ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಗ್ರಾಮದ ರೈತ ಬಸವಣ್ಣಿ ಚಿಣ್ಣಪ್ಪ ಮುಗಳಖೋಡ ಒಂದೇ ಬೆಳೆ ನೆಚ್ಚಿಕೊಳ್ಳದೆ, ವಿವಿಧ ಬೆಳೆಗಳನ್ನು ಬೆಳೆಯುತ್ತ ಸಮಗ್ರ ಕೃಷಿಯಲ್ಲಿ ಯಶ ಕಂಡಿದ್ದಾರೆ. ಜತೆಗೆ, ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬಿ.ಎಸ್ಸಿ ಪದವೀಧರರಾದ ಬಸವಣ್ಣಿ 40 ಎಕರೆ ಜಮೀನು ಹೊಂದಿದ್ದಾರೆ. ನೌಕರಿಗಾಗಿ ಬೆನ್ನು ಹತ್ತದೆ, ಒಕ್ಕಲುತನದಲ್ಲೇ ಖುಷಿ ಕಾಣುತ್ತಿದ್ದಾರೆ. ‘ನಾನು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4 ಅಡಿ ಬಿಟ್ಟು, ಕಬ್ಬಿನ ಬೆಳೆ ನಾಟಿ ಮಾಡಿದ್ದೇನೆ. ಮಿಶ್ರ ಬೆಳೆಗಳಾಗಿ …
Read More »ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಕಲ್ಲೆದ್ದ ರಸ್ತೆಯಲ್ಲೇ ಮಕ್ಕಳ ನಡಿಗೆ!
ಚನ್ನಮ್ಮನ ಕಿತ್ತೂರು: ಕಾಲು ದಾರಿ ಮೇಲೆ ಮುಷ್ಟಿಗಾತ್ರದ ಚೂಪನೆಯ ಕಲ್ಲುಗಳು ಎದ್ದು ಕುಳಿತಿವೆ. ಸ್ಮಶಾನಕ್ಕೂ ಇದೇ ದಾರಿ ಅವಲಂಬನೆ. ಮಳೆಯಾದರೆ ಸಾಕು ಮನೆಯೊಳಗೆ ನೀರು ನುಗ್ಗಿ ಬದುಕೇ ಯಾತನಾಮಯ ಆಗುತ್ತದೆ. ಇದು ತಾಲ್ಲೂಕಿನ ಉಗರಖೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿಮ್ಮಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿ ಮಕ್ಕಳು ಮತ್ತು ನಾಗರಿಕರ ಗೋಳು. ‘ಕಾಲೊನಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಮಕ್ಕಳು ರಸ್ತೆ ಮೇಲೆ ಎದ್ದು …
Read More »ಎಂಇಎಸ್ ಮತಗಳು ಬಿಜೆಪಿಗೆ ಹೋಗಿದ್ದರಿಂದಲೇ ನನ್ನ ಮಗನಿಗೆ ಸೋಲಾಯಿತು: ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಮತಗಳು ಬಿಜೆಪಿಗೆ ಹೋಗಿದ್ದರಿಂದಲೇ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೋಲು ಕಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ ಲಕ್ಷ್ಮಿ ಈ ವಿಷಯ ತಿಳಿಸಿದರು. ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದ ಅವರ ಪುತ್ರ ಮೃಣಾಲ್ ಬಿಜೆಪಿಯ ಜಗದೀಶ್ ಶೆಟ್ಟರ್ ವಿರುದ್ಧ 1.78 ಲಕ್ಷ ಮತಗಳ ಅಂತರದಿಂದ …
Read More »ಪ್ರಯಾಣಿಕರ ದಾರಿ ತಪ್ಪಿಸುವ ಮಾರ್ಗಸೂಚಿ ಫಲಕಗಳು
ತೆಲಸಂಗ: ರಸ್ತೆಗಳ ಬದಿಗಳಲ್ಲಿ ಅಳವಡಿಸುವ ಗ್ರಾಮಗಳ ಮಾರ್ಗಸೂಚಿ ಫಲಕಗಳು ಮಾರ್ಗಸೂಚಿಯಾಗಿರಬೇಕು. ಆದರೆ ಅಥಣಿ ತಾಲೂಕಿನ ಕಕಮರಿಯಿಂದ ತೆಲಸಂಗ ಸಾವಳಗಿವರೆಗೆ ಅಭಿವೃದ್ಧಿ ಪಡಿಸಿರುವ ಕರ್ನಾಟಕ ಎಸ್.ಎಚ್ 260 ರಸ್ತೆ ಬದಿಯಲ್ಲಿ ಅಳವಡಿಸಿರುವ ಗ್ರಾಮಗಳ ಕಿ.ಮೀ ಮಾರ್ಗಸೂಚಿ ಫಲಕಗಳು ಪ್ರಯಾಣಿಕರಿಗೆ ದಾರಿ ತಪ್ಪಿಸುತ್ತಿವೆ. ಫಲಕಗಳಲ್ಲಿ ಕಿ.ಮೀ. ಲೋಪದೋಷಗಳಾಗಿವೆ. ಹಾಲಳ್ಳಿ ಮಾರ್ಗದಿಂದ ತೆಲಸಂಗ ಕ್ರಾಸ್ ರಸ್ತೆ ದಾಟುವ ಮುನ್ನ ಹಾಕಿರುವ ಫಲಕದಲ್ಲಿ ತೆಲಸಂಗ 2 ಕಿ.ಮೀ. ಬರೆಯುವ ಬದಲು 3 ಕಿ.ಮೀ ಅಂತ ಬರೆಯಲಾಗಿದೆ. ಆಶ್ಚರ್ಯವೆಂದರೆ …
Read More »ನೀತಿ ಸಂಹಿತಿ ನಿಮಿತ್ತ ತಡೆ ಹಿಡಿ ದಿದ್ದ ಅನ್ನ ಸಂತರ್ಪಣೆಶ್ರೇಷ್ಠ ಫೌಂಡೇಶನ್ ವತಿಯಿಂದ ಮತ್ತೆ ಈ ಶನಿ ವಾರದಿಂದ ಪ್ರಾರಂಭ..
ನೀತಿ ಸಂಹಿತಿ ನಿಮಿತ್ತ ತಡೆ ಹಿಡಿ ದಿದ್ದ ಅನ್ನ ಸಂತರ್ಪಣೆ ಮತ್ತೆ ಈ ಶನಿ ವಾರ ದಿಂದ ಪ್ರಾರಂಭ.. ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ …
Read More »ಕೇಳಿಸದೇ ಕಲ್ಲು ಕಲ್ಲಿನಲಿನ ಕಲ್ಲುಕುಟಿಗರ ಧ್ವನಿ
ಚಿಕ್ಕೋಡಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಲ್ಲು ಕುಟಿಗರು ಈಗಲೂ ತಮ್ಮ ಕುಲಕಸುಬು ಮಾಡುತ್ತಿದ್ದಾರೆ. ತುತ್ತಿನಚೀಲ ತುಂಬಿಸಿಕೊಳ್ಳಲು ಕಲ್ಲು- ಬಂಡೆಗಳನ್ನೇ ಪುಡಿ ಮಾಡಿ ರೂಪ ನೀಡುತ್ತಿದ್ದಾರೆ. ಮೂರು ತಲೆಮಾರುಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಅವರ ಬದುಕು ಮಾತ್ರ ಇನ್ನೂ ಮೂರ್ತರೂಪ ಪಡೆದಿಲ್ಲ. ಸಂಕಷ್ಟಗಳು ಕಲ್ಲು-ಬಂಡೆಗಳಂತೆಯೇ ದೃಢವಾಗಿ ಉಳಿದುಬಿಟ್ಟಿವೆ. ಜೈನಾಪುರ ಕ್ರಾಸ್‌ಗೆ ಬಂದರೆ ಸಾಕು; ಒಳಕಲ್ಲು, ಬೀಸುವ ಕಲ್ಲು, ರುಬ್ಬುವ ಕಲ್ಲು, ಚಟ್ನಿ ಕಲ್ಲು, ನಂದಿ, ಲಿಂಗ, ನಾಗಪ್ಪ ಮುಂತಾದ ಮೂರ್ತಿಗಳು …
Read More »ಬೆಳಗಾವಿ | ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು
ಬೈಲಹೊಂಗಲ: ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮಳೆ ಬಿದ್ದು, ಪಟ್ಟಣದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಹೊಸೂರ ರಸ್ತೆಯ ವಿಜಯ ಸೋಸಿಯಲ್ ಕ್ಲಬ್, ಪೊಲೀಸ್ ಠಾಣೆ, ಬಸ್ ನಿಲ್ದಾಣ ಮುಖ್ಯ ರಸ್ತೆಗಳು ಮಳೆ ನೀರಿನಿಂದಾಗಿ ಕೆರೆಯಂತೆ ಕಂಡವು. ಕಾರ್, ಬೈಕ್ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು. ಈಟಿ ಬಸವೇಶ್ವರ ದೇವಸ್ಥಾನ ಹತ್ತಿರದ ಎಂ.ಜೆ. ಹೌಸಿಂಗ್ …
Read More »ಚಿಕ್ಕೋಡಿ: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾಗೆ 90,834 ಮತಗಳ ಅಂತರದಿಂದ ಗೆಲುವು
ಚಿಕ್ಕೋಡಿ: ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮೊದಲ ಯತ್ನದಲ್ಲೇ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 90,834 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇಲ್ಲಿನ ಆರ್.ಡಿ ಕಾಲೇಜು ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. ಮಧ್ಯಾಹ್ನದವರೆಗೆ 22 ಸುತ್ತುಗಳ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ 8,533 ಮತಗಳ ಮುನ್ನಡೆ ಸಾಧಿಸಿದ ಪ್ರಿಯಾಂಕಾ, ಎರಡನೇ ಸುತ್ತಿನಲ್ಲಿ 20,314 …
Read More »ಲೋಕಸಭಾ ಚುನಾವಣೆ ಫಲಿತಾಂಶ: ಬೆಳಗಾವಿಯಲ್ಲಿ ತಮ್ಮ ತಾಕತ್ತು ತೋರಿಸಿದ ಜಾರಕಿಹೊಳಿ ಬ್ರದರ್ಸ್
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅಂಬರೀಶ್ ಸೋಲು ಕಂಡಿದ್ದಾರೆ. ಮೃಣಾಲ್ ಸೋಲಿಸಲು ಜಾರಕಿಹೊಳಿ ಸಹೋದರರು ಸೈಲೆಂಟ್ ಆಗಿ ಸೂತ್ರ ಹೆಣೆದಿದ್ದರು. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸೇಡು ತೀರಿಸಿಕೊಂಡಿದ್ದು, ಜಗದೀಶ್ ಶೆಟ್ಟರ್ ಗೆಲ್ಲಿಸುವಲ್ಲಿ ಜಾರಕಿಹೊಳಿ ಸಹೋದರರ ಯಶಸ್ವಿ ಆಗಿದ್ದಾರೆ. ಬೆಳಗಾವಿ, ಜೂನ್ 04: ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬವೂ …
Read More »ದುಃಸ್ಥಿತಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ
ಚಿಕ್ಕೋಡಿ: ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕ ಹಾಗೂ ಬಾಲಕಿಯರ 16 ವಸತಿ ನಿಲಯಗಳು ಇದ್ದು, ಇವುಗಳ ಪೈಕಿ ಚಿಕ್ಕೋಡಿ ಪಟ್ಟಣದ ಬಾಲಕಿಯರ ವಸತಿ ನಿಲಯ ಶಿಥಿಲಗೊಂಡಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೇ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಮೆಟ್ರಿಕ್ ಪೂರ್ವ 13 ಹಾಗೂ ಮೆಟ್ರಿಕ್ ನಂತರದ 3 ವಸತಿ ನಿಲಯಗಳಲ್ಲಿ 2024-25ನೇ ಸಾಲಿನಲ್ಲಿ ವ್ಯಾಸಾಂಗ …
Read More »