Breaking News

ಜಿಲ್ಲೆ

ಗಲಭೆ: ಮತ್ತೆ ಮಂದಿ ಅರೆಸ್ಟ್ – ತನಿಖೆಯಲ್ಲಿ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯ ಜಾಡನ್ನ ಹಿಡಿದು ಹೊರಟಿರೋ ಸಿಸಿಬಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಗಳ ಬೆಂಡೆತ್ತುತ್ತಿದ್ದಾರೆ. ಹೀಗಿದ್ದೂ ಕೆಲವು ಆರೋಪಿಗಳಿಗೆ ಇರುವ ಕೊಬ್ಬು, ಧಿಮಾಕು ಕಡಿಮೆ ಆಗಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅಳಿಯ ಹಾಗೂ ಗಲಭೆಯ ಪ್ರಮುಖ ಆರೋಪಿ ನವೀನ್ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನ ಸಿಸಿಬಿ ಇಂದು ಬಂಧಿಸಿದೆ. ಯೂಸುಫ್ ಬಂಧಿತ ಆರೋಪಿ. ಈತ ಗಲಾಟೆ ನಡೆದ ದಿನ ನವೀನ್ ಮನೆಗೆ ನುಗ್ಗಿ ದಾಂಧಲೆ …

Read More »

ತಾಳ್ಮೆ ಪರೀಕ್ಷಿಸದೇ ಮೊದಲು ಆಸ್ಪತ್ರೆ ನಿರ್ಮಿಸಿ ಕೊಡಿ: ಇದು ಬ್ಯಾನರ್ ಚಳವಳಿ! ಎಲ್ಲಿ?

ಚಿಕ್ಕಮಗಳೂರು: ‘ಶೃಂಗೇರಿಯ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಉತ್ತಮ ಆಸ್ಪತ್ರೆಗಳಿಲ್ಲ, ನಿಮ್ಮ ಹಾಗೂ ಊರಿನ ಜನರ ಆರೋಗ್ಯದ ಹಿತದೃಷ್ಠಿಯಿಂದ ವಾಹನಗಳನ್ನ ನಿಧಾನವಾಗಿ ಚಲಿಸಿ” ಎಂಬ ಬ್ಯಾನರ್ ಶೃಂಗೇರಿಯ ಎಲ್ಲೆಡೆ ಕಂಡುಬರುತ್ತದೆ. ಪ್ರವಾಸಿಗರು ಕೂಡ ಆತಂಕದಿಂದ ನೋಡುತ್ತಿದ್ದಾರೆ! ವ್ಯವಸ್ಥೆ ಅಲ್ಲಲ್ಲ. ಅವ್ಯವಸ್ಥೆಯ ಅಣಕವನ್ನ ಇದೀಗ ಜನರೇ ತೆರೆದಿಡುತ್ತಿದ್ದಾರೆ. ಈ ರೀತಿಯ ಬ್ಯಾನರ್​ಗಳು ಶೃಂಗೇರಿಯ ಹಲವೆಡೆ ಕಂಡು ಬರುತ್ತಿವೆ. ಈ ವಿಭಿನ್ನ ಬ್ಯಾನರ್ ಕಂಡು ಸ್ಥಳೀಯರ ಜೊತೆ ಜಿಲ್ಲೆಗೆ ಬರೋ ಪ್ರವಾಸಿಗರು ಕೂಡ ಆತಂಕದಿಂದ ನೋಡುತ್ತಿದ್ದಾರೆ! …

Read More »

ರಾಜ್ಯಕಾರಣದಲ್ಲಿ ಸದ್ದು ಮಾಡಿದ ಫೋನ್ ಟ್ಯಾಪ್

ಬೆಂಗಳೂರು,  : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಫೋನ್ ಟ್ಯಾಪ್ ಆಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಇಂದು (ಶುಕ್ರವಾರ) ಮಾತನಾಡಿರುವ ಅವರು, ನನ್ನ ಫೋನ್ ಟ್ಯಾಪ್ ಆಗಿದೆ. ಟ್ಯಾಪ್ ಮಾಡಿರುವ ಬಗ್ಗೆ ದೂರು ದಾಖಲಿಸುತ್ತೇನೆ. ನಿನ್ನೆಯಿಂದ ಕರೆಗಳೇ ಬರುತ್ತಿಲ್ಲ, ಹೋಗುತ್ತಿಲ್ಲ. ಶೇಕಡ 100 ರಷ್ಟು ಫೋನ್ ಟ್ಯಾಪ್ ಆಗಿದೆ ಎಂದು ಆರೋಪಿಸಿದರು. ನಿರ್ಮಲಾನಂದ ಸ್ವಾಮೀಜಿಯ ಫೋನ್ ಟ್ಯಾಪ್: ಅಶೋಕ್ ಕ್ಷಮೆ ಪ್ರಶ್ನಿಸಿದ ಕುಮಾರಸ್ವಾಮಿ ನಮ್ಮ ಸುದರ್ಶನ್ 25 ಕಾಲ್ …

Read More »

ರೈತರ `ಪಶು ಸಂಜೀವಿನಿ’ ಸಂಚಾರಿ ಚಿಕಿತ್ಸಾಲಯಕ್ಕೆ ಸಿಎಂ ಚಾಲನೆ

ಬೆಂಗಳೂರು,  : ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸರಕಾರ ಸಜ್ಜಾಗಿದ್ದು, ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ. ಈ ಸೇವೆಗಳನ್ನು ಇಲಾಖೆಯ ಸಹಾಯವಾಣಿ ಸೇವೆಗಳಿಗೆ ಲಿಂಕ್ ಮಾಡಿ 24/7 ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಬಳಿ ಪಶುಸಂಗೋಪನಾ ಇಲಾಖೆಯ ವತಿಯಿಂದ ಆಯೋಜಿಸಿದ್ದ `ಪಶುಸಂಜೀವಿನಿ’ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು …

Read More »

ಗ್ರಾಮಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ ಯಾದಿಯ ಸರ್ಕಾರ ಅಧಿಕೃತ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮ ಪಂಚಾಯತಿಗೆ 2020-21 ರಲ್ಲಿ ನಡೆಯುವ ಪಂಚಾಯತಿ ಚುನಾವಣೆ ವಾರ್ಡಗಳ ಮೀಸಲಾತಿ ಪಟ್ಟಿ ಯಾದಿಯ ಸರ್ಕಾರ ಅಧಿಕೃತ ಪ್ರಕಟಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾ. ಪಂ. ಮಾಜಿ ಸದಸ್ಯ ವಿಕ್ರಮ ಬಣಗೆ ಆರೋಪಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಟ್ಟಿ  ಸರ್ಕಾರ ಪ್ರಕಟಿಸುವ 20 ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಹರದಾಡಿರುವ ಪಟ್ಟಿ …

Read More »

ಮಾರುತಿ ಕಾರ್ ಪಲ್ಟಿ: ಸ್ಥಳದಲ್ಲೇ ಇಬ್ಬರ ಸಾವು, ಐವರು ಗಂಭೀರ

ಚಿತ್ರದುರ್ಗ: ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಐದು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆನೆಸಿದರೆ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಮಾರುತಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 7 ಜನರ ಪೈಕಿ, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದ ಐದು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ಸಿಪಿಐ ರಾಘವೇಂದ್ರ, …

Read More »

KCET Result 2020- ಎಂಜಿನಿಯರಿಂಗ್ ವಿಭಾಗದಲ್ಲಿ ರಕ್ಷಿತ್ ನಂ. 1; ಇಲ್ಲಿದೆ ವಿವಿಧ ವಿಭಾಗಗಳ ಟಾಪ್ ರ್‍ಯಾಂಕರ್ಸ್

ಬೆಂಗಳೂರು: ರಾಜ್ಯದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಎಂಜಿನಿಯರಿಂಗ್, ಫಾರ್ಮಾ, ಕೃಷಿ, ನ್ಯಾಚುರೋಪಥಿ ವಿಭಾಗಗಳಲ್ಲಿ ವಿದ್ಯಾರ್ಥಿಗಳ ರ್‍ಯಾಂಕಿಂಗ್ ಲಿಸ್ಟ್ ಪ್ರಕಟಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ ಫಲಿತಾಂಶದಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜು ವಿದ್ಯಾರ್ಥಿ ರಕ್ಷಿತ್ ಎಂ ಅವರು ಎಂಜಿನಿಯರಿಂಗ್​ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. ಸಿಇಟಿ ಪರೀಕ್ಷೆ ಬರೆದ 1.75 ಲಕ್ಷ ವಿದ್ಯಾರ್ಥಿಗಳ ಪೈಕಿ 1,55,668 ಮಕ್ಕಳು ಅರ್ಹತೆ ಗಿಟ್ಟಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಅಶ್ವಥ …

Read More »

ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಾಗಿನ

ಮೈಸೂರು : ಜಿಲ್ಲೆಯ ಎಚ್.ಡಿ.ಕೋಟೆಯ ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿದರು. ಇದೇ ವೇಳೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರುಗಳು ಭಾಗಿಯಾಗಿದ್ದರು. ಬಳಿಕ ಕಬಿನಿ ಜಲಾಶಯದ ಕೆಳಭಾಗದಲ್ಲಿ ಮೇಲ್ಮಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಗುದ್ದಲಿಪೂಜೆ ನೆರವೇರಿಸುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಸಚಿವರಾದ ಸೋಮಶೇಖರ್, ರಮೇಶ್ ಜಾರಕಿಹೊಳಿ, ಶಾಸಕರಾದ ಎಸ್.ಎ.ರಾಮದಾಸ್, …

Read More »

ಘಟಪ್ರಭಾ, ಮಲಪ್ರಭಾ ಜಲಾಶಯಗಳ ಹೊರಹರಿವು ಇಳಿಕೆ

ಬೆಳಗಾವಿ: ಜಿಲ್ಲೆಯಂತೆ ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಅಲ್ಲಿಂದ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ಒಳಹರಿವು ತೀವ್ರ ಗತಿಯಲ್ಲಿ ಕಡಿಮೆಯಾಗಿದೆ. 1.73 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ 25 ಸಾವಿರ ಕ್ಯುಸೆಕ್‌ ಕಡಿಮೆಯಾಗಿದೆ. ಇದೇ ರೀತಿ, ಘಟಪ್ರಭಾ ಹರಿವು ಕೂಡ ಕಡಿಮೆಯಾಗಿದೆ. 19,775 ಕ್ಯುಸೆಕ್‌ ಒಳಹರಿವು ಇದೆ. ಹಿಂದಿನ ದಿನ 31,627 ಕ್ಯುಸೆಕ್‌ ಇತ್ತು. ಹಿಡಕಲ್‌ ಬಳಿಯ ಜಲಾಶಯದಿಂದ ಹೊರಬಿಡುವ ನೀರಿನ …

Read More »

ಕೊರೊನಾ ನಡುವೆ ಸೆ.21 ರಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು: ಸೆಪ್ಟೆಂಬರ್ 21 ರಿಂದ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕಲಾಪ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.   ಸೆ. 21 ರಿಂದ 30 ರವರೆಗೆ ಬೆಂಗಳೂರಿನಲ್ಲಿ ಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನದ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರ ಇರಬಾರದು ಎಂದು …

Read More »