Breaking News

ಜಿಲ್ಲೆ

ಬೆಳಗಾವಿ: ಬುಧವಾರ ಒಂದೇ ದಿನಕ್ಕೆ 293 ಹೊಸ ಕೇಸ್ ಪತ್ತೆ

ಬೆಳಗಾವಿ: ಜಿಲ್ಲೆಯಲ್ಲಿಂದು ಮಾರಕ ಕೊರೊನಾ ರಣಕೇಕೆ ಮುಂದುವರೆದಿದ್ದು,ಬುಧವಾರ ಒಂದೇ ದಿನಕ್ಕೆ 293 ಹೊಸ ಕೇಸ್ ಪತ್ತೆಯಾಗಿವೆ. ನಾಲ್ಕು ಜನರು ಬಲಿಯಾಗಿದ್ದಾರೆ. ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‍ನಲ್ಲಿ ಮಾಹಿತಿ ನೀಡಿದ್ದು, 293 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4221ಕ್ಕೆ ಏರಿಕೆಯಾಗಿದೆ. ಇನ್ನೂ ಜಿಲ್ಲೆಯಲ್ಲಿ ನಾಲ್ಕು ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 90ಕ್ಕೆ ಹೆಚ್ಚಳವಾಗಿದೆ. ಇಲ್ಲಿಯವರೆಗೂ 1162 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2969 …

Read More »

ಕೆಎಸ್ಆರ್‌ಟಿಸಿಯ ಮಿಡಿ ಬಸ್ಸುಗಳು ಈಗ ಅಂಬುಲೆನ್ಸ್………..

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಮಾಣ ಹೆಚ್ಚುತ್ತಿರುವ ಕಾರಣ ಕೆಎಸ್‍ಆರ್‍ಟಿಸಿಯ ಮಿಡಿ ಬಸ್ಸುಗಳನ್ನು ಅಂಬುಲೆನ್ಸ್ ಗಳನ್ನಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ.ಇದರ ಬಗ್ಗೆ ಮಾಹಿತಿ ನೀಡಿ ಸುತ್ತೋಲೆ ಹೊರಡಿಸಿರುವ ಕೆ.ಎಸ್.ಆರ್.ಟಿ.ಸಿ. ಈ ಅಂಬುಲೆನ್ಸ್ ಗಳಲ್ಲಿ ತುರ್ತುಸ್ಥಳದಿಂದ ರೋಗಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವರ್ಗಾಹಿಸಲು ಮತ್ತು ಆಸ್ವತ್ರೆಯನ್ನು ತಲುಪಿದ ನಂತರ ತುರ್ತುಕೋಣಿಗೆ ರೋಗಿಯನ್ನು ತ್ವರಿತವಾಗಿ ಮತ್ತು ಆರಾಮದಾಯಕವಾಗಿ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ 2 ಸ್ಟ್ರೆಚರ್ ಗಳನ್ನು ನಿರ್ಮಾಣ ಮಾಡಲಾಗಿದೆ. ಬ್ಯಾಂಡೇಜ್, ಕ್ರಿಮಿನಾಶಕ, …

Read More »

ನಿರಂತರ ಸುರಿದ ಮಳೆಗೆ ಮನೆಗೋಡೆ ಕುಸಿದು ಪಕ್ಕದಲ್ಲಿ ನಿಲ್ಲಿಸಿದ ಕಾರ್ ಮೇಲೆ ಬಿದ್ದಿದೆ.

ಬೆಳಗಾವಿ: ನಿರಂತರ ಸುರಿದ ಮಳೆಗೆ ಮನೆಗೋಡೆ ಕುಸಿದು ಪಕ್ಕದಲ್ಲಿ ನಿಲ್ಲಿಸಿದ ಕಾರ್ ಮೇಲೆ ಬಿದ್ದಿದ್ದು, ಕಾರು ಜಖಂಗೊಂಡ ಘಟನೆ  ನಗರದಲ್ಲಿ ಬಸವನಗಲ್ಲಿಯಲ್ಲಿ ನಡೆದಿದೆ.  ಮಹಾವೀರ ಕೊಟಾರಿ ಎಂಬುವವರಿಗೆ ಸೇರಿದ ಕಾರು ಜಖಂಗೊಂಡಿದೆ. ಜಿಲ್ಲೆಯಾದ್ಯಂತ ಮಳೆಯಿಂದ  ಪ್ರವಾಹದ ಭೀತಿ ಉಂಟಾಗಿದೆ. ನಗರದ ರಸ್ತೆ ಜಲಾವೃತವಾಗಿದ್ದು, ನೀರುತುಂಬಿದ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಹಾಗೂ ಖಾನಾಪೂರದ ಕೆಲ ಬಡಾವಣೆಗಳಿಗೂ ನೀರು ನುಗ್ಗಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, …

Read More »

ಶಾಸಕಿ ಅಂಜಲಿ ನಿಂಬಾಳಕರ ಮಲಪ್ರಭಾ ನದಿ ಸೇತುವೆಗೆ ಭೇಟಿ

ಕಕ್ಕೇರಿ: ಖಾನಾಪುರ ತಾಲ್ಲೂಕಿನಲ್ಲಿ ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಂಜಲಿ ನಿಂಬಾಳಕರ ಅವರು ಮಲಪ್ರಭಾ ನದಿ ಸೇತುವೆಗೆ ಭೇಟಿ ನೀಡಿ ಪ್ರವಾಹದ ಪರಿಸ್ಥಿತಿಯನ್ನು ಅವಲೋಕಿಸಿದರು. ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ನದಿ ತುಂಬಿ ಹರಿಯುತ್ತಿವೆ. ಜತೆಗೆ ರೈತರ ಭತ್ತದ ಜಮೀನಿಗೂ,  ನದಿ ದಡದ ಜನರ ವಾಸಸ್ಥಳಿಗೂ ನೀರು  ನುಗ್ಗುತ್ತಿವೆ. ಇದರಿಂದ ಶಾಸಕ ಕೆಲವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿಗೆ ಅಡ್ಡಲಾಗಿ ನಿರ್ಮಿತ  ಬಹುಗ್ರಾಮಗಳ ರಸ್ತೆಗಳು ಸಂಪರ್ಕ ಕಡಿದುಕೊಂಡಿದ್ದು,  …

Read More »

ಆಗಸ್ಟ್ 7 ರಿಂದ ಆಗಸ್ಟ್ 10 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.ರಮೇಶ ಜಾರಕಿಹೊಳಿ

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಆಗಸ್ಟ್ 7 ರಿಂದ ಆಗಸ್ಟ್ 10 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.    ಅ. 7ರಂದು ಬೆಳಗ್ಗೆ 11 ಗಂಟೆಗೆ ನಗರದ ಪರಿವೀಕ್ಷಣಾ ಮಂದಿರರದಲ್ಲಿ ಕೋವಿಡ್-19 ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ತುರ್ತು ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಅ.8 ರಂದು ಬೆಳಗ್ಗೆ 10.30ಕ್ಕೆ ಚಿಕ್ಕೋಡಿಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸಿದ ಬಳಿಕ …

Read More »

ಉತ್ತಮ ಮಳೆ,ಅರ್ಧದಷ್ಟು ಭರ್ತಿಯಾಗಿಲ್ಲ ಜಲಾಶಯಗಳು

ಬೆಂಗಳೂರು, ಆ.5-ಪ್ರಸಕ್ತ ಮುಂಗಾರಿನಲ್ಲಿ ರಾಜ್ಯದ ಪ್ರಮುಖ ಜಲಾಶಯಗಳು ಇನ್ನೂ ಅರ್ಧದಷ್ಟು ಭರ್ತಿಯಾಗಿಲ್ಲ. ಮುಂಗಾರು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ಜಲಾಶಗಳಿಗೆ ಬಂದಿಲ್ಲ. ಕೃಷ್ಣಾ ಕೊಳ್ಳದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಹಂತಕ್ಕೆ ತಲುಪಿವೆ. ಉಳಿದ ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದ್ದು, ಈ ವಾರ ಒಳ ಹರಿವು …

Read More »

ಸಿದ್ದರಾಮಯ್ಯ ಅವರ ಸ್ಥಿತಿಯಲೆಟಿನ್ ಬಿಡುಗಡೆಗೊಳಿಸಿದ ಮಣಿಪಾಲ್ ಆಸ್ಪತ್ರೆ

ಬೆಂಗಳೂರು:  ವಿರೋಧ ಪಕ್ಷದ  ನಾಯಕ ಸಿದ್ದರಾಮಯ್ಯ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಪ್ರಸ್ತುತ ಅವರು ಚೇತರಿಸಿಕೊಳ್ಳುತ್ತಿದ್ದಾರೆ  ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. “ಪ್ರಸ್ತುತ ಅವರಿಗೆ ಜ್ವರವಿಲ್ಲ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸೂಕ್ತವಾದ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ ಮತ್ತು ಅವರನ್ನು ನಮ್ಮ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆಸ್ಪತ್ರೆಗೆ ಬಂದ  ನಂತರ ಅವರ ಲಕ್ಷಣಗಳು ಸುಧಾರಿಸಿದೆ ಮತ್ತು ಪ್ರಸ್ತುತ ಅವರು ಆರಾಮವಾಗಿದ್ದಾರೆ” ಎಂದು ಮಣಿಪಾಲ್ ಆಸ್ಪತ್ರೆ ಆರೋಗ್ಯ ಬುಲೆಟಿನ್ ನಲ್ಲಿ ತಿಳಿಸಿದೆ. …

Read More »

ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. 

ಬೆಳಗಾವಿ: ಪಿಎಸ್ ಐ ಕೃಷ್ಣವೇಣಿ ಅವರ ಪತಿ ಸಂಜು ಬಂಡಾರಿ(40) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ.  ಸಂಜು ಅವರು ಉತ್ತರ ಸಂಚಾರಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ರಜೆ ಮೇಲೆ ಖಾನಾಪುರ ತಾಲ್ಲೂಕಿನ ಹಟ್ಟಿಹೊಳ್ಳಿ ತಮ್ಮ ಸ್ವ ಗ್ರಾಮಕ್ಕೆ ತೆರಳಿದ್ದರು. ಬಳಿಕ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಹೃದಯಾಘಾತದಿಂದ ಕೊನೆಯೂಸಿರೆಳೆದಿದ್ದಾರೆ.

Read More »

ಎರಡು ದಿನಗಳಿಂದ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ.

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಹೀಗಾಗಿ  ನದಿಗಳು ಉಕ್ಕಿ ಹರಿಯುತ್ತಿವೆ. ನೇತ್ರಾವತಿ, ಅಘನಾಶಿನಿ, ಕಾವೇರಿ, ಕಾಳಿ ಸೇರಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ.  ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್​ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ನಂತರ ಮಳೆ ಆಗಿರಲೇ ಇಲ್ಲ. ಹೀಗಾಗಿ ರಾಜ್ಯದ ಜಲಾಶಯಗಳು ಅಂದುಕೊಂಡ ಮಟ್ಟಿಗೆ ತುಂಬಿಲ್ಲ. ಆದರೆ, ಈಗ …

Read More »

ಕೊಪ್ಪಳದ ಮುಸ್ಲಿಂ ಯುವಕಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ

ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳದ ಮುಸ್ಲಿಂ ಯುವಕನಲ್ಲಿ ಸಂಭ್ರಮ ಮನೆ ಮಾಡಿದೆ.ಹೌದು. ಮೂರು ವರ್ಷಗಳ ಹಿಂದೆ ಸಂಶುದ್ದೀನ್ 1 ಚೀಲ ಸಿಮೆಂಟ್‍ನೊಂದಿಗೆ ಅಯೋಧ್ಯೆಗೆ ತೆರಳಿದ್ದರು. 2017ರ ಏಪ್ರೀಲ್ 27 ರಂದು ಕೊಪ್ಪಳದಿಂದ ರೈಲು ಮೂಲಕ ತೆರಳಿ, 2017ರ ಮೇ 1 ರಂದು ಅಯೋಧ್ಯೆಯಲ್ಲಿದ್ದರು. ಅಲ್ಲದೆ ಅಂದೇ ಟ್ರಸ್ಟ್ ಗೆ ಒಂದು ಚೀಲ ಸಿಮೆಂಟ್ ನೀಡಿದ್ದರು. ಈ ವೇಳೆ ಶ್ರೀರಾಮ ಮಂದಿರ ಶೀಘ್ರವೇ ನಿರ್ಮಾಣವಾಗಲೆಂದು …

Read More »