ಹಾವೇರಿ, : ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಸಹಿಸದ ದುಷ್ಕರ್ಮಿಗಳು ಡಿ.ಜೆ.ಹಳ್ಳಿ,ಕೆ.ಜಿ.ಹಳ್ಳಿಯಲ್ಲಿ ದುಷ್ಕೃತ್ಯ ನಡೆಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಹಿರೇಕೆರೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸಿ ಪಾಟೀಲ್,ಪ್ರಧಾನಿ ಮೋದಿ ಹಾಗೂ ಕರ್ನಾಟಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ಪೂರ್ವನಿಯೋಜಿತವಾಗಿಯೇ ಈ ದುಷ್ಕೃತ್ಯವೆಸಗಲಾಗಿದೆ ಎಂದು ಆರೋಪಿಸಿದರು. ಬೆಂಗಳೂರು ಗಲಭೆಗೆ ನವೀನ್ ಪೋಸ್ಟ್ ನೆಪಮಾತ್ರ; ಹಿಂದೆ ಇತ್ತು ದೊಡ್ಡ ಸ್ಕೆಚ್..! ಗಲಭೆಯಲ್ಲಿ ಬಂಧಿಸಿದವರನ್ನು ಕಾಂಗ್ರೆಸ್‌ನವರು ಅಮಾಯಕರು ಎನ್ನುತ್ತಿದ್ದಾರೆಯೋ ಅವರು ನಿಜವಾಗಿಯೂ ಅಮಾಯಕರಲ್ಲ.ರಾಜಕೀಯ ಪಿತೂರಿ ಕಾರಣಕ್ಕಾಗಿಯೇ …
Read More »1 ಸಾವಿರ ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 1 ಸಾವಿರ ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ಈ ಯೋಜನೆಯಿಂದಾಗಿ 50 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ನೇರವಾಗಿ ರೈತರ ಖಾತೆಗೇ ಜಮೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ರಾಜ್ಯದ ರೈತ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಸಚಿವರು, ರೈತ ಬಾಂಧವರು ತಮ್ಮ ಖಾತೆಯನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ. 2019-20ನೇ ಸಾಲಿನ ಬೆಳೆವಿಮೆ ಬರುವ ಮಂಗಳವಾರದಿಂದ ರೈತರ ಖಾತೆಗೆ …
Read More »ಮುಸುಕಿನ ಜೋಳ ಬೆಳೆದು ಆರ್ಥಿಕ ಸಂಕಷ್ಟಕೊಳಗಾದ ರೈತರು
ಹಾಸನ : ಕೋವಿಡ್-19ನ ಲಾಕ್‌ಡೌನ್ ಸಮಸ್ಯೆಯಿಂದ ಮುಸುಕಿನ ಜೋಳ ಬೆಳೆದು ಆರ್ಥಿಕ ಸಂಕಷ್ಟಕೊಳಗಾದ ಪ್ರತಿ ರೈತರಿಗೆ ನೇರವಾಗಿ 5,000 ರು.ಗಳನ್ನು ನೇರ ನಗದು ವರ್ಗಾವಣೆ ಮಾಡುವ ಯೋಜನೆಯಾಗಿದ್ದು, ಹಾಸನ ಜಿಲ್ಲೆಯಲ್ಲಿ ಒಟ್ಟು 48,255 ರೈತರಿಗೆ ನೇರ ನಗದು ವರ್ಗಾವಣೆ ಮಾಡಿರುವುದಾಗಿ ಸಚಿವ ಗೋಪಾಲಯ್ಯ ಹೇಳಿದರು. ಜಿಲ್ಲಾ ಪಂಚಾಯತ್ ವತಿಯಿಂದ ಒಟ್ಟು 22 ಇಲಾಖೆಗಳಿಗೆ ಈಗಾಗಲೇ 112 ಕೋಟಿ ರು. ಬಿಡುಗಡೆಯಾಗಿದ್ದು, 105 ಕೋಟಿ ರು. ವೆಚ್ಚ ಮಾಡಲಾಗಿದೆ. 2019-20ನೇ ಸಾಲಿನಲ್ಲಿ …
Read More »ಗೌರಿ, ಗಣೇಶ ಹಬ್ಬಕ್ಕೆ ಕೆಎಂಎಫ್ ನಿಂದ ಬಂಪರ್ ಕೊಡುಗೆ
ಬೆಂಗಳೂರು : ಕೆಎಂಎಫ್ ಸ್ವಾತಂತ್ರ್ಯ ದಿನಾಚರಣೆ, ಗಣೇಶ, ಗೌರಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಂಪರ್ ಕೊಡುಗೆ ನೀಡಿದೆ. ಇಂದಿನಿಂದ ಆ.30ರವರೆಗೆ ನಡೆಯಲಿರುವ ‘ನಂದಿನಿ ಸಿಹಿ ಉತ್ಸವ’ದಲ್ಲಿ ಶೇ.10 ರಷ್ಟುರಿಯಾಯಿತಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಶನಿವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಹಾಲಿನ ಗುಣಮಟ್ಟಕಾಯ್ದುಕೊಂಡು ಗ್ರಾಹಕರಿಗೆ ಸದಾ ಕಾಲ ಉತ್ತಮ ಹಾಲು ಮತ್ತು …
Read More »ಬೆಂಗಳೂರು ಗಲಭೆ ಪ್ರಕರಣ: ಮತ್ತೆ 35 ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 340ಕ್ಕೆ ಏರಿಕೆ
ಬೆಂಗಳೂರು: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮತ್ತೆ 35 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 340ಕ್ಕೆ ಏರಿಕೆಯಾಗಿದೆ. ಕಳೆದ ಆಗಸ್ಟ್ 11ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಪೋಸ್ಟ್ ಗೆ ಸಂಬಂಧಿಸಿದಂತೆ ಪ್ರತಿಭಟನೆ ಹೆಸರಲ್ಲಿ ಗಲಭೆ ನಡೆಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಗೊಂಡಿದ್ದು, ಈ ವರೆಗೂ 340 ಮಂದಿಯನ್ನು ಬಂಧಿಸಿದ್ದಾರೆ. …
Read More »ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ
ಗೋಕಾಕ: ಭಾರತದ ಇತಿಹಾಸದಲ್ಲಿ ಮೈಲುಗಲ್ಲನ್ನು ಸೃಷ್ಟಿಸಿದ ದಿನ ಮತು ಭಾರತ ದೇಶದ ಎಲ್ಲ ಪ್ರಜೆಗಳು ಸಂಭ್ರಮ ಪಡುವ ದಿನ ಅದುವೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸುದಿನ ಅಗಸ್ಟ 15. ದಿನಾಂಕ 15.08.2020 ರಂದು ಬೆಳಿಗ್ಗೆ 7.45ಕ್ಕೆ ಸತೀಶ ಶುಗರ್ಸ ಕಾರ್ಖಾನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕಾರ್ಖಾನೆಗೆ ಅತಿ ಹೆಚ್ಚು ಕಬ್ಬು ಪೂರೈಸಿದ ರೈತರುಗಳಾದ ಯಲ್ಲಪ್ಪಾ ರಂಗಪ್ಪಾ ಮಳಲಿ ಸಾ.ಮಲ್ಲಾಪೂರ ,ಈರಪ್ಪಾ ಸಿದ್ದಪ್ಪಾ ಕಿತ್ತೂರ ಇವರಿಂದ 74 ನೇಯ ಸ್ವಾತಂತ್ರ್ಯ …
Read More »ರಾಜ್ಯದಲ್ಲಿ ಒಂದೇ ದಿನ 8818 ಜನರಿಗೆ ಕೊರೊನಾ ಸೋಂಕು ಪತ್ತೆ!!
ಬೆಂಗಳೂರು: ರಾಜ್ಯದಲ್ಲಿ ನಿನ್ನೆ ದಾಖಲೆಯ 8818 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 2,19,976 ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ 6629 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 1,34,811 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ನಿನ್ನೆ 114 ಮಂದಿ ಮೃತಪಟ್ಟಿದ್ದು ಇದುವರೆಗೆ 3831 ಜನರು ಸಾವನ್ನಪ್ಪಿದ್ದಾರೆ. 81,276 ಸಕ್ರಿಯ ಪ್ರಕರಣಗಳಿದ್ದು, 716 ಜನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 3495 …
Read More »ಮುಂದುವರೆದ ಕೊರೊನಾ ಕಾಟ: ಮತ್ತೆ 61 ಜನರಿಗೆ ಸೋಂಕು
ಗೋಕಾಕ: ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ರವಿವಾರದಂದು 61 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ. ಗೋಕಾಕ ನಗರದಲ್ಲಿ 43, ಅಂಕಲಗಿ ಗ್ರಾಮದಲ್ಲಿ 4 , ದೂಪಧಾಳ 3, ಮಲ್ಲಾಪೂರ ಪಿ.ಜಿ2 , ಶಿಂಧಿಕೂರಬೇಟ, ಮದವಾಲ,ಮಲ್ಲಾಪೂರ, ಅವರಾಧಿ, ಕೌಜಲಗಿ, ತುಕ್ಕಾನಟ್ಟಿ, ಗಣೇಶವಾಡಿ, ಗೋಕಾಕ ಫಾಲ್ಸ, ಪಂಚನಾಯಕನಹಟ್ಟಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ.
Read More »ಧೋನಿ ವಿದಾಯಕ್ಕೆ ಭಾವನಾತ್ಮಕವಾಗಿ ಶುಭ ಕೋರಿದ ವಿರಾಟ್ ಕೊಹ್ಲಿ..!
ನವದೆಹಲಿ: ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಸಂದೇಶದ ಮೂಲಕ ಶುಭ ಕೋರಿದ್ದಾರೆ. ಪ್ರತಿಯೊಬ್ಬ ಕ್ರಿಕೆಟಿಗನೂ ಒಂದಲ್ಲ ಒಂದು ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲೇ ಬೇಕು. ಆದರೆ ತುಂಬ ಹತ್ತಿರವಿದ್ದವರೂ ವಿದಾಯ ಹೇಳಿದಾಗ ಮನಸ್ಸು ಭಾರವಾಗುತ್ತದೆ. ನೀವು ದೇಶಕ್ಕಾಗಿ ಏನೆಲ್ಲಾ ಸಾಧಿಸಿದ್ದೀರೋ ಅದು ಪ್ರತಿಯೊಬ್ಬರ ಹೃದಯಲ್ಲಿ ಚಿರಸ್ಥಾಯಿಯಾಗಿ ಉಳಿದಿರುತ್ತೆ. …
Read More »BSY ಸರ್ಕಾರಕ್ಕೆ ಬೇಳೂರು ಗೋಪಾಲಕೃಷ್ಣ ಸವಾಲ್ : ಸರ್ವನಾಶದ ಎಚ್ಚರಿಕೆ
ಶಿವಮೊಗ್ಗ : ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಒಂದು ವೇಳೆ ಕಡಿವಾಣ ಹಾಕಲು ಮುಂದಾದಲ್ಲಿ ಗಣಪತಿಯ ಶಾಪ ತಟ್ಟಿಯಡಿಯೂರಪ್ಪ ನೇತೃತ್ವದ ಸರ್ಕಾರ ಸರ್ವನಾಶ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಂತೂ ಗಣಪತಿ ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿಯೇ ಮಾಡುತ್ತೇನೆ. ಯಾರು ಬಂದು ತಡೆಯುತ್ತಾರೋ ನೋಡೋಣ ಎಂದು ತಿಳಿಸಿದರು. …
Read More »
Laxmi News 24×7