂದೂ …
Read More »ಕುಂಭಮೇಳದಲ್ಲಿ ಕಾಲ್ತುಳಿತದಿಂದ ಜನ ಸಾವನ್ನಪ್ಪಿದಾಗ ಹೆಚ್ಡಿಕೆಯವರು ಮೋದಿ ರಾಜೀನಾಮೆ ಕೇಳಿದ್ರಾ: ಸಿಎಂ
ಮೈಸೂರು: ಕುಂಭಮೇಳದಲ್ಲಿ ಕಾಲ್ತುಳಿತದಿಂದ ಹಲವು ಜನರು ಸಾವನ್ನಪ್ಪಿದಾಗ ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಿದರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಸಿಎಂ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿಯವರು ವಿಧಾನಸೌಧದ ಆವರಣದಲ್ಲಿ ಧರಣಿ ನಡೆಸಿದ ವಿಚಾರವಾಗಿ ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕುಂಭಮೇಳದ ದುರ್ಘಟನೆ ನಡೆದಾಗ ಯಾರಾದರೂ ಪ್ರಧಾನಿಯನ್ನು ರಾಜೀನಾಮೆ ಕೇಳಿದರಾ? ಆಗ ಕುಮಾರಸ್ವಾಮಿ ರಾಜೀನಾಮೆ ಕೇಳಬಹುದಿತ್ತಲ್ಲವೇ? ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದರು. ಜೂನ್ …
Read More »ಮಗ ನಮ್ಮ ಜೊತೆಗಿದ್ದಿದ್ದರೆ ಸಾಕಾಗಿತ್ತು. ದುಡ್ಡು ಕೊಟ್ಟರೆ ಮಗ ಮತ್ತೆ ವಾಪಸ್ ಬರೊಲ್ಲ ಸಾರ್.. ಮುನ್ನೆಚ್ಚರಿಕೆ ವಹಿಸಬೇಕು.. ಇದು ಚಿನ್ನಸ್ವಾಮಿ ಸ್ಟೇಡಿಯಂನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯ ತಂದೆಯ ನುಡಿ..
ತುಮಕೂರು: ಇತ್ತೀಚಿಗೆ (ಜೂನ್ 4) ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ ತುಮಕೂರು ಮೂಲದ ವಿದ್ಯಾರ್ಥಿ ಮನೋಜ್ ಕುಟುಂಬಕ್ಕೆ ಸರ್ಕಾರದ ಆದೇಶದಂತೆ 25 ಲಕ್ಷ ರೂಪಾಯಿ ಹಣದ ಚೆಕ್ಅನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಭಾನುವಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೃತ ವಿದ್ಯಾರ್ಥಿ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದಾರೆ ಸರ್.. ಮಗ ಬರೊಲ್ವಲ್ಲ. ಚೆಕ್ ಕೊಟ್ಟರೆ ಮಗಾ ಬರ್ತಾನಾ, ಇದ್ದೋನು ಒಬ್ಬನೇ ಮಗ ಎಂದು ನೊಂದು …
Read More »10 ಕೋಟಿ ರೂ. ವೆಚ್ಚದಲ್ಲಿ ವೈಭವನಗರ ಅಭಿವೃದ್ದಿ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
10 ಕೋಟಿ ರೂ. ವೆಚ್ಚದಲ್ಲಿ ವೈಭವನಗರ ಅಭಿವೃದ್ದಿ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಾದ್ಯಂತ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡುತ್ತಿರುವ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇದೀಗ ವೈಭವ ನಗರ ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಶುಕ್ರವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ನ್ಯೂ ವೈಭವ ನಗರದ ರಸ್ತೆ, ಚರಂಡಿ ಹಾಗೂ …
Read More »ರೈತರ ಸಾಲಕ್ಕಾಗಿ ರಾಜ್ಯಕ್ಕೆ ನೀಡುವ ಅನುದಾನ- ಕೇಂದ್ರದಿಂದ ತಾರತಮ್ಯ ಬೇಡ : ಶಾಸಕ ಲಕ್ಷ್ಮಣ ಸವದಿ
ಉಗಾರಬುದ್ರುಕ್ ಸಹಕಾರಿ ಸಂಸ್ಥೆಯ ಶತಮಾನೋತ್ಸವ…. ರೈತರ ಸಾಲಕ್ಕಾಗಿ ರಾಜ್ಯಕ್ಕೆ ನೀಡುವ ಅನುದಾನ- ಕೇಂದ್ರದಿಂದ ತಾರತಮ್ಯ ಬೇಡ : ಶಾಸಕ ಲಕ್ಷ್ಮಣ ಸವದಿ ಭಾರತ ದೇಶದಲ್ಲಿ ಇನ್ನೋಳದ ರಾಜ್ಯಗಳ ಕಿಂತ ಸಹಕಾರರಂಗ ಕರ್ನಾಟಕ ರಾಜ್ಯದಲ್ಲಿ ಗಟ್ಟಿಯಾಗಿ ಉಳಿದಿದೆ ಅಲ್ಲದೆ ಎಲ್ಲ ರೈತರನ್ನು ಉದ್ಧಾರ ಮಾಡುವ ಕಾರ್ಯ ಕೈಗೊಂಡಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರೈತರಿಗೆ ನೀಡುವ ಸಾಲದಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದು, ಇದರಿಂದ ರೈತರ ಅಭಿವೃದ್ಧಿಗಾಗಿ ಈ ಮೊದಲಿನಂತೆ ಶೇಕಡ …
Read More »ವಿರಾಟ್ ಕೊಹ್ಲಿ ವಿರುದ್ಧ ಪೊಲೀಸರಿಗೆ ದೂರು –
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆ ಸಂಬಂಧ ಕೊಹ್ಲಿ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ, ನೈಜ ಹೋರಾಟಗಾರರ ವೇದಿಕೆ ಪದಾಧಿಕಾರಿಗಳು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದಾರೆ. ಈ ಸಂಬಂಧ ಪೊಲೀಸರು ದೂರಿನ ಪ್ರತಿ ಪಡೆದು, ಹಿಂಬರಹ ನೀಡಿದ್ದಾರೆ. ಕಾಲ್ತುಳಿತದ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಇಂಚಲ ಗ್ರಾಮದ ಶ್ರೀ ಎಚ್ಚರೇಶ್ವರ ಸಾಧು ಸಂಸ್ತಾನ ಮಠದ ಆವರಣದಲ್ಲಿ ಅನ್ನ ಸಂತರ್ಪಣೆ
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ಇಂಚಲ ಗ್ರಾಮದ ಶ್ರೀ ಎಚ್ಚರೇಶ್ವರ ಸಾಧು ಸಂಸ್ತಾನ ಮಠದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. …
Read More »ತಂಬಾಕು ಉತ್ಪನ್ನಗಳನ್ನು ತ್ಯಜಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು – ಡಾ, ಉದಯ ಕುಡಚಿ
ಹುಕ್ಕೇರಿ : ತಂಬಾಕು ಉತ್ಪನ್ನಗಳನ್ನು ತ್ಯಜಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು – ಡಾ, ಉದಯ ಕುಡಚಿ ಹುಕ್ಕೇರಿ ನಗರದಲ್ಲಿ ವಿಶ್ವತಂಬಾಕು ಮತ್ತು ಅಧಿಕ ರಕ್ತದೊತ್ತಡ ದಿನಾಚಾರಣೆ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾಗ್ರತಾ ಜಾಥಾ ಹಮ್ಮಿಕೊಂಡು ಜನರಲ್ಲಿ ಜಾಗ್ರತೆ ಮೂಡಿಸಲಾಯಿತು. ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆ , ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಜಾಥಾ ವನ್ನು ತಾಲೂಕಾ ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ ಹಸಿರು …
Read More »
Laxmi News 24×7