Breaking News

ಜಿಲ್ಲೆ

ಮತ್ತೋರ್ವ ಪ್ರಮುಖ ಆರೋಪಿ ವೈಭವ್ ಜೈನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಇದರಿಂದ ನಟಿ ರಾಗಿಣಿಗೆ ಸಂಕಷ್ಟ

ಬೆಂಗಳೂರು: ಸಿಸಿಬಿ ಪೊಲೀಸರು ಶನಿವಾರ ಡ್ರಗ್ಸ್ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ವೈಭವ್ ಜೈನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಇದರಿಂದ ನಟಿ ರಾಗಿಣಿಗೆ ಸಂಕಷ್ಟ ಶುರುವಾಗಿದೆ. ಶನಿವಾರ ನಡೆದ ಸಿಸಿಬಿ ತನಿಖೆಯಲ್ಲಿ ವೈಭವ್ ಜೈನ್ ರವಿಶಂಕರ್ ಮತ್ತು ರಾಗಿಣಿಗೆ ನಾನೇ ಎಲ್‍ಎಸ್‍ಡಿ ಪಿಲ್ಸ್ ತಂದುಕೊಟ್ಟಿದ್ದೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ನಟಿ ರಾಗಿಣಿ, ರವಿಶಂಕರ್, ವೀರೇನ್ ಖನ್ನಾ ಹಾಗೂ ಇತರ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದೆ. ಬೆಂಗಳೂರು ಸೇರಿದಂತೆ …

Read More »

ಕ್ಯಾಸಿನೋಗೆ ನಾನೊಬ್ಬನೇ ಹೋಗಿಲ್ಲ.28 ಮಂದಿ ಶಾಸಕರು ಮತ್ತು ಕುಮಾರಸ್ವಾಮಿ ಅವರ ಜೊತೆಯೂ ಹೋಗಿದ್ದೇನೆ.

ಬೆಂಗಳೂರು,ಸೆ.12- ನಾನು ಕೊಲೊಂಬೊಗೆ ಹೋಗಿದ್ದೇನೆ. ಕ್ಯಾಸಿನೋದಲ್ಲೂ ಭಾಗವಹಿಸಿದ್ದೇನೆ. ಅದೇನೂ ಅಕ್ರಮ ಚಟುವಟಿಕೆಯಲ್ಲ. ಡ್ರಗ್ಸ್ ಜಾಲದಲ್ಲಿ ನಾನು ಭಾಗವಹಿಸಿದ್ದರೆ ನನ್ನನ್ನು ಗಲ್ಲಿಗೇರಿಸಲಿ ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋ ಅಕ್ರಮವಲ್ಲ. ಕೇಂದ್ರ ಸರ್ಕಾರ ಅದನ್ನು ನಿಷೇಧಿಸಿಲ್ಲ. ನಾನು ಸೇರಿದಂತೆ ಬಹಳಷ್ಟು ರಾಜಕಾರಣಿಗಳು   ಜೆಡಿಎಸ್‍ನಲ್ಲಿದ್ದಾಗ 28 ಮಂದಿ ಶಾಸಕರು ಮತ್ತು ಕುಮಾರಸ್ವಾಮಿ ಅವರ ಜೊತೆಯೂ ಹೋಗಿದ್ದೇನೆ. ಹೋಗಬಾರದೆಂದು ಯಾವ ನಿಯಮವೂ ಇಲ್ಲ. ನಾನೇನೂ ಪಾಕಿಸ್ತಾನಕ್ಕೆ …

Read More »

ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತನಿಖೆ ಆಗಬೇಕು:ಸತೀಶ ಜಾರಕಿಹೊಳಿ 

ಧಾರವಾಡ:   ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತನಿಖೆ ಆಗಬೇಕುಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಒತ್ತಾಯಿಸಿದ್ದಾರೆ. ಡ್ರಗ್ಸ್ ವಿಚಾರವಾಗಿ  ನಗರದಲ್ಲಿ  ಶನಿವಾರ ಮಾಧ್ಯಮದವರೊಂದಿಗೆ  ಪ್ರತಿಕ್ರಿಯಿಸಿದ ಅವರು, ಪ್ರಕರಣ ತನಿಖೆ ಬೇಗ ಬೇಗ ಮಾಡಬೇಕಿತ್ತು.ಕೆಲವು ಕಡೆ ಒಳ್ಳೆಯ ರೀತಿಯಿಂದ ತನಿಖೆ ನಡೆದಿದೆ .  ಇನ್ನೂ ಕಾಲ ಮೀರಿಲ್ಲ.  ರಾಜ್ಯಾದ್ಯಂತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು. ಎಐಸಿಸಿ ಕಾರ್ಯಕಾರಿ ಸಮಿತಿ ಬದಲಾವಣೆ ವಿಚಾರ ಮಾತನಾಡಿ,  ಕೆಲಸ ಮಾಡುವ …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಶನಿವಾರ ಭೇಟಿ ಮಾಡಿ ಪ್ರತಿಭಟನೆಗೆ ಬೆಂಬಲ

ಧಾರವಾಡ:  ಲ್ಯಾಪ್ ಟಾಪ್  ವಿತರಿಸುವಂತೆ ವಿವಿಧ ಸೌಲಭ್ಯ ಒದಗಿಸುವಂತೆ  ಆಗ್ರಹಿಸಿ ಕಳೆದ ಮೂರು  ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ  ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಶನಿವಾರ ಭೇಟಿ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.  ಕೊರೊನಾ ಸಂಕಷ್ಟದಿಂದಾಗಿ  ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ  ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ವಿಳಂಬವಾಗಿದೆ. ಈ  ಮೊದಲು  ಲ್ಯಾಪ್ ಟ್ಯಾಪ್ ವಿತರಿಸುವುದಾಗಿ  ಹೇಳಿದ ವಿವಿ, ಇದೀಗ  …

Read More »

15 ದಿನಕ್ಕೆ 4 ಲಕ್ಷ ಸಂಬಳ ಉಡೀಸ್ ಮಾಡುತ್ತಿದ್ದ ವೀರೇನ್ ಖನ್ನಾನ ಬಲಗೈ ಭಂಟ..!

ಬೆಂಗಳೂರು, ಸೆ.12- ತಿಂಗಳಿಗೆ 4 ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿ ಆದಿತ್ಯ ಅಗರ್ವಾಲ್ ಅದನ್ನು 15 ದಿನಗಳಿಗೆ ಖಾಲಿ ಮಾಡಿಬಿಡುತ್ತಿದ್ದ ಎಂಬ ಕುತೂಹಲಕಾರಿ ಅಂಶಗಳು ಪತ್ತೆಯಾಗಿವೆ. ಡ್ರಗ್ಸ್ ಜಾಲದಲ್ಲಿ ಬಂಧಿತನಾಗಿರುವ ಸಾಫ್ಟ್‍ವೇರ್ ಎಂಜಿನಿಯರ್ ಆದಿತ್ಯ ಅಗರ್ವಾಲ್ ಮತ್ತೊಬ್ಬ ಕಿಂಗ್‍ಪಿನ್ ವೀರೇನ್ ಖನ್ನಾನ ಬಲಗೈ ಭಂಟ ಎನ್ನಲಾಗಿದೆ. ಈ ಇಬ್ಬರು ಜೀವನ ಚಿಕ್ಕದು. ಇರುವಷ್ಟು ದಿನ ಮಜಾ ಮಾಡಿ ಸಾಯಬೇಕು ಎಂಬ ಸಿದ್ಧಾಂತಕ್ಕೆ ಅಂಟಿಕೊಂಡಿದ್ದರು. ಹಾಗಾಗಿ ಇಬ್ಬರೂ ಮೋಜಿನ ಜೀವನದ ದಾಸರಾಗಿದ್ದರು. …

Read More »

ಟೈಗರ್ ಗ್ಯಾಂಗ್ ಬಗ್ಗೆ ಲಖನ ಜಾರಕಿಹೋಳಿ ಹೇಳಿದ್ದೇನು… ?

ಟೈಗರ್ ಗ್ಯಾಂಗ್ ಬಗ್ಗೆ ಲಖನ ಜಾರಕಿಹೋಳಿ ಹೇಳಿದ್ದೇನು… ? ಗೋಕಾಕ:ಸುಮಾರು ದಿನಗಳಿಂದ ಸುದ್ದಿ ಯಲ್ಲಿರುವ ಟೈಗರ್ ಗ್ಯಾಂಗ್ ಬಗ್ಗೆ ಇವತ್ತು ಲಕ್ಷ್ಮಿ ನ್ಯೂಸ್ ವಾಹಿನಿ ಜೊತೆ ಮಾತನಾಡಿದ ಚಿಕ್ಕ ಸಾಹುಕಾರರು ಇಬ್ಬರು ಸಹೋದರರ ಪರ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಯಲ್ಲಿ ನನ್ನ ಅಣ್ಣಾ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಹೇಳಿದ್ದು ಸರಿಯಿದೆ ಈ ಒಂದು ಟೈಗರ್ ಗ್ಯಾಂಗ್ ಮುಂಚೆ ಇದ್ದಿದ್ದೇ ಬೇರೆ, ಇದು ಬೇರೆ ಯಾವುದೋ ಬಿಲ್ಲಿ …

Read More »

ಪರಿಹಾರದ ಚೆಕ್ ವಿತರಣೆ

ಬೆಳಗಾವಿ: ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ತಾಲ್ಲೂಕಿನ ಹಲಗಾ ಗ್ರಾಮದ ಐದು ಕುಟುಂಬಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಮಂಜೂರು ಮಾಡಿಸಿದ್ದಾರೆ. ಐದು ತಿಂಗಳ ಹಿಂದೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಐದು ಮನೆಗಳು ಆಹುತಿಯಾಗಿದ್ದವು. ಪ್ರತಿ ಕುಟುಂಬಕ್ಕೆ ತಲಾ ₹ 5 ಲಕ್ಷ ಮಂಜೂರಾಗಿದೆ. ಶಾಸಕರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷದ ಕಾರ್ಯಕರ್ತರು ಚೆಕ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. …

Read More »

75 ಸಾವಿರ ಲಂಚ ಕೇಳಿದ್ದಅಂಬೇಡ್ಕರ್ ಅಭಿವೃದ್ಧಿ ನಿಮಗದ ಸಿಬ್ಬಂದಿ ಅರೆಸ್ಟ್:

ಹಾವೇರಿ: ಜಿಲ್ಲಾಡಳಿತ ಭವನದಲ್ಲಿಯರುವ ಅಂಬೇಡ್ಕರ್ ಅಭಿವೃದ್ಧಿ ನಿಮಗದ ಕಚೇರಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಓರ್ವರನ್ನು ಬಂಧಿಸಲಾಗಿದ್ದು,ಮೂವರಿಗೆ ಬಲೆ ಬಿಸಿದ್ದಾರೆ. ಸಹಾಯ ಧನದಲ್ಲಿ ಭೂ ಒಡೆತನ ಯೋಜನೆಯಲ್ಲಿ ಭೂಮಿ ಖರೀದಿಸುವ ಸಂಬ0ಧ ಅನುಮೋದನೆ ನೀಡಲು ೭೫ ಸಾವಿರ ಲಂಚ ಕೇಳಿದ್ದರು. ಇದರಿಂದ  ದೂರು ದಾಖಲಾಗಿರುವ ಹಿನ್ನೆಲೆ ೨೫ ಸಾವಿರ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆಸಹಾಯಕ ತಿಪ್ಪೇಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್, ಎಫ್ ಡಿಎ …

Read More »

ಇತರ ರಾಜ್ಯಗಳಿಂದ ಶೇ.90ರಷ್ಟು ಗಾಂಜಾ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ:

ಬೆಂಗಳೂರು,ಸೆ.12- ಕರ್ನಾಟಕ ಸರ್ಕಾರ ಮಾದಕ ವಸ್ತು ಪೂರೈಕೆ ಮತ್ತು ಬಳಕೆ ವಿರುದ್ಧ ಸಮರ ಸಾರಿ ದಂಧೆಯನ್ನು ಮಟ್ಟಹಾಕಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಇತರ ರಾಜ್ಯಗಳಿಂದ ಶೇ.90ರಷ್ಟು ಗಾಂಜಾ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಕಳೆದ ಕೆಲ ದಿನಗಳಿಂದ ರಾಜ್ಯ ಪೊಲೀಸರು ಹಲವು ಸ್ಥಳಗಳಲ್ಲಿ ಗಾಂಜಾ ಸಂಗ್ರಹವನ್ನು ವಶಪಡಿಸಿಕೊಂಡಿದ್ದು, ಕಲಬುರಗಿಯಲ್ಲಿ 1,350 ಕೆಜಿ, ಕೋಲಾರದ ಕೆಜಿಎಫ್ ನಲ್ಲಿ 186 ಕೆಜಿ ಸಿಕ್ಕಿವೆ. ಕಲಬುರಗಿಯಲ್ಲಿ …

Read More »

ಚುನಾವಣೆಗೆ ಬಿಜೆಪಿ, ಜೆ​ಡಿ​ಎ​ಸ್‌ ಭರದ ಸಿದ್ಧತೆ

ಬೆಂಗಳೂರುಸ : ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುವ ಮೊದಲೇ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್‌ ತೆರೆಮರೆಯಲ್ಲಿ ಭರದ ಸಿದ್ಧತೆ ಆರಂಭಿಸಿವೆ. ಕ್ಷೇತ್ರದ 264 ಬೂತ್‌ಗಳಲ್ಲಿ ಬೂತ್‌ ಕಮಿಟಿ, ಪೇಜ್‌ ಪ್ರಮುಖ್‌, ವಾಟ್ಸ್‌ ಆಯಪ್‌ ಗ್ರೂಪ್‌ಗಳನ್ನು ರಚಿಸಲು ಮುಂದಾಗಿದ್ದು, ಇದೇ ತಿಂಗಳ ಅಂತ್ಯದ ವೇಳೆಗೆ ಎಲ್ಲವನ್ನೂ ಪೂರ್ಣಗೊಳಿಸಲು ಉದ್ದೇಶಿಸಿದೆ. ಈಗಾಗಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಸ್ಥಳೀಯ ಮಟ್ಟದ ಮುಖಂಡರು ಹಾಗೂ …

Read More »