ಬದಾಮಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ .ಕೆ.ಡಿ ಕರಮಳ್ಳಿ , ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ಎಸಿಬಿ ಅಧಿಕಾರಿಗಳ ದಾಳಿ ಬಲೆಗೆ ಬಿದ್ದಿದ್ದಾರೆ. 2018-19 ನೇ ಸಾಲಿನಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಕೊಳ್ಳಲಾದ ಕಾಮಗಾರಿಗಳಿಗೆ ಸರಬರಾಜು ಮಾಡಿದ ಕಚ್ಚಾವಸ್ತುಗಳು ಸಂಭಂಧಿಸಿದ ವೋಚರ್ ಮತ್ತು ಅಳತೆ ಪುಸ್ತಕಗಳನ್ನು ನೀಡಲು ಗುತ್ತಿಗೆದಾರರಿಗೆ 60 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. …
Read More »ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ
ಬೆಂಗಳೂರು: ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ರವಿಶಂಕರ್ ಬಾಯಿಬಿಡಿಸಿದ್ದಾರೆ. ಈ ವೇಳೆ ಆತ ನಾನು ರಾಗಿಣಿ ಒಟ್ಟಿಗೆ ಡ್ರಗ್ ಸೇವನೆ ಮಾಡಿದ್ವಿ. ಒಂದು ಮಾತ್ರೆಯ ‘ಕಾಲು ಭಾಗ’ ಇಬ್ಬರು ತಗೊಂಡಿದ್ವಿ. ವೈಭವ್ ಜೈನ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ವಿ ಎಂಬುದಾಗಿ ಹೇಳಿದ್ದಾನೆ …
Read More »ಬ್ಲೂ ಫಿಲಂ ನೋಡುವವರು ಡಿಸಿಎಂ ಆಗುತ್ತಿದ್ದಾಗ ಜನರಿಗೂ ನಗು, ದುಃಖ ಆಗಿತ್ತು: ಸಾರಾ ಮಹೇಶ್
ಮೈಸೂರು: ಡ್ರಗ್ಸ್ ದಂಧೆ ಕುರಿತು ತನಿಖೆ ನಡೆಯುತ್ತಿರುವಾಗಲೇ ಈ ವಿಚಾರ ರಾಜಕೀಯವಾಗಿದ್ದು, ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಇದೀಗ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಗೆ ಮಾಜಿ ಸಚಿವ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಕಿಡಿ ಕಾರಿರುವ ಅವರು, ಡ್ರಗ್ಸ್ ದಂಧೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್‍ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್ …
Read More »‘ನಾವು 14 ತಿಂಗಳು ಕಾದಿದ್ದೇವೆ, ನೀವು ಸಹನೆಯಿಂದ ಇರಬೇಕು’
ಬೆಂಗಳೂರು : ನಾವು ಸಚಿವರಾಗಲು 14 ತಿಂಗಳು ಕಾದಿದ್ದೆವು. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ಸ್ವಲ್ಪ ದಿನ ಸಹನೆಯಿಂದ ಕಾಯಬೇಕು. ಹೀಗೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಲಹೆ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 14 ತಿಂಗಳ ಕಾಲ ಕಾನೂನು ಹೋರಾಟ ನಡೆಸಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು …
Read More »ತಾಲ್ಲೂಕ ಪಂಚಾಯತಿಯಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ ಸಾಮಾನ್ಯ ಸಭೆಯನ್ನು ನಡೆಸಲಾಗಿತ್ತು.
ಗೋಕಾಕ ತಾಲ್ಲೂಕ ಪಂಚಾಯತಿಯಲ್ಲಿ ಇಂದು ಗೋಕಾಕ ಹಾಗು ಮೂಡಲಗಿ ತಾಲ್ಲೂಕ ಅಧಿಕಾರಿಗಳ ಪುರಭಾವಿ ಸಭೆಯನ್ನು ನಡೆಸಲಾಯಿತ್ತು. ಮಾನ್ಯ ಯೋಜನಾ ನಿರ್ದೇಶಕರು (ಡಿ ಆರ್ ಡಿ )ಕೋಶ ಜಿಲ್ಲಾ ಪಂಚಾಯತ ಬೆಳಗಾವಿ ಇವರು ಗೋಕಾಕ ತಾಲ್ಲೂಕಿನ ಪ್ರಗತಿ ಪರಿಶೀಲನೆ ನಡೆಸಿದರು. ಸದರಿ ಸಭೆಗೆ ಗೋಕಾಕ ತಾಲ್ಲೂಕಿನ ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರುಗಳು ಹಾಜರಾಗಿದ್ದರು. ಆರೋಗ್ಯ ಅಧಿಕಾರಿಗಳು ಕ್ವಾರೆಂಟೈನ ತಾಲ್ಲೂಕಿನಲ್ಲಿ 9 ಕೇಂದ್ರಗಳು ಇದ್ದು ಸರಿಯಾದ ಸೂಕ್ತ ಕ್ರಮಗಳನ್ನು ಕೈಕೊಳ್ಳಲಾಗಿದ್ದು. ಹಾಗು …
Read More »ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಅನುದಾನ ಹಂಚಿಕೆ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದರು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಸಾಕಷ್ಟು ಮಳೆ ಆಗುತ್ತಿದೆ. ಪಕ್ಷದ ಶಾಸಕ ಮಂಜುನಾಥ್ ದಾಸರಹಳ್ಳಿ ಅವರ ಕ್ಷೇತ್ರದಲ್ಲಿಯೂ ಸಾಕಷ್ಟು ಹಾನಿ ಆಗಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ …
Read More »ಗ್ರಾಮ ಪಂಚಾಯತ್ ಕಾರ್ಯದರ್ಶಿಯೊಬ್ಬರು ಲಂಚ ಸ್ವೀಕರಿಸುತಿದ್ದ ಸಂದರ್ಭ ಎಸಿಬಿ ಬಲೆಗೆ ಬಿದ್ದ ಘಟನೆ
ಶಿವಮೊಗ್ಗ :ಗ್ರಾಮ ಪಂಚಾಯತ್ ಕಾರ್ಯದರ್ಶಿಯೊಬ್ಬರು ಲಂಚ ಸ್ವೀಕರಿಸುತಿದ್ದ ಸಂದರ್ಭ ಎಸಿಬಿ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ. ಶಿಕಾರಿಪುರ ತಾಲೂಕು ಹೊಸೂರು ಗ್ರಾ.ಪಂಚಾಯತ್ ನ ಶಿವಪ್ಪ ಎಸಿಬಿ ದಾಳಿ ವೇಳೆ ಸಿಕ್ಕಿ ಬಿದ್ದಿದ್ದಾರೆ. ಶಿವಪ್ಪ ಅವರು ನರೇಗಾದ 2.10 ಲಕ್ಷ ಹಣ ಬಿಡುಗಡೆಗೆ 8 ಸಾವಿರ ರೂಪಾಯಿ ಲಂಚ ನೀಡುವಂತೆ ಗುತ್ತಿಗೆದಾರ ಮಂಜುನಾಥ ಬಳಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಈ ಕುರಿತು …
Read More »ಸ್ಮಶಾನಕ್ಕೆ ತೆರಳಲು ದಾರಿ ನೀಡಲು ಆಗ್ರಹ
ಹುಬ್ಬಳ್ಳಿ :ಶವ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದೇ ತೊಂದರೆ ಅನುಭವಿಸುತ್ತಿರುವ ತಾಲೂಕಿನ ಸೊಟಕನಾಳ ಗ್ರಾಮಸ್ಥರು ಸೂಕ್ತ ದಾರಿ ಕಲ್ಪಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಸೊಟಕನಾಳ ಗ್ರಾಮದ ಮುಖಂಡ ಚನ್ನಪ್ಪ ಹಾಲವಾರ ಮಾತನಾಡಿ, ಸೊಟಕನಾಳದಲ್ಲಿ 1997ರಲ್ಲಿ ಅಂದಿನ ತಹಸೀಲ್ದಾರ್ರು ರಿಸನಂ 2ರಲ್ಲಿ 20 ಗುಂಟೆ ಜಾಗವನ್ನು ಸ್ಮಶಾನಕ್ಕೆ ನೀಡಿದ್ದರು. ಆದರೆ, ಸ್ಮಶಾನಕ್ಕೆ ತೆರಳಲು ಜಾಗ ಇಲ್ಲದ್ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತ ಬಂದಿದ್ದಾರೆ. …
Read More »ದೇವಸ್ಥಾನದಲ್ಲಿ ಅರ್ಚಕರ ಹತ್ಯೆ; ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಣೆ
ಮಂಡ್ಯ: ಜಿಲ್ಲೆಯಲ್ಲಿ 3 ಕೊಲೆ ಮಾಡಿ, ದೇವಸ್ಥಾನ ದೋಚಿರುವ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ನಿನ್ನೆ ಮಂಡ್ಯ ಜಿಲ್ಲೆಯ ಅರ್ಕೇಶ್ವರ ದೇವಸ್ಥಾನ ದೋಚಿದ ಕದೀಮರು, ಇಬ್ಬರು ಕಾವಲುಗಾರರು ಹಾಗೂ ಒಬ್ಬ ಆರ್ಚಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಯಡಿಯೂರಪ್ಪ ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5.00 ಲಕ್ಷ ರೂ. ಪರಿಹಾರ ನೀಡಲಾಗುವುದು. …
Read More »ರಾಜ್ಯದಲ್ಲೀಗ ಸಕ್ರಿಯ ಕೊರೋನಾ ಸೋಂಕಿತರು 1 ಲಕ್ಷ!
ಬೆಂಗಳೂರು : ರಾಜ್ಯದಲ್ಲಿ ಗುರುವಾರ ಹೊಸದಾಗಿ 9,217 ಜನರಲ್ಲಿ ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ ಒಂದು ಲಕ್ಷ (1,01,537) ದಾಟಿದೆ. ಇದರೊಂದಿಗೆ ಈವರೆಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 4.30 ಲಕ್ಷ ಮುಟ್ಟಿದೆ. ಇದೇ ವೇಳೆ 129 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 6,937ಕ್ಕೆ ತಲುಪಿದೆ. ಸದ್ಯ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಮಾತ್ರ ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷದ ಮೇಲಿದೆ. ದೇಶದ ಒಟ್ಟು ಕೊರೋನಾ ಸೋಂಕಿತರಲ್ಲಿ ಶೇ. …
Read More »
Laxmi News 24×7