ಬೆಳಗಾವಿ: ಸಾಲಬಾಧೆ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗದ ಮುಂದೆಯೇ ನೇಕಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ದೇವಾಂಗ ನಗರದಲ್ಲಿ ನಡೆದಿದೆ. ಸಂತೋಷ್ ಢಗೆ (39) ಆತ್ಮಹತ್ಯೆ ಮಾಡಿಕೊಂಡ ನೇಕಾರ. ನೇಕಾರ ಸಂತೋಷ್ ಸಾಲ ಮಾಡಿ 2 ವಿದ್ಯುತ್ ಮಗ್ಗ ಖರೀದಿ ಮಾಡಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಸಂಕಷ್ಟ ಎದುರಿಸಿದ್ದ. ಕುಟುಂಬ ನಿರ್ವಹಣೆ ಮಾಡಲಾಗದೇ, ಸಾಲ ತೀರಿಸಲಾಗದೆ ಸಾಲಗಾರರ ಕಾಟಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾನೆ.ಪತ್ನಿ, ಮಕ್ಕಳು ತವರು ಮನೆಗೆ ಹೋಗಿದ್ದ …
Read More »ಆಕಾಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬಾಗೇವಾಡಿ ಅವರು ಅಕಾಲಿಕ ನಿಧನ: ಬಾಲಚಂದ್ರ ಜಾರಕಿಹೊಳಿಯವರು ಕಂಬನಿ ಮಿಡಿದರು
ಗೋಕಾಕ: ಆಕಾಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬಾಗೇವಾಡಿ ಅವರು ಅಕಾಲಿಕ ನಿಧನ ಹೊಂದಿದ್ದಾರೆ.ಕೆ ಎಮ್ ಎಫ್ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿ ಅವರ ಮತ್ತು ಕುಟುಂಬಕ್ಕೂ ಆಪ್ತರಾದ ಪ್ರಕಾಶ ಬಾಗೇವಾಡಿ ಅವರು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ದಾಖಲಾಗಿದ್ದು ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 3.30 ಗಂಟೆಗೆ ಅಕಾಲಿಕ ನಿಧನ ಹೊಂದಿದ್ದಾರೆ. ಸದರಿಯವರ ನಿಧನಕ್ಕೆ ಶ್ರೀ ಬಾಲಚಂದ್ರ ಜಾರಕಿಹೊಳಿ ಮತ್ತು ಎನ್ ಎಸ್ ಎಫ್ ಕಚೇರಿಯವರು ತೀವ್ರ …
Read More »ಇನ್ನು ಎರಡು ತಿಂಗಳು ಶಾಲೆ ಆರಂಭಿಸೋದು ಬೇಡಾ:
ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ವಿಚಾರದಲ್ಲಿ ಯಾವುದೇ ಧಾವಂತ ಇಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಶಾಲೆ ಆರಂಭಿಸುವ ವಿಚಾರವಾಗಿ ಎಲ್ಲ ಶಾಸಕರ ಜತೆ ಮಾತುಕತೆ ನಡೆಸುತ್ತೇವೆ. ಅದಾದ ಮೇಲಷ್ಟೆ ಶಾಲೆ ರೀ ಓಪನಿಂಗ್ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದ್ರೆ ಸದ್ಯಕ್ಕೆ ಶಾಲೆ ಆರಂಭಿಸುವ ಬಗ್ಗೆ ಯಾವುದೇ ಶಾಸಕರೂ ಒಲವು ತೋರಿಲ್ಲ. ಸಂಸದರು, ಶಾಸಕರು, ಪರಿಷತ್ ಸದಸ್ಯರಿಗೂ ಪತ್ರ ಬರೆದಿದ್ದೇನೆ. ಶಾಲೆ ಆರಂಭದ ಬಗ್ಗೆ …
Read More »ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ ಕರೆ
ಬೆಳಗಾವಿ: ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ ಜನರ ಜಾಗೃತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾರೋ ಈ ರೀತಿ ಬೆದರಿಕೆಯೊಡ್ಡುತ್ತಿದ್ದಾರೆ ಅಂತಾ ಹೇಳಿದ್ದಾರೆ. ಯಾರು ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿಯುತ್ತಿಲ್ಲ. ಸಮಾಜದಲ್ಲಿ ನಿಜ ಹೇಳುವವರೆಗೆ ಈ ರೀತಿ ಸಮಸ್ಯೆ ಆಗುತ್ತದೆ. ಮೊದಲು ಆತ್ಮಸ್ಥೈರ್ಯ ಕುಗ್ಗಿಸಲು ಯತ್ನಿಸುತ್ತಾರೆ. ಕುಗ್ಗದಿದ್ದಾಗ ದೈಹಿಕವಾಗಿ ಕುಗ್ಗಿಸಲು ಯತ್ನಿಸುತ್ತಾರೆ. ಈ …
Read More »ಅಂಗಡಿ ಕುಟುಂಬ ಹೊರತುಪಡಿಸಿ ಟಿಕೆಟ್ ನೀಡೋದಾದ್ರೆ ಕತ್ತಿಗೆ ನೀಡಿ – ಅಭಿಮಾನಿಗಳ ಆಗ್ರಹ
ಚಿಕ್ಕೋಡಿ(ಬೆಳಗಾವಿ): ಇತ್ತಿಚೆಗೆ ನಿಧನರಾದ ಬೆಳಗಾವಿ ಸಂಸದ ಹಾಗೂ ರಾಜ್ಯ ರೇಲ್ವೆ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ನಿಧನದ ಬೆನ್ನಲ್ಲೇ ಬೆಳಗಾವಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಸುರೇಶ್ ಅಂಗಡಿ ಕುಟುಂಬಕ್ಕೆ ಸಾಂತ್ವನ ಹೇಳಲು ನಳಿನ್ ಕುಮಾರ್ ಭೇಟಿ ನೀಡಿ ಟಿಕೆಟ್ ಸಂಬಂಧಿಸಿದಂತೆ ಅನೌಪಚಾರಿಕ ಸಭೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮುಂಬರುವ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಗಾಗಿ ಕಮಲ ನಾಯಕರಲ್ಲಿ ಪೈಪೋಟಿ ಶುರುವಾಗಿದ್ದು, ಈ ಪೈಕಿ ಹಲವು ನಾಯಕರು …
Read More »ಜೀವ ಜಲವಿಲ್ಲದೆ ಬೇಸತ್ತ ಸೋಂಕಿತರ ಬಗ್ಗೆ ಯಾಕಿಷ್ಟು ತಾತ್ಸಾರ?
ಬೆಳಗಾವಿ: ಕೊರೊನಾ.. ಆರಂಭದಲ್ಲೇ ಹೊಸ ವರ್ಷದ ಹರುಷವನ್ನೇ ಹಾಳು ಮಾಡಿ ದಾರಿದ್ರ್ಯ ತುಂಬಿದ ಮಹಾಮಾರಿ ಕೊರೊನಾ ದೇಶಕ್ಕೆ ಕಂಟಕವಾಗಿ ಕಾಡುತ್ತಿದೆ. ಜೀವನವನ್ನೇ ನರಕ ಮಾಡಿರುವ ಕೊರೊನಾ ಇನ್ನೂ ಕಡಿಮೆಯಾಗಿಲ್ಲ. ದಿನೇ ದಿನೇ ತನ್ನ ಪ್ರತಾಪ ತೋರಿಸುತ್ತಲೇ ಸಾಗಿದೆ. ಈ ನಡುವೆ ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ಸಹ ಎಡವುತ್ತಿದ್ದಾರೆ. ಜಿಲ್ಲೆಯ ಬಿಮ್ಸ್‌ನಲ್ಲಿ ನೀರಿಗಾಗಿ ಕೊರೊನಾ ಸೋಂಕಿತರು ಪರದಾಡುತ್ತಿರುವಂತ ಪರಿಸ್ಥಿತಿ ಎದುರಾಗಿದೆ. ಕುಡಿಯುವುದಕ್ಕೂ ನೀರಿಲ್ಲ, ಶೌಚಾಲಯಕ್ಕೂ ನೀರಿಲ್ಲ. ಕೊವಿಡ್ ವಾರ್ಡ್‌ನಲ್ಲಿ …
Read More »ದೂರವಾಣಿ ಮೂಲಕ ವೈದ್ಯಾಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರೇತರ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ಕೊರೋನಾ ಕಾಳಜಿ ಕೇಂದ್ರಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ
ಗೋಕಾಕ: ಕೊರೋನಾ ಸೋಂಕಿತರ ಸುರಕ್ಷತೆಗಾಗಿ ಹೆಚ್ಚಿನ ಕಾಳಜಿ ಮಾಡಿ. ಕರ್ತವ್ಯದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಬಡ ರೋಗಿಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿ. ಗೋಕಾಕ-ಮೂಡಲಗಿ ತಾಲೂಕುಗಳ ಸೋಂಕಿತರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಅವರುಗಳನ್ನು ಗುಣಮುಖರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವೈದ್ಯಾಧಿಕಾರಿಗಳಿಗೆ ಹೇಳಿದರು. ಸೋಮವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿಗೃಹದಲ್ಲಿ ನಡೆದ ಗೋಕಾಕ ಮತ್ತು ಮೂಡಲಗಿ ತಾಲೂಕಗಳ ಪಿಎಚ್‍ಸಿ …
Read More »ಬಸ್ ಸಂಚಾರ ನಿಲ್ಲಿಸಿ ಪ್ರತಿಭಟನೆಗೆ ಸಹಕರಿಸಿ ಎಂದುಸಾರಿಗೆ ಇಲಾಖೆಯ ಅಧಿಕಾರಿಯ ಕಾಲಿಗೆ ಬಿದ್ದು ಕೇಳಿಕೊಂಡ ರೈತ
ಬೆಳಗಾವಿ : ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಬಸ್ ಸಂಚಾರ ನಿಲ್ಲಿಸಿ ಪ್ರತಿಭಟನೆಗೆ ಸಹಕರಿಸಿ ಎಂದು ರೈತ ಮುಖಂಡನೊಬ್ಬ ಸಾರಿಗೆ ಇಲಾಖೆಯ ಅಧಿಕಾರಿಯ ಕಾಲಿಗೆ ಬಿದ್ದು ಕೇಳಿಕೊಂಡ ಘಟನೆ ನಡೆದಿದೆ. ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಬಂದ್ ಗೆ ಕರೆ ನೀಡಿದ್ದೆವೆ. ಇಂತಹ ಸಂದರ್ಭದಲ್ಲಿ ಬಸ್ ಸಂಚಾರ ವ್ಯವಸ್ಥೆಯನ್ನು ನಡೆಸಿ, ಬಂದ್ ಗೆ ವಿರೋಧ ವ್ಯಕ್ತ ಪಡಿಸಿಬೇಡಿ, ಸಾರ್. ಬಸ್ ಸಂಚಾರ ನಿಲ್ಲಿಸಿ ಎಂದು ರೈತ ಮುಖಂಡ …
Read More »ಬೆಳಗಾವಿ : ಬಂದ್ ಗೆ ಹಲವು ಸಂಘಟನೆಗಳು ಬೆಂಬಲ
ಬೆಳಗಾವಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು ಹಾಗೂ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿವೆ’ ಎಂದು ಆರೋಪಿಸಿ ರೈತ, ದಲಿತ ಮತ್ತು ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಕರೆ ನೀಡಿರುವ ಸೆ. 28ರ ರಾಜ್ಯ ಬಂದ್‌ಗೆ ಇಲ್ಲಿನ ಕನ್ನಡ, ದಲಿತ ಮತ್ತು ರೈತ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಪದಾಧಿಕಾರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸುವುದಾಗಿ ತಿಳಿಸಿದರು. …
Read More »ವಿರೋಧ ಪಕ್ಷಗಳ ಕುತಂತ್ರಕ್ಕೆ ಬಲಿಯಾಗಬಾರದು ರೈತ ಪರ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಬೇಕು: ಈರಣ್ಣ ಕಡಾಡಿ
ಬೆಳಗಾವಿ: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಕೃಷಿಗೆ ಸಂಬಂಧಿಸಿದ ನೀತಿಗಳು ಕೃಷಿಕರ ಪರವಾಗಿವೆ. ಆದರೆ, ವಿರೋಧ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ರೈತರನ್ನು ಎತ್ತಿ ಕಟ್ಟುತ್ತಿವೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು. ಇಲ್ಲಿನ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ವಿರೋಧ ಪಕ್ಷಗಳ ಕುತಂತ್ರಕ್ಕೆ ಬಲಿಯಾಗಬಾರದು. ರೈತ ಪರ …
Read More »