Breaking News

ಬೆಳಗಾವಿ

ಬೆಳಗಾವಿ –ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 3.70 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ

ಬೆಳಗಾವಿ – ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 3.70 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಬೆಳಗಾವಿಯ ಉದ್ಯಮಬಾಗ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಬೆಳಗಾವಿಯ ಪೋರ್ಟ್ ರಸ್ತೆಯ ಸುರೇಶ ಮಂಜುನಾಥ ಪಾಟೀಲ ಮತ್ತು ಮಹದ್ವಾರರಸ್ತೆಯ ಸುಭಾಷ ಸುಧೀರಡೆ ಎನ್ನುವವರನ್ನು ಬಂಧಿಸಲಾಗಿದೆ. ತರಕಾರಿಗಳ ಮಧ್ಯೆ ಬಚ್ಚಿಟ್ಟು ಗೋವಾದಿಂದ ಮದ್ಯವನ್ನು ತರಲಾಗುತ್ತಿತ್ತು. ಖಡೇಬಜಾರ್ ಡಿಎಸ್ಪಿ ಎ ಚಂದ್ರಪ್ಪ ಮಾರ್ಗದರ್ಶನದಲ್ಲಿ, ಉದ್ಯಮಬಾಗ ಪಿಐ ದಯಾನಂದ ಶೇಗುಣಶಿ, ಪಿಎಸ್ಐ ಮಂಜುನಾಥ ಬಜಂತ್ರಿ, …

Read More »

ಒಂದು ತಿಂಗಳು ಪೂರ್ಣಗೊಳಿಸಿದ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನ:ಅಶೋಕ ಚಂದರಗಿ

ಬೆಳಗಾವಿ :1991 ರಲ್ಲಿ ಅಸ್ತಿತ್ವಕ್ಕೆ ಬಂದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ನಾಡು,ನುಡಿ,ಗಡಿ ಹಿತಾಸಕ್ತಿಗೆ ಸಂಬಂಧಿಸಿದ ನೂರಾರು ಹೋರಾಟಗಳನ್ನು ಮಾಡುತ್ತ ಬಂದಿದೆ.ಜೊತೆಗೆ ಅನೇಕ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೂ ಶ್ರಮಿಸಿದ್ದು ಈ ನಾಡಿಗೆ ಗೊತ್ತಿದೆ. ನೆರೆಹಾವಳಿ,ಬರಗಾಲ ಮತ್ತಿತರ ನೈಸರ್ಗಿಕ ವಿಕೋಪದ ಕಾಲಕ್ಕೂ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಲೇ ಬಂದಿದೆ. 2018 ರ ಅಗಷ್ಟ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯಿಂದಾಗಿ ಆದ ಅಪಾರ ಪ್ರಮಾಣದ ಹಾನಿಯ ಸಂದರ್ಭದಲ್ಲೂ ಬೆಳಗಾವಿಯಿಂದ ಅಗತ್ಯ …

Read More »

ಗೋಕಾಕ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ‌ನಡೆಯುತ್ತಿದ್ದು,ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗರಂ

ಗೋಕಾಕ: ಲಾಕ್‌ಡೌನ್ ಮಧ್ಯೆಯೂ ಗೋಕಾಕ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ರಾಜಾರೋಷವಾಗಿ‌ನಡೆಯುತ್ತಿದ್ದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗರಂ ಆಗಿದ್ದಾರೆ. ನಿನ್ನೆ ನಗರದಲ್ಲಿ ಮಾತಾನಾಡಿ ಜನರಿಗೆ ಬೇಕಾಗಿರುವ ದಿನನಿತ್ಯ ಬಳಕೆಯ ವಸ್ತುಗಳನ್ನು ಸಾಗಾಟ ಮಾಡುವವರಿಗೆ ಪೊಲೀಸರು ಹಿಡಿದು ಥಳಿಸುತ್ತಿದ್ದಾರೆ. ಮರಳು ಲಾರಿಗಳನ್ನು ಬಿಡುತ್ತಿದ್ದಾರೆ.ಲಾಕ್‌ಡೌನ್ ನಲ್ಲಿ ಮರಳಿನ ಅವಶ್ಯಕತೆ ಏನೂ? ಲೋಕೋಪಯೋಗಿ ಇಲಾಖೆ ಇದಕ್ಕೆ ಪರಮಿಷನ್ ನೀಡಿದ್ದೇಯಾ? ಎಂದು ಕಿಡಿಕಾರಿದ್ದಾರೆ. ಕಣ್ಮುಚ್ಚಿ ಕುಳಿತಿರುವ ಲೋಕೋಪಯೋಗಿ, …

Read More »

ಮಹಿಳಾ ಪೋಲೀಸ್ ಪೇದೆಯಾಗಿ ಕರ್ತವ್ಯ ನಿಭಾಯಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಆಟಗಾರ್ತಿಹೃದಯಾಘಾತದಿಂದ ನಿಧನ

ಬೆಳಗಾವಿ – ನಗರದ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಮಹಿಳಾ ಪೋಲೀಸ್ ಪೇದೆಯಾಗಿ ಕರ್ತವ್ಯ ನಿಭಾಯಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಆಟಗಾರ್ತಿ ಯಾಗಿದ್ದ ಕುಮಾರಿ ಗೌರಿ ಜೀವಾಜಿಗೋಳ (28) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಗೌರಿ ಜೋವಾಜಿಗೋಳ ಮೂಲತಹ ವಿಜಯಪೂರದ ಬಬಲೇಶ್ವರ ಗ್ರಾಮದವರು.ಸ್ಪೋರ್ಟ್ಸ್ ಕೋಟಾದಲ್ಲಿ ಮಹಿಳಾ ಪೋಲೀಸ್ ಪೇದೆಯಾಗಿ ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು …

Read More »

ಕಳೆದ ಎರಡು ದಿನಗಳಿಂದಬೆಳಗಾವಿಗೆ ಬಿಗ್ ರಿಲೀಫ್

ಬೆಳಗಾವಿ – ಕಳೆದ ಎರಡು ದಿನಗಳಿಂದ ಬೆಳಗಾವಿ ನಿರಾಳವಾಗುತ್ತಿದೆ, ಪೋಲೀಸರ ಬಿಗಿ ಲಾಕ್ ಡೌನ್,ಜಿಲ್ಲಾಡಳಿತದ ಕ್ವಾರಂಟೈನ್ ಕಾರ್ಯಚರಣೆಯ ಪರಿಣಾಮವಾಗಿ ಬೆಳಗಾವಿಗೆ ಬಿಗ್ ರಿಲೀಫ್ ಸಿಗುತ್ತಿದೆ . ಇಂದು ಬೆಳಗಿನ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ಕಲಬುರಗಿಯ ಐದು ಪಾಸಿಟೀವ್ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದ್ದು ಭಾನುವಾರ,ಸೋಮವಾರ ಬೆಳಗಾವಿ ಪಾಲಿಗೆ ಕೊಂಚ ನೆಮ್ಮದಿ ನೀಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸರಪಳಿ ಕಳಚಿ ಬೀಳುವತ್ತ ಸಾಗಿದೆ. ಬೆಳಗಾವಿ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

Read More »

ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸುತ್ತಲಿನ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ

ಚಿಕ್ಕೋಡಿ -ಚಿಂಚಲಿ ಪಟ್ಟಣದಲ್ಲಿ ಕಟ್ಟಡವೊಂದರಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸುತ್ತಲಿನ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ. ಕೊರೊನಾ ಭಯಕ್ಕೆ ರಾತ್ರೋರಾತ್ರಿ ಮಾನೆಗಳನ್ನ ಖಾಲಿ ಮಾಡುತ್ತಿರುವ ಜನ ಹತ್ತಿರದ ತೋಟಗಳಲ್ಲಿ ಟೆಂಟ್ ಹಾಕಿಕೊಂಡು ಇರಲು ನಿರ್ಧರಿಸಿದ್ದಾರೆ. ಚಿಂಚಲಿ ಪಟ್ಟಣದ ಭಕ್ತಿ ನಿವಾಸದಲ್ಲಿ 44 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮಾಯಕ್ಕಾ ದೇವಸ್ಥಾನದ ಭಕ್ತಿ‌ನಿವಾಸದ ಸುತ್ತಲೂ ಇರುವ 40 ಕ್ಕೂ ಹೆಚ್ಚು ಕುಟುಂಬಗಳು ಮನೆ ಖಾಲಿ ಮಾಡಿವೆ. ಕುಡಚಿ …

Read More »

ಶ್ರೀಪಾದ ಬೊಧ ಮಹಾಸ್ವಾಮಿಗಳು (66) ಭಾನುವಾರ ಐಕ್ಯ,ಕೆ‌ಎಂಎಫ್ ಅಧ್ಯಕ್ಷ ‌ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಮೂಡಲಗಿ: ಇಲ್ಲಿನ‌ ಇತಿಹಾಸ ಪ್ರಸಿದ್ದಿ ಪಡೆದಿರುವ ಶಿವಬೊಧ ರಂಗ‌ಮಠದ ಪೀಠಾದಿಪತಿ, ಈ‌ ಭಾಗದ ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ನೆಲೆಸಿದ್ದ ಶ್ರೀಪಾದ ಬೊಧ ಮಹಾಸ್ವಾಮಿಗಳು (66) ಭಾನುವಾರ ಐಕ್ಯರಾದ ಸುದ್ದಿ ಕೇಳಿ ದಿಗ್ಭ್ರಮೆ ಉಂಟಾಯಿತು. ಪೂಜ್ಯರ ಪವಿತ್ರ ಆತ್ಮಕ್ಕೆ ಭಕ್ತಿ‌ಪೂರ್ವಕ ನಮನವನ್ನು ಕೆ‌ಎಂಎಫ್ ಅಧ್ಯಕ್ಷ ‌ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಲ್ಲಿಸಿ ಅತೀವ ಸಂತಾಪ ಸೂಚಿಸಿದ್ದಾರೆ. ಪೂಜ್ಯರ ಐಕ್ಯದಿಂದಾಗಿ ನಾಡಿಗೆ ಅಪಾರ ಹಾನಿಯಾಗಿದೆ.ಮೂಡಲಗಿ ಭಾಗದಲ್ಲಿ ಶೈಕ್ಷಣಿಕ, …

Read More »

ರೀನ್ ಝೋನ್ ನಲ್ಲಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಗಡಿದಾಟಿ ಬರುವ ಜನರದ್ದೇ ಆತಂಕವಾಗಿದೆ.

ರಾಯಚೂರು: ಜಿಲ್ಲೆ ಗ್ರೀನ್ ಝೋನ್ ನಲ್ಲಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಗಡಿದಾಟಿ ಬರುವ ಜನರದ್ದೇ ಆತಂಕವಾಗಿದೆ. ಹೀಗಾಗಿ ಅಡ್ಡದಾರಿಗಳಲ್ಲಿ ಬರುವ ಜನರನ್ನು ಪೊಲೀಸರು ಹಾಗೂ ಗ್ರಾಮಸ್ಥರು ವಾಪಸ್ ಕಳುಹಿಸುತ್ತಿದ್ದಾರೆ. ತೆಲಂಗಾಣ ಗಡಿಯಿಂದ ರಾಯಚೂರಿನ ಸಿಂಗನೊಡಿ ಗ್ರಾಮಕ್ಕೆ ಬರುತ್ತಿದ್ದ ಬೈಕ್ ಸವಾರರನ್ನು ಪೊಲೀಸ್ ಅಧಿಕಾರಿಯೊಬ್ಬರು ಸಿನಿಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ಹಿಡಿದು, ತೆಲಂಗಾಣಕ್ಕೆ ವಾಪಸ್ ಕಳುಹಿಸಿದ್ದಾರೆ. ಅಕ್ರಮ ಮಾರ್ಗದ ಮೂಲಕ ರಾಯಚೂರು ಪ್ರವೇಶ ಮಾಡುತ್ತಿರುವ ಆಂಧ್ರ ಪ್ರದೇಶ …

Read More »

ಮಹಾರಾಷ್ಟ್ರದಿಂದ ತಮಿಳುನಾಡಿಗೆ ಸಕ್ಕರೆ ತುಂಬಿಕೊಂಡು ಹೋಗುತ್ತಿರುವಾಗಎರಡು ಲಾರಿಗಳು ಡಿಕ್ಕಿ

ಬೆಳಗಾವಿ- ಮಹಾರಾಷ್ಟ್ರದಿಂದ ತಮಿಳುನಾಡಿಗೆ ಸಕ್ಕರೆ ತುಂಬಿಕೊಂಡು ಎರಡು ಲಾರಿಗಳು ಡಿಕ್ಕಿಯಾಗಿ,ನಂತರ ಪಲ್ಟೀಯಾಗಿ ತಮಿಳುನಾಡು ಮೂಲದ 42 ವರ್ಷದ ಕ್ಲೀನರ್ ಮೃತಪಟ್ಟ ಘಟನೆ ಹಿರೇಬಾಗೇವಾಡಿ ಸಮೀಪದ ಬಡೇಕೊಳ್ಳ ಮಠದ ಬಳಿ ನಡೆದಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು ಪಲ್ಟಿಯಾದ ಎರಡೂ ಲಾರಿಗಳು ಹೋಗುತ್ತಿರುವಾಗ ಹಿಂದಿನ ಲಾರಿ ಮುಂದಿನ ಲಾರಿಗೆ ಡಿಕ್ಕಿ ಹೊಡೆದಿದೆ ,ಹಿಂದಿನ ಲಾರಿಯ ಕ್ಲೀನರ್ ಮೃತಪಟ್ಟಿದ್ದು ಎರಡೂ ಲಾರಿಗಳ ಚಾಲಕರು ಗಾಯಗೊಂಡಿದ್ದಾರೆ. ಎರಡೂ ಲಾರಿಗಳು ಒಂದೇ ಟ್ರಾನ್ಸಪೋರ್ಟ್ …

Read More »

(ಬೆಳಗಾವಿ):ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರುನ್ನುಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ (ಬೆಳಗಾವಿ): ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಬಸವೇಶ್ಚರ ಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ ಶಾಬಾಜ್ ಮುನ್ನಾ ಸತಾರಿ (20) ಹಾಗೂ ರಿಯಾನ್ ಆಯಾಜ್ ಮಡ್ಡೆ (19) ಬಂಧಿತರು. ಈ ಯುವಕರು ಕಲ್ಲಂಗಡಿ ಹಣ್ಣುಗಳನ್ನ ಚರಂಡಿಯಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋವನ್ನು ನೋಡಿದ್ದ ನಿಪ್ಪಾಣಿಯ ಕೆಲವರು ಆರೋಪಿಗಳನ್ನು …

Read More »