ಬೆಳಗಾವಿ- ಬೆಳಗಾವಿ ರಾಜ್ಯದ ಎರಡನೇಯ ರಾಜಧಾನಿಯನ್ನಾಗಿ ಮಾಡಲು ಸರ್ಕಾರ 500 ಕೋಟಿ ಖರ್ಚು ಮಾಡಿ ಸುವರ್ಣ ವಿಧಾನ ಸೌಧ ಕಟ್ಟಡವನ್ನು ನಿರ್ಮಿಸಿದ್ದು,ಸುವರ್ಣ ಸೌಧಕ್ಕೆ ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬಾರದು,ರಾಜ್ಯ ಮಟ್ಟದ ಕಚೇರಿಗಳನ್ನು ಮಾತ್ರ ಸ್ಥಳಾಂತರ ಮಾಡಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಕನ್ನಡ ಸಂಘಟನೆಗಳ ಕ್ರೀಯಾ ಸಮೀತಿಯ ಅದ್ಯಕ್ಷ ಅಶೋಕ ಚಂದರಗಿ ಅವರ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳು,ಬೆಳಗಾವಿಯ ಸುವರ್ಣ ಸೌಧಕ್ಕೆ ಜಿಲ್ಲಾ …
Read More »ಗ್ರಾಮೀಣ ವಸತಿ ನಿಗಮನಿಂದ ಕೂಡಲೇ ಹಣ ಬಿಡುಗಡೆಗೊಳಿಸಬೇಕೆಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾದವ ಅವರಿಗೆ ಮನವಿ ಸಲ್ಲಿಸಿದರು.
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಗ್ರಾಮಸ್ಥರಿಂದ ರಾಜೀವಗಾಂಧೀ ಗ್ರಾಮೀಣ ವಸತಿ ನಿಗಮನಿಂದ ಕೂಡಲೇ ಹಣ ಬಿಡುಗಡೆಗೊಳಿಸಬೇಕೆಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾದವ ಅವರಿಗೆ ಮನವಿ ಸಲ್ಲಿಸಿದರು. ರಬಕವಿಯಲ್ಲಿ ಸುಮಾರು 224 ಫಲಾನುಭವಿಗಳಿಗೆ ರಾಜೀವಗಾಂಧೀ ಗ್ರಾಮೀಣ ವಸತಿ ನಿಗಮ ದಿಂದ ಬರಬೇಕಾದ ಹಣವು ಮೂರು ವರ್ಷಗಳ ಕಳೆದರೂ ಹಣ ಬಂದಿಲ್ಲ ಬಡ ಫಲಾನುಭವಿಗಳ ಪರಿಸ್ಥಿತಿ ಕಂಗಾಲಾಗಿದೆ. ನಮಗೆ ಬರಬೇಕಾದ ಹಣ ಕೊಡಿ ಸ್ವಾಮಿ ನಮ್ಮ ಪರಿಸ್ಥಿತಿ ಹದಗೆಟ್ಟು …
Read More »ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರುವ ಕೆಲಸ ನಿರ್ವಹಿಸಿದ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಬಡಸ ಹಾಗೂ ಬೆಂಡಿಗೇರಿ ಗ್ರಾಮದ ವಿದ್ಯಾರ್ಥಿಗಳು ಶುಕ್ರವಾರ ಸನ್ಮಾನಿಸಿ, ಗೌರವಿಸಿದ್ದಾರೆ…
ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರುವ ಕೆಲಸ ನಿರ್ವಹಿಸಿದ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಬಡಸ ಹಾಗೂ ಬೆಂಡಿಗೇರಿ ಗ್ರಾಮದ ವಿದ್ಯಾರ್ಥಿಗಳು ಶುಕ್ರವಾರ ಸನ್ಮಾನಿಸಿ, ಗೌರವಿಸಿದ್ದಾರೆ. ಕೊರೊನಾ ಆತಂಕದ ನಡುವೆಯೇ ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪರೀಕ್ಷೆ ಕೇಂದ್ರಕ್ಕೆ ತೆರಳಲು ಸಹಕಾರಿಯಾದ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಕಾರ್ಯವನ್ನು ಗ್ರಾಮಸ್ಥರು, ವಿದ್ಯಾರ್ಥಿಗಳು ಬಣ್ಣಿಸಿ, ಸನ್ಮಾನಿಸಿದ್ದರು. ಈ ವೇಳೆ ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಸರ್ಕಾರದ ನಿಯಮಗಳನ್ನು …
Read More »ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ ತರಬೇತಿ
ಗೋಕಾಕ: ನೀರಿನ ಸ೦ರಕ್ಷಣೆ ನಮ್ಮೆಲ್ಲರ ಹೊಣೆ, ನೀರು ಅಮೂಲ್ಯವಾದ ಸ೦ಪತ್ತು ಅದನ್ನು ಸ೦ರಕ್ಷಿಸುವದು ನಮ್ಮೆಲ್ಲರ ಹೊಣೆ.ಹಾಗಾಗಿ ನೀರು ನ್ನು ಪೋಲು ಮಾಡದೆ.ನೀರುನ್ನು ಕಲುಷಿತಗೊಳಿಸದ೦ತೆ ಸಹಕರಿಸಬೇಕು. ಎ೦ದು ಗ್ರಾಮೀಣ ಕುಡಿಯುವ ನೀರು ಮತ್ತು ನೈಮ೯ಲೈ ಉಪವಿಭಾಗ ಗೋಕಾಕ ಗ್ರಾಮೀಣ ಕುಡಿಯುವ ನೀರು ಉಪವಿಭಾಗ ಕಿರಿಯ ಅಭಿಯ೦ತರರಾದ . ನಿಲಮ್ಮ ಎಸ್.ಲಮಾಣಿ, ಹೇಳಿದರು. ತಾಲ್ಲೂಕು ಪ೦ಚಾಯತ ಸಭಾಂಗಣದಲ್ಲಿ ಶುಕ್ರವಾರ ಗ್ರಾಮೀಣ ಕುಡಿಯುವ ನೀರು ವಿಭಾಗ ಚಿಕ್ಕೋಡಿ, ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ …
Read More »ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ: ಕೋಡಿಮಠ ಶ್ರೀ
ಹಾಸನ: ಮುಂದೆ ಯುದ್ಧ ಅಂತಹದ್ದೇನು ಜರುಗಲ್ಲ, ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿರುವ ಕೋಡಿಮಠದಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಪ್ರಸಾರವಾಗಿರುವ ಈ ಮಾರಕ ರೋಗ ಮನುಕುಲಕ್ಕೆ ಕಂಟಕ ಪ್ರಾಯವಾಗಿದೆ. ಇದು ದಿನ ದಿನಕ್ಕೆ ಹೆಚ್ಚುತ್ತಿರುವುದು ಶೋಚನೀಯ ಪ್ರಸಂಗ ಎಂದು ಆತಂಕ ಹೊರಹಾಕಿದರು. ಮನುಷ್ಯ ಸ್ವಾರ್ಥದಿಂದ ತಂದುಕೊಳ್ಳುತ್ತಿರುವ ಈ ರೋಗ ಕೇವಲ ಮನುಕುಲ ಅಲ್ಲದೆ ಪ್ರಾಣಿ, ಪಕ್ಷಿ, ವೃಕ್ಷಗಳ ಮೇಲೆ …
Read More »ಸಾರಿಗೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆ- ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿಗಳು!
ಕಾರವಾರ: ಗಾಳಿ ಮಳೆಗೆ ದಾರಿಗೆ ಅಡ್ಡಲಾಗಿ ಬಿದ್ದಿದ್ದ ಮರವೊಂದನ್ನು ಸಾರಿಗೆ ಸಿಬ್ಬಂದಿಯೇ ತೆರವುಗೊಳಿಸಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗುರುವಾರದಿಂದ ಜಿಲ್ಲೆಯಾದ್ಯಂತ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾಣ ಮೂಲಕ ಕುಮಟಾ ತೆರಳುವ ರಸ್ತೆಯಲ್ಲಿ ಬೃಹತ್ ಮರವೊಂದು ಅಡ್ಡಲಾಗಿ ಬಿದ್ದಿತ್ತು. ಈ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಮಕ್ಕಳನ್ನು …
Read More »ಹಿಂಡಲಗಾ ಕೈದಿಗೆ ಕೊರೊನಾ ಸೋಂಕು……….
ಬೆಳಗಾವಿ: ಹಿಂಡಲಗಾ ಕೈದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಹಿಂಡಲಗಾ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ. ಈಚೇಗೆ ಕುಖ್ಯಾತ ರೌಡಿಯನ್ನು ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಬಳಿಕ ಮೂರು ದಿನಗಳ ಹಿಂದೆಷ್ಟೇ ಹಿಂಡಲಗಾ ಜೈಲಿಗೆ ಕಳಿಸಲಾಗಿತ್ತು. ಆದ್ರೆ ಇಂದು ಕೈದಿಗೆ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದೆ. ಇದರಿಂದ ಕ್ಯಾಂಪ್ ಹಾಗೂ ಹಿಂಡಲಗಾ ಪೊಲೀಸ ಸಿಬ್ಬಂದಿಗೆ ಆತಂಕ ಮನೆ ಮಾಡಿದೆ. ಜತೆಗೆ ಹಿಂಡಲಗಾ ಜೈಲಿನಲ್ಲಿ …
Read More »ನಟಿ ರಚಿತಾ ರಾಮ್ ನೋಡಲು ಆಟೋ ಚಾಲಕರೊಬ್ಬರು ಅವರ ಮನೆಯ ಬಳಿಯೇ ಕಾದು ಕುಳಿತ್ತಿದ್ದರು
ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಲು, ಅವರನ್ನು ಭೇಟಿ ಮಾಡಲು ಕಾತುರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ನಟಿ ರಚಿತಾ ರಾಮ್ ನೋಡಲು ಆಟೋ ಚಾಲಕರೊಬ್ಬರು ಅವರ ಮನೆಯ ಬಳಿಯೇ ಕಾದು ಕುಳಿತ್ತಿದ್ದರು. ಅವರ ಅಭಿಮಾನಕ್ಕೆ ಡಿಂಪಲ್ ಕ್ವೀನ್ ರಚಿತಾ ಭಾವುಕರಾಗಿದ್ದಾರೆ. ನಟಿ ರಚಿತಾ ರಾಮ್ ಆಟೋ ಡ್ರೈವರ್ ಅಭಿಮಾನವನ್ನು ಕಂಡು ಭಾವುಕರಾದ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? “ಅಭಿಮಾನಿಗಳೇ ದೇವ್ರು” …
Read More »ಕೊರೊನಾ ಬರುತ್ತೆ ಕೆಲಸಕ್ಕೆ ಹೋಗ್ಬೇಡ ಅಂದಿದ್ದಕ್ಕೆ ಆಶಾ ಕಾರ್ಯಕರ್ತೆ ಆತ್ಮಹತ್ಯೆ………..
ಬೆಂಗಳೂರು: ಕೊರೊನಾ ಬರುತ್ತೆ ಕೆಲಸಕ್ಕೆ ಹೋಗಬೇಡ ಎಂದು ಅಣ್ಣ ಬೈದಿದ್ದಕ್ಕೆ ಆಶಾ ಕಾರ್ಯಕರ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸವಿತಾ(27) ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪಾವಗಡ ಮೂಲದ ಸವಿತಾ ನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಯಲಹಂಕದ ಮಾರುತಿ ನಗರದ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನಿಂದ ದೂರವಾಗಿ, ಅಣ್ಣನ ಮನೆಯಲ್ಲೇ ವಾಸಿಸುತ್ತಿದ್ದರು. ಅಣ್ಣನ ಮನೆಯಿಂದಲೇ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಕೊರೊನಾ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ …
Read More »ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶ ನಂತರ ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಬಿಡುಗಡೆ
ಬೆಂಗಳೂರು: ಜುಲೈ ಮೂರನೇ ವಾರದಲ್ಲಿ ಪಿಯುಸಿ ಫಲಿತಾಂಶ ನಂತರ ಆಗಸ್ಟ್ ಮೊದಲ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಇಂದು ಆನೇಕಲ್ ತಾಲೂಕಿನ ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರ ಸೇರಿ ಹಲವು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿಕೊಟ್ಟ ಸಚಿವರು, ಪರೀಕ್ಷಾ ಕೇಂದ್ರದ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು. ಜೊತೆಗೆ ಕರ್ತವ್ಯದಲ್ಲಿ ಹಾಜರಿದ್ದ ಸ್ಕೌಟ್ಸ್ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದೇ …
Read More »
Laxmi News 24×7