Breaking News

ಜಿಲ್ಲೆ

ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಟೋಲ್ ನಾಕಾ ಸುತ್ತಮುತ್ತಲಿನ ಗ್ರಾಮಗಳ ವಾಹನಗಳಿಗೆ ಶುಲ್ಕ ವಿಧಿಸುತ್ತಿರುವದನ್ನು ಖಂಡಿಸಿ ವಿವಿಧ ಗ್ರಾಮಗಳ ಜನರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ವಿಜಯಪುರ ಜಿಲ್ಲೆಯ ಬಸನಬಾಗೇವಾಡಿ ತಾಲೂಕಿನ ಮುಳವಾಡ ಬಳಿ ಎನ್ ಎಚ್ 50 ರಲ್ಲಿನ ಟೋಲ್ ಪ್ಲಾಜಾದಲ್ಲಿ ಸುತ್ತಮುತ್ತಲಿನ 20 ವ್ಯಾಪ್ತಿಯ ಗ್ರಾಮಗಳ ವಾಹನಗಳಿಗೆ ಶುಲ್ಕ ವಿಧಿಸಬಾರದು ಎಂದು ಆಗ್ರಹಿಸಿ …

Read More »

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

ಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! ಇಂಥದ್ದೊಂದು ವಿಲಕ್ಷಣ ಘಟನೆ ಬೆಂಗಳೂರಿನ (Bengaluru) ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಕಾರಣಿಗಳ ಜತೆ ಹಾಗೂ ಸಹಚಚರ ಒಟ್ಟಿಗೆ ಮಲಗುವಂತೆ ಒತ್ತಾಯಿಸುತ್ತಿದ್ದುದಲ್ಲದೆ, 6 ಬಾರಿ ತಲಾಖ್ (Talaq) ನೀಡಿದ ಮತ್ತು ಅಬಾರ್ಷನ್ ಮಾಡಿಸಿದ ಆರೋಪದಲ್ಲಿ ಪತಿಯ ವಿರುದ್ಧವೇ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಅತ್ತೆ-ಮಾವನ ವಿರುದ್ಧವೂ ದೂರು ದಾಖಲಿಸಿದ್ದಾರೆ. …

Read More »

ಮಾಧ್ಯಮಗಳಿಗೆ ಹೇಳಿದ್ದನ್ನೇ ಸುರ್ಜೇವಾಲಾಗೆ ಹೇಳುತ್ತೇನೆ:ರಾಜು ಕಾಗೆ

ಬೆಂಗಳೂರು, ಜುಲೈ 1: ಬೆಳಗಾವಿ ಜಿಲ್ಲೆ ಕಾಗ್ವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಾಜು ಕಾಗೆ (ಭರಮಗೌಡ ಆಲಗೌಡ ಕಾಗೆ) ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ (Randeep Surjewala) ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನೇರ ಮಾತುಗಾರಿಕೆಗೆ ಹೆಸರಾಗಿರುವ ರಾಜು ಕಾಗೆ, ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುತ್ತಾ, ನಿನ್ನೆ ಜರೂರು ಸಭೆಯೊಂದರ ನಿಮಿತ್ತ ಬೆಂಗಳೂರುಗೆ ಬರಲಾಗಲಿಲ್ಲ, ಇವತ್ತು ಭೇಟಿಯಾಗುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದೆ ಎಂದರು. ಮೊನ್ನೆ ಮಾಧ್ಯಮಗಳ ಮುಂದೆ ಆಡಿರುವ …

Read More »

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು ಗುರಿಯಾಗಿಸಿ ಅಪಘಾತವೆಸಗಿರುವುದಾಗಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಶಾಂತಿನಗರದ ಭಂಗಿಯಪ್ಪ ಗಾರ್ಡನ್ ನಿವಾಸಿ ಚಂದ್ರಶೇಖರ್ (78 ವರ್ಷ) ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿ ಜಮೀಲ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. …

Read More »

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶ ಹೊರಡಿಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಉಲ್ಲೇಖಿಸಿದ ಟಿಪ್ಪಣಿ ಮೇರೆಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗೂ ಹೂಗ್ಯಂ ವಲಯ ಅರಣ್ಯಾಧಿಕಾರಿ ಮಾದೇಶ್ ಅವರಿಗೆ ಮುಂದಿನ ಆದೇಶದ ತನಕ ಕಡ್ಡಾಯ ರಜೆ ಮೇಲೆ ತೆರಳಲು ಆದೇಶಿಸಲಾಗಿದೆ. ಐದು ಹುಲಿಗಳು ರಸ್ತೆಯಿಂದ ಕೇವಲ …

Read More »

ಆರ್​ಟಿಒ ಅಧಿಕಾರಿಗಳಿಂದ 98 ಆಟೋಗಳು ಜಪ್ತಿ

ಬೆಂಗಳೂರು: ನಿಗದಿ ಮಾಡಿದ್ದ ಪ್ರಯಾಣ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿ ಕಾನೂನು ಬಾಹಿರವಾಗಿ ಆಟೋ ಚಾಲನೆ ಮಾಡುತ್ತಿದ್ದವರ ಮೇಲೆ ಸೋಮವಾರ ನಗರದ 11 ಆರ್​ಟಿಒ ಕಚೇರಿಯ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರ ನಿಗದಿಗೊಳಿಸಿದ ಕನಿಷ್ಠ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಮಾಹಿತಿ ಆಧರಿಸಿ ಇಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು …

Read More »

ಮೂಡಲಗಿ , ಗೋಕಾಕ ತಾಲ್ಲೂಕು ಸೇರಿ ೫೧೯.೭೨ ಕೋಟಿ ರೂಪಾಯಿಗಳನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದ DCCBANK: ಬಾಲಚಂದ್ರ ಜಾರಕಿಹೊಳಿ

ಗೋಕಾಕ – ರೈತರ ಶ್ರೆಯೋಭಿವೃದ್ಧಿಗಾಗಿ ರೈತಮಿತ್ರನಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಸೇರಿ ೫೧೯.೭೨ ಕೋಟಿ ರೂಪಾಯಿಗಳನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಸೋಮವಾರದಂದು ನಗರದ ಹೊರ ವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾ ಭವನದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು …

Read More »

ಕೆ.ಎಸ್.ಆರ್.ಟಿ.ಸಿ ವಿಭಾಗಮಟ್ಟದ ಕುಂದು ಕೊರತೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

ಕೆ.ಎಸ್.ಆರ್.ಟಿ.ಸಿ ವಿಭಾಗಮಟ್ಟದ ಕುಂದು ಕೊರತೆ ಸಭೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ನಗರದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ Satish Jarkiholi ಅವರ ಅಧ್ಯಕ್ಷತೆಯಲ್ಲಿ ಇಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಘಟಕಗಳು ಮತ್ತು ವಿಭಾಗಗಳ ಕುಂದು ಕೊರತೆ ಪರಿಶೀಲನಾ ಸಭೆಯಲ್ಲಿ ಭಾಗಿಯಾದೆ. ಈ ವೇಳೆ ನೂತನ ಬಸ್ ಘಟಕ/ನಿಲ್ದಾಣಗಳ ಬೇಡಿಕೆ, ನೆಲಸಮಗೊಳಿಸಬೇಕಾದ ಶಿಥಿಲಾವಸ್ಥೆಯಲ್ಲಿರುವ ಬಸ್ ಘಟಕಗಳನ್ನು ಮರು ನಿರ್ಮಿಸುವುದು, ಹೊಸ …

Read More »

ಬಸವಣ್ಣನವರ ವಚನಗಳನ್ನು ವಿಶ್ವಕ್ಕೆ ತಲುಪಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ

ಬಸವಣ್ಣನವರ ವಚನಗಳನ್ನು ವಿಶ್ವಕ್ಕೆ ತಲುಪಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಭೀಮಾತೀರದ ಕುಖ್ಯಾತಿ ಹೊಂದಿರುವ ಜಿಲ್ಲೆ. ಇಲ್ಲಿನ ಪೊಲೀಸರಿಗೆ ಅಪರಾಧ ತಡೆಯೋದೆ ದೊಡ್ಡ ಕೆಲಸ. ರಾತ್ರಿ ಹಗಲು ಎನ್ನದೆ ಕೆಲಸ ಮಾಡಬೇಕು. ಅಂತಹ ಜಿಲ್ಲೆಯ ಪೊಲೀಸ್ ಅಧಿಕಾರಿ ಸದ್ದಿಲ್ಲದೆ ಬಸವಣ್ಣನ ವಚನಗಳು ವಿಶ್ವಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಆ ಅಧಿಕಾರಿಗೆ ವಿಜಯಪುರ ಜಿಲ್ಲೆಯಲ್ಲಿ ಅಭಿನಂದನಾ ಸಮಾರಂಭ ಅಭೂತಪೂರ್ವವಾಗಿ ನಡೆಯಿತು. ‌ ವಿಜಯಪುರ ಜಿಲ್ಲೆ ಅಂದ್ರೆ ಸಾಕು ಕ್ರೈಂ …

Read More »

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಪ್ತನದಿಗಳ ನಾಡು ಬೆಳಗಾವಿ ಜಿಲ್ಲೆಯಲ್ಲಿ ಒಂದೆಡೆ ಪ್ರವಾಹ ಸೃಷ್ಟಿಯಾಗುತ್ತದೆ, ಮತ್ತೊಂದೆಡೆ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿರುವದರಿಂದ ಹುಕ್ಕೇರಿ ತಾಲೂಕಿನ ಶಿರೂರ ಜಲಾಶಯದಿಂದ ನೀರು ಹೋರಕ್ಕೆ ಬಿಟ್ಟಿದ್ದರಿಂದ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಜಲಪಾತದ ರುದ್ರರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಗೋಕಾಕ್​ನಿಂದ 18 ಕಿ‌.ಮೀ ದೂರದಲ್ಲಿರುವ ಗೊಡಚಿನಮಲ್ಕಿ ಗ್ರಾಮದಿಂದ ಸುಮಾರು 2.5 …

Read More »