Breaking News

ಬೆಳಗಾವಿ

ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ- ಶಿಕ್ಷಕ ಅಮಾನತು………..

ಚಿಕ್ಕೋಡಿ: ಏಳನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದ್ದು, ಶಿಕ್ಷಕನನ್ನು ಅಮಾನತು ಮಾಡಿ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನಿಡುತ್ತಿದ್ದ ಎಂದು ಶಾಲಾ ವಿದ್ಯಾರ್ಥಿನಿಯರು ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದರು. ದೂರು ಪರಿಶಿಲಿಸಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 1966 ರ ನಿಯಮ 3 (1) ಉಲ್ಲಂಘನೆ ಅಡಿಯಲ್ಲಿ …

Read More »

ಚಿಕನ್ ತರಲು ಹೋದ ವೃದ್ಧ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

ಚಿಕ್ಕೋಡಿ (ಬೆಳಗಾವಿ): ಚಿಕನ್ ತರಲು ಹೋದ ವೃದ್ಧನೋರ್ವ ನಾಪತ್ತೆಯಾಗಿರುವ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದ್ದು, ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ. ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಪ್ಪ ತಿಪ್ಪಣ್ಣ ಭಜಂತ್ರಿ (80) ಕಾಣೆಯಾದ ವೃದ್ಧ. ರಾಮಪ್ಪ ಅವರು ಏಪ್ರಿಲ್ 28ರಂದು ಸಂಜೆ 4 ಗಂಟೆ ಸುಮಾರಿಗೆ ಸೈಕಲ್ ತೆಗೆದುಕೊಂಡು ಬೂದಿಹಾಳ ಗ್ರಾಮಕ್ಕೆ ಹೋಗಿ ಚಿಕನ್ ತರುತ್ತೇನೆ ಎಂದು ಹೇಳಿ ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ. ಎಲ್ಲಿದ್ದಾರೆ ಎನ್ನುವ ಸುಳಿವು ಕೂಡ …

Read More »

ಕಿತ್ತೂರು : ಜೀವ ಬೆದರಿಕೆಯೊಡ್ಡಿದ್ದ ೫ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ…..

ಕಿತ್ತೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನ್ನಪೂರ್ಣಾ ಅಂಗಡಿ ಅವರ ಮೇಲೆ ಸೋಮವಾರ ತಡರಾತ್ರಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದ ೫ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಅಬ್ದುಲ್ಲಾ ಇಮಾಮ್‌ಹುಸೇನ ಮುಜಾವ. ಸಮೀರ ಮಹಮ್ಮದ ರಫೀಕ ಮುಜಾವರ, ಸರ್ಪರಾಜ್ ಲಿಯಾಖತ್ ಮುಜಾವರ, ಸುಹೇಲ್ ಕುತುಬುದ್ದೀನ್ ಇಮಾಮನವರ ಹಾಗೂ ದಸ್ತಗೀರ ಮಕ್ತುಂಸಾಬ್ ಇಮಾಮನವರ ಬಂಧಿತ ಆರೋಪಿಗಳು. ಆರೋಪಿಗಳ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಅಂಗನವಾಡಿಯಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿ ಬಾಣಂತಿಯರಿಗೆ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಹಾರ ವಿತರಣೆ ಮಾಡಿದರು

ಗೋಕಾಕ ನಗರದ ನಾಯಕ ಗಲ್ಲಿ ಅಂಗನವಾಡಿ ಕೋಡ್ ಸಂಖ್ಯೆ 203 ರಲ್ಲಿ ಶಿಶು ಅಭಿವೃದ್ಧಿ ಯೋಜನೆ ಗೋಕಾಕ ವತಿಯಿಂದ ಅಂಗನವಾಡಿಯ ಮಕ್ಕಳಿಗೆ ಹಾಗೂ ಗರ್ಭಿಣಿ ಬಾಣಂತಿಯರಿಗೆ ಮನೆಯಲ್ಲಿ ಆಹಾರ ತಯಾರಿಸಲು ಫುಡ್ ಕಿಟ್ ನ್ನು  ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಅನಿಲ ಕಾಂಬಳೆಯವರು ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ನಸರೀನ ಕೊಣ್ಣೂರ, ಅಂಗನವಾಡಿ ಕಾರ್ಯಕರ್ತೆ ಕಮಲಾ ನರೇವಾಡಿ ಅಂ.ಸಹಾಯಕಿ ಮಹಾದೇವಿ ಚಿಕ್ಕಪ್ಪಗೋಳ ಹಾಜರಿದ್ದರು.

Read More »

ಡಾ. ಸಂತೋಷ ಕುರಬೆಟ್ ಅವರು ಶಸ್ತ್ರಚಿಕಿತ್ಸೆ ನೆರವೇರಿಸಿ ಬಾಲಕ ನುಂಗಿದ್ದ ೧೨ ಆಯಸ್ಕಾಂತೀಯ ಬಟನ್ ಹೊರತೆಗೆದು ಜೀವ ಉಳಿಸುವಲ್ಲಿ ಯಶಸ್ವಿ

ಬೆಳಗಾವಿ – ನೆರೆಯ ಗೋವಾ ರಾಜ್ಯದ ೨ ವರ್ಷದ ಮಗುವೊಂದು ತೀವ್ರ ಹೊಟ್ಟೆನೋವು ಹಾಗೂ ಕಪ್ಪಾದ ಬಣ್ಣದ ಮಲದೊಂದಿಗೆ ತೊಂದರೆಯನ್ನು ಅನುಭವಿಸುತ್ತ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಆಗಮಿಸಿತ್ತು. ಇದಕ್ಕೂ ಮುಂಚೆ ಕೊರೊನಾ ವೈರಸ್ ಕೋವಿಡ್ -೧೯ ಸಂದರ್ಭದಲ್ಲಿ ದೇಶಾದ್ಯಂತ ಲಾಕಡೌನ ಪರಿಸ್ಥಿಯಲ್ಲಿ ಬಾಲಕನ ಚಿಕಿತ್ಸೆಗಾಗಿ ಪಾಲಕರು ಸುತ್ತಾಡಿ ಸುಸ್ತಾಗಿದ್ದರು. ಕೊನೆಗೆ ಗೋವಾದ ಜಿಲ್ಲಾಡಳಿತದ ಅನುಮತಿ ಪಡೆದು ಬೆಳಗಾವಿಗೆ ಆಗಮಿಸಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಲಕನನ್ನು ಎಕ್ಸರೇ ತೆಗೆದು …

Read More »

ಬೆಳಗಾವಿ: ಕೋವಿಡ್-೧೯: 5 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೋವಿಡ್-೧೯: 5 ಜನರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಬೆಳಗಾವಿ, ಮೇ 12 (ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಮೂವರು ಮಹಿಳೆಯು ಸೇರಿದಂತೆ ಒಟ್ಟು ಐದು ಜನರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಐದು ಜನರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಬಿಡುಗಡೆ ಹೊಂದಿದವರ ವಿವರ: ಪಿ-482 ಪಿ-485 …

Read More »

ಚಿಕ್ಕೋಡಿ:ಕೊಳವೆ ಬಾವಿಗೆ ಬಿದ್ದು ರೈತ ಸಾವು,……..

ಚಿಕ್ಕೋಡಿ (ಬೆಳಗಾವಿ): ಕೊಳವೆ ಬಾವಿಗೆ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ಸುಲ್ತಾನಪೂರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡಮನಿ (38) ಕೊಳವೆ ಬಾವಿಯಲ್ಲಿ ಸಿಲುಕಿ ಮೃತಪಟ್ಟ ರೈತ. ಕೊಳವೆ ಬಾವಿಗೆ ಸಿಲುಕಿದ್ದ ಮಾಹಿತಿ ತಿಳಿಯುತ್ತಿದ್ದಂತೆ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ತಕ್ಷಣವೇ 2 ಜೆಸಿಬಿಗಳನ್ನು ಕರೆಯಿಸಿ ಕಾರ್ಯಾಚರಣೆ ಆರಂಭಿಸಿದರು. ಸುಮಾರು 18ರಿಂದ 20 …

Read More »

ಕುಂದಾನಗರಿ ಬೆಳಗಾವಿಯಲ್ಲಿ ತಬ್ಲಿಘಿಗಳ ಕಂಟಕ ಮುಗಿಯುವ ಮುನ್ನವೇ ಅಜ್ಮೀರ್ ಯಾತ್ರಿಗಳ ಆತಂಕ ಶುರುವಾಗಿದೆ.

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ತಬ್ಲಿಘಿಗಳ ಕಂಟಕ ಮುಗಿಯುವ ಮುನ್ನವೇ ಅಜ್ಮೀರ್ ಯಾತ್ರಿಗಳ ಆತಂಕ ಶುರುವಾಗಿದೆ. ಅಜ್ಮೀರ್‌ನಿಂದ ಬಂದ 22 ಯಾತ್ರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಯಾತ್ರಿಗಳ ಎಡವಟ್ಟಿನಿಂದ ಇಡೀ ಜಿಲ್ಲೆಯೇ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಕಳ್ಳ ದಾರಿಯಲ್ಲಿ ನುಸುಳಲು ಹೊರಟವರನ್ನು ಹಿಡಿದು ಗಂಡಾಂತರ ತಪ್ಪಿಸಿದ ಪೊಲೀಸರ ಕಾರ್ಯದಿಂದ ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ. ರಾಜಸ್ಥಾನದ ಅಜ್ಮೀರ್‌ನಿಂದ ಬಂದ ಯಾತ್ರಿಗಳ ಕಹಾನಿಯೇ ಭಯಾನಕವಾಗಿದೆ. ಅಧಿಕಾರಿಗಳು ಮತ್ತು ಪೊಲೀಸರು ಸ್ವಲ್ಪ ಯಾಮಾರಿದರೂ 22 ಮಂದಿ …

Read More »

ಬೆಳಗಾವಿ: ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದ ವೃದ್ಧನಿಗೆ ಮತ್ತೆ ಕೊರೊನಾ ಸೋಂಕು

ಬೆಳಗಾವಿ: ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದ 60 ವರ್ಷದ ವೃದ್ಧನಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಎರಡಲೇ ಅಲೆ ಆರಂಭಗೊಳ್ತಾ ಅನ್ನೋ ಆತಂಕ ಶುರುವಾಗಿದೆ ಕುಡುಚಿ ಪಟ್ಟಣದ 60 ವರ್ಷದ ವೃದ್ಧ (ರೋಗಿ 298) 10 ದಿನಗಳ ಹಿಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದರು. ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ವೃದ್ಧನಿಗೆ ಸೋಂಕು ಕಾಣಿಸಿಕೊಂಡಿರೋದು ದೃಢವಾಗಿದೆ. ಇದೀಗ ಮತ್ತೆ ವೃದ್ಧನನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ …

Read More »

ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗ ಬೆಳಗಾವಿಯಲ್ಲಿ

ಬೆಳಗಾವಿ: ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಂಡ್ಯ ಜಿಲ್ಲೆಯ ಮಹಿಳೆಯ ಅಂತ್ಯಸಂಸ್ಕಾರ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗ ಬೆಳಗಾವಿಯಲ್ಲಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪುಣೆಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಂಡ್ಯ ಜಿಲ್ಲೆಯ ಮುದ್ದೂರು ತಾಲೂಕಿನ ತೈಲೂರು ಗ್ರಾಮದ ನಿವಾಸಿ ಸೌಮ್ಯ ಟಿ.ಎ ಎರಡು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮೃತ ಮಹಿಳೆ ಪತಿ ಶರತ್ ತನ್ನ ಪತ್ನಿ ಮೃತ ದೇಹವನ್ನು ತನ್ನೂರಿಗೆ ತೆಗೆದುಕೊಂದು ಬರಲು ಮಂಡ್ಯ ಜಿಲ್ಲಾಡಳಿತಕ್ಕೆ ಅನುಮತಿ ಕೇಳಿದ್ದಾರೆ. ಆದರೆ ಮೃತ …

Read More »