ಮೂಡಲಗಿ: ತಾಲ್ಲೂಕಿನ ಕೊನೆಯ ಗ್ರಾಮಗಳಾಗಿರುವ ಹುಣಶ್ಯಾಳ ಮತ್ತು ಢವಳೇಶ್ವರ ಗ್ರಾಮಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ಭಾನುವಾರ ಬೆಳಿಗ್ಗೆಯಿಂದ ಅಕ್ಷರಶಃ ನಡುಗಡ್ಡೆಗಳಾಗಿವೆ. ಹುಣಶ್ಯಾಳ ಪಿವೈ ಗ್ರಾಮದ ಹಣಮಂತ ದೇವರ ದೇವಾಲಯವು ಜಲಾವೃತಗೊಂಡಿದೆ. ಶನಿವಾರ ಸಂಜೆಯಿಂದ ನದಿಯ ನೀರಿನ ಪ್ರಮಾಣ ಏರುತ್ತಿರುವುದರಿಂದ ಇಡೀ ಊರಿನ ಜನ, ಜಾನುವಾರು, ಸಾಮಾನು ಸರಂಜುಮಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದಾರೆ. ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಳಜಿ ಕೇಂದ್ರ ತೆರೆದಿದ್ದು 200ಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಶಾಸಕ …
Read More »ಮನೆಗಳಿಗೆ ನುಗ್ಗಿದ ಮಳೆ ನೀರು
ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದ ಹೊರವಲಯದಲ್ಲಿ ಬರುವ ಹೊಸ ರಸ್ತೆಯ ಬಳಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಕಳೆದ ವರ್ಷ ಲೋಕೋಪಯೋಗಿ ಇಲಾಖೆಯಿಂದ ₹ 20 ಲಕ್ಷ ವೆಚ್ಚದಲ್ಲಿ ಆಗಿರುವ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೀಗಾಗಿ ಈ ರಸ್ತೆಯ ಮೇಲೆ ಹರಿಯುವ ಮಳೆ ನೀರು ಗಟಾರಕ್ಕೆ ಹೋಗದೆ ಮನೆಗೆ ನುಗ್ಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ‘ಈ ಬಗ್ಗೆ ಇಲ್ಲಿಯ ಮುಸ್ಲಿಂ ಸಮುದಾಯದವರು …
Read More »ಮುಳುಗಡೆ ಹೊಂದಿದ್ದ ಗೋಕಾಕ ನಗರದ ಚಿಕ್ಕೊಳಿ ಸೇತುವೆಗೆ ವಿಧಾನಪರಿತ್ ಸದಸ್ಯ ಲಖನ್ ಜಾರಕಿಹೊಳಿ ಭೇಟಿ
ಮುಳುಗಡೆ ಹೊಂದಿದ್ದ ಚಿಕ್ಕೊಳಿ ಸೇತುವೆ ಪರಿಶೀಲಿಸಿದ ವಿಧಾನಪರಿತ್ ಸದಸ್ಯ ಲಖನ್ ಜಾರಕಿಹೊಳಿ, ತುರ್ತು ಕ್ರಮ ಅಧಿಕಾರಿಗಳಿಗೆ ಸೂಚನೆ. ಮುಳುಗಡೆ ಹೊಂದಿದ್ದ ಗೋಕಾಕ ನಗರದ ಚಿಕ್ಕೊಳಿ ಸೇತುವೆಗೆ ವಿಧಾನಪರಿತ್ ಸದಸ್ಯ ಲಖನ್ ಜಾರಕಿಹೊಳಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಧಿಕಾರಿಗಳೊಡನೆ ದೂರವಾಣಿಯಲ್ಲಿ ಮಾತನಾಡಿ ಜನರಿಗೆ ತೊಂದರೆಯಾಗದಂತೆ ಸೇತುವೆ ಮೇಲೆ ವಾಹನ ಸಂಚಾರ ಪ್ರಾರಂಭ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
Read More »ಡಿ.ಕೆ.ಶಿವಕುಮಾರ್ ಅವರಿಗೆ ‘ಸಿ.ಡಿ ಶಿವು’ ಎಂದು ಹೊಸದಾಗಿ ನಾಮಕರಣ ಮಾಡಿದ್ದೇವೆ:.ರಮೇಶ ಜಾರಕಿಹೊಳಿ
ಗೋಕಾಕ(ಬೆಳಗಾವಿ ಜಿಲ್ಲೆ): ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡುತ್ತೇವೆ. ಇದಕ್ಕಾಗಿ ನಾನು, ಶಾಸಕ ಬಸನಗೌಡ ಪಾಟೀಲ ಯತ್ನಾಳ ರೂಪುರೇಷೆ ಸಿದ್ಧಪಡಿಸುತ್ತೇವೆ’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಅಕ್ರಮವಾಗಿ ಬೇನಾಮಿ ಖಾತೆಗಳಿಗೆ ವರ್ಗಾಯಿಸಿರುವ ಈ ಪ್ರಕರಣ ದೇಶದಲ್ಲೇ ದೊಡ್ಡದು. ಇದರ ವಿರುದ್ಧ ಮಾಡಲಿರುವ ಪಾದಯಾತ್ರೆಯಲ್ಲಿ ನಮ್ಮ …
Read More »ಬೆಳಗಾವಿಯಲ್ಲಿ ಪ್ರವಾಹ: ಹಲವು ಗ್ರಾಮಗಳು ಜಲಾವೃತ,
ಬೆಳಗಾವಿ, ಜುಲೈ 28: ಜಿಲ್ಲೆಯಲ್ಲಿ 7 ನದಿಗಳಿಂದ ಪ್ರವಾಹ(flood)ಪರಿಸ್ಥಿತಿ ನಿರ್ಮಾಣವಾಗಿದೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದ ಜನರು ಅತಂತ್ರವಾಗಿದ್ದಾರೆ. ಘಟಪ್ರಭಾ ನದಿ (Ghataprabha River) ಸೃಷ್ಟಿಸಿರುವ ಅವಾಂತರಕ್ಕೆ ಈಗ ಜನ ತತ್ತರಿಸಿ ಹೋಗಿದ್ದಾರೆ. ತನ್ನ ಪಾತ್ರವನ್ನ ಬಿಟ್ಟು ಹರಿಯುತ್ತಿರುವ ನದಿ ಊರಿಗೆ ಊರನ್ನೇ ತನ್ನ ಒಡಲಿಗೆ ಹಾಕಿಕೊಂಡಿದೆ. ಸೇತುವೆ, ದೇವಸ್ಥಾನ, ಬ್ಯಾಂಕ್ ಮತ್ತು ಮನೆಗಳು ಹೀಗೆ ಎಲ್ಲವೂ ಜಲಾವೃತವಾಗಿವೆ. ಪ್ರವಾಹದಿಂದ ಬಿದಿಗೆ ಬಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು ಗೋಕಾಕ್, ನಿಪ್ಪಾಣಿ, ಅಥಣಿ, ಮೂಡಲಗಿ, …
Read More »ಮುಡಾ ಹಗರಣ ಸ್ವಪಕ್ಷದವರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದ ಯತ್ನಾಳ್
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡಾ ಪಾಟೀಲ ಯತ್ನಾಳ್, ರಾಜೀವ್ ಯಡ್ಡಿಯೂರಪ್ಪ ಶಿಷ್ಯನೋ, ವಿಜಯೇಂದ್ರ ಶಿಷ್ಯನೋ ಯಾರೆಂದು ಹೇಳಬೇಕು. ಮುಡಾ ಹಗರಣ ರಾಜೀವ್ ಬಿಜೆಪಿಯಲ್ಲೇ ಇದ್ದಾಗ ನಡೆದ ವಿಚಾರ. ಈಗ ಅವನು ಕಾಂಗ್ರೆಸ್ ಸೇರಿದ್ದಾನೆ ಎಂದು ಸ್ವಪಕ್ಷದವರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದಿದ್ದಾರೆ. ವಿಜಯಪುರ, ಜುಲೈ 28: ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್(HV Rajeeva)ಬಿಜೆಪಿಯಲ್ಲೆ ಇದ್ದಾಗ ಆದ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾನೆ. ಕಾಂಗ್ರೆಸ್ಗೆ ಯಾಕೆ ಸೇರಿದ್ದಾರೆ …
Read More »ನವಿಲುತೀರ್ಥ ಭರ್ತಿಗೆ ಕಾಲ ಸನ್ನಿಹಿತ
ಸವದತ್ತಿ: ಪಶ್ಚಿಮ ಘಟ್ಟದಲ್ಲಿ ಸುರಿದ ಭಾರೀ ಮಳೆಯಿಂದ ಮಲಪ್ರಭಾ ನದಿಯ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ನವಿಲುತೀರ್ಥ (ಇಂದಿರಾ) ಅಣೆಕಟ್ಟು 10ನೇ ಬಾರಿ ಭರ್ತಿಯಾಗುವ ಕಾಲ ಸನ್ನಿಹಿತವಾಗಿದೆ. ಇದರಿಂದ ಆಣೆಕಟ್ಟೆ ಕೆಳಭಾಗದ ಮತ್ತು ನದಿ ಪಾತ್ರದ ಜನತೆಗೆ ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ. ನವಿಲುತೀರ್ಥ ಅಣೆಕಟ್ಟೆ ಗರಿಷ್ಠ ಮಟ್ಟ 2079.50 ಅಡಿ. ಇದೀಗ 2069.60 ಅಡಿ ನೀರು ಸಂಗ್ರಹವಾಗಿದೆ. ಸದ್ಯ 21 ಸಾವಿರ ಕ್ಯುಸೆಕ್‌ಗೂ ಅಧಿಕ ಒಳಹರಿವಿದೆ. 10 ಸಾವಿರ ಕ್ಯುಸೆಕ್‌ನಷ್ಟು ನೀರನ್ನು …
Read More »ಸಂತೋಷ್ ಜಾರಕಿಹೊಳಿ ಅವರ“ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ
ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಹನುಮಸಾಗರ ಗ್ರಾಮದ ಶ್ರೀ ಹನುಮಂತ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ಮ ಹಳ್ಳೂರ,ವಿಠ್ಠಲ ಯ ಹೊನ್ನಿಕೊಳ್ಳ …
Read More »50 ದಿನದಲ್ಲಿ ರೇಣುಕಾ ಯಲ್ಲಮ್ಮ ದೇವಿಗೆ ಬಂದ ಕಾಣಿಕೆ ಎಷ್ಟು ಕೋಟಿ ಗೊತ್ತಾ..?
ಬೆಳಗಾವಿ : ಕರ್ನಾಟಕ ,ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ವಿವಿಧ ಕಡೆ ಭಕ್ತರನ್ನು ಹೊಂದಿರುವ ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಕೇವಲ 50 ದಿನದಲ್ಲಿ ಬರೋಬರಿ 1.96ಕೋಟಿ ಭಕ್ತರ ಕಾಣಿಕೆ ಸಂಗ್ರಹವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಭಕ್ತರ ಕಾಣಿಕೆ ಎಣಿಕೆ ಬುಧುವಾರ ರಾತ್ರಿ ಮುಕ್ತಾಯವಾಗಿದೆ. 50ದಿನಗಳಲ್ಲಿ ಒಟ್ಟು …
Read More »ಘಟಪ್ರಭೆಯಲ್ಲಿ ಹೆಚ್ಚಿದ ನೀರಿನ ಪ್ರಮಾಣ: ದೇವಸ್ಥಾನ, ಮಠ ಜಲಾವೃತ; ಆತಂಕ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ಕೂಡ ಧಾರಾಕಾರ ಮಳೆ ಮುಂದುವರಿಯಿತು. ಇಲ್ಲಿನ ಖಡೇಬಜಾರ್ ಮಾರುಕಟ್ಟೆಗೆ ಹೊಂದಿಕೊಂಡ ತೆಂಗಿನಕೇರಿ ಗಲ್ಲಿಯಲ್ಲಿ ನೆಲ ಮಾಳಿಗೆಯ ಮಳಿಗೆಗಳಿಗೆ ಅಪಾರ ಪ್ರಮಾಣ ನೀರು ನುಗ್ಗಿತು. ನಾಲ್ಕು ಅಂಗಡಿಗಳ ವ್ಯಾಪಾರಸ್ಥರು ಪರದಾಡುವಂತಾಯಿತು. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಕೃಷ್ಣಾ ನದಿಯಲ್ಲಿ 2.16 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೊಯ್ನಾದಲ್ಲಿ 19.8 ಸೆಂ.ಮೀ., 16.8 ಸೆಂ.ಮೀ., ಕಾಳಮ್ಮವಾಡಿಯಲ್ಲಿ 15 ಸೆಂ.ಮೀ., ಮಹಾಬಳೇಶ್ವರದಲ್ಲಿ 26.7 …
Read More »