Breaking News

ಬೆಳಗಾವಿ

ಆರ್‌ಸಿಯುಗೆ 126 ಎಕರೆ ಮಂಜೂರು.

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 126 ಎಕರೆ 27 ಗುಂಟೆ ಜಮೀನನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಾಗೂ ವಿಸ್ತರಣೆಗೆ ಉಂಟಾಗಿದ್ದ ಜಾಗದ ಕೊರತೆ ನಿವಾರಣೆಯಾದಂತಾಗಿದೆ. ‘ತಾಲ್ಲೂಕಿನ ಬಾಗೇವಾಡಿ (ಸಂಕನಾಯ್ಕನಕೊಪ್ಪ) ಗ್ರಾಮದ ರಿ.ಸ.ನಂ. 421/2, 423, 426, 427, 429 ಮತ್ತು 431ರಲ್ಲಿ 87 ಎಕರೆ 39 ಗುಂಟೆ ಹಾಗೂ ಹಾಲಗಿಮರ್ಡಿ ಗ್ರಾಮದ ರಿ.ಸ.ನಂ. 48, 48 ಹಾಗೂ 49ರ …

Read More »

ಶಾಸಕ ಐಹೊಳೆಗೆ ಕೋವಿಡ್ ದೃಢ.

ಬೆಳಗಾವಿ: ರಾಯಬಾಗ ಬಿಜೆಪಿ ಶಾಸಕ ಡಿ.ಎಂ. ಐಹೊಳೆ ಅವರಿಗೆ ಸೋಮವಾರ ಕೋವಿಡ್-19 ದೃಢಪಟ್ಟಿದೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ‌ ಬರೆದುಕೊಂಡಿರುವ ಅವರು, ‘ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆಗೆ ಒಳಪಟ್ಟಿದ್ದೆ. ನನಗೆ ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ. ಆರೋಗ್ಯವಾಗಿದ್ದು, ಬೆಂಗಳೂರಿನ ಮನೆಯಲ್ಲಿ ಪ್ರತ್ಯೇಕವಾಗಿರುತ್ತೇನೆ. ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗದಂತೆ ಬೆಂಗಳೂರಿನಿಂದಲೇ ನಿಗಾ ವಹಿಸುತ್ತೇನೆ’ ಎಂದು ತಿಳಿಸಿದ್ದಾರೆ.

Read More »

ಜೂಜಾಟ: 22 ಮಂದಿ ಬಂಧನ.

ಬೆಳಗಾವಿ: ಇಲ್ಲಿನ ರಾಜಹಂಸ ಗಲ್ಲಿಯ ಸದಾನಂದ ಮಠದ ಪಕ್ಕದ ಗಲ್ಲಿಯಲ್ಲಿ ಭಾನುವಾರ ಮಧ್ಯರಾತ್ರಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 22 ಮಂದಿಯನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜೂರ ಚೋಪಧಾರ, ಪ್ರದೀಪ ಲಾಟೂಕರ, ಮೋಯಿಜ ಗಚವಾಲೆ, ವಿಜಯ ಪಾಟೀಲ, ಪರಶುರಾಮ ಮೇತ್ರಿ, ಸುಶೀಲ ಮುದೋಳಕರ, ಬಾಬು ಯಾದವ, ಅನಿಲ ಯಳ್ಳೂರಕರ, ಕಿಸನ ಪಾಟೀಲ, ಜಹಾಂಗೀರಖಾನ ಪಠಾಣ, ವಿಜಯ ಶಿಂದೋಳಕರ, ದೀಪಕ ಹೊನ್ಯಾಳಕರ, ಆಕಾಶ ಜಕ್ಕಾನೆ, ವಿನಾಯಕ ಗಣಾಚಾರಿ, ಸಾಗರ ಮುತಗೇಕರ, …

Read More »

ಸಿಎಂ ಬಿ ಎಸ್ ಯಡಿಯೂರಪ್ಪ ಓರ್ವ ಸರ್ವಾಧಿಕಾರಿ ; ವಾಟಾಳ್ ನಾಗರಾಜ್ ಗಂಭೀರ ಆರೋಪ

ಬೆಳಗಾವಿ : ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ನಾನು ನೋಡಿದ್ದೇನೆ. ಆದರೆ, ಬಿ ಎಸ್ ಯಡಿಯೂರಪ್ಪ ಅವರು ಓರ್ವ ಸರ್ವಾಧಿಕಾರಿ ಮುಖ್ಯಮಂತ್ರಿ. ನನ್ನನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರವೇಶ ಆಗದಂತೆ ನೋಡಿಕೊಂಡಿದ್ದಾರೆ. ನನ್ನ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಸೋಲಿಸುತ್ತಾರೆ ಎಂದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ವಿಶೇಷ ಅಧಿವೇಶನ ನಡೆಸಬೇಕು. ಪ್ರವಾಹ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ, …

Read More »

ಪೋಲೀಸರ ಕಣ್ತಪ್ಪಿಸಿ ಬಸ್ಸಿನಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ ಬಂದ ವಾಟಾಳ್ ನಾಗರಾಜ್

ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಲು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪೋಲೀಸರ ಕಣ್ತಪ್ಪಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಕನ್ನಡದ ಪರ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ಬಂದಿದ್ದಾರೆ. ಈ ಕುರಿತಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸುದ್ದಿಗಾರರು ನಿಮ್ಮನ್ನ ಪೋಲೀಸರು ಬೆಳಗಾವಿಗೆ ಆಗಮಿಸಲು ಬಿಡುವುದಿಲ್ಲ ಹಿರೆ ಬಾಗೇವಾಡಿಯಲ್ಲೆ ಬಂಧಿಸುತ್ತಾರೆ. ಹೇಗೆ ಆಗಮಿಸುವಿರಿ ಎಂದಿದ್ದರು. ಈ ಸಾರಿ …

Read More »

ಸೀರೆ ಉಟ್ಟಾಗ ಹಾವು ಹಿಡಿಯೋದು ಕಷ್ಟ -ಉರಗ ತಜ್ಞೆಯ ಸಾಹಸಕ್ಕೆ ಸ್ಥಳೀಯರು ಫುಲ್​ ಫಿದಾ!

ಬೆಳಗಾವಿ: ಮದುವೆಗೆ ತೆರಳುವ ಬದಲು ಮನೆಯೊಂದರಲ್ಲಿ ಸಿಲುಕಿದ್ದ ನಾಗರಹಾವನ್ನು ಉರಗ ತಜ್ಞೆ ನಿರ್ಜರಾ ಚಿಟ್ಟಿ ಬರಿಗೈಯಲ್ಲೇ ರಕ್ಷಣೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನಿರ್ಜರಾ ಹಾಗೂ ಆಕೆಯ ಪತಿ ಆನಂದ್​ ಮೂಲತಃ ವನ್ಯಜೀವಿ ತಜ್ಞರು. ಬೆಳಗಾವಿ ನಿವಾಸಿಗಳಾದ ದಂಪತಿ ತಮ್ಮ ಸಂಬಂಧಿಕರ ಮದುವೆಗೆ ತೆರಳಲು ನಿನ್ನೆ ಸಜ್ಜಾಗುತ್ತಿದ್ದರಂತೆ. ಈ ನಡುವೆ ದಂಪತಿಗೆ ನಮ್ಮ ಮನೆಯಲ್ಲಿ ನಾಗರಹಾವು ಒಂದು ಸಿಲುಕಿಕೊಂಡಿದೆ. ದಯವಿಟ್ಟು ಬಂದು ಅದನ್ನು ಅಲ್ಲಿಂದ ಹೊರೆತೆಗೆಯಿರಿ ಅಂತಾ ನಗರದ …

Read More »

ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಧುಮ್ಮಿಕ್ಕುತ್ತಿದೆ ಮಳೆ ನೀರು.

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಮಳೆ ನೀರು ಧುಮ್ಮಿಕ್ಕುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಹೊರವಲಯದಲ್ಲಿರುವ ಎಣ್ಣೆ ಹೊಂಡದಲ್ಲಿ ಮಳೆ ನಿರು ಧುಮ್ಮಿಕ್ಕುತ್ತಿದೆ. ಆದರೆ ಯಲ್ಲಮ್ಮ ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗಿಲ್ಲ. ಗುಡ್ಡದ ಮೇಲಿಂದ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು ಎಣ್ಣೆ ಹೊಂಡದ ಮೂಲಕ ಕಾಲುವೆಯತ್ತ ಹರಿಯುತ್ತಿದೆ.

Read More »

ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ ಅಂತ್ಯಕ್ರಿಯೆಗೆ ನಿವಾಸಿಗಳ ವಿರೋಧ

ಬೆಳಗಾವಿ: ಇಲ್ಲಿನ ಸದಾಶಿವ ನಗರದ ಲಿಂಗಾಯತ ರುದ್ರಭೂಮಿಯಲ್ಲಿ ಕೋವಿಡ್-19ನಿಂದ ಮೃತರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಎಂದು ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿ, ಗುಂಡಿ ತೋಡಲು ಜೆಸಿಬಿಯೊಂದಿಗೆ ಬಂದಿದ್ದ ಕುಟುಂಬದವರನ್ನು ಮತ್ತು ಪಾಲಿಕೆ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ವ್ಯಕ್ತಿಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲು ಅವರು ಬಂದಿದ್ದರು. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಮಾಜಸೇವಕಿ ಸರಳಾ ಹೆರೇಕರ್‌ ಅವರಿಗೆ ವಿಷಯ ತಿಳಿಸಿದ್ದರು. ಅವರು ಬಂದ ಬಳಿಕ ನಿವಾಸಿಗಳು, …

Read More »

ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ವಿಧಾನಸಭೆ ಉಪಸಭಾಪತಿ, ಶಾಸಕ ಆನಂದ ಮಾಮನಿ

ಸವದತ್ತಿ) – ಬೆಂಗಳೂರಿನಲ್ಲಿ ಸೋಮವಾರ ಪ್ರಾರಂಭಗೊಳ್ಳುವ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವ ಮುನ್ನಾ ದಿನ ರವಿವಾರ  ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದ ವಿಧಾನಸಭೆ ಉಪಸಭಾಪತಿ, ಶಾಸಕ ಆನಂದ ಮಾಮನಿ ಅವರನ್ನು ದೇವಸ್ಥಾನ ವತಿಯಿಂದ ರವಿ ಕೊಟಾರಗಸ್ತಿ ಹಾಗೂ ದೇವಸ್ಥಾನ ಸಿಬ್ಬಂದಿ ಶಾಲೂಹೊದಿಸಿ ಸತ್ಕರಿಸಿದರು. ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ರ ಮಾಳಗಿ, ಆರ್ ಎಚ್ ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಪಂಡಿತ ಯಡೂರಯ್ಯ, …

Read More »

ನಿಧನರಾದ ಆನಂದ ಚೋಪ್ರಾರವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದಸತೀಶ್ ಜಾರಕಿಹೊಳಿ

ಸವದತ್ತಿ: ಸವದತ್ತಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು, ಅನಾರೋಗ್ಯದಿಂದ ನಿಧನರಾದ ತಾಲ್ಲೂಕಿನ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾರವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾತನಾಡಿದ ಅವರು, ಆನಂದ ಚೋಪ್ರಾ ಅವರು ಕಳೆದ ಒಂದುವರೆ ದಶಕದಿಂದ ಸಾಮಾಜಿಕ ಸೇವಕಾರಗಿ ಗುರುತಿಸಿಕೊಂಡಿದ್ದರು. ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಜನರಿಗೆ ಹತ್ತಿರವಾಗಿದ್ದರು. ಶೈಕ್ಷಣಿಕ, ಸಾಮಾಜಿಕ, ಕ್ರೀಡೆ, ಸಾಹಿತ್ಯ, ಮತ್ತು ರಾಜಕೀಯವಾಗಿ ಸಾಕಷ್ಟು ಪ್ರಭಾವಿಗಳಾಗಿದ್ದರು. ಅವರ ಅಕಾಲಿಕ …

Read More »